Asianet Suvarna News Asianet Suvarna News

ಮುಕೇಶ್ ಅಂಬಾನಿ ಪತ್ನಿ ನೀತಾಗೆ ಈ ಅಭ್ಯಾಸಗಳೆಲ್ಲ ಇವೆಯಂತೆ!

ಬಯಸಿದ್ದನ್ನು ಕಾಲು ಬುಡಕ್ಕೆ ಬಂದು ಬೀಳುವಂತೆ ಮಾಡಿಕೊಳ್ಳುವಷ್ಟು ಸಿರಿವಂತಿಕೆ ಮುಕೇಶ್ ಅಂಬಾನಿಯಂಥವಿರಿಗೆ ಇರುತ್ತೆ. ದಿನದಲ್ಲಿಯೇ ಕೋಟಿಗಟ್ಟಲೆ ಸಂಪಾದನೆ ಮಾಡುವ ಇಂಥವರ ಕುಟುಂಬದ ಸದಸ್ಯರಿಗೆ ಹಲವು ವಿಶೇಷ ಅಭ್ಯಾಸ, ಹವ್ಯಾಸಗಳಿರುತ್ತೆ. ಅಷ್ಟಕ್ಕೂ ನೀತಾ ಅಂಬಾನಿಗೇನಿದೆ ಖಯಾಲಿ ? 
 

Mukesh Ambani Wife Neetha Ambani Have All These Habits Vin
Author
First Published Sep 1, 2022, 2:00 PM IST

ನೀತಾ ಅಂಬಾನಿ. ಹೆಸರಲ್ಲಿಯೇ ಏನೋ ಆಕರ್ಷಣೆ. ಮೊಮ್ಮಗುವನ್ನು ಎತ್ತಿ ಆಡಿಸುವ ವಯಸ್ಸಾದರೂ, ಇನ್ನೂ ಯಂಗ್ ಆ್ಯಂಡ್ ಎನರ್ಜಿಟೆಕ್ ಆಗಿಯೇ ಇರೋ ವಿಶ್ವದ ಸಿರಿವಂತರಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಪತ್ನಿ. ಲಕ್ಷಾಂತರ ಬೆಲೆ ಬಾಳುವ ಆಹಾರ ತಿನ್ನುತ್ತಾರೆ, ಬಟ್ಟೆ ಧರಿಸುತ್ತಾರೆ, ಚಪ್ಪಲಿ, ಬ್ಯಾಗ್ಸ್ ಎಲ್ಲವೂ ಬ್ರಾಂಡೆಂಡ್ ಆಗಿರುತ್ತೆ. ಅಷ್ಟೇ ಅಲ್ಲ ಸೌಂದರ್ಯ ಕಾಪಾಡಿಕೊಳ್ಳಲು ಏನೇನೇ ಸಾಧ್ಯವೋ ಎಲ್ಲವನ್ನೂ ಮಾಡಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಬರೀ ಹಸಿರು ತರಕಾರಿ, ಸೂಪ್ ತಿಂದೇ ದಿನ ಕಳೆಯೋದೂ ಇದೆಯಂತೆ. ಬರೀ ರಿಚ್, ಕಾಸ್ಟ್ರಿ ಫುಡ್ ಮಾತ್ರವಲ್ಲ, ತರಕಾರಿ, ಸೂಪಿನಿಂದಾನೇ ಬಹುತೇಕ ವರ್ಷದ ದಿನಗಳನ್ನೂ ಕಳೆಯುತ್ತಾರಂತೆ ಈ ಸ್ಪುರದ್ರೂಪಿ ದಾನಿ. 

ಎಲ್ಲರಿಗಿಂತ ವಿಭಿನ್ನ ಹವ್ಯಾಸಗಳನ್ನು (Habits) ಹೊಂದಿರುವ ನೀತಾ ಫಿಟ್‌ನೆಸ್ ಫ್ರೀಕ್ (fitness freak) ಅನ್ನೋದು ಅವರನ್ನು ನೋಡಿದವರಿಗೆ ಗೊತ್ತಾಗುತ್ತೆ. ಡ್ರೈ ಫ್ರೂಟ್ಸ್‌ನಿಂದ (Dry Fruits) ದಿನ ಆರಂಭಿಸುವ ಮುಕೇಶ್ ಪತ್ನಿ, ತಿಂಡಿಗೆ ಎಗ್ ವೈಟ್ (Egg White) ಆಮ್ಲೇಟ್ ತಿನ್ನುತ್ತಾರಂತೆ. ಮಧ್ಯಾಹ್ನದ ಊಟಕ್ಕೆ ಹಸಿರು ತರಕಾರಿ ಜೊತೆ, ಸೂಪ್ (Soup) ಕುಡೀತಾರಂತೆ. ರಾತ್ರಯೂ ಅದೇ ಹಸಿರು ತರಕಾರಿ (Green Veggies) ಮತ್ತು ಸೂಪೇ ಊಟವಂತೆ. ಇನ್ನೇನು ಸ್ನಾಕ್ಸ್ ಬೇಕು ಅನಿಸಿದರೆ ಆಗಲೂ ರುಚಿ ರುಚಿಯಾದದ್ದೇನೂ ತಿನ್ನೋಲ್ವಂತೆ. ಬದಲಾಗಿ ಆಗಲೂ ತಿನ್ನುವುದು ಅದೇ ಹಸಿರು ತರಕಾರಿ ಜೊತೆಗೆ ಒಂದಿಷ್ಟು ಹಣ್ಣಂತೆ. 

ನೀತಾ ಅಂಬಾನಿ ಬಳಸ್ತಿರೋ ಮೊಬೈಲ್‌ ಬೆಲೆ ಎಷ್ಟು ಗೊತ್ತಾ ? ಮುನ್ನೂರು ಮಂದಿಗೆ ಐಷಾರಾಮಿ ಬಂಗಲೆಯನ್ನೇ ಖರೀದಿಸಬಹುದು !

ದೇಹದ ವಿಷ ತೆಗೆದುಹಾಕಲು ಡಿಟಾಕ್ಸ್ ನೀರು ಕುಡೀತಾರಂತೆ
ತಿನ್ನೋದು ಆಯಿತು, ಏನು ಕುಡೀತಾರಂತೆ ಈ ನೀತಾ. ದೇಹದಲ್ಲಿರುವ ವಿಷ ತೆಗೆದುಹಾಕಲು ಡಿಟಾಕ್ಸ್ ನೀರು (Detoxication Water) ಕುಡಿಯುತ್ತಾರಂತೆ. ಅದಕೂ ಸುಮಾರು ಐದು ಬಗೆ ಡಿಟಾಕ್ಸ್ ನೀರು ಕುಡಿದು, ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡಿರುವ ಅಂಬಾನಿ ಸೊಸೆಗೆ ಬೀಟ್‌ರೂಟ್ ಜೂಸ್ (Beetroot Juice) ಅಂದ್ರೆ ಮತ್ತೊಂದು ಫೇವರೇಟ್ ಡ್ರಿಂಕ್ಸ್ ಅಂತೆ. ಅಷ್ಟೇ ಅಲ್ಲ ಅದೆಷ್ಟೇ ಬ್ಯುಸಿ ಇರಲಿ ವ್ಯಾಯಾಮವನ್ನಂತೂ ತಪ್ಪಿಸೋಲ್ವಂತೆ. ಯೋಗ (Yoga), ಸ್ವಿಮ್ಮಿಂಗ್ (Swimming), ಕ್ಲಾಸಿಕಲ್ ಡ್ಯಾನ್ಸ್ ಅನ್ನೂ ತಪ್ಪದೇ ಮಾಡುತ್ತಾರಂತೆ ಫಿಟ್ ಆಗಿರಲು. 

ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಮಾತ್ರ ನೀತಾ ಏನೇ ಆದರೂ ಬಿಡೋಲ್ವಂತೆ. ಮದ್ವೆಯಾಗುವಂತೆ ಬಳಕುವ ಬಳ್ಳಿಯಂತಿದ್ದ ನೀತಾ ತೂಗುತ್ತಿದ್ದು ಕೇವಲ 47 ಕೆ.ಜಿಯಂತೆ. ಆದರೆ, ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳಂತೆ ಮಕ್ಕಳಾದ ಮೇಲೆ ಸುಮಾರು ಹತ್ತಿರತ್ತಿರ ಕ್ವಿಂಟಲ್ ತೂಗುವಂತಾಗಿದ್ದರಂತೆ ಅಂಬಾನಿ ಪತ್ನಿ. ಇದರಿಂದಾನೇ ಆರೋಗ್ಯದಲ್ಲಿ ಏರು ಪೇರು ಅನುಭವಿಸಿದ ನೀತಾ, ಹಲವು ಅನಾರೋಗ್ಯ (Illness) ಸಮಸ್ಯೆಗಳನ್ನು ಎದುರಿಸುವಂತಾಯಿತಂತೆ. ಅದಕ್ಕೆ ಸ್ಟ್ರಿಕ್ಟ್ ಡಯಟ್ (Strict Diet) ಫಾಲೋ ಮಾಡು ನೀತಾ, ಅಪ್ಪಿ ತಪ್ಪಿಯೂ ಶಿಸ್ತಿನ ಲೈಫಿಗೇ ಯಾವುದ ತೊಂದರೆಯಾಗದಂತೆ ಎಚ್ಚರವಹಿಸುತ್ತಾರಂತೆ.

ಫಳ ಫಳ ಹೊಳೆಯುವ ತ್ವಚಾ ರಹಸ್ಯವನ್ನೂ (Skin Care) ಬಿಚ್ಚಿಟ್ಟ ನೀತಾ, ಇದಕ್ಕೆ ಯಾವು ಕಾಸ್ಟ್ರಿಲ್, ಪೌಡರ್, ಕ್ರೀಮ್ ಕಾರಣವಲ್ಲವಂತೆ. ಬದಲಾಗಿ ಒತ್ತಡ ಮುಕ್ತ ಜೀವನದಿಂದಾನೇ ಸ್ಕಿನ್ ಫಳ ಫಳ ಹೊಳೆಯುವಂತೆ ಇಟ್ಟುಕೊಳ್ಳುತ್ತಾರಂತೆ. 

Nita Ambani: 40 ಲಕ್ಷದ ಬಾಟಲಿ ನೀರು ಕುಡಿದರಾ ಅಂಬಾನಿ ಪತ್ನಿ ?

ಮುಕೇಶ್ ಅಂಬಾನಿಗಿದೆಯಂತೆ ಈ ಖಯಾಲಿ
ಜಗತ್ತಿನ ಏಳನೇ ಶ್ರೀಮಂತೆ ಮುಕೇಶ್ ಅಂಬಾನಿಗೂ ಕೆಲವು ಚಿತ್ರ, ವಿಚಿತ್ರ ಖಯಾಲಿಗಳಿವೆ. ಮುಂಬಯಿಯಲ್ಲಿರುವ ಅಂಟಿಲ್ಲಾ ಹೋಪ್‌, ಈ ಕುಬೇರನ ಅರಮನೆ, ಇದರಲ್ಲಿ ಎಷ್ಟು ಫ್ಲೋರುಗಳಿವೆ, ಎಷ್ಟು ರೂಮುಗಳಿವೆ ಎಂಬುದು ಸ್ವತಃ ಅಂಬಾನಿಗೇ ಗೊತ್ತಿರೋದು ಡೌಟ್. ಇಂಥ ಸಿರಿವಂತನಿಗೆ ದುಬಾರಿ ಕಾರೆಂದರೆ ಅಚ್ಚುಮೆಚ್ಚಂತೆ. ಎಷ್ಟೇ ದುಡ್ಡಾಗಲಿ, ಕೊಳ್ಳೋ ತನಕ ಮನಸ್ಸಿಗೆ ನೆಮ್ಮದಿಯೇ ಇರೋಲ್ವಂತೆ. ಒಂದು ಅಂದಾಜಿನ ಪ್ರಕಾರ ಇವರ ಬಳಿ ಇನ್ನೂರು ಇಂಥ ದುಬಾರಿ ಕಾರುಗಳಿವೆಯಂತೆ. ಈ ಕಾರುಗಳನ್ನು ನಿಲ್ಲಿಸಲು, ಸರ್ವಿಸ್‌ ಮಾಡಲೆಂದೇ ಅಂಟಿಲ್ಲಾ ಬಿಲ್ಡಿಂಗ್‌ನಲ್ಲಿ ಅಂಬಾನಿ ಆರು ಫ್ಲೋರ್‌ಗಳ ಗ್ಯಾರೇಜ್‌ ಹೊಂದಿದ್ದಾರೆ.

Follow Us:
Download App:
  • android
  • ios