Asianet Suvarna News Asianet Suvarna News

ಟ್ರಂಪ್‌ ಪ್ರಚಾರದ ವೇಳೆ ತೆರೆದ ಎದೆ ಪ್ರದರ್ಶನ ಮಾಡಿದ ಯುವತಿ, ಸಭೆಯಿಂದ ಹೊರಹಾಕಿದ ಪೊಲೀಸ್‌!

ಕಳೆದ ಮೇ ತಿಂಗಳಲ್ಲಿ ನ್ಯೂಯಾರ್ಕ್‌ ಹಾಗೂ ಡುಬ್ಲಿನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲೂ ಇದೇ ರೀತಿ ಮಾಡಿದ್ದ ಮಾಡೆಲ್‌ ಅವಾ ಲೌಸಿ ಇತ್ತೀಚೆಗೆ ಡೊನಾಲ್ಡ್‌ ಟ್ರಂಪ್‌ ಅವರ ಅಮೆರಿಕ ಅಧ್ಯಕ್ಷೀಯ ಪ್ರಚಾರದ ಭಾಗವಾಗಿ ನಡೆದ ಸಭೆಯಲ್ಲೂ ಇದೇ ವರ್ತನೆ ತೋರಿದ್ದಾರೆ.

model Ava Louise dragged from seat after flashing Bare Chest in Trump rally san
Author
First Published Sep 20, 2024, 8:26 PM IST | Last Updated Sep 20, 2024, 8:26 PM IST

ನ್ಯೂಯಾರ್ಕ್‌ (ಸೆ.20): ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ತನ್ನ ತೆರೆದ ಎದೆಯನ್ನು ತೋರಿಸುವ ಮೂಲಕವೇ ಪ್ರಖ್ಯಾತಿ ಪಡೆದುಕೊಂಡಿದ್ದ ಮಾಡೆಲ್‌ಅನ್ನು ಇತ್ತೀಚೆಗೆ ಇದೇ ಕಾರಣಕ್ಕಾಗಿ ಡೊನಾಲ್ಡ್‌ ಟ್ರಂಪ್‌ ಅವರ ಪ್ರಚಾರ ಸಭೆಯಿಂದ ಹೊರಹಾಕಲಾಗಿದೆ. ಇನ್‌ಫ್ಲುಯೆನ್ಸರ್‌ ಹಾಗೂ ಅಡಲ್ಟ್‌ ಸ್ಟಾರ್‌ ಆಗಿರುವ ಅವಾ ಲೌಸಿ ಕಳೆದ ಮೇ ತಿಂಗಳಲ್ಲಿ ನ್ಯೂಯಾರ್ಕ್‌ ಹಾಗೂ ಡುಬ್ಲಿನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ತೆರೆದ ಎದೆಯನ್ನು ಪ್ರದರ್ಶನ ಮಾಡಿದ್ದು ಮಾತ್ರವಲ್ಲದೆ ಅದನ್ನು ಅಶ್ಲೀಲ ವಿಡಿಯೋ ಪೋರ್ಟಲ್‌ ಫೀಡ್‌ನಲ್ಲಿ ಅದನ್ನು ಲೈವ್‌ ಮಾಡಿದ್ದರು. ಇದಕ್ಕಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಈಗ ಮತ್ತೊಮ್ಮೆ ಅವಾ ಲೌಸಿ ಸಾರ್ವಜನಿಕವಾಗಿ ತಮ್ಮ ತೆರೆದ ಎದೆಯನ್ನು ತೋರಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಇದಕ್ಕಾಗಿ ಅವರು 'T*ts for Trump..' ಎನ್ನು ಸ್ಲೋಗನ್‌ ಕೂಡಸ ಇರಿಸಿಕೊಂಡಿದ್ದರು.

ನ್ಯೂಯಾರ್ಕ್‌ನ ಲಾಂಗ್‌ ಐಸ್ಲೆಂಡ್‌ನಲ್ಲಿರುವ ಐತಿಹಾಸಿಕ ನಸ್ಸೌ ಕೊಲೇಸಿಯಂನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಮಾತನಾಡುವ ವೇಳೆ, 26 ವರ್ಷದ ಅವಾ ಲೌಸಿ ಎದ್ದು ನಿಂತಿದ್ದರು. ಸಭೆಯಲ್ಲಿ ಸಾರ್ವಜನಿಕರು ಡೊನಾಲ್ಡ್‌ ಟ್ರಂಪ್‌ ಭಾಷಣವನ್ನು ಕೇಳುತ್ತಿರುವ ವೇಳೆಯಲ್ಲಿಯೇ ತಮ್ಮ ಟಾಪ್‌ಅನ್ನು ತೆರೆದು ಕುಚ ಪ್ರದರ್ಶನ ಮಾಡಿದ್ದರು. ಹಾಗಂತ ಇದು ಟ್ರಂಪ್‌ ಗಮನಕ್ಕೆ ಬರಲಿದೆ. ಸಮಾವೇಶದ ಹಿಂಬದಿಯ ಸೀಟ್‌ನಲ್ಲಿ ಆಕೆ ಕುಳಿತುಕೊಂಡಿದ್ದರು. ಆದರೆ, ಅಲ್ಲಿಯೇ ಅಕ್ಕಪಕ್ಕದಲ್ಲಿದ್ದ ವ್ಯಕ್ತಿಗಳು ಈಕೆಯ ವರ್ತನೆಯನ್ನು ಕಂಡಿದ್ದಾರೆ. ತಮ್ಮ ಕೃತ್ಯವನ್ನು ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್‌ ಫ್ಲಾಟ್‌ಫಾರ್ಮ್‌ನಲ್ಲಿ ಲೈವ್‌ ಮಾಡಿದ್ದೆ ಎಂದೂ ಅವಾ ಹೇಳಿಕೊಂಡಿದ್ದಾರೆ.

ಆದರೆ, ಆಕೆಯ ವರ್ತನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನನ್ನ ಲೈವ್‌ ಸ್ಟ್ರೀಮ್‌ಅನ್ನು ಸೀಕ್ರೆಟ್‌ ಸರ್ವೀಸ್‌ ಕಂಡಿದ್ದರು. ಕೊನೆಗೆ ನನ್ನನ್ನು ಸಭೆಯಿಂದ ನೇರವಾಗಿ ಹೊರಹಾಕಿದರು. ಪೊಲೀಸರು ನನ್ನ ಮೇಲೆ ಆರೋಪ ಹೊರಿಸಲು ಅವರು ಪ್ರಯತ್ನ ಮಾಡಿದ್ದರು. ತುಂಬಾ ಸಿಟ್ಟಿನಲ್ಲಿ ಕಾಣುತ್ತಿದ್ದರು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಸೀಕ್ರೆಟ್‌ ಸರ್ವೀಸ್‌ ಅವರು ಪೊಲೀಸರಿಗೆ ಸಮಾಧಾನ ಮಾಡಿದ ಬಳಿಕ ನನ್ನನ್ನು ಸುಮ್ಮನೆ ಬಿಡಲಾಯಿತು ಎಂದಿರುವ ಅವಾ, ನನ್ನ ವಿಡಿಯೋದಿಂದ ಬಂದ ಹಣವನ್ನು ಟ್ರಂಪ್‌ ಅವರ ಪ್ರಚಾರಕ್ಕೆ ದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಎದೆ ಮೇಲೆ ಗುಲಾಬಿ ಇಟ್ಟು ನಗು ಚಲ್ಲಿದ ಜ್ಯೋತಿ ರೈ, ಆ ಹೂ ನಾನಾಗಬಾರದಿತ್ತಾ ಎಂದ ನೆಟ್ಟಿಗರು!

ನ್ಯೂಯಾರ್ಕ್‌ ಹಾಗೂ ಡುಬ್ಲಿನ್‌ ಘಟನೆಯ ಬಳಿಕ ನಾನು ಪ್ರತಿ ತಿಂಗಳು ಪೋರ್ಟಲ್‌ನಿಂದ 1 ಲಕ್ಷ ಪೌಂಡ್‌ ಸಂಪಾದನೆ ಮಾಡುತ್ತಿದ್ದೇನೆ. ಈಗ ಡೊನಾಲ್ಟ್‌ ಟ್ರಂಪ್‌ ಅವರ ಪ್ರಚಾರದಲ್ಲಿ ಈ ರೀತಿ ಮಾಡಿದ್ದರಿಂದ 5 ಲಕ್ಷ ಪೌಂಡ್‌ ಸಂಪಾದನೆ ಮಾಡುವ ಸಾಧ್ಯತೆ ಇದೆ ಎಂದು ಅವಾ ಹೇಳಿದ್ದಾರೆ. 'ಟ್ರಂಪ್‌ ಉದ್ಯಮಿ, ನಾನೂ ಕೂಡ ಉದ್ಯಮಿ. ಅವರನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನಾನು ನನ್ನ ಎದೆಯ ಚಿತ್ರಗಳನ್ನು ಮಾರುತ್ತೇನೆ. ಅವರು ಅಮೆರಿಕನ್ನರ ಕನಸುಗಳನ್ನು ಮಾರುತ್ತಾರೆ ಎಂದು ಅವಾ ಹೇಳಿದ್ದಾರೆ.

ಹಿಂದುವಾದರೂ ಕ್ರಿಶ್ಚಿಯನ್‌ ಧರ್ಮ ಫಾಲೋ ಮಾಡ್ತಿರೋ ನಟ ಗೋವಿಂದನ ಪತ್ನಿಯ ಶಾಕಿಂಗ್ ಹೇಳಿಕೆ

Latest Videos
Follow Us:
Download App:
  • android
  • ios