ಮೊಬೈಲ್ ಅಡಿಕ್ಟ್ ತಾಯಿ, ತೋಳಲ್ಲೇ ಇದ್ದ ಮಗುವಿಗಾಗಿ ರೂಮೆಲ್ಲಾ ಹುಡುಕಾಡಿದ್ಲು!
ಮೊಬೈಲ್‌ನಲ್ಲಿ ಮುಳುಗಿದ್ರೆ ಏನೂ ಗೊತ್ತಾಗಲ್ಲ ಅಂತಾರಲ್ಲ. ಅದು ನಿಜಾನೇ ನೋಡಿ. ಮಹಿಳೆಯೊಬ್ಬಳು ಮೊಬೈಲ್ ನೋಡ್ತಾ ನೋಡ್ತಾ ತನ್ನ ಮಗು ಎಲ್ಲಿದೆ ಎಂಬುದನ್ನೇ ಮರೆತು ಹುಡುಕಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ.
ಡಿಜಿಟಲ್ ಯುಗದಲ್ಲಿ ಮೊಬೈಲ್ ಎಂಬುದು ಜನಜೀವನದ ಅವಿಭಾಜ್ಯ ಅಂಗದಂತಾಗಿಬಿಟ್ಟಿದೆ. ಮೊಬೈಲ್ ಇಲ್ಲದೆ ದಿನನಿತ್ಯದ ಚಟುವಟಿಕೆಗಳನ್ನೇ ಮಾಡೋದೆ ಕಷ್ಟ ಎಂಬಂತಾಗಿಬಿಟ್ಟಿದೆ. ಬ್ಯಾಂಕಿಂಗ್, ಶಾಪಿಂಗ್, ಎಂಟರ್‌ಟೈನ್‌ಮೆಂಟ್, ಸ್ಟಡೀಸ್ ಹೀಗೆ ಎಲ್ಲದಕ್ಕೂ ಜನರು ಮೊಬೈಲ್‌ನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ರೀಲ್ಸ್, ವಿಡಿಯೋಗಳನ್ನು ನೋಡ್ತಾ ಇದ್ರೆ ಸಮಯ ಕಳೆದಿದ್ದೇ ಗೊತ್ತಾಗಲ್ಲ. ಸುಮ್ನೆ ಸ್ಕ್ರಾಲ್ ಮಾಡ್ತಿರೋದೆ. ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಜನರು ದಿನಪೂರ್ತಿ ವೀಡಿಯೋ, ರೀಲ್ಸ್ ನೋಡಿಯೇ ಸಮಯ ಕಳೆಯುತ್ತಿದ್ದಾರೆ. ಕೇವಲ ಮಕ್ಕಳು ಮಾತ್ರವಲ್ಲ, ವಯಸ್ಕರು, ಪುರುಷರು, ಮಹಿಳೆಯರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೇ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಟೈಂ ಪಾಸ್ ಮಾಡುತ್ತಾರೆ.
ಅದರಲ್ಲೂ ಮಹಿಳೆಯರು (Woman) ಮನೆಕೆಲಸ ಮಾಡ್ತಾ, ಮನೆಕೆಲಸ ಮುಗಿಸಿಕೊಂಡು ಫೋನ್‌ನಲ್ಲಿ ಸಮಯ ಕಳೆಯೋದು ಸಾಮಾನ್ಯವಾಗಿದೆ. ಮೊಬೈಲ್‌ನಲ್ಲಿ ಸೀರಿಯಲ್, ಶಾಪಿಂಗ್, ಬ್ಲೌಸ್ ಡಿಸೈನ್ ಮೊದಲಾದವುಗಳ ಮಾಹಿತಿ ಸುಲಭವಾಗಿ ಸಿಗುವ ಕಾರಣ ಮಹಿಳೆಯರು ಇವನ್ನು ನೋಡುತ್ತಾ ಸಮಯ (Time) ಕಳೆಯುವುದೇ ಗೊತ್ತಾಗಲ್ಲ. ಹೀಗೆ ಮೊಬೈಲ್ ನೋಡಿಯೇ ಕೆಲವೊಬ್ಬರು ಅಡುಗೆ (Cooking) ಮಾಡಲು ಮರೆಯುವುದೂ ಇದೆ. ಹಾಗೆಯೇ ಇಲ್ಲೊಬ್ಬಳು ಮಹಿಳೆ ಮೊಬೈಲ್ ನೋಡ್ತಾ ನೋಡ್ತಾ ತನ್ನ ಮಗು ಎಲ್ಲಿದೆ ಎಂಬುದನ್ನೇ ಮರೆತು ಹುಡುಕಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ.
ಮದ್ವೆ ದಿನವು ಉರಿ ಮೊಗದ ಜೊತೆ ಫೋನಲ್ಲೇ ಮುಳುಗಿದ ವರ: ವಧುವಿನ ಸ್ಥಿತಿಗೆ ಮರುಗಿದ ನೆಟ್ಟಿಗರು
ತೋಳಲ್ಲೇ ಮಗುವನ್ನು ಹಿಡ್ಕೊಂಡು ರೂಮೆಲ್ಲಾ ಹುಡುಕಾಡಿದ ತಾಯಿ
ವೀಡಿಯೊದಲ್ಲಿ, ಮಹಿಳೆಯೊಬ್ಬರು ತನ್ನ ಕಾಲಿನಿಂದ ಬೇಬಿ ವಾಕರ್‌ನ್ನು ಮೂವ್ ಮಾಡುತ್ತಾ ಮೊಬೈಲ್ ನೋಡುತ್ತಿರುತ್ತಾರೆ. ಇನ್ನೊಂದು ಮಗು ಸಹ ರೂಮಿನಲ್ಲಿ ಕುಳಿತು ಮೊಬೈಲ್ ನೋಡುತ್ತಾ ಇರುತ್ತದೆ. ತುಂಬಾ ಹೊತ್ತಿನ ನಂತರ ಮೊಬೈಲ್ ನೋಡುತ್ತಿದ್ದ ಮಹಿಳೆ ಸಡನ್ನಾಗಿ ವಾಕರ್ ನೋಡುತ್ತಾಳೆ. ಅದರಲ್ಲಿ ಮಗು (Infant) ಇರುವುದಿಲ್ಲ. ನಂತರ ಗಾಬರಿಯಾಗಿ ರೂಮೆಲ್ಲಾ ಹುಡುಕಾಡುತ್ತಾಳೆ. ಆ ಕಡೆ ಈ ಕಡೆ ರೂಮಿನಲ್ಲಿ ಹೋಗಿ ನೋಡುತ್ತಾಳೆ. ತಕ್ಷಣ ಆಕೆಗೆ ಮಗು ಕೈಯಲ್ಲೇ ಇದೆ ಎಂಬುದು ಅರಿವಿಗೆ ಬರುತ್ತದೆ. ಮಗುವನ್ನು ಎತ್ತಿ ಮುದ್ದಾಡುತ್ತಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಹಿಳೆಯ ಮೊಬೈಲ್ ಹುಚ್ಚಿಗೆ ಎಲ್ಲರೂ ಬಿದ್ದು ಬಿದ್ದೂ ನಗುತ್ತಿದ್ದಾರೆ.
ಮೇಲ್ನೋಟಕ್ಕೆ, ಮಹಿಳೆ ತನ್ನ ತೋಳಿನಲ್ಲಿ ಹಿಡಿದಿದ್ದ ಮಗುವನ್ನು ಹುಡುಕುತ್ತಿದ್ದಳು. ಆದರೆ, ಅವಳು ತನ್ನ ಮೊಬೈಲ್‌ನಲ್ಲಿ ಸಂಪೂರ್ಣವಾಗಿ ಮುಳುಗಿದ್ದರಿಂದ, ಮಗು ತನ್ನ ಕೈಯಲ್ಲಿದೆ ಮತ್ತು ವಾಕರ್‌ನಲ್ಲಿ ಅಲ್ಲ ಎಂದು ಅವಳು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ತಿಳಿದುಬರುತ್ತದೆ. .ಕೊಠಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ (Incident) ಸೆರೆಯಾಗಿದೆ.
ಅಮ್ಮನ ಸ್ಮಾರ್ಟ್‌ಫೋನ್‌ನಲ್ಲಿ ಲೋಕೆಷನ್ ಚೆಕ್ ಮಾಡಿ ಮನೆ ಬಿಟ್ಟು ಹೋದ ಅಪ್ರಾಪ್ತ ಬಾಲಕ!
ದಿ ಫಿಗೆನ್ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಮತ್ತು ಕಾಮೆಂಟ್ ವಿಭಾಗದಲ್ಲಿ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ನನಗೆ ಪೆನ್ನು, ಪೆನ್ಸಿಲ್ ಬಳಸುವಾಗ ಪ್ರತಿ ಬಾರಿಯೂ ಹೀಗೆ ಆಗುತ್ತದೆ. ಆದರೆ ಮಗುವನ್ನು ಮರೆತಿಲ್ಲ' ಎಂದಿದ್ದಾರೆ. ಮತ್ತೊಬ್ಬರು, 'ಇದನ್ನು ಮೊಬೈಲ್ ಫೋನ್ ಅಮ್ನೇಷಿಯಾ ಎನ್ನಲಾಗುತ್ತದೆ' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು 'ಕೆಲವೊಮ್ಮೆ ನಾನು ಕೈಯಲ್ಲಿ ನೀರಿನ ಗ್ಲಾಸ್ ಹಿಡಿದುಕೊಂಡು ಹೀಗೆಯೇ ಎಲ್ಲೆಡೆ ಹುಡುಕಾಡುತ್ತೇನೆ' ಎಂದು ಹಾಸ್ಯ ಮಾಡಿದ್ದಾರೆ. ಮತ್ತೊಬ್ಬರು 'ಆಕೆಗೆ ಮಗುವಿಗಿಂತ ಮೊಬೈಲ್ ಮೇಲಿನ ಪ್ರೀತಿ ಹೆಚ್ಚಿದೆ' ಎಂದು ಕಾಮೆಂಟಿಸಿದ್ದಾರೆ. ಹಲವಾರು ಬಳಕೆದಾರರು ತಮ್ಮೊಂದಿಗೆ ಸಂಭವಿಸಿದ ಇದೇ ರೀತಿಯ ಘಟನೆಗಳನ್ನು ಹಂಚಿಕೊಂಡರು.
ಮೊಬೈಲ್ ಅಡಿಕ್ಟ್ ತಾಯಿಯ ಪರದಾಟ ನೋಡಿ: