50 ಪೈಸೆಗೊಂದು ಲೋಟ ಕಾಫಿ ಮಾರುತ್ತಿದ್ದ ಈಕೆ ಇಂದು 100 ಕೋಟಿ ರೂ.ಗಳ ಒಡತಿ
ತಂದೆ ತಾಯಿಯನ್ನು ಬಿಟ್ಟು ಬಂದ್ರು, ಕಟ್ಟಿಕೊಂಡ ಗಂಡ ಕಿರುಕುಳ ಕೊಟ್ಟ. ಕುಟುಂಬಕ್ಕಾಗಿ ಕಾಫಿ ಮಾಡಿ ಮಾರುತ್ತಿದ್ದ ಮಹಿಳೆಗೆ ಬರಸಿಡಿಲಾಯಿತು ಪತಿ, ಮಗಳ ಸಾವು. ಅವೆಲ್ಲ ನೋವನ್ನು ಮೀರಿ ಇಂದು ಆಕೆ 100 ಕೋಟಿ ಮೌಲ್ಯದ ಆಸ್ತಿ ಗಳಿಸಿದ್ದು ಹೇಗೆ?
ಕಠಿಣ ಪರಿಶ್ರಮ ಮತ್ತು ಸಮರ್ಪಣೆ ನಮ್ಮ ಭವಿಷ್ಯವನ್ನು ಬದಲಾಗುತ್ತದೆ ಎಂಬುದಕ್ಕೆ ನಮ್ಮ ನಡುವೆ ಸಾಕಷ್ಟು ಉದಾಹರಣೆಗಳಿವೆ. ಅಂಥ ಒಬ್ಬ ಉದಾಹರಣೆ ಈ ಮಹಿಳೆ.
ಈಕೆಗೆ ಜೀವನ ನೀಡಿದ ಸವಾಲುಗಳು ಒಂದೆರಡಲ್ಲ. ಎಲ್ಲವೂ ಭಾವುಕವಾಗಿ ಕುಗ್ಗಿಸುವಂಥ ಬರಸಿಡಿಲುಗಳೇ. ಆದರೆ, ಹೆಣ್ಣು ಹಟ ಹೊತ್ತು ನಿಂತರೆ ಸೋಲುಗಳೇ ಹೆದರಿ ಓಡುತ್ತವೆ ಎಂಬುದನ್ನು ಸಾಧಿಸಿ ಕಂಡಾಕೆ ಪೆಟ್ರೀಷಿಯಾ ನಾರಾಯಣ್.
50 ಪೈಸೆಗೊಂದು ಲೋಟ ಕಾಫಿ ಮಾರುತ್ತಿದ್ದ ಈಕೆ ಇಂದು ಬಹು ದೊಡ್ಡ ಉದ್ಯಮಿ. 100 ಕೋಟಿ ರೂ.ಗಳ ಒಡತಿ. ಈಕೆಯ ಕತೆ ನಿಮಗೂ ಸ್ಪೂರ್ತಿಯಾಗಬಲ್ಲದು.
ಪೆಟ್ರೀಷಿಯಾ ನಾರಾಯಣ್ ಪ್ರೀತಿಸಿದವನ ಜೊತೆ ಓಡಿಹೋಗಲು ನಿರ್ಧರಿಸಿದಾಗ ಆಕೆಗಿನ್ನೂ 17 ವರ್ಷ. ಧರ್ಮದ ಕಾರಣಕ್ಕೆ ಕುಟುಂಬದ ವಿರೋಧ ಬಂದಿದ್ದರಿಂದ ಪ್ರೇಮಿಯೊಡನೆ ಓಡಿ ಹೋದಳು. ಈ ಕಾರಣಕ್ಕೆ ಅವಳ ಕುಟುಂಬ ಆಕೆಯನ್ನು ಶಾಶ್ವತವಾಗಿ ದೂರವಿಡಲು ನಿರ್ಧರಿಸಿತು. ಕಡೆಗೆ ಪ್ರೀತಿಸಿದವನಾದರೂ ಜೊತೆಯಿದ್ದಾನಲ್ಲ ಎಂದುಕೊಂಡರೆ ಆತ ಮದುವೆಯಾದ ಮೇಲೆ ತನ್ನ ನಿಜ ಬಣ್ಣಗಳನ್ನು ತೋರಿಸತೊಡಗಿದ. ಹೆಚ್ಚು ಹೆಚ್ಚು ಡ್ರಗ್ಸ್ ವ್ಯಸನಿಯಾಗುತ್ತಲೇ ಹೋದ ಆತ, ಹೆಂಡತಿಗೆ ಹೊಡೆಯತೊಡಗಿದ. ಪ್ರತಿ ದಿನ ಕಾಟ ಕೊಡಲಾರಂಭಿಸಿದ. ಪ್ರೇಮಕತೆಯಿಂದ ರೋದನೆಯ ಕತೆಗೆ ಪೆಟ್ರೀಷಿಯಾ ಬದುಕು ಹೊರಳಿತ್ತು. ಅದಾಗಲೇ ಎರಡು ಮಕ್ಕಳಾಗಿದ್ದವು. ಪೆಟ್ರೀಷಿಯಾಳ ಗಂಡನ ವ್ಯಸನದ ಪರಿಣಾಮವಾಗಿ ಕುಟುಂಬದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಆಗಲೇ ಪೆಟ್ರೀಷಿಯಾ ಕುಟುಂಬದ ಹೊಟ್ಟೆ ತುಂಬಿಸಲು ಕಾಫಿ ಟೀ ಮಾರಲು ನಿರ್ಧರಿಸಿದ್ದು. ಈ ನಿರ್ಧಾರ ಆಕೆಯ ಬದುಕಿನ ಚಿತ್ರಣವನ್ನೇ ಬದಲಿಸಿತು.
ನಟನೆಯಲ್ಲ, ಬಿಸ್ನೆಸ್ ಮಾಡಿ ಕೋಟಿ ಕೋಟಿ ಗಳಿಸ್ತಿದಾರೆ ಈ ಬಾಲಿವುಡ್ ಸ್ಟಾರ್ ಕಿಡ್ಸ್
ಸಣ್ಣದೋ ದೊಡ್ಡದೋ ಹೆಜ್ಜೆ ಇಟ್ಟು ಮುಂದೆ ಹೋದಾಗಲೇ ಗಮ್ಯ ತಾಣ ಕಾಣುವುದು ಎಂಬುದು ಇದಕ್ಕೇ. ಪೆಟ್ರೀಷಿಯಾ ಉದ್ಯಮಿಯಾಗಿದ್ದು, ಅವರು ಚೆನ್ನೈನಲ್ಲಿ ತನ್ನ ರೆಸ್ಟೋರೆಂಟ್ ಸರಪಳಿಯನ್ನು ನಡೆಸುತ್ತಿದ್ದಾರೆ.
ಪೆಟ್ರೀಷಿಯಾ ಚೆನ್ನೈನ ಮರೀನಾ ಬೀಚ್‌ನಲ್ಲಿ ಟೀ ಸ್ಟಾಲ್ ತೆರೆದರು. ಒಂದು ಕಪ್ ಕಾಫಿಯನ್ನು 50 ಪೈಸೆಗೆ ಮಾತ್ರ ಮಾರುತ್ತಿದ್ದ ಅವಳಿಗೆ ಆರಂಭದಲ್ಲಿ ತುಂಬಾ ಕಷ್ಟವಾಗಿತ್ತು. ನಂತರ, ಆಕೆ ಆದಾಯ ಹೆಚ್ಚಿಸಿಕೊಳ್ಳಲು ಸಮೋಸಾ ಸೇರಿದಂತೆ ಕೆಲ ತಿಂಡಿಗಳನ್ನು ಮಾರಲು ಪ್ರಾರಂಭಿಸಿದರು. ಇಷ್ಟೆಲ್ಲ ಒದ್ದಾಡಿ ಆಕೆ ಪ್ರತಿದಿನ ಗಳಿಸುತ್ತಿದ್ದುದು 50 ರುಪಾಯಿ.
ಕ್ರಮೇಣ ಪಟ್ರೀಷಿಯಾ ಅಡುಗೆ ವ್ಯವಹಾರದಲ್ಲಿ ಉದ್ಯೋಗಗಳನ್ನು ಬೇಟೆಯಾಡಲು ಪ್ರಾರಂಭಿಸಿದರು. ಸರ್ಕಾರಿ ಮತ್ತು ಬ್ಯಾಂಕಿಂಗ್ ಈವೆಂಟ್‌ಗಳನ್ನು ಪೂರೈಸಲು ಪ್ರಾರಂಭಿಸಿದರು, ಸಮಾರಂಭದಲ್ಲಿ 2000 ಜನರಿಗೆ ಆಹಾರವನ್ನು ನೀಡತೊಡಗಿದರು. ಶೀಘ್ರದಲ್ಲೇ ಅವರ ವ್ಯವಹಾರವು ವಿಸ್ತರಿಸಿತು, ಆದರೆ ವರ್ಷಗಳ ನಂತರ, ದುರಂತ ಸಂಭವಿಸಿತು ಮತ್ತು ಅವರ ಪತಿ ನಿಧನರಾದರು.
ವಾರಕ್ಕೆ 70 ಗಂಟೆ ಕೆಲಸ ಕೂಡಾ ಕಡಿಮೆಯೇ ಎಂದ ಸದ್ಗುರು! ಹಾಗಿದ್ರೆ ಎಷ್ಟು ಸಮಯ ಕೆಲಸ ಮಾಡ್ಬೇಕು?
ಈ ರೀತಿಯ ದುರಂತವು ಹೆಚ್ಚಿನ ಜನರ ಉತ್ಸಾಹವನ್ನು ಮುರಿಯುತ್ತದೆ ಆದರೆ ಪೆಟ್ರೀಷಿಯಾ ತನ್ನ ಕನಸನ್ನು ಬಿಟ್ಟುಕೊಡಲಿಲ್ಲ. ಆದರೆ ವಿಧಿಯ ಪರೀಕ್ಷೆ ಅಲ್ಲಿಗೆ ಮುಗಿಯಲಿಲ್ಲ. ಅವರು ತಮ್ಮ ಮಗಳು ಮತ್ತು ಅಳಿಯನನ್ನು ಕೆಲವು ಸಮಯದಲ್ಲಿ ಅಪಘಾತದಲ್ಲಿ ಕಳೆದುಕೊಂಡರು. ಈ ನೋವನ್ನು ಮರೆಯಲು ಪೆಟ್ರೀಷಿಯಾ ತಮ್ಮ ಮಗನೊಂದಿಗೆ ಮಗಳ ಹೆಸರಲ್ಲಿ ಸಂಧೀಫ ಚೈನ್ ಆಫ್ ಹೊಟೇಲ್ ಅನ್ನು ತೆರೆಯಲು ನಿರ್ಧರಿಸಿದರು.
ಶೀಘ್ರದಲ್ಲೇ, ಪೆಟ್ರೀಷಿಯಾ ನಾರಾಯಣ್ ಅವರ ರೆಸ್ಟೋರೆಂಟ್ ಸರಪಳಿಯು ತಮಿಳುನಾಡಿನಾದ್ಯಂತ ವ್ಯಾಪಕವಾಗಿ ಬೆಳೆದು ಅವರನ್ನು ಮಿಲಿಯನೇರ್ ಮಾಡಿತು. ಸಂಧೀಫ ರೆಸ್ಟೊರೆಂಟ್‌ಗಳು 2 ಲಕ್ಷ ರೂ.ಗಿಂತ ಹೆಚ್ಚಿನ ದೈನಂದಿನ ಆದಾಯವನ್ನು ದಾಖಲಿಸಿವೆ ಮತ್ತು ಪೆಟ್ರೀಷಿಯಾ ನಾರಾಯಣ್ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 100 ಕೋಟಿ ರೂ.