Asianet Suvarna News Asianet Suvarna News

ವಾರಕ್ಕೆ 70 ಗಂಟೆ ಕೆಲಸ ಕೂಡಾ ಕಡಿಮೆಯೇ ಎಂದ ಸದ್ಗುರು! ಹಾಗಿದ್ರೆ ಎಷ್ಟು ಸಮಯ ಕೆಲಸ ಮಾಡ್ಬೇಕು?

ಯುವಕರು ವಾರಕ್ಕೆ 70 ಗಂಟೆಗಳ ಕೆಲಸ ಮಾಡಬೇಕು ಎಂದು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಹೇಳುತ್ತಾರೆ. ವಾರಕ್ಕೆ 3 ದಿನ ಕೆಲಸ ಮಾಡಿ ಎಂದು ಬಿಲ್ ಗೇಟ್ಸ್ ಹೇಳುತ್ತಾರೆ. ಈ ಬಗ್ಗೆ ಸದ್ಗುರು ಏನಂತಾರೆ?

Sadhguru Responds to Narayana Murthys 70-hour Work Week Advice skr
Author
First Published Feb 28, 2024, 4:15 PM IST

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಯುವಕರಿಗೆ ವಾರದ 70 ಗಂಟೆಗಳ ಕೆಲಸ ಮಾಡುವ ಸಲಹೆಯಿಂದಾಗಿ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿದ್ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಭಾರತದ ಯುವಕರು ಗಣನೀಯವಾಗಿ ಹೆಚ್ಚಿನ ಕೆಲಸದ ಸಮಯಕ್ಕೆ ಬದ್ಧರಾಗದ ಹೊರತು, ಕಳೆದ ಕೆಲವು ದಶಕಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿರುವ ಆರ್ಥಿಕತೆಯೊಂದಿಗೆ ನಾವು ಸ್ಪರ್ಧೆ ಮಾಡಲು ಹೆಣಗಾಡಬೇಕಾಗುತ್ತದೆ ಎಂಬುದು ಮೂರ್ತಿಯವರ ಅಭಿಪ್ರಾಯವಾಗಿತ್ತು. ಚೀನಾದಂತಹ ದೇಶಗಳೊಂದಿಗಿನ ಅಂತರವನ್ನು ಕಡಿಮೆ ಮಾಡಲು, ಅವರು ಜಪಾನ್ ಮತ್ತು ಜರ್ಮನಿಗೆ ಸಮಾನಾಂತರವಾಗಿ ಹೋರಾಟ ಮಾಡಲು ಹೆಚ್ಚಿನ ಅವಧಿಯ ಕೆಲಸದ ಸಮಯ ಮತ್ತು ಸಮರ್ಪಣೆಯ ಸಂಸ್ಕೃತಿಯನ್ನು ರೂಪಿಸಿಕೊಳ್ಳಬೇಕಿದೆ ಎಂದವರು ಹೇಳಿದ್ದರು.

ಯುವಕರು ವಾರಕ್ಕೆ 70 ಗಂಟೆಗಳ ಕೆಲಸ ಮಾಡಬೇಕು ಎಂದು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಹೇಳುತ್ತಾರೆ. ವಾರಕ್ಕೆ 3 ದಿನ ಕೆಲಸ ಮಾಡಿ ಎಂದು ಬಿಲ್ ಗೇಟ್ಸ್ ಹೇಳುತ್ತಾರೆ. ಈ ಬಗ್ಗೆ ಸದ್ಗುರು ಏನಂತಾರೆ? ಎಂದು ನೋಡೋಣ. 

'ಅತಿಯಾದ ಕೆಲಸ ಎಂಬುದೇ ಇಲ್ಲ. ನೀವು ನಿಮಗೆ ಇಷ್ಟದ ಕೆಲಸ ಮಾಡುತ್ತಿದ್ದರೆ, ನೀವು ಮಾಡುತ್ತಿರುವುದು ಬಹಳ ಮುಖ್ಯವಾದುದು ಎಂದು ನಿಮಗನಿಸಿದರೆ ವಾರಕ್ಕೆ 70 ಗಂಟೆ ಬಹಳ ಕಡಿಮೆ. ಆದರೆ ನೀವು ಕೇವಲ ಜೀವನಕ್ಕಾಗಿ, ಹೊಟ್ಟೆ ತುಂಬಿಸುವ ಸಲುವಾಗಿ ಕೆಲಸ ಮಾಡುತ್ತಿದ್ದೀರೆಂದರೆ ಆಗ ನೀವು ಕೆಲಸ ಮಾಡುವ ಸಮಯ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದೆಂಬ ಯೋಚನೆಯಷ್ಟೇ ಬರುತ್ತದೆ' ಎಂದಿದ್ದಾರೆ ಸದ್ಗುರು ಜಗ್ಗಿ ವಾಸುದೇವ್.  

ವೀಸಾರಹಿತ ಥೈಲ್ಯಾಂಡ್ ಪ್ರವಾಸ; ವೆಚ್ಚ, ಸ್ಥಳಗಳು, ಯೋಜನೆ ಸಂಪೂರ್ಣ ವಿವರ ಇಲ್ಲಿದೆ..
 

ಮುಂದುವರಿದು, ನಾರಾಯಣ ಮೂರ್ತಿಯವರ ಹೇಳಿಕೆಯನ್ನು ಬೆಂಬಲಿಸುತ್ತಾ, 'ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದಿರುವುದಕ್ಕೆ ಬಹುಷಃ ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬುದು ಕಾರಣವಾಗಿರಬಹುದು. ಈ ದೇಶವನ್ನು ಕಟ್ಟಲು ಬಹಳಷ್ಟನ್ನು ಮಾಡಬೇಕು. ಇಲ್ಲಿ ಈಗಲೂ 400ರಿಂದ 500 ಮಿಲಿಯನ್ ಜನರು ಮೂಲಭೂತ ಅಗತ್ಯಗಳಿಂದಲೇ ವಂಚಿತರಾಗಿದ್ದಾರೆ. ಅವರೆಲ್ಲರಿಗೂ ಇದೇ ಜೀವಿತಾವಧಿಯಲ್ಲಿ ಮೂಲಭೂತ ಅಗತ್ಯಗಳು ದೊರೆಯಬೇಕೆಂದರೆ ನಾವು ಬಹಳಷ್ಟನ್ನು ಮಾಡಬೇಕಾಗುತ್ತದೆ. ನಾವು ಹೇಗೆ ವಿಶ್ರಾಂತಿ ಪಡೆಯುವುದು ಎಂದು ಯೋಚಿಸುವುದು ಬಿಟ್ಟು ಹೇಗೆ ಕೆಲಸ ಮಾಡಬೇಕು, ಎಷ್ಟು ಮಾಡಬೇಕು ಎಂಬ ಬಗ್ಗೆ ಯೋಚಿಸಬೇಕಾಗುತ್ತದೆ' ಎಂದಿದ್ದಾರೆ ಈಶಾ ಫೌಂಡೇಶನ್ ಮುಖ್ಯಸ್ಥ ಸದ್ಗುರು. 

ಅಂದ ಹಾಗೆ, ನೀವು ನಿಮ್ಮ ಕೆಲಸವನ್ನು ಪ್ರೀತಿಸುತ್ತೀರಾ? ವಾರಕ್ಕೆ ಎಷ್ಟು ಸಮಯ ಕೆಲಸ ಮಾಡ್ತೀರಿ?


 

 
 
 
 
 
 
 
 
 
 
 
 
 
 
 

A post shared by Sadhguru (@sadhguru)

Follow Us:
Download App:
  • android
  • ios