ಪತಿ ಸಾವಿಗೂ ಕುಗ್ಗಿಲ್ಲ, ತರಬೇತಿ ಪಡೆದು ಸ್ತನ ಕ್ಯಾನ್ಸರ್ ಪರೀಕ್ಷೆಯಲ್ಲಿ ಸೈ ಎನ್ನಿಸಿಕೊಂಡ ಅಂಧೆ

ಕೈಲಾಗದು ಅಂತ ಸುಮ್ಮನೆ ಕುಳಿತ್ರೆ ಜೀವನ ಶೂನ್ಯವಾಗುತ್ತೆ. ವಿಕಲಾಂಗೆಯಾದ್ರೂ ಸಾಧಿಸಬೇಕೆಂಬ ಛಲ ಹೊಂದಿದ್ದ ಮಹಿಳೆ ಈಗ ಸಾವಿರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಸ್ತನ ಕ್ಯಾನ್ಸರ್ ಪತ್ತೆಯಲ್ಲಿ ನೇಹಾ ಸೂರಿ ಹೆಸರು ಮುಂದಿದೆ. 
 

meet the blind breast cancer detectors Neha Suri roo

ಭಾರತದಲ್ಲಿ ಸ್ತನ ಕ್ಯಾನ್ಸರ್ (Breast Cancer) ಗೆ ತುತ್ತಾಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಒಂದ್ಕಡೆ ಮಹಿಳೆಯರಿಗೆ ಇದ್ರ ಬಗ್ಗೆ ಜ್ಞಾನದ ಕೊರತೆಯಿದೆ. ಇನ್ನೊಂದೆಡೆ  ಚಿಕಿತ್ಸೆಗೆ ಮುಜುಗರಪಟ್ಟುಕೊಳ್ಳುವ ಕಾರಣ ಬಹುತೇಕ ಮಹಿಳೆಯರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುವುದಿಲ್ಲ. ಕ್ಯಾನ್ಸರ್ ಹೆಸರು ಕೇಳಿದ್ರೆ ಭಯಪಡುವ ಜನರು ಅದನ್ನು ಕಳಂಕಿತ ಜಾಗದಲ್ಲಿಟ್ಟಿದ್ದಾರೆ. ಸಾರ್ವಜನಿಕವಾಗಿ ಅದ್ರ ಬಗ್ಗೆ ಚರ್ಚಿಸುವ, ಧೈರ್ಯವಾಗಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆಗೆ ಒಳಗಾಗುವ ಮಹಿಳೆಯರ ಸಂಖ್ಯೆ ಬಹಳ ಕಡಿಮೆ. ಸ್ತನ ಪರೀಕ್ಷೆಗೆ ಒಳಗಾಗಲು ಮಹಿಳೆಯರು, ಪುರುಷ ವೈದ್ಯರ ಬಳಿ ಈ ಚಿಕಿತ್ಸೆಗೆ ಬರುವವರ ಸಂಖ್ಯೆ ತುಂಬಾ ವಿರಳ. ಇಂಥ ಸಮಯದಲ್ಲಿ ನೇಹಾ ಸೂರಿ (Neha Suri) ಅಧ್ಬುತ ಕೆಲಸವನ್ನು ಮಾಡ್ತಿದ್ದಾರೆ. ಮಹಿಳೆಯರ ವಿಶ್ವಾಸಗಳಿಸಿ, ಸ್ತನ ಪರೀಕ್ಷೆ (breast exam) ಮಾಡುವ ನೇಹಾ ಸೂರಿ ಅಂಧೆ. 

ನೇಹಾ ಸೂರಿ ಯಾರು? : ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ವೈದ್ಯಕೀಯ ಸ್ಪರ್ಶ ಪರೀಕ್ಷಕರಾಗಿ (MTE-Medical Tactile Examiner) ನೇಹಾ ಸೂರಿ ಕೆಲಸ ಮಾಡ್ತಿದ್ದಾರೆ. ಅವರು ವೈದ್ಯಕೀಯ ಸ್ಪರ್ಶ ಪರೀಕ್ಷಕರಾಗಿ ತರಬೇತಿ ಪಡೆದ ಭಾರತದ ಮೊದಲ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ನೇಹಾ ಸೂರಿ, ದೀರ್ಘಕಾಲದ ಆನುವಂಶಿಕ ಕಣ್ಣಿನ ರೆಟಿನೈಟಿಸ್ ಪಿಗ್ಮೆಂಟೋಸಾದಿಂದ ಜನಿಸಿದರು. ನೇಹಾ ಸೂರಿಗೆ ಈಗ 44 ವರ್ಷ ವಯಸ್ಸು. ಅವರು ಸಣ್ಣ ಪ್ರಮಾಣದ ಬೆಳಕು ಮತ್ತು ಗಾಢತೆಯನ್ನು ಗುರುತಿಸುತ್ತಾರೆಯೇ ವಿನಃ, ಓದಲು ಅಥವಾ ಮುಖಗಳನ್ನು ಗುರುತಿಸಲು ಸಾಧ್ಯವಿಲ್ಲ. ಸೂರಿ ಇದ್ರಿಂದ ಬೇಸರಗೊಂಡಿಲ್ಲ. ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡು, ಕೆಲಸ ಮಾಡ್ತಿದ್ದಾರೆ. ಅವರ ಪತಿ 2016ರಲ್ಲಿ ಮೂಳೆ ಕ್ಯಾನ್ಸರ್ ನಿಂದ ಸಾವನ್ನಪ್ಪಿದ ನಂತ್ರ ಮಗನ ಒತ್ತಾಯದ ಮೇಲೆ ತರಬೇತಿಪಡೆದ ಅವರು ಈಗ ಲಕ್ಷಾಂತರ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. 

ದೀರ್ಘಕಾಲದವರೆಗೆ ಮಹಿಳೆಯರು ಕನ್ಯೆಯಾಗಿ ಉಳಿದ್ರೆ ಈ ಸಮಸ್ಯೆಗೆ ಒಳಗಾಗುತ್ತಾರೆ!

ನೇಹಾ ಸೂರಿ, ಸ್ಪರ್ಶದ ಮೂಲಕ ಸ್ತನ ಕ್ಯಾನ್ಸರ್ ಪರೀಕ್ಷೆ ಪ್ರಕ್ರಿಯೆಯ ಉದ್ದಕ್ಕೂ ಮಹಿಳೆಯರೊಂದಿಗೆ ಮಾತನಾಡುತ್ತಾರೆ. ಇದು ಸಾಮಾನ್ಯವಾಗಿ 30 ರಿಂದ 40 ನಿಮಿಷ ತೆಗೆದುಕೊಳ್ಳುತ್ತದೆ. ಶಾಂತವಾಗಿ ಮತ್ತು ಮೃದುವಾಗಿ ಅವರು ಕೆಲಸ ಮಾಡುತ್ತಾರೆ. ರೋಗಿ ನಮ್ಮನ್ನು ನಂಬುವಂತೆ ಮಾಡುವುದು ಮೊದಲ ಸವಾಲು ಎನ್ನುತ್ತಾರೆ ನೇಹಾ ಸೂರಿ. ಇತರರಿಗೆ ಸಹಾಯ ಮಾಡುವುದು ಮತ್ತು ಜೀವವನ್ನು ಉಳಿಸುವುದು ದೊಡ್ಡ ತೃಪ್ತಿ ಎಂದು ಅವರು ಹೇಳಿದ್ದಾರೆ. ತಂದೆಯ ಕನಸಿನಂತೆ ವೈದ್ಯಕೀಯ ಕ್ಷೇತ್ರಕ್ಕೆ ಬಂದಿರುವ ಅವರು, ದೃಷ್ಟಿಹೀನರು ಈ ಕೆಲಸವನ್ನು ಸುಲಭವಾಗಿ ಮಾಡಬಹುದು ಎಂದಿದ್ದಾರೆ. 

ಭಾರತದಲ್ಲಿ 15 ಮಿಲಿಯನ್ ಕುರುಡರಿದ್ದಾರೆ. ಅವರಲ್ಲಿ ಶೇಕಡಾ 5ರಷ್ಟು ಜನರು ಮಾತ್ರ ಆದಾಯಗಳಿಸುತ್ತಿದ್ದಾರೆ. ಕುರುಡ ಮಹಿಳೆಯರಿಗೆ ಸೂಕ್ತ ತರಬೇತಿ ಸಿಕ್ಕಲ್ಲಿ ಈ ಕೆಲಸವನ್ನು ಅವರು ಆರಾಮವಾಗಿ ಮಾಡಬಹುದು. ದೃಷ್ಟಿಹೀನ ಜನರು ಶ್ರವಣ, ಸ್ಪರ್ಶ ಮತ್ತು ಇತರ ಇಂದ್ರಿಯಗಳಲ್ಲಿ ಹೆಚ್ಚಿನ ಸಂವೇದನೆಯನ್ನು ಬೆಳೆಸಿಕೊಳ್ಳಬೇಕು. ದೃಷ್ಟಿ ವಿಕಲಚೇತನರು ತಮ್ಮ ಇತರ ಇಂದ್ರಿಯಗಳಿಗೆ ವ್ಯಾಪಕವಾಗಿ ತರಬೇತಿ ನೀಡಬೇಕು ಎನ್ನುತ್ತಾರೆ ಸಂಶೋಧಕರು.

ಅಜ್ರಕ್ ಸೀರೆಗೆ 5 ಸ್ಟೈಲಿಶ್ ಬ್ಲೌಸ್ ವಿನ್ಯಾಸಗಳು ಇಲ್ಲಿವೆ!

ವಿಶ್ವಾದ್ಯಂತ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇಕಡಾ 18ರಷ್ಟು ಹೊಸ ಪ್ರಕರಣಗಳು ಕಾಣಸಿಗ್ತಿವೆ. 50 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಹಿಳೆಯರಿಗೆ ಮ್ಯಾಮೊಗ್ರಾಮ್ ಗಳ ಆಯ್ಕೆ ನೀಡುವುದಿಲ್ಲ. ಹಾಗಾಗಿ ಸ್ತನ ಸ್ಪರ್ಶ ಪರೀಕ್ಷೆ, ಜಾಗತಿಕವಾಗಿ ಸ್ತನ ಸ್ಕ್ರೀನಿಂಗ್‌ನ ಪ್ರಮುಖ ಭಾಗವಾಗಿದೆ. ಆರಂಭದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆಯಾದ್ರೆ ಶೇಕಡಾ 90ರಷ್ಟು ಪ್ರಕರಣದಲ್ಲಿ ಚೇತರಿಕೆ ಕಾಣಬಹುದು. ಆದ್ರೆ ಆರಂಭದಲ್ಲಿ ಇದನ್ನು ಪತ್ತೆಹಚ್ಚುವುದೇ ಕಷ್ಟವಾಗಿದೆ. ಅಂಥವರಿಗೆ ನೇಹಾ ಸೂರಿ ನೆರವಾಗ್ತಾರೆ. 

Latest Videos
Follow Us:
Download App:
  • android
  • ios