ಕಂಬಿ ಹಿಂದೆ ಇರುವ ದರ್ಶನ್‌ ಕಡೆಗೂ ಹೊರಬರ್ತಾನಾ: ಡೆವಿಲ್‌ಗೆ ಜಾಮೀನು ಸಿಗದೇ ಹೋದ್ರೆ ಮುಂದೇನು?

ಬಂದೇ ಬಿಟ್ಟಿದೆ…ದರ್ಶನ್ ಇಷ್ಟು ದಿನ ಕಾದು ಕೂತಿದ್ದ ಆ ದಿನ ಕಡೆಗೂ ಬಂದೇ ಬಿಟ್ಟಿದೆ.  ಎಲ್ಲರ ಕಣ್ಣು ಕೋರ್ಟ್ ಮೇಲೆ, ಕೋರ್ಟ್ ಕೊಡೋ ತೀರ್ಪಿನ ಮೇಲಿದೆ.. ಇನ್ನೊಂದು ಕಡೆ ದರ್ಶನ್ಗೆ ಸೋಮವಾರ ಏನ್ ಆಗುತ್ತೋ ಅನ್ನೋ ಮಂಡೆ ಬಿಸಿ ಕಾಡ್ತಾ ಇದೆ.
 

First Published Oct 14, 2024, 9:23 AM IST | Last Updated Oct 14, 2024, 9:23 AM IST

ಬಂದೇ ಬಿಟ್ಟಿದೆ…ದರ್ಶನ್ ಇಷ್ಟು ದಿನ ಕಾದು ಕೂತಿದ್ದ ಆ ದಿನ ಕಡೆಗೂ ಬಂದೇ ಬಿಟ್ಟಿದೆ.  ಎಲ್ಲರ ಕಣ್ಣು ಕೋರ್ಟ್ ಮೇಲೆ, ಕೋರ್ಟ್ ಕೊಡೋ ತೀರ್ಪಿನ ಮೇಲಿದೆ.. ಇನ್ನೊಂದು ಕಡೆ ದರ್ಶನ್ಗೆ ಸೋಮವಾರ ಏನ್ ಆಗುತ್ತೋ ಅನ್ನೋ ಮಂಡೆ ಬಿಸಿ ಕಾಡ್ತಾ ಇದೆ. ದಾಸನಿಗೆ ಬೇಲ್ ಕೊಡಿ ಅಂತ ವಾದ ಮಾಡಿದ್ರು ಸಿ.ವಿ.ನಾಗೇಶ್.. ಬೇಲ್ ಕೊಡಬಾರದು ಅಂತ ಪ್ರತಿವಾದ ನಡೆಸಿದ್ರು ಎಸ್ಪಿಪಿ ಪ್ರಸನ್ನ ಕುಮಾರ್.. ಹಾಗಿದ್ರೆ ಯಾರ ವಾದಕ್ಕೆ ಗೆಲುವು..? ಬೇಲಾ.. ಜೈಲಾ..? ಅಂತ ಡಿ ಗ್ಯಾಂಗ್ ಎದೆಯಲ್ಲಿ ಶುರುವಾಗಿದೆ ಢವಢವ.. ಡೆವಿಲ್ಗೆ ಜಾಮೀನು ಸಿಗದೇ ಹೋದ್ರೆ ಮುಂದೇನು..?  ಒಂದು ಕಡೆ ದರ್ಶನ್ ಜಾಮೀನು ಸಿಗುತ್ತೋ ಇಲ್ವೋ ಅನ್ನೋ ಟೆನ್ಷನ್ನಲ್ಲಿದ್ರೆ, ಇನ್ನೊಂದು ಕಡೆ ಬೆನ್ನು ನೋವು ಆತನ ಬೆನ್ನೇರಿದೆ..? ದಿನೇ ದಿನೇ ನೋವು ಹೆಚ್ಚುತ್ತಿದೆಯಂತೆ. ಹಾಗಿದ್ರೆ ದರ್ಶನ್ ಬೆನ್ನು ನೋವು ಬೇಲ್ ಮೇಲೆ ಪರಿಣಾಮ ಬೀರುತ್ತಾ. 

ದರ್ಶನ್ಗೆ ಬೇಲೋ..?ಇಲ್ಲಾ, ಮತ್ತೆ ಜೈಲೋ..? ಅನ್ನೋದು ಸೋಮವಾರ ಗೊತ್ತಾಗುತ್ತೆ. ಈ ಮಧ್ಯೆ ಆತನಿಗೆ ಬೆನ್ನುನೋವು  ಹೆಚ್ಚಾಗಿದೆ. ಜೈಲಲ್ಲಿರೋ ದರ್ಶನ್ಗೆ ಶುರುವಾಗಿರೋ ಬೆನ್ನುನೋವು, ಪೊಲೀಸರ ತಲೆನೋವು ಹೆಚ್ಚಿಸಿದೆ. ದಾಸನ ಬೆನ್ನೇರಿರುವ ಬೆನ್ನು ನೋವು ಆತನ ಬೇಲ್ ಮೇಲೆ ಪರಿಣಾಮ ಬೀರುತ್ತಾ..? ದರ್ಶನ್ ಬೇಲ್ ನಿರೀಕ್ಷೆಯಲ್ಲೇನೋ ಇದ್ದಾನೆ. ಆದ್ರೆ ವಿಚಾರಣೆ ಸಂದರ್ಭದಲ್ಲಿ ಆತ ಕೊಟ್ಟ ಆ ಎರಡು ಹೇಳಿಕೆಗಳೇ ಆತನಿಗೆ ಮುಳುವಾಗಲಿವೆ ಎನ್ನಲಾಗ್ತಿದೆ. ಹಾಗಿದ್ರೆ, ಎಸ್ಪಿಪಿ ಪ್ರಸನ್ನ ಕುಮಾರ್ ತಮ್ಮ ವಾದದಲ್ಲಿ ಉಲ್ಲೇಖಿಸಿದ್ದ ದರ್ಶನ್ನ  ಆ ಎರಡು ಹೇಳಿಕೆಗಳು ಏನು? ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿ ಆರೋಪಿ ದರ್ಶನ್ ಇದ್ದಾನೆ. ಆದ್ರೆ, ವಿಚಾರಣೆ ಸಂದರ್ಭದಲ್ಲಿ ಆತನೇ ಕೊಟ್ಟಿದ್ದ ಆ ಎರಡು ಹೇಳಿಕೆಗಳೇ ಬೇಲ್ ಆಸೆಯನ್ನ ನಿರಾಸೆಗೊಳಿಸಬಹುದು ಎನ್ನಲಾಗ್ತಿದೆ. ಜಾಮೀನು ಅರ್ಜಿ ವಿಚಾರಣೆ ಟೈಮ್ನಲ್ಲಿ ಎಸ್ಪಿಪಿ ಪ್ರಸನ್ನ ಕುಮಾರ್ ಅವುಗಳನ್ನ ಪ್ರಸ್ತಾಪಿಸಿದ್ರು. ಡಿ ಗ್ಯಾಂಗ್ ಪಾಲಿಗೆ ಸೋಮವಾರ ಬಿಗ್ ಡೇ ಆಗಿದ್ದು.. ಬೇಲೋ..? ಜೈಲೋ..? ಅನ್ನೋದಿಕ್ಕೆ ಉತ್ತರ ಸಿಗಲಿದೆ. 

Video Top Stories