ಕಣಿವೆ ರಾಜ್ಯದಲ್ಲಿ ಬದಲಾಗುತ್ತಾ ರಾಜಕೀಯದಾಟ? ಮೋದಿ ಮೇಲೆ ಪ್ರೀತಿ, ಕೈಗೆ ಫಜೀತಿ, ಚಿಗುರಿತಾ ಹಳೇ ದೋಸ್ತಿ..?

ಕಾಶ್ಮೀರ ಕಣಿವೆಯಲ್ಲಿ ಉರುಳಿತಾ ಹೊಸ ರಾಜಕೀಯ ದಾಳ..? ಪಗಡೆಯಾಟದಲ್ಲಿ ನಡೆ ಬದಲಿಸಿದ್ರಾ ಕಣಿವೆ ರಾಜ್ಯದ ರಣಕಲಿ..? ಕಾಂಗ್ರೆಸ್ ಮಿತ್ರನ ಹೊಸ ವರಸೆ, 42+4 ಲೆಕ್ಕ ಹೇಳಿದ ಓಮರ್ ಅಬ್ದುಲ್ಲಾ..! 
 

First Published Oct 13, 2024, 6:30 PM IST | Last Updated Oct 13, 2024, 6:32 PM IST

ನವದೆಹಲಿ (ಅ.13): ಜಮ್ಮು ಕಾಶ್ಮೀರದ ಭಾವಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಹೊಸ ಲೆಕ್ಕದಲ್ಲಿದ್ದಾರೆ. 42+4 ಅನ್ನೋದು ಅವರ ತಂತ್ರ. ಕಾಶ್ಮೀರ ಗೆದ್ದ ನಾಯಕ ಕಾಂಗ್ರೆಸ್‌ಗೆ ಶಾಕ್‌ ಕೊಡ್ತಾರಾ ಎನ್ನುವ ಪ್ರಶ್ನೆಗಳೆದ್ದಿವೆ.

ಗವರ್ನರ್ ಭೇಟಿ ಬೆನ್ನಲ್ಲೇ ಓಮರ್ ಅಬ್ದುಲ್ಲಾ ಹೇಳಿರುವ ಮಾತುಗಳ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಸರ್ಕಾರ ರಚನೆಗೂ ಮೊದಲೇ ಹೊಸ ವರಸೆ ಶುರುವಾಗಿದೆ. ಇದರ ಮರ್ಮ ಏನು ಅನ್ನೋದರ ಬಗ್ಗೆ ರಾಜಕೀಯ ವಿಶ್ಲೇಷಕರು ಚರ್ಚೆ ಆರಂಭಿಸಿದ್ದಾರೆ.

ಉಗ್ರ ದಾಳಿಯಲ್ಲಿ ತಂದೆ, ಚಿಕ್ಕಪ್ಪ ಇಬ್ಬರನ್ನೂ ಕಳೆದುಕೊಂಡ ಶಗುನ್‌ಗೆ ಕಾಶ್ಮೀರ ಚುನಾವಣೆಯಲ್ಲಿ ಗೆಲುವು

ಇದರ ಬೆನ್ನಲ್ಲಿಯೇ ಹೊಸ ಚದುರಂಗದಾಟಕ್ಕೆ ಸಾಕ್ಷಿಯಾಗಲಿದ್ಯಾ ಕಣಿವೆ ರಾಜ್ಯ ಎನ್ನುವ ಪ್ರಶ್ನೆಗಳೂ ಎದುರಾಗಿದೆ. ಮೋದಿ ಬಗ್ಗೆ ಒಲವು.. ದೋಸ್ತಿ ಬಗ್ಗೆ ತಿರಸ್ಕಾರ ಶುರುವಾಗಿದೆ. ಓಮರ್‌ ಅಬ್ದುಲ್ಲಾ ತಲೆಯಲ್ಲಿ ಓಡ್ತಾ ಇರೋ ವಿಚಾರವೇನು ಅನ್ನೋದರ ಚರ್ಚೆ ಶುರುವಾಗಿದೆ.