ದೀರ್ಘಕಾಲದವರೆಗೆ ಮಹಿಳೆಯರು ಕನ್ಯೆಯಾಗಿ ಉಳಿದ್ರೆ ಈ ಸಮಸ್ಯೆಗೆ ಒಳಗಾಗುತ್ತಾರೆ!
28 ವರ್ಷದ ನಂತರವೂ ಮಹಿಳೆಯರು ಕನ್ಯೆಯರಾಗಿದ್ದರೆ ಈ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ. ಹಾಗಾದ್ರೆ ಈ ಅಧ್ಯಯನದ ವರದಿಯಲ್ಲಿರುವ ಅಂಶಗಳು ಏನು ಅಂತ ನೋಡೋಣ ಬನ್ನಿ.
ಸುಖವಾಗಿ ಜೀವನ ನಡೆಸಬೇಕು ಎಂದು ಎಲ್ಲರೂ ಕನಸು ಕಾಣುತ್ತಾರೆ. ಕೆಲ ಕುಟುಂಬಗಳು ಸಮಯಕ್ಕೂ ಮೊದಲ ಅಥಯಾ ಸೂಕ್ತ ವೇಳೆಗೆ ಮಕ್ಕಳ ಮದುವೆಯನ್ನು ಮಾಡುತ್ತಾರೆ. ಆದ್ರೆ ಕಾರಣಾಂತರಗಳಿಂದ ಕೆಲವರು ಮಕ್ಕಳ ಮದುವೆಯನ್ನು ಮುಂದೂಡುತ್ತಾರೆ. ಒಂದು ವರ್ಗದ ಜನರು ಆರ್ಥಿಕವಾಗಿ ಸದೃಢರಾಗಿ ಮದುವೆಯಾಗಬೇಕೆಂದು ಕನಸು ಕಂಡಿರುತ್ತಾರೆ. ಈ ಕನಸು ನನಸಾಗುವ ವೇಳೆ ವಯಸ್ಸು 30ರ ಗಡಿ ದಾಟಿರುತ್ತದೆ. ಇಂದು ಮಹಿಳೆಯರು ಸಹ ಆರ್ಥಿಕವಾಗಿ ಪ್ರಬಲರಾಗಿ ಮದುವೆ ಮಾಡಿಕೊಳ್ಳಬೇಕು ಎಂಬ ಗುರಿಯನ್ನು ಹೊಂದಿರುತ್ತಾರೆ.
18 ವರ್ಷ ಮೇಲ್ಪಟ್ಟ ಯುವತಿ ಮದುವೆಗೆ ಅರ್ಹಳು. ಇಂದು ಕಾಲ ಬದಲಾಗಿದ್ದು, ಸಾಮಾನ್ಯವಾಗಿ ಯುವತಿಯರು 25-28ನೇ ವಯಸ್ಸಿಗೆ ಕಾಲಿಡುತ್ತಿರೋದನ್ನು ಕಾಣಬಹುದಾಗಿದೆ. ಆದ್ರೆ ಮಹಿಳೆ ದೀರ್ಘಕಾಲದವರಗೆ ಕನ್ಯೆಯಾಗಿಯೇ ಉಳಿದ್ರೆ ಕೆಲವೊಂದು ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂದು ಅಧ್ಯಯನದ ವರದಿ ಹೇಳಿದೆ. 28 ವರ್ಷದ ನಂತರವೂ ಕನ್ಯೆಯಾಗಿ ಉಳಿದಿರುವ ಮಹಿಳೆಯಲ್ಲಿ ಕೆಲ ಮಾನಸಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎಂಬ ಮಾಹಿತಿ ಅಧ್ಯಯನದ ವರದಿಯಲ್ಲಿ ಉಲ್ಲೇಖವಾಗಿದೆ.
28 ವರ್ಷದ ನಂತರವೂ ಮಹಿಳೆ ಕನ್ಯೆಯಾಗಿ ಉಳಿದ್ರೆ ಅವರು ಬುದ್ಧಮಾಂದ್ಯತೆ (Dementia) ಎಂಬ ಮಾನಸಿಕ ಕಾಯಿಲೆಗೆ ತುತ್ತಾಗುತ್ತಾರೆ. ಜರ್ನಲ್ ಆಫ್ ನ್ಯೂರಾಲಜಿ, ನ್ಯೂರೋಸರ್ಜರಿ ಮತ್ತು ಸೈಕಿಯಾಟ್ರಿ ಅಧ್ಯಯನದ ವರದಿ ಪ್ರಕಾರ, ಶೇ.42ರಷ್ಟು ಕನ್ಯೆಯರಲ್ಲಿಯೇ ಬುದ್ಧಿಮಾಂದ್ಯತೆ ಸಮಸ್ಯೆಯ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡು ಅಥವಾ ದೀರ್ಘಕಾಲದವರೆಗೆ ಏಕಾಂಗಿ/ಒಂಟಿಯಾಗಿರುವ ಯುವತಿಯರು ಬುದ್ಧಮಾಂದ್ಯತೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಒಂಟಿಯಾಗಿರುವ ಶೇ.20ರಷ್ಟು ಯುವತಿಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಹೆರಿಗೆ ನಂತ್ರ ದೀಪಿಗೆ ಕಾಡ್ತಿದ್ಯಾ ಒಂಟಿತನ..? ರಣವೀರ್ ಬಗ್ಗೆ ಇಂಥ ಸ್ಟೋರಿ ಹಾಕಿದ ಬೆಡಗಿ
ಈ ಅಧ್ಯಯನದಲ್ಲಿ ಇತರೆ 15 ವಿಷಯಗಳ ಬಗ್ಗೆಯೂ ಸ್ಟಡಿ ಮಾಡಲಾಗಿತ್ತು. ವೈವಾಹಿಕ ಜೀವನ ಮತ್ತು ಬುದ್ಧಿಮಾಂದ್ಯತೆ ನಡುವೆ ಹಲವು ಸಂಬಂಧವಿದೆ. ಮದುವೆ ಬಳಿಕ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನದಿಂದ ಮಹಿಳೆಗೆ ಹೊಸದಾದ ನಂಬಿಕೆ ಬರುತ್ತದೆ. ತನ್ನನ್ನು ಚೆನ್ನಾಗಿ ನೋಡಿಕೊಳ್ಳುವವರು ಇದ್ದಾರೆ ಎಂಬ ಭರವಸೆ ಮೂಡುತ್ತದೆ. ಹಾಗಾಗಿ ಮದುವೆಯಾಗದೇ ಕನ್ಯೆಯಾಗಿಯೇ ಉಳಿಯುವ ಮಹಿಳೆಯರು ಕೆಲವು ಸಂದರ್ಭಗಳಲ್ಲಿ ಮಾನಸಿಕ ಒತ್ತಡಕ್ಕೆ ಸಿಲುಕಿ ಬುದ್ಧಿಮಾಂದ್ಯತೆ ಸಮಸ್ಯೆಗೆ ಗುರಿಯಾಗುವ ಅಪಾಯ ಹೆಚ್ಚಿರುತ್ತದೆ.
ಈ ರೋಗವು ಹೆಚ್ಚಾಗಿ ಹುಡುಗಿಯರ ಆಲೋಚನಾ ಸಾಮರ್ಥ್ಯ, ವಿಸ್ಮೃತಿ, ಕೆರಳಿಸುವ ಸ್ವಭಾವ, ಆಲೋಚನಾ ಸಾಮರ್ಥ್ಯ ಮತ್ತು ಮನಸ್ಥಿತಿಯ ಬದಲಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಹೇಳಿದೆ. ನೀವು ಈ ಎಲ್ಲಾ ಕಾಯಿಲೆಗಳನ್ನು ತಪ್ಪಿಸಲು ಬಯಸಿದರೆ 28 ವರ್ಷಕ್ಕಿಂತ ಮೊದಲು ಮದುವೆಯಾಗೋದು ಉತ್ತಮ ಎಂಬ ಸಲಹೆಯನ್ನು ಅಧ್ಯಯನದ ವರದಿ ಹೇಳಿದೆ.
ನೀವು ಸಿಂಗಲ್ ಮ್ಯಾರೀಡ್ ವುಮನ್ನಾ? ಯಾರಿದು ಒಂಟಿ ವಿವಾಹಿತ ಮಹಿಳೆ ಅಂದ್ರೆ?