ಚೀನಾದ ಸ್ಪೈಡರ್ ವುಮನ್: 100 ಮೀಟರ್ ಎತ್ತರ ಬಂಡೆಗಲ್ಲನ್ನು ಬರಿಗಾಲಿನಲ್ಲಿ ಏರಿದ ಲುವೋ
ಚೀನಾದ ಲುವೋ ಡೆಂಗ್ಪಿನ್ ಎಂಬ ಮಹಿಳೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ 100 ಮೀಟರ್ ಎತ್ತರದ ಬಂಡೆಯನ್ನು ಏರಿದ್ದಾರೆ. ಮಿಯಾವೋ ಸಮುದಾಯದ ಪುರಾತನ ಸಂಪ್ರದಾಯವನ್ನು ಪಾಲಿಸುತ್ತಿರುವ ಏಕೈಕ ಮಹಿಳೆ ಇವರಾಗಿದ್ದಾರೆ.
ಕಾಲಿಗೆ ಶೂ ಕೈಗೆ ಕೈಗವಸು ಯಾವುದು ಇಲ್ಲದೇ ಚೀನಾದ ಸ್ಪೈಡರ್ ವುಮನ್ ಎಂದು ಖ್ಯಾತಿ ಪಡೆದಿರುವ ಮಹಿಳೆಯೊಬ್ಬರು 100 ಮೀಟರ್ ಎತ್ತರದ ಬಂಡೆಯನ್ನು ಹತ್ತಿ ಸಾಧನೆ ಮಾಡಿದ್ದಾರೆ. ಚೀನಾದ ನಯತಕಾಲಿಕೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, 43 ವರ್ಷದ ಲುವೋ ಡೆಂಗ್ಪಿನ್ ಅವರು ಮಿಯೋ ಸಮುದಾಯದ ಈ ಪುರಾತನ ಸಂಪ್ರದಾಯವನ್ನು ಪಾಲಿಸುತ್ತಿರುವ ಏಕೈಕ ಮಹಿಳೆ ಆಗಿದ್ದಾರೆ. ಈ ಸಮುದಾಯದ ಜನ ಯಾವುದೇ ಉಪಕರಣಗಳನ್ನು ಬಳಸದೇ ಬರಿಗೈ ಬರಿಗಾಲಿನಲ್ಲಿ ಎತ್ತರದ ಬಂಡೆಗಲ್ಲುಗಳನ್ನು ಏರುತ್ತಾರೆ. ಇದು ಮಿಯಾವೋ ಪರಂಪರೆಯ ಭಾಗವೆಂದು ಅವರು ನಂಬುತ್ತಾರೆ.
ಲುವೋ ಡೆಂಗ್ಪಿನ್ ಅವರು ಝಿಯುನ್ ಮಿಯಾವೊ ಮತ್ತು ಬುಯೆಯ್ ಸ್ವಾಯತ್ತ ಪ್ರಾಂತ್ಯದ ನಿವಾಸಿಯಾಗಿದ್ದು, ತಮ್ಮ ಈ ವಿಶೇ ಪ್ರತಿಭೆಯಿಂದಾಗಿ ಅವರು ಚೀನಾದಲ್ಲಿ ಚೈನೀಸ್ ಸ್ಪೈಡರ್ ವುಮನ್ ಎಂದೇ ಖ್ಯಾತಿ ಗಳಿಸಿದ್ದಾರೆ. ಲುವೋ ಡೆಂಗ್ಪಿನ್ ಅವರು ನೇರವಾಗಿರುವ 108 ಅಡಿ ಎತ್ತರದ ಬಂಡೆಗಳನ್ನು ಹಗ್ಗ, ಕೈಗವಸು, ಶೂ ಹೀಗೆ ಯಾವುದೇ ಉಪಕರಣಗಳಿಲ್ಲದೇ ಮೇಲೆರುತ್ತಾರೆ. ಮಿಯಾವೋ ಸಮುದಾಯದ ಜನರು ಬಂಡೆಗಳ ಮೇಲೆ ಮೃತರಾದವರನ್ನು ಸಮಾಧಿ ಮಾಡುವ ಸಂಪ್ರದಾಯವನ್ನು ಹೊಂದಿದ್ದಾರೆ. ಹೀಗಾಗಿ ಲುವೋ ಡೆಂಗ್ಪಿನ್ ಅವರಿಗೆ ಹೀಗೆ ಬೆಟ್ಟವನ್ನು ಸಹಜವಾಗಿ ಬರಿಗಾಲಿನಲ್ಲಿ ಹತ್ತುವ ಗುಣ ತಮ್ಮ ರಕ್ತದಲ್ಲೇ ಬಂದಿದೆ.
ಕಾಲಿಲ್ಲದಿದ್ದರೂ ಕಿಲಿಮಂಜಾರೋ ಏರಿದ ಬಾಂಬ್ ಬ್ಲಾಸ್ಟ್ ಗಾಯಾಳು
ಮಿಯಾವೋ ಸಮುದಾಯದ ಜನ ಚೀನಾದ ಬೆಟ್ಟ, ಪರ್ವತ ಪ್ರದೇಶಗಳಳ್ಲಿ ವಾಸ ಮಾಡುತ್ತಾರೆ. ಅವರ ಪ್ರಕಾರ ಅವರ ಸಮುದಾಯದಲ್ಲಿ ಯಾರಾದರೂ ಸತ್ತರೆ ಅವರನ್ನು ಬೆಟ್ಟದ ಮೇಲೆಯೇ ಸಮಾಧಿ ಮಾಡಬೇಕು. ಈ ಮೂಲಕ ತಮ್ಮ ಪೂರ್ವಜರ ತಾಯ್ನಾಡು ಎನಿಸಿದ ಬೆಟ್ಟದೆಡೆಗೆ ನೋಡಲು ಸುಲಭವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಇವರ ಈ ಸಂಪ್ರದಾಯವೂ ಮೃತರಾದವರನ್ನು ಕೃಷಿ ಭೂಮಿಯಲ್ಲಿ ಸಮಾಧಿ ಮಾಡದಂತೆ ತಡೆಯುತ್ತದೆ ಹಾಗೂ ಅವರ ಮೃತದೇಹಗಳನ್ನು ಪ್ರಾಣಿಗಳಿಂದ ರಕ್ಷಿಸುತ್ತದೆ. ಈ ಎಲ್ಲಾ ಸಂಪ್ರದಾಯಗಳೇ ಮಿಯಾವೋ ಸಮುದಾಯವನ್ನು ಹೀಗೆ ಎತ್ತರದ ಪ್ರದೇಶಗಳನ್ನು ಬರಿಗಾಲಿನಲ್ಲಿ ಏರುವ ಕೌಶಲ್ಯವನ್ನು ಕಲಿಸಿದೆ.
ಆದರೆ ಇದು ಆ ಸಮುದಾಯದ ಪುರುಷರಿಗೆ ಮಾತ್ರ ಮೀಸಲಾಗಿತ್ತು. ಆದರೆ ಲುವೋ ಅವರು ಅದನ್ನು ಮೀರಿ ಹೀಗೆ ಬೆಟ್ಟ ಹತ್ತುವ ಮೂಲಕ ಸಾಧನೆ ಮಾಡಿದ್ದಾರ. ತಾವು 15 ವರ್ಷ ಇದ್ದಾಗಿನಿಂದಲೂ ಬೆಟ್ಟ ಹತ್ತಲು ಶುರು ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಈಕೆಗೆ ಈಕೆಯ ತಂದೆಯೇ ಬೆಟ್ಟ ಹತ್ತಲು ತರಬೇತಿ ನೀಡಿದ್ದು, ಮೊದಲಿಗೆ ಔಷಧೀಯ ಸಸ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಬೆಟ್ಟ ಹತ್ತುತ್ತಿದ್ದರು, ಕ್ರಮೇಣ ಇದೇ ಅಭ್ಯಾಸವಾಗಿ ಹೋಯ್ತು ಎಂದು ಅವರು ಹೇಳಿಕೊಂಡಿದ್ದು, ಈಗ ಅವರು ತಮ್ಮದೇ ಸಮುದಾಯ ಪುರುಷರಿಗೆ ಈ ವಿಚಾರದಲ್ಲಿ ಸ್ಪರ್ಧೆ ನೀಡುತ್ತಾರೆ.
ಅತಿ ಎತ್ತರದ ಕಿಲಿಮಂಜಾರೋ ಪರ್ವತದ ಮೇಲೆ ಸೋನು ಸೂದ್ ಫೋಟೋ; ಅಭಿಮಾನಿಯಿಂದ ಧನ್ಯವಾದ!
2017ರ ಬಿಬಿಸಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಆಕೆ ಈ ಕೆಲಸ ಕೇವಲ ಪುರುಷರಿಗೆ ಮಾತ್ರ ಎಂದು ಹೇಳುತ್ತಿದ್ದರು. ಆದರೆ ಮಹಿಳೆಯರು ಹಾಗೂ ಪುರುಷರು ಸಮಾನರು ಎಂದು ನಾನು ನಂಬುತ್ತೇನೆ ಹೀಗಾಗಿ ಈ ಬೆಟ್ಟ ಹತ್ತುವುದನ್ನು ನಾನು ಕಲಿತೆ ಎಂದು ಹೇಳಿಕೊಂಡಿದ್ದಾರೆ.