ತಿರುಪತಿಯ ವೆಂಕಟೇಶ್ವರ ಸನ್ನಿಧಿಯಲ್ಲಿ ತನ್ನ ಲಿವ್ ಇನ್ ಸಂಗಾತಿಯಾದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಶಾಸಕ ದುವ್ವಾಡ ಶ್ರೀನಿವಾಸ್‌ ಜೊತೆ ಸೇರಿ ರೀಲ್ಸ್‌ ಮಾಡಿದ್ದ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ದಿವ್ವಳ ಮಾಧುರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ತಿರುಪತಿ: ತಿರುಪತಿಯ ವೆಂಕಟೇಶ್ವರ ಸನ್ನಿಧಿಯಲ್ಲಿ ತನ್ನ ಲಿವ್ ಇನ್ ಸಂಗಾತಿಯಾದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಶಾಸಕ ದುವ್ವಾಡ ಶ್ರೀನಿವಾಸ್‌ ಜೊತೆ ಸೇರಿ ರೀಲ್ಸ್‌ ಮಾಡಿದ್ದ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ದಿವ್ವಳ ಮಾಧುರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೇವಸ್ಥಾನದ ಬ್ರಹ್ಮರಥೋತ್ಸವದ ಸಮಯದಲ್ಲಿ ಮಾಧುರಿ ತನ್ನ ಸಂಗಾತಿ ಶ್ರೀನಿವಾಸ್‌ ಜೊತೆ ಸೇರಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದರು ಮತ್ತು ಪವಿತ್ರ ಮಾಡಾ ಬೀದಿಯಲ್ಲಿ ರೀಲ್ಸ್ ಮಾಡುತ್ತಿದ್ದರು ಎನ್ನುವ ಆರೋಪ ಎದುರಾಗಿದೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ನೀಡಿದ ದೂರಿನ ಅನ್ವಯ ತಿರುಮಲ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಮಾಧುರಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ವಿರುದ್ಧ ಕಾಮೆಂಟ್‌ ಮಾಡಿದ್ದಕ್ಕೆ ಸುಳ್ಳು ಆರೋಪ ಹೊರಿಸಲಾಗಿದೆ. ನ್ಯಾಯಾಲಯದಲ್ಲಿ ಹೋರಾಡುವುದಾಗಿ ಹೇಳಿದ್ದಾರೆ.

ಪೊಲೀಸರು ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 292 (ಸಾರ್ವಜನಿಕ ತೊಂದರೆ), 296 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಮತ್ತು 300 (ಧಾರ್ಮಿಕ ಸಭೆಗಳಿಗೆ ಅಡ್ಡಿಪಡಿಸುವುದು) ಮತ್ತು ಐಟಿ ಕಾಯಿದೆಯ ಸೆಕ್ಷನ್ 66 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಿರುಮಲದ ಪವಿತ್ರ ಮಾಡಾ ಬೀದಿಗಳಲ್ಲಿ ಮಾಧುರಿ ರೀಲ್‌ಗಳನ್ನು ತಯಾರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಕ್ತರ ಕಾಣಿಕೆ, ದೇಣಿಗೆಯಿಂದ ಅತ್ಯಂತ ಶ್ರೀಮಂತವಾಗಿರುವ ಭಾರತದ ದೇವಸ್ಥಾನ ಯಾವುದು?

ತಾನು ಮತ್ತು ಶ್ರೀನಿವಾಸ್ ಸಾಮಾನ್ಯರಂತೆ ತಿರುಮಲಕ್ಕೆ ಹೋಗಿದ್ದೆವು. ಕೆಲವು ಮಾಧ್ಯಮದವರು ತಮ್ಮ ಫೋಟೋಗಳನ್ನು ತೆಗೆದುಕೊಂಡರು ಮತ್ತು ಇಲ್ಲಿ ರೀಲ್‌ಮಾಡುವುದು ಅಥವಾ ಪ್ರಿ-ವೆಡ್ಡಿಂಗ್ ಶೂಟ್ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಮಾಧುರಿ ಹೇಳಿದ್ದಾರೆ. ತಿರುಮಲದಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದ ನಡುವೆ, ಮಾಧುರಿ ಮತ್ತು ಶ್ರೀನಿವಾಸ್ ಅಲ್ಲಿ ಫೋಟೋ ಶೂಟ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳನ್ನು ಹಂಚಿಕೊಂಡಿದ್ದರು. ಇದು ಆಕ್ರೋಶಕ್ಕೆ ಕಾರಣವಾಗಿತ್ತು. ದೇವಸ್ಥಾನದ ಸಮೀಪ ಮತ್ತು ಶ್ರೀವಾರಿ ಪುಷ್ಕರಿಣಿ ಬಳಿ ಇವರಿಬ್ಬರ ಕೃತ್ಯವು ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿಗೆ ಇರಿಸುಮುರಿಸು ಉಂಟು ಮಾಡಿದೆ ಎಂದು ವರದಿಯಾಗಿದೆ. 

ಇತ್ತ ಮಾಧುರಿ ಜೊತೆ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಎಂಎಲ್‌ಸಿ ಶ್ರೀನಿವಾಸ್‌, ಪತ್ನಿ ವಾಣಿಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಗೆಳತಿ ಮಾಧುರಿಯೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರುವುದಾಗಿ ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದಾರೆ. 

ಲಡ್ಡು ಅವಾಂತರದ ನಂತರ ತಿರುಪತಿ ಊಟದಲ್ಲಿ ಸಹಸ್ರಪದಿ ಪತ್ತೆ: ಭಕ್ತನ ಆರೋಪ ನಿರಾಕರಿಸಿದ ದೇಗುಲ

View post on Instagram