ಘರ್ ಸೇ ನಿಕಲ್ ತೇ ಹಿ ಹಾಡಿನ ಸುಂದ್ರಿ ಮಯೂರಿ ಈಗ ಗೂಗಲ್ ನ ಇಂಡಿಯಾ ಇಂಡಸ್ಟ್ರಿ ಹೆಡ್

ಕಾನ್ಪುರ ಐಐಟಿಗೆ ಪ್ರವೇಶ ದೊರೆತರೂ ಅದನ್ನು ಬಿಟ್ಟು ಬಾಲಿವುಡ್ ನಲ್ಲಿ ವೃತ್ತಿ ಅರಸಿದ ನಟಿ ಮಯೂರಿ ಕಾಂಗೋ. ಬಳಿಕ, ವೃತ್ತಿಯ ಉತ್ತುಂಗದಲ್ಲಿರುವಾಗಲೇ ಬಾಲಿವುಡ್ ಅನ್ನೂ ತೊರೆದು ಅಮೆರಿಕಕ್ಕೆ ಹಾರಿದ ಈ ನಟಿ ಈಗ ಗೂಗಲ್ ಕಂಪೆನಿಯ ದೊಡ್ಡ ಹುದ್ದೆಯಲ್ಲಿದ್ದಾರೆ. 

 

Mayuri Kango was a bollywood beauty and now in business field

1996ರಲ್ಲಿ ಬಿಡುಗಡೆಯಾದ ಬಾಲಿವುಡ್ ನ ರೋಮ್ಯಾಂಟಿಕ್ ಚಿತ್ರಗಳಲ್ಲಿ 'ಪಾಪಾ ಕೆಹತೇ ಹೈ’ ಅಳಿಸಲಾರದ ಗುರುತನ್ನು ಹಾಡಿನ ಮೂಲಕ ಮೂಡಿಸಿದೆ. ಈ ಚಿತ್ರದ 'ಘರ್ ಸೆ ನಿಕಲ್ ತೇ ಹಿ’ ಹಾಡು ಇಂದಿಗೂ ಸೂಪರ್ ಹಿಟ್ ಹಾಡುಗಳಲ್ಲಿ ಒಂದಾಗಿದೆ. ಇದರಲ್ಲಿರುವ ಉದಿತ್ ನಾರಾಯಣ್ ದನಿಯನ್ನು ಸಹ ಸಿನಿಪ್ರಿಯರು ಎಂದಿಗೂ ಮರೆಯುವುದಿಲ್ಲ. ಈ ಹಾಡು ಇಂದಿಗೂ ಅನೇಕ ರಿಮಿಕ್ಸ್ ಗಳಲ್ಲಿ ಪ್ರಕಟವಾಗುತ್ತಲೇ ಇರುತ್ತದೆ ಎನ್ನುವುದು ವಿಶೇಷ. ಈ ಚಿತ್ರದ ನಾಯಕ ನಟಿ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರೇ ಮಯೂರಿ ಕಾಂಗೋ. ಒಂದೆರಡು ಚಿತ್ರಗಳ ಬಳಿಕ ಈಕೆ ಅದೆಲ್ಲಿ ಹೋದರು ಯಾರಿಗೂ ತಿಳಿಯಲಿಲ್ಲ. ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದರೂ ಕ್ರಮೇಣ ಜನಮಾನಸದಿಂದ ದೂರವಾಗಿಬಿಟ್ಟರು ಮಯೂರಿ ಕಾಂಗೋ. ಈಕೆಯ ಜೀವನ ಒಂದು ರೀತಿಯಲ್ಲಿ ಭಾರೀ ತಿರುವುಗಳಿಂದ ಕೂಡಿರುವಂಥದ್ದು ಎನ್ನಬಹುದು. ಏಕೆಂದರೆ, ಈಕೆ ಅಪ್ಪಟ ಪ್ರತಿಭಾವಂತೆ. ಓದಿನಲ್ಲಿ ಸದಾಕಾಲ ಮುಂದಿದ್ದವರು. ಬಾಲಿವುಡ್ ಸೆಳೆತಕ್ಕೆ ಒಳಗಾಗಿ, ಇಲ್ಲಿಯೇ ಕರಿಯರ್ ಕಂಡುಕೊಳ್ಳುವ ಸಲುವಾಗಿ ನಾಯಕಿಯಾಗಿದ್ದರು. ಕರಿಯರ್ ನಲ್ಲಿ ನೆಲೆ ನಿಲ್ಲುತ್ತಿರುವಾಗ ಬಾಲಿವುಡ್ ನಿಂದಲೂ ದೂರವಾಗಿ, ಈಗ ಪ್ರಸ್ತುತ, ಗೂಗಲ್ ಸಂಸ್ಥೆಯಲ್ಲಿ “ಇಂಡಿಯಾ ಇಂಡಸ್ಟ್ರಿ ಹೆಡ್’ ಆಗಿ ಅಂದರೆ ಗೂಗಲ್ ಇಂಡಿಯಾ ತಂಡದ ಸಾರಥಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ ಖಂಡಿತ  ಅಚ್ಚರಿಯಾಗುತ್ತದೆ.

ಬಾಲಿವುಡ್ ಗಾಗಿ ಐಐಟಿಯಿಂದ ದೂರ
'ಪಾಪಾ ಕೆಹತೇ ಹೈ’ ಚಿತ್ರದಲ್ಲಿ ಸ್ನಿಗ್ಧ ಸುಂದರಿಯಾಗಿ ಕಾಣಿಸಿಕೊಂಡಿರುವ ಮಯೂರಿ ಕಾಂಗೋ (Mayuri Kango) ಅಂದಿನ ಕಾಲದಲ್ಲೇ ಅಂದರೆ, 90ರ ದಶಕದಲ್ಲೇ ಐಐಟಿ ಪ್ರವೇಶ ಪರೀಕ್ಷೆಯನ್ನು (IIT Entrance Exam) ಯಶಸ್ವಿಯಾಗಿ ಪೂರೈಸಿದ್ದರು. ಅಂತಹ ಪ್ರತಿಭಾನ್ವಿತೆ. ಐಐಟಿ ಕಾನ್ಪುರಕ್ಕೆ ಪ್ರವೇಶದ ಅವಕಾಶ ಪಡೆದುಕೊಂಡಿದ್ದರು. ಆದರೆ, ಅಲ್ಲಿ ಅಡ್ಮಿಷನ್ ಮಾಡಿಸಲಿಲ್ಲ. ಬಾಲಿವುಡ್ (Bollywood) ನಲ್ಲಿ ವೃತ್ತಿ (Career) ಕಂಡುಕೊಳ್ಳಲು ಮುಂಬೈಗೆ ಶಿಫ್ಟ್ ಆದರು.

ಒಂದೇ ಒಂದು ಸಿನಿಮಾ ಮಾಡಿದ ಬಾಲಿವುಡ್‌ನ ನಟಿ, IMDb ಲಿಸ್ಟ್‌ನಲ್ಲಿ ನಂ.1

ಓದು (Education) ಮತ್ತು ಬಾಲಿವುಡ್ ಎರಡಲ್ಲೂ ಮುಂದೆ ಸಾಗುವುದು ಅವರ ಗುರಿಯಾಗಿತ್ತು. ಹೀಗಾಗಿ, ಕಾನ್ಪುರ ಐಐಟಿ ಸೇರಿಕೊಳ್ಳದೇ ಕಾಲೇಜು ಸೇರಿಕೊಂಡು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡರು. ಇವರ ಪಾಲಕರಿಗೆ ಇಂಜಿನಿಯರಿಂಗ್ ಶಿಕ್ಷಣ ಮತ್ತು ಬಾಲಿವುಡ್ ಎರಡನ್ನೂ ನಿಭಾಯಿಸುವುದು ಕಷ್ಟವಾಗುತ್ತದೆ ಎನ್ನುವ ಭಾವನೆಯಿತ್ತು. ಮೊದಲ ಚಿತ್ರವೇ ಸಾಕಷ್ಟು ಹಿಟ್ ಆಗಿದ್ದರಿಂದ ಕಾಲೇಜು ಶಿಕ್ಷಣವನ್ನು ಸಹ ಸಹಜವಾಗಿ ಪಡೆದುಕೊಳ್ಳಲು ಕಷ್ಟವಾಯಿತು. ಹೀಗಾಗಿ, ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಕಾಲೇಜಿಗೆ ಹೋಗದೇ ಮನೆಯಿಂದಲೇ ಪೂರೈಸಿದರು. ಜತೆಗೇ ಬಾಲಿವುಡ್ ನಲ್ಲೂ ಹಲವು ಚಿತ್ರಗಳಲ್ಲಿ (Films) ಕಾಣಿಸಿಕೊಂಡರು.

ಬಾಲಿವುಡ್ ಗೆ ಬೈ ಬೈ
ಮೊದಲ ಚಿತ್ರದಲ್ಲೇ ಭರವಸೆಯ ನಾಯಕಿಯಾಗಿ (Actress) ಗುರುತಿಸಿಕೊಂಡಿದ್ದ ಮಯೂರಿ ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಇವರ ಕೊನೆಯ ಚಿತ್ರ “ವಂಶಿ’ 2000ರಲ್ಲಿ ತೆರೆಗೆ ಬಂದಿತ್ತು. ಅನೇಕ ಟಿವಿ ಶೋಗಳಲ್ಲಿ ಭಾಗವಹಿಸಿದ್ದರು. ಹೀಗೆಯೇ ಮುಂದುವರಿದರೆ ಯಶಸ್ವಿಯಾಗಿ (Successful) ವೃತ್ತಿ ನಿಭಾಯಿಸುವ ಎಲ್ಲ ಸಾಧ್ಯತೆಯೂ ಇತ್ತು. ಆದರೆ, 2003ರಲ್ಲಿ ವಿವಾಹವಾಗಿ, ಪತಿಯೊಂದಿಗೆ ಅಮೆರಿಕಕ್ಕೆ (America) ತೆರಳಿದರು. ಬಾಲಿವುಡ್ ನಿಂದ ಇದ್ದಕ್ಕಿದ್ದಂತೆ ದೂರವಾಗಿಬಿಟ್ಟರು.

ಕೈಯಿಂದ ಶೂಸ್‌ ತೆಗೆದು ದೀಪ ಹಚ್ಚಿದ ವರುಣ್‌, ಫಾಲೋ ಮಾಡಿದ ಕರಣ್‌, ಉಫ್‌ ಜಾಹ್ನವಿ ಮಾಡಿದ್ದೇನು

ಅಮೆರಿಕದ ಬರೂಚ್ ಕಾಲೇಜ್ ಝಿಕ್ಲಿನ್ ಸ್ಕೂಲ್ ಆಫ್ ಬ್ಯುಸಿನೆಸ್ ಗೆ ಸೇರಿಕೊಂಡು ಎಂಬಿಎ (MBA) ಪದವಿ ಪಡೆದರು. ಬಳಿಕ ತಕ್ಷಣ 2004ರಿಂದ ಬ್ಯುಸಿನೆಸ್ ವಲಯದಲ್ಲಿ ವೃತ್ತಿಯನ್ನೂ ಆರಂಭಿಸಿಬಿಟ್ಟರು. ಸದ್ಯಕ್ಕೆ ಗೂಗಲ್ ನಲ್ಲಿ ಇಂಡಿಯಾ ಇಂಡಸ್ಟ್ರಿ ಹೆಡ್ (India Industry Head) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯುಸಿನೆಸ್ (Business) ವಲಯದಲ್ಲಿ ಮಯೂರಿ ತಮ್ಮದೇ ಛಾಪು ಮೂಡಿಸಿದ್ದಾರೆ. 

Latest Videos
Follow Us:
Download App:
  • android
  • ios