Asianet Suvarna News Asianet Suvarna News

International Womens Day: ಸ್ತ್ರೀ ಎಂದರೆ ಅಷ್ಟೇ ಸಾಕೆ

ಸ್ತ್ರೀ ಎಂಬುದು ಸೃಷ್ಟಿ. ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಹೀಗೆ ಹಲವು ಪಾತ್ರವನ್ನು ನಿರ್ವಹಿಸುವ ಮಹಾಶಕ್ತಿ. ಮಹಿಳೆ (Women) ಇಲ್ಲದ ಜಗತ್ತನ್ನೇ ಊಹಿಸಲು ಸಾಧ್ಯವಿಲ್ಲ. ಇಂದು ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ  (International Womens Day).

March 8 International Womens Day
Author
Bengaluru, First Published Mar 8, 2022, 11:07 AM IST

ಹೆಣ್ಣು (Women) ಎಂದರೆ ಸಮಾಜದ ಕಣ್ಣು. ಹೆಣ್ಣು ಎಂದರೆ ಮಮತಾಮಯಿ, ತ್ಯಾಗಮಯಿ, ಸಹನಾಮೂರ್ತಿ, ದಯಾಮಯಿ ಎಲ್ಲವೂ ಹೌದು. ಆಕೆ ಎಲ್ಲರನ್ನೂ ಪ್ರೀತಿಯಿಂದ ಪೊರೆಯುತ್ತಾಳೆ. ನನಗೆ ಬೇಕೆಂಬ ಸ್ವಾರ್ಥವಿಲ್ಲದೆ ಎಲ್ಲವನ್ನೂ ಮತ್ತೊಬ್ಬರಿಗಾಗಿ ನೀಡುತ್ತಾಳೆ. ಕಷ್ಟಪಟ್ಟು ಸಾಕಿದ ಮಕ್ಕಳೇ ಮನೆಯಿಂದ ಹೊರ ಹಾಕಿದರೂ ನಗು ನಗುತಲ್ಲೇ ಕ್ಷಮಿಸುತ್ತಾಳೆ. ಆಕೆ ತನ್ನವರಿಗಾಗಿ, ತನ್ನವರಲ್ಲದವರಿಗಾಗಿ ಎಲ್ಲವನ್ನೂ ಮಾಡುತ್ತಾಳೆ. ಅದಕ್ಕೇ ಆಕೆಯನ್ನು ಸ್ತ್ರೀ ಎನ್ನುತ್ತಾರೆ. ನಿನಗೆ ಬೇರೆ ಹೆಸರು ಬೇಕೆ, ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂದು ಹೇಳುತ್ತಾರೆ. 

womens day

ಸೃಷ್ಟಿಯೇ ಹೆಣ್ಣು. ಅದಲ್ಲದೆ ಹೆಣ್ಣಿಗೆ ಹಲವು ರೂಪಗಳು. ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಆಕೆ ಎಲ್ಲವೂ ಹೌದು. ಎಲ್ಲರ ಜೀವನದಲ್ಲೂ ಹೆಣ್ಣಿಗೆ ಮಹತ್ತರ ಪಾತ್ರವಿದೆ. ಅದಕ್ಕಾಗಿ ಆಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರತೀ ವರ್ಷ ಮಾರ್ಚ್ 8ರಂದು  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day)ಯನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಬಡ, ದುರ್ಬಲ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿ ಸುಂದರ ಬದುಕನ್ನು ರೂಪಿಸಲು ನೆರವು ನೀಡಲಾಗುತ್ತದೆ.

International Women's Day 2022: ಮಹಿಳಾ ದಿನಾಚರಣೆಯನ್ನು ಈ ರೀತಿ ವಿಶೇಷವಾಗಿ ಆಚರಿಸಿ

ಸರಿ ಸುಮಾರು 45 ವರ್ಷಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. 2022 ಮಹಿಳಾ ದಿನಾಚರಣೆಯ ಥೀಮ್ ‘’ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಎಂಬ ಧ್ಯೇಯವಾಕ್ಯವಾಗಿದೆ. 

womens day

ಮಹಿಳಾ ದಿನಾಚರಣೆಯ ಇತಿಹಾಸ
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಪ್ರಕಾರ, ಅಂತರಾಷ್ಟ್ರೀಯ ಮಹಿಳಾ ದಿನವು ಮೊದಲು ಉತ್ತರ ಅಮೆರಿಕಾ ಮತ್ತು ಯುರೋಪ್‌ನಾದ್ಯಂತ ಇಪ್ಪತ್ತನೇ ಶತಮಾನದ ತಿರುವಿನಲ್ಲಿ ಕಾರ್ಮಿಕ ಚಳುವಳಿಗಳ ಚಟುವಟಿಕೆಗಳಿಂದ ಹೊರಹೊಮ್ಮಿತು. ಯುನೆಸ್ಕೋದ ಪ್ರಕಾರ, ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಫೆಬ್ರವರಿ 28 1909ರಂದು ಆಚರಿಸಲಾಯಿತು, ಇದನ್ನು ಸಮಾಜವಾದಿ ಪಕ್ಷ ಆಫ್ ಅಮೇರಿಕಾ ನ್ಯೂಯಾರ್ಕ್‌ನಲ್ಲಿ 1908 ರಲ್ಲಿ ಗಾರ್ಮೆಂಟ್ ಕಾರ್ಮಿಕರ ಮುಷ್ಕರದ ಗೌರವಾರ್ಥವಾಗಿ ಸಮರ್ಪಿಸಿತು.

Women's Day: ಆತ್ಮರಕ್ಷಣೆಗಾಗಿ ಮಹಿಳೆಯರು ಮಾಡ್ಲೇಬೇಕು ಈ ಕೆಲಸ

ಅಲ್ಲಿ ಮಹಿಳೆಯರು ಕಠಿಣ ಕೆಲಸದ ಪರಿಸ್ಥಿತಿಗಳ ವಿರುದ್ಧ ಪ್ರತಿಭಟಿಸಿದರು. 1917ರಲ್ಲಿ, ರಷ್ಯಾದಲ್ಲಿ ಮಹಿಳೆಯರು ಫೆಬ್ರವರಿಯ ಕೊನೆಯ ಭಾನುವಾರದಂದು "ಬ್ರೆಡ್ ಮತ್ತು ಪೀಸ್" ಘೋಷಣೆಯಡಿಯಲ್ಲಿ ಪ್ರತಿಭಟನೆ ಮತ್ತು ಮುಷ್ಕರವನ್ನು ಆಯ್ಕೆ ಮಾಡಿದರು. ಅವರ ಚಳುವಳಿ ಅಂತಿಮವಾಗಿ ರಷ್ಯಾದಲ್ಲಿ ಮಹಿಳೆಯರ ಮತದಾನದ ಹಕ್ಕು ಜಾರಿಗೆ ಕಾರಣವಾಯಿತು.

womens day

ಇದರ ಹಿನ್ನಲೆಯಲ್ಲಿ ಮಹಿಳೆಯರು ಕೆಲವು ದಿನಗಳ ನಂತರ ಮಾರ್ಚ್ 8ರಂದು ಶಾಂತಿ ಕಾರ್ಯಕರ್ತರನ್ನು ಬೆಂಬಲಿಸಲು ಮೆರವಣಿಗೆಗಳನ್ನು ನಡೆಸಿದರು. ಇದೇ ಕಾರಣಕ್ಕಾಗಿ ಮಾರ್ಚ್ 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಲಾಯಿತು. 1975ರಲ್ಲಿ ವಿಶ್ವಸಂಸ್ಥೆಯು ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಅಧಿಕೃತವಾಗಿ ಘೋಷಣೆ ಮಾಡಿತು. ಇದರಿಂದ ಯುರೋಪ್ನಲ್ಲಿ ಮಹಿಳಾ ದಿನಾಚರಣೆ ಒಂದು ಮಹತ್ವದ ದಿನವಾಗಿದೆ.

womens day

ಇವತ್ತಿನ ದಿನಗಳಲ್ಲಿ ಮಹಿಳೆ ಸಾಕಷ್ಟು ಸಬಲಳಾಗಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಿ ದಾಪುಗಾಲಿಡುತ್ತಿದ್ದಾ. ಆದರೆ ಆಕೆ ಮೇಲೆ ನಡೆಯುತ್ತಿರುವ ಹಿಂಸೆ, ದೌರ್ಜನ್ಯ, ಶೋಷಣೆ, ಅತ್ಯಾಚಾರ ಯಾವುದು ಸಹ ಕಡಿಮೆಯಾಗಿಲ್ಲ. ಹೆಣ್ಣು  (Woman)ಎಂದರೆ ಮಮತಾಮಯಿ ಹೌದು. ಹಾಗೆಂದು ಅವಳಿಗೆ ಇತರ ಭಾವನೆಗಳು ಇಲ್ಲವೆಂದಲ್ಲ. ಆಕೆ ಪ್ರತಿ ದಿನ ಅದೆಷ್ಟೋ ಸಮಸ್ಯೆಗಳಿಂದ ನರಳುತ್ತಳೇ ಇದ್ದಾಳೆ.  ಒಂದು ದಿನವೆಂದಲ್ಲ ಜೀವನಪೂರ್ತಿ ಹಲವು ಸವಾಲುಗಳನ್ನು ಎದುರಿಸುತ್ತಾಳೆ.

March 8 International Womens Day

ಹೀಗಾಗಿ ಆಕೆ ಸಿಟ್ಟಿನಿಂದ ಕಿರುಚಾಡುವಾಗ, ಅಸಹನೆಯಿಂದ ಕೂಗಾಡುವಾಗ ಅವಳ್ಯಾಕೆ ಹೀಗೆ ಎಂದು ಪ್ರಶ್ನಿಸುವ ಬದಲು ಆಕೆಯ ಸಮಸ್ಯೆಯನ್ನು ಆಲಿಸಬೇಕು. ಆಕೆಯ ಕಷ್ಟಕ್ಕೆ ಹೆಗಲಾಗಬೇಕು. ಆಕೆಯ ಕಣ್ಣೀರು ಒರೆಸಿ ನಾನಿದ್ದೇನೆ ಎಂಬ ಭರವಸೆ ನೀಡಬೇಕು. ಆಗಷ್ಟೇ ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಲು ಸಾಧ್ಯ.

Follow Us:
Download App:
  • android
  • ios