ಹೊಸ ಮನೆ ಖರೀದಿಸಿದ ಮಾಜಿ ಮಿಸ್ ಇಂಡಿಯಾ ರನ್ನರ್ ಅಪ್‌, ಆಟೋ ಚಾಲಕ ಅಪ್ಪನ ಕಣ್ಣೀರು !

ಮನೆ ಮನೆಯಲ್ಲಿ ಮುಸುರೆ ತಿಕ್ಕಿ, ರಾತ್ರಿಯೂ ಕೆಲಸ ಮಾಡಿ, ಹಗಲು ಓದುತ್ತಿದ್ದ ಹುಡುಗಿ ಮಿಸ್ ಇಂಡಿಯಾ ರನ್ನರ್ ಅಪ್..ಹೀಗೆ ಮಿಸ್‌ ಇಂಡಿಯಾ ಸ್ಟೇಜ್‌ನಲ್ಲಿ ಮಿಂಚಿದ ರಿಕ್ಷಾ ಚಾಲಕನ ಮಗಳು ಈಗ ಕಷ್ಟಪಟ್ಟು ತನ್ನನ್ನು ಸಾಕಿ ಸಲಹಿದ ಅಪ್ಪ-ಅಮ್ಮನಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಟ್ಟಿದ್ದಾಳೆ. ಆ ಬಗ್ಗೆ ಮಾಹಿತಿ ಇಲ್ಲಿದೆ. 

Manya Singh, It Was My Dream To Buy A House For My Parents Vin

ಕನಸುಗಳನ್ನು ನನಸು ಮಾಡಿಕೊಳ್ಳೋಕೆ ಇರೋ ಒಂದೇ ದಾರಿ ಎಂದರೆ ಕಠಿಣ ಶ್ರಮ. ಅದೆಷ್ಟೇ ಕಡುಬಡತನದಿಂದ ಬಂದರೂ ಸತತ ಪರಿಶ್ರಮ ಒಳ್ಳೆಯ ದಿನಗಳನ್ನು ತರುತ್ತದೆ ಎಂಬುದಕ್ಕೆ ಮಿಸ್‌ ಇಂಡಿಯಾ 2020ರ ರನ್ನರ್‌ ಅಪ್ ಮಾನ್ಯ ಸಿಂಗ್ ಉತ್ತಮ ಉದಾಹರಣೆ. ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗ ನಾವು ನಡೆದು ಬಂದ ಹಾದಿಯನ್ನು ಯಾವತ್ತೂ ಮರೆಯಬಾರದು ಎನ್ನುವ ಮಾತನ್ನು ಅವರು ಸಾಬೀತುಪಡಿಸಿದ್ದಾರೆ. ಮಿಸ್ ಇಂಡಿಯಾ ಪಟ್ಟ ಗೆದ್ದರೂ ಹುಟ್ಟೂರು, ಹೆತ್ತವರು, ತಾನು ನಡೆದು ಬಂದ ದಾರಿಯನ್ನು ಅವರು ಮರೆತಿಲ್ಲ. ಕಷ್ಟಪಟ್ಟು ಸಾಕಿ ಸಲಹಿದ ಅಪ್ಪ-ಅಮ್ಮನಿಗಾಗಿ ಸ್ವಂತ ಮನೆಯೊಂದನ್ನು ಕಟ್ಟಿಸಿ ಕೊಟ್ಟಿದ್ದಾರೆ.

ಪೋಷಕರಿಗೆ ಸ್ವಂತ ಮನೆ ಕಟ್ಟಿಸಿಕೊಟ್ಟ ಮಾಜಿ ಮಿಸ್ ಇಂಡಿಯಾ ರನ್ನರ್ ಅಪ್
ಮಿಸ್‌ ಇಂಡಿಯಾ 2020ರ ರನ್ನರ್‌ ಅಪ್ ಮಾನ್ಯ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಹೊಸ ಮನೆ (New home)ಯನ್ನು ಕಟ್ಟಿದ ಖುಷಿಯನ್ನು ಹಂಚಿಕೊಂಡಿದ್ದಾರೆ. 'ನಾನು ನನ್ನ ಪೋಷಕರಿಗೆ ಮನೆ ಖರೀದಿಸಿ ಕೊಟ್ಟಿರುವುದು ನನ್ನ ಜೀವನದ ಅತ್ಯಂತ ಖುಷಿಯ ಕ್ಷಣ. ನಾನು ಚಿಕ್ಕಂದಿನಲ್ಲಿ ದೊಡ್ಡವಳಾದಾಗ ಏನು ಮಾಡಬೇಕೆಂದು ಕೇಳಿದಾಗಲೆಲ್ಲಾ, ನಾನು ಸಾಕಷ್ಟು ಸಂಪಾದಿಸಲು ಬಯಸುತ್ತೇನೆ ಮತ್ತು ಅಪ್ಪ ಮತ್ತು ಅಮ್ಮನಿಗಾಗಿ ಮನೆ ಖರೀದಿಸಲು ಬಯಸುತ್ತೇನೆ ಎಂದು ಹೇಳಿದ್ದೆ.  ಆದರೆ ಉತ್ತರ ಪ್ರದೇಶದ ಒಂದು ಪುಟ್ಟ ಹಳ್ಳಿಯ ಜೀವನ ನನ್ನ ದೊಡ್ಡ ಕನಸುಗಳಂತಿರಲಿಲ್ಲ. ನಾವು ಚಿಕ್ಕ ಬಾಡಿಗೆ ಮನೆ (Rented home)ಯಲ್ಲಿ ವಾಸಿಸುತ್ತಿದ್ದೆವು. ಅಪ್ಪ ಆಟೋ ಡ್ರೈವರ್ ಆಗಿದ್ದರು. ತಾಯಿ ಸ್ಥಳೀಯ ಬ್ಯಾಂಕ್‌ನಲ್ಲಿ ಕಲೆಕ್ಷನ್ ಏಜೆಂಟ್ ಆಗಿದ್ದರು. ಆದರೆ ನಾನು ಉತ್ತಮ ಜೀವನವನ್ನು ಹೊಂದಲು, ಅವರು ನನ್ನ 10ನೇ ತರಗತಿಯ ನಂತರ ನನ್ನನ್ನು ಮುಂಬೈಗೆ ಕಳುಹಿಸಿದರು. ಕಷ್ಟದ ಸಮಯಗಳನ್ನು ನೋಡಿದ್ದ ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಿದ್ಧವಾಗಿದ್ದೆ' ಎಂದು ಮಾನ್ಯಾ ಹೇಳಿದ್ದಾರೆ.

'ಮಿಸ್ ಇಂಡಿಯಾ ವರ್ಲ್ಡ್' ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿಯ ಸುಂದರ ಫೋಟೋಗಳು

'2016 ರಲ್ಲಿ ಪ್ರಿಯದರ್ಶನಿ ಚಟರ್ಜಿಯವರು ಮಿಸ್ ಇಂಡಿಯಾ ವರ್ಲ್ಡ್ ಕಿರೀಟವನ್ನು ಅಲಂಕರಿಸಿದ ಲೇಖನವನ್ನು ನೋಡಿದಾಗ ನನ್ನ ಹೊಸ ಕನಸು ಆರಂಭವಾಯಿತು. ನಾನು ಕೆಲಸ ಮಾಡಿದೆ, ಅಧ್ಯಯನ ಮಾಡಿದೆ ಮತ್ತು ಆಡಿಷನ್ ಮಾಡಿದೆ. ಆದರೆ 3 ವರ್ಷಗಳ ನಿರಾಕರಣೆಗಳ ನಂತರ, ನಾನು ಅಂತಿಮವಾಗಿ ಸ್ಪರ್ಧೆಗೆ ಸ್ವೀಕೃತಗೊಂಡೆ.  3 ತಿಂಗಳ ನಂತರ, ನಾನು 2020 ರಲ್ಲಿ ರನ್ನರ್-ಅಪ್ ಆಗಿ ಕಿರೀಟವನ್ನು ಪಡೆದೆ. ಅದು ನನ್ನ ಜೀವನದ ಅತ್ಯಂತ ಸಂತೋಷದ ದಿನ. ಆದರೆ ನನಗಿಂತ ಖುಷಿಪಟ್ಟ ಇನ್ನಿಬ್ಬರಿದ್ರು. ಅದು ನನ್ನ ಅಪ್ಪ ಮತ್ತು ಅಮ್ಮ. ಸಂತೋಷದಲ್ಲಿ ತೇಲಾಡುತ್ತಿದ್ದ ಅಪ್ಪನಲ್ಲಿ, ಅಪ್ಪ ನಾವು ಮನೆ ಖರೀದಿಸುವ ಎಂದು ನಾನು ಹೇಳಿದೆ. ಅಪ್ಪನ ಮುಖದಲ್ಲಿ ನಗುವಿತ್ತು. ಅಲ್ಲಿಂದ 6 ತಿಂಗಳ ನಂತರ, ನಾವು ಹೊಸ ಮನೆಯೊಳಗಿದ್ದೇವೆ. ಅಪ್ಪ-ಅಮ್ಮ ಸಂತೋಷದಿಂದ ಕಣ್ಣೀರು ಹಾಕಿದರು' ಎಂದು ಮಾನ್ಯಾ ಸಿಂಗ್ ತಿಳಿಸಿದರು. 

'ನಾವು ಹೊಸ ಮನೆಗೆ ತೆರಳಿ ಒಂದು ತಿಂಗಳಾಗಿದೆ. ಅಪ್ಪ ಮತ್ತು ಅಮ್ಮ ಯಾವುದರ ಬಗ್ಗೆಯೂ ಚಿಂತಿಸದೆ ಆರಾಮವಾಗಿ ಬದುಕುವುದನ್ನು ನೋಡುವುದಕ್ಕಿಂತ ಉತ್ತಮವಾದ ಭಾವನೆ ಇನ್ನೊಂದಿಲ್ಲ.ಮತ್ತು ಪ್ರತಿ ಬಾರಿ ನಾನು ಅವರನ್ನು ಒಟ್ಟಿಗೆ ನೋಡಿದಾಗ, ನಗುತ್ತಾ, ನಗುತ್ತಾ, ನಾನು ಬಾಲ್ಯದಲ್ಲಿ ಭೇಟಿ ನೀಡಿದ್ದ ಬೆಚ್ಚಗಿನ ಮನೆಯ ಕನಸನ್ನು ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ಜೀವನವು ನಿಜವಾಗಿಯೂ ನನಗೆ ಪೂರ್ಣ ತೃಪ್ತಿಯನ್ನು ನೀಡಿದೆ ಎಂದು ಮಾನ್ಯಾ ಖುಷಿಯಿಂದ ಹೇಳುತ್ತಾರೆ.

Miss World 2021 ಭಾರತದ ಸ್ಪರ್ಧಿ Manasa Varanasi ಬಗ್ಗೆ ನಿಮೆಗೆಷ್ಟು ಗೊತ್ತು

ಬಾಲ್ಯದ ದಿನಗಳನ್ನು ಕಷ್ಟದಲ್ಲಿಯೇ ಕಳೆದಿದ್ದ ಮಾನ್ಯ ಸಿಂಗ್‌
ಉತ್ತರಪ್ರದೇಶ ಮೂಲದ ಮಾನ್ಯ ಸಿಂಗ್ ಬಾಲ್ಯದ ದಿನಗಳನ್ನು ಕಷ್ಟದಲ್ಲಿಯೇ ಕಳೆದಿದ್ದಳು. ಒಪ್ಪೊತ್ತಿನ ಊಟ, ನಿದ್ರೆ ಇಲ್ಲದ ದಿನಗಳಾಗಿತ್ತವು. ಫೆಮಿನಾ ಮಿಸ್ ಇಂಡಿಯಾದ ಇನ್‌ಸ್ಟಾಗ್ರಾಂ ಖಾತೆ ಡಿಸೆಂಬರ್ 2020ರಂದು ಮಿಸ್‌ ಇಂಡಿಯಾ ರನ್ನರ್ ಅಪ್ ಬಗ್ಗೆ ಆಕೆಯ ಮನೆಯಿಂದ 14ನೇ ವಯಸ್ಸಿನಲ್ಲಿ ಓಡಿ ಹೋದ ಬಗ್ಗೆ ಪೋಸ್ಟ್ ಮಾಡಿತ್ತು. ಮಾನ್ಯಾ ಸಿಂಗ್ 14ನೇ ವರ್ಷಕ್ಕೆ ಮನೆ ಬಿಟ್ಟು ಹೋಗಿ ತನ್ನಶಿಕ್ಷಣವನ್ನು ಮುಗಿಸಿದ್ದರು. ಮಿಸ್ ಇಂಡಿಯಾ ರನ್ನರ್ ಅಪ್‌ ಆಗುವ ಮುಂದೆ ಸಾಮಾಜಿಕ, ಆರ್ಥಿಕ ಸಂಕಷ್ಟ ಎದುರಿಸಿ ಅದೆಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದರು. ನಿದ್ದೆ ಊಟವಿಲ್ಲದೆ ನಾನು ಬಹಳಷ್ಟು ರಾತ್ರಿ ಕಳೆದಿದ್ದೇನೆ. ಬಹಳಷ್ಟು ದಿನ ಮಧ್ಯಾಹ್ನದ ಹೊತ್ತಲ್ಲಿ ಮೈಲುಗಟ್ಟಲೆ ನಡೆದಿದ್ದೀನೆ ಎಂದು ಮಾನ್ಯ ತಿಳಿಸಿದ್ದರು.

14ನೇ ವಯಸ್ಸಿಗೆ ಮನೆಯಿಂದ ಓಡಿ ಹೋದೆ-ಮಾನ್ಯಾ
ನನ್ನ ಕಣ್ಣೀರು, ರಕ್ತ, ಬೆವರು ನನ್ನ ಕನಸನ್ನು ನನಸು ಮಾಡಿತು. ರಿಕ್ಷಾ ಚಾಲಕನ ಮಗಳಾಗಿ ನನಗೆ ಶಾಲೆಗೆ ಹೋಗುವ ಬದಲು ಚಿಕ್ಕ ವಯಸ್ಸಿನಲ್ಲಿಯೇ ದುಡಿಯಬೇಕಾಯ್ತು ಎಂದಿದ್ದಾರೆ. ಪುಸ್ತಕಗಳಿಗಾಗಿ ನಾನು ಹಾತೊರೆಯುತ್ತಿದೆ, ಆದರೆ ನನ್ನ ಅದೃಷ್ಟ ಚೆನ್ನಾಗಿರಲಿಲ್ಲ. ನನ್ನಮ್ಮನಲ್ಲಿದ್ದ ಸ್ವಲ್ಪ ಆಭರಣ ಅಡವಿಟ್ಟು ನನ್ನ ಪರೀಕ್ಷೆ ಶುಲ್ಕ ಕಟ್ಟಿದರು. 14ನೇ ವಯಸ್ಸಿಗೆ ಮನೆಯಿಂದ ಓಡಿ ಹೋದೆ ಎಂದಿದ್ದಾರೆ. ಹಗಲಲ್ಲಿ ಕಲಿತು, ಸಂಜೆ ಮನೆ ಮನೆಯ ಪಾತ್ರೆ ತೊಳೆದು, ರಾತ್ರಿ ಕಾಲ್‌ಸೆಂಟರ್‌ನಲ್ಲಿ ದುಡಿಯುತ್ತಿದ್ದೆ.ನಾನು ನನ್ನ ಅಪ್ಪ ಅಮ್ಮ ಸೋದರರನ್ನು ಪ್ರತಿನಿಧಿಸಿ ನಮ್ಮ ಕನಸುಗಳಿಗೆ ನಾವು ಬದ್ಧರಾಗಿದ್ದರೆ ಏನನ್ನೂ ಸಾಧಿಸಬಹುದೆಂದು ಜಗತ್ತಿಗೆ ತೋರಿಸಲು ನಾನಿಲ್ಲಿ ನಿಂತಿದ್ದೇನೆ ಎಂದು ಮಾನ್ಯಾ ಸಿಂಗ್ ಹೇಳಿದ್ದರು.

Latest Videos
Follow Us:
Download App:
  • android
  • ios