ಮಕ್ಕಳಾಗದ ದಂಪತಿ ಮಕ್ಕಳನ್ನು ಪಡೆಯೋಕೆ ಚಿಕಿತ್ಸೆ ಪಡೆದುಕೊಳ್ತಾರೆ. ಅಲೋಪತಿ, ಆರ್ಯುವೇದ ವಿಧಾನಗಳನ್ನು ಟ್ರೈ ಮಾಡ್ತಾರೆ. ಹೆಸರಾಂತ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸ್ತಾರೆ. ಆದ್ರೆ ಇಲ್ಲೊಬ್ಬ ಮಾಂತ್ರಿಕ ಮಹಿಳೆ ಗರ್ಭಿಣಿಯಾಗೋಕೆ ಸಾರ್ವಜನಿಕವಾಗಿ ಸ್ನಾನ ಮಾಡ್ಬೇಕು ಅಂತ್ಹೇಳಿದ್ದಾನೆ. 

ಕಾಲ ಅದೆಷ್ಟು ಬದಲಾದರೂ ಸಮಾಜದಲ್ಲಿರುವ ಕೆಲವೊಂದು ಅನಿಷ್ಠ ಪದ್ಧತಿಗಳು ಬದಲಾಗುವುದೇ ಇಲ್ಲ. ಮೂಢನಂಬಿಕೆಯ ಹೆಸರಲ್ಲಿ ನಡೆಯುವ ಅನಾಚಾರಗಳು ತಪ್ಪುವುದಿಲ್ಲ. ಬೂಟಾಟಿಕೆಯ ಮಾಂತ್ರಿಕರು, ಜ್ಯೋತಿಷಿಗಳು ಜನರನ್ನು ಯಾಮಾರಿಸುತ್ತಲೇ ಇರುತ್ತಾರೆ. ಹಾಗೇ ಇಲ್ಲೊಬ್ಬ ಪತಿ, ಮಾಂತ್ರಿಕ ಸಲಹೆ ನೀಡಿದನೆಂದು ಪತ್ನಿಯನ್ನು ಸಾರ್ವಜನಿಕವಾಗಿ ಸ್ನಾನ ಮಾಡುವಂತೆ ಒತ್ತಾಯಿಸಿದ್ದಾನೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498 (ವಿವಾಹಿತ ಸ್ತ್ರೀಯನ್ನು ಆಪರಾಧಿಕ ಉದ್ದೇಶದಿಂದ ಪುಸಲಾಯಿಸುವುದು ಅಥವಾ ಕರೆದುಕೊಂಡುಹೋಗುವುದು) ಮತ್ತು ಮಾನವಬಲಿ, ಅಮಾನವೀಯ, ದುಷ್ಟ, ಅಘೋರಿ ಆಚರಣೆಗಳು ಸೇರಿದಂತೆ ಮಹಾರಾಷ್ಟ್ರದ 2013ರ ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ

ಪತ್ನಿಗೆ ಕಿರುಕುಳ ಕೊಟ್ಟ ಗಂಡನ ವಿರುದ್ಧ ಕೇಸ್
ದಂಪತಿಗೆ ಹಲವು ವರ್ಷಗಳಿಂದ ಮಕ್ಕಳಿರಲ್ಲಿಲ್ಲ. ಹಲವೆಡೆ ಚಿಕಿತ್ಸೆ (Treatment) ಪಡೆದರೂ ಮಕ್ಕಳಾಗಿರಲ್ಲಿಲ್ಲ. ಈ ಬಗ್ಗೆ ಕೇಳಲು ಮಾಂತ್ರಿಕರೊಬ್ಬರ ಬಳಿ ತೆರಳಿದಾಗ ಮಾಂತ್ರಿಕ, ಮಹಿಳೆ (Woman) ಗರ್ಭಧರಿಸಬೇಕಾದರೆ ಸಾರ್ವಜನಿಕವಾಗಿ ಸ್ನಾನ ಮಾಡಬೇಕೆಂದು ಸಲಹೆ ನೀಡಿದ್ದಾನೆ. ಇದರಿಂದ ಮಹಿಳೆಯ ಗಂಡ (Husband) ಮಗುವನ್ನು ಪಡೆಯಲು ಸಾರ್ವಜನಿಕವಾಗಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ಮತ್ತು ಆತನ ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಹಿಂದೆ ನಿಂತುಕೊಂಡ ಸ್ಥಿತಿಯಲ್ಲಿ ಮಗುವಿಗೆ ಜನ್ಮ ನೀಡುತ್ತಿದ್ದರಂತೆ ಮಹಿಳೆಯರು!

ಮಹಿಳೆಯ ದೂರಿನ ಮೇರೆಗೆ, ಪುಣೆ ಪೊಲೀಸರ, ಪತಿ, ಅತ್ತೆಯಂದಿರು ಮತ್ತು ಮೌಲಾನಾ ಬಾಬಾ ಜಮಾದಾರ್ ಎಂಬ ಮಾಂತ್ರಿಕ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 2013ರಿಂದ ವರದಕ್ಷಿಣೆಗಾಗಿ ಮತ್ತು ಗಂಡು ಮಗುವಿಗೆ ಜನ್ಮ ನೀಡದಿದ್ದಕ್ಕಾಗಿ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. 

ಮಹಿಳೆ ಗರ್ಭಿಣಿಯಾಗಲು ಮಾಂತ್ರಿಕನ ಸಲಹೆ
ಪುಣೆಯ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಜಗನ್ನಾಥ್ ಕಲಾಸ್ಕರ್ ಪ್ರಕಾರ, ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಹಾರಾಷ್ಟ್ರ ತಡೆಗಟ್ಟುವಿಕೆ ಮತ್ತು ಮಾನವ ತ್ಯಾಗದ ನಿರ್ಮೂಲನೆ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಪದ್ಧತಿಗಳು ಮತ್ತು ಕಪ್ಪು ಕಲಂ 3 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ನಡೆಸುವ ವೇಳೆ ದಂಪತಿಗೆ ಮಕ್ಕಳಿರಲಿಲ್ಲ.

ಎದೆಹಾಲು ಕುಡಿಯದೆ ಅಳ್ತಿತ್ತು ಮಗು, ಎಕ್ಸ್‌ರೇ ತೆಗೆದ್ರೆ ಶ್ವಾಸಕೋಶದಲ್ಲಿತ್ತು ಕಾಲುಂಗುರ !

ಹಾಗಾಗಿ ಮಾಂತ್ರಿಕನ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ನಂತರ ಎಲ್ಲರ ಮುಂದೆ ಸ್ನಾನ ಮಾಡುವಂತೆ ಹಿಂಸೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಮಹಿಳೆಯರ ದೂರಿನ ಮೇರೆಗೆ ಪುಣೆ ಪೊಲೀಸರು ಎಫ್‌ಐಆರ್ ಅಥವಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅದೇನೆ ಇರ್ಲಿ ಒಟ್ನಲ್ಲಿ ಮೂಢನಂಬಿಕೆಗಳನ್ನು ಜನ್ರು ಕಣ್ಮುಚ್ಚಿ ಪಾಲಿಸುವವರೆಗೂ ಜನ್ರನ್ನು ಯಾಮಾರಿಸೋ ಇಂಥಾ ಮಾಂತ್ರಿಕರೂ ಇರ್ತಾರೆ. ಜನ್ರು ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ.