ಯೋನಿಯಲ್ಲಿ ಹುಣ್ಣಾಗಿದ್ಯಾ? ಏನ್ಮಾಡಿದರೆ ಹೋಗುತ್ತೆ?

ಮಹಿಳೆಯರು ಸೋಂಕು, ಹಾರ್ಮೋನ್ ಏರುಪೇರು ಸೇರಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದ್ರಲ್ಲಿ ಈ ಯೋನಿ ಹುಣ್ಣು ಕೂಡ ಒಂದು. ಅನೇಕರಿಗೆ ಅದೇನು ಎಂಬುದೇ ತಿಳಿದಿಲ್ಲ. ಮತ್ತೆ ಕೆಲವರು ಇದನ್ನು ಮುಚ್ಚಿಟ್ಟು ಸಮಸ್ಯೆ ತಂದುಕೊಳ್ತಿದ್ದಾರೆ.
 

Know What Is Vaginal Boil And How To Prevent It roo

ಯೋನಿಯು ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ಯೋನಿಯಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡ್ರೂ ಮಹಿಳೆ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಯೋನಿ ಯೋನಿ ತುರಿಕೆ, ಯೋನಿ ಸೋಂಕಿನ ಹೊರತಾಗಿ ಯೋನಿಯಲ್ಲಿ ಹುಣ್ಣಿನ ಸಮಸ್ಯೆ ಉಂಟಾಗುತ್ತದೆ. ಇದ್ರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ಯೋನಿಯ ಕ್ಲೀನಿಂಗ್ ನಲ್ಲಿ ಸಣ್ಣ ನಿರ್ಲಕ್ಷ್ಯ ತೋರಿದ್ರೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಾವಿಂದು ಯೋನಿ ಹುಣ್ಣಿನ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ. 

ಯೋನಿ (Vagina) ಹುಣ್ಣು ಅಂದರೇನು? : ಯೋನಿ ಹುಣ್ಣನ್ನು Vaginal Boil ಎಂದು ಕರೆಯಲಾಗುತ್ತದೆ. ಇದನ್ನು ಚರ್ಮ (Skin) ದ ಬಾವು ಎಂದೂ ಕರೆಯುತ್ತಾರೆ. ಇದು ಮೊಡವಯಂತೆ ಇರುತ್ತದೆ. 

ಯಾಕೋ ಯಾರೂ ನನ್ನನ್ನು ಪ್ರೀತಿಸ್ತಿಲ್ಲ ಅನಿಸ್ತಾ ಇದ್ಯಾ? ಈ ಸೈನಿದ್ದರೆ ಅದು ಹೌದು!

ಯೋನಿಯಲ್ಲಿ ಹುಣ್ಣಾಗಲು ಕಾರಣವೇನು? : ಪ್ಯುಬಿಕ್ (Pubic) ಚೀಲದಲ್ಲಿ ಸೋಂಕು ಕಾಣಿಸಿಕೊಂಡಾಗ ಯೋನಿಯಲ್ಲಿ ಹುಣ್ಣಾಗುತ್ತದೆ.  ಸೋಂಕು ಚರ್ಮದ ಅಂಗಾಂಶವನ್ನು ಕೊಲ್ಲುತ್ತದೆ. ಸತ್ತ ಚರ್ಮದ ಅಂಗಾಂಶ ಮತ್ತು ಕೀವು ಆ ಪ್ರದೇಶವನ್ನು ತುಂಬುತ್ತದೆ.  ಜನನಾಂಗದ ಪ್ರದೇಶದಲ್ಲಿ  ಎಂಟ್ರೊಬ್ಯಾಕ್ಟೀರಿಯಾ ಮತ್ತು ಎಂಟರೊಕೊಕಿಯಂತಹ ವಿವಿಧ ಬ್ಯಾಕ್ಟೀರಿಯಾಗಳು ಇದಕ್ಕೆ ಕಾರಣವಾಗುತ್ತವೆ. ರೇಸರ್ ಬಳಸಿದ ನಂತ್ರ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಯೋನಿ ಸೋಂಕಿನ ಲಕ್ಷಣಗಳು : ಆರಂಭದಲ್ಲಿ ಇದು ಮೊಡವೆಯಂತೆ ಕಾಣಿಸುತ್ತದೆ. ಆದ್ರೆ ವಿಪರೀತ ನೋವಿನಿಂದ ಕೂಡಿರುತ್ತದೆ. ಮೊಡವೆಯಂತೆ ಇದ್ರಲ್ಲಿ ಕೀವು ತುಂಬುತ್ತದೆ. ಪ್ಯುಬಿಕ್ ಪ್ರದೇಶದಲ್ಲಿ ಚರ್ಮದ ಅಡಿಯಲ್ಲಿ ಇದು ಕಾಣಿಸಿಕೊಳ್ಳುತ್ತದೆ.  ಕೂದಲಿನ ಬೇರುಗಳು ಮತ್ತು ಎಣ್ಣೆ ಗ್ರಂಥಿಗಳನ್ನು  ಹೊಂದಿರುವ ಚೀಲದಲ್ಲಿ ನೀವಿದನ್ನು ನೋಡ್ಬಹುದು. ಆರಂಭದಲ್ಲಿ ಸಣ್ಣದಿದ್ರೂ ನಂತ್ರ ಇದು ದೊಡ್ಡದಾಗುತ್ತದೆ. ನಿತ್ಯದ ಕೆಲಸ ಮಾಡಲು ಇದ್ರಿಂದ ಹಿಂಸೆಯಾಗುತ್ತದೆ. ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಅವು ಸೋಂಕಾಗಿ  ಬದಲಾಗುತ್ತವೆ. ಕೆಂಪು ಚರ್ಮವನ್ನು ನೀವು ನೋಡ್ಬಹುದು. ಮುಟ್ಟಿದಾಗ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ. ಒಂದೇ ಜಾಗದಲ್ಲಿ ಒಂದಕ್ಕಿಂತ ಹೆಚ್ಚು ಹುಣ್ಣು ಕಾಣಿಸಿಕೊಂಡ್ರೆ ಅದನ್ನು ಕಾರ್ಬಂಕಲ್ ಎಂದು ಕರೆಯಲಾಗುತ್ತದೆ. ಅದ್ರ ನೋವಿಗೆ ಜ್ವರ ಕೂಡ ಬರಬಹುದು. ಸುಸ್ತು ಮಹಿಳೆಯರನ್ನು ಕಾಡುತ್ತದೆ. 

ಮಹಿಳೆಯರು ಹಸ್ತಮೈಥುನ ಮಾಡಿಕೊಂಡ್ರೆ ಮೊಡವೆ ಕಾಡುತ್ತಾ?

ಯೋನಿ ಹುಣ್ಣಿನಿಂದ ರಕ್ಷಣೆ ಹೇಗೆ? : ಯೋನಿಯಲ್ಲಿ ಇಂಥ ಹುಣ್ಣು ಕಾಣಿಸಿದಲ್ಲಿ ಅದನ್ನು ಹಿಸುಕುವ ಅಥವಾ ಅದ್ರಲ್ಲಿರುವ ಪಸ್ ತೆಗೆಯುವ ಪ್ರಯತ್ನಕ್ಕೆ ಹೋಗಬೇಡಿ. ನೀವು ಹಾಗೆ ಮಾಡಿದ್ರೆ ನೋವು ವಿಪರೀತವಾಗುವುದಲ್ಲದೆ ಸೋಂಕು ಇನ್ನೊಂದೆಡೆ ಹರಡುವ ಸಾಧ್ಯತೆ ಇರುತ್ತದೆ.  ನೀವು ಸ್ವಚ್ಛವಾದ ಬಟ್ಟೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಅಥವಾ ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಅದನ್ನು ಹಿಂಡಿದ ನಂತ್ರ ಆ ಬಟ್ಟೆಯನ್ನು ಹುಣ್ಣಿನ ಮೇಲೆ ಇಡಬೇಕು. ಬಟ್ಟೆ ಅತೀ ಬಿಸಿಯಾಗಲು ಬಿಡಬೇಡಿ. ಹಾಗೆಯೆ ನಿಧಾನವಾಗಿ ಹುಣ್ಣಿನ ಮೇಲೆ ಬಟ್ಟೆಯನ್ನು ಇಡಿ. ನೀವು ಗಟ್ಟಿಯಾಗಿ ಪ್ರೆಸ್ ಮಾಡಿದ್ರೆ ನೋವು ಹೆಚ್ಚಾಗಬಹುದು. ನೀವು ಬಿಸಿ ಬಟ್ಟೆ ಇಟ್ಟಾಗ ರಕ್ತದ ಹರಿವು ಸರಿಯಾಗಿ ಆಗಿ ಹುಣ್ಣು ಕಡಿಮೆಯಾಗುತ್ತದೆ. ನೀವು ಹುಣ್ಣನ್ನು ಗುಣಪಡಿಸಲು ಮುಲಾಮನ್ನು ಬಳಸಬಹುದು. ಆದ್ರೆ ಅದಕ್ಕೆ ಮೊದಲು ವೈದ್ಯರನ್ನು ಭೇಟಿಯಾಗಿ ನಂತ್ರ ಮುಲಾಮ್ ಬಳಸಿ. ಯೋನಿ ಸೂಕ್ಷ್ಮವಾಗಿರುವ ಕಾರಣ ಯಾವ್ ಯಾವ್ದೋ ಮುಲಾಮ್ ಬಳಸೋದು ಸೂಕ್ತವಲ್ಲ. 

ಬೇರೆಯವರಿಗೆ ಹೇಳಲಾಗದ, ಅನುಭವಿಸಲು ಸಾಧ್ಯವಾಗದ ನೋವು ಇದು. ಯೋನಿಯಲ್ಲಿ ಹುಣ್ಣು ಕಾಣಿಸಿಕೊಂಡಾಗ ಮಹಿಳೆಯರು ಪದೇ ಪದೇ ಆ ಭಾಗವನ್ನು ಸ್ಪರ್ಶಿಸುತ್ತಾರೆ. ಹಾಗೆ ಮಾಡಬಾರದು. ಸದಾ ಒಣಗಿದ ಒಳ ಉಡುಪನ್ನು ನೀವು ಬಳಸಬೇಕು. ಹಾಗೆ ಸಡಿಲವಾದ ಬಟ್ಟೆ ಧರಿಸಿ. ಬಿಗಿಯಾದ ಒಳು ಉಡುಪು ಮತ್ತಷ್ಟು ಕಿರಿಕಿರಿಯನ್ನುಂಟು ಮಾಡುತ್ತದೆ. ನಿಮ್ಮ ಒಳುಡುಪು ಸ್ವಚ್ಛವಾಗಿದ್ದಾಗ, ಕೈ ತೊಳೆದು ನೀವು ಪ್ಯುಬಿಕ್ ಪ್ರದೇಶವನ್ನು ಸ್ಪರ್ಶಿಸಿದಾಗ, ಬೇರೆಯವರ ಜೊತೆ ರೇಸರ್, ಸೋಫ್, ಟವೆಲ್ ಹಂಚಿಕೊಳ್ಳದೆ ಇದ್ದಾಗ ಈ ಸಮಸ್ಯೆ ಕಾಡೋದಿಲ್ಲ.   

Latest Videos
Follow Us:
Download App:
  • android
  • ios