Asianet Suvarna News Asianet Suvarna News

ನಿಯಮಿತ ಸೆಕ್ಸ್ ಮೆನೋಪಾಸನ್ನು ಮುಂದುಡುತ್ತಾ? ತಜ್ಞರು ಹೇಳುವುದಿಷ್ಟು!

ದಂಪತಿ ಮಧ್ಯೆ ಅನ್ಯೂನ್ಯತೆ ಹೆಚ್ಚಿಸುವ ಕೆಲಸವನ್ನು ಮಾತ್ರ ಸೆಕ್ಸ್ ಮಾಡೋದಿಲ್ಲ. ಶಾರೀರಿಕ ಸಂಬಂಧದಿಂದ ಅನೇಕ ಲಾಭಗಳಿವೆ. ವಯಸ್ಸಾಗ್ತಿದ್ದಂತೆ ಸೆಕ್ಸ್ ನಿಂದ ದೂರ ಇರುವ ಮಹಿಳೆಯರು ಅದ್ರ ಲಾಭದ ಬಗ್ಗೆ ತಿಳಿದಿರಬೇಕು. 
 

Know How A Healthy Sexual Life could Delay Menopause roo
Author
First Published Jan 23, 2024, 2:09 PM IST

ಆರೋಗ್ಯಕರ ಸಂಬಂಧಕ್ಕೆ ಸೆಕ್ಸ್ ಎಷ್ಟು ಮುಖ್ಯವೋ ನಿಮ್ಮ ಆರೋಗ್ಯಕ್ಕೂ ಲೈಂಗಿಕತೆ ಅಗತ್ಯ. ಸೆಕ್ಸ್, ಒಂಟಿತನದಿಂದ ಉಂಟಾಗುವ ಅನೇಕ ಸಮಸ್ಯೆಗಳಿಗೆ, ಅನಾರೋಗ್ಯಕ್ಕೆ ಪರಿಹಾರ ನೀಡುತ್ತದೆ. ಇಂಟರ್ಕೋರ್ಸ್ ನೀಡುವ ಲಾಭಗಳಲ್ಲಿ ಋತುಬಂಧ ಒಂದು. ಪ್ರತಿಯೊಬ್ಬ ಮಹಿಳೆ ಈ ಸ್ಥಿತಿಗೆ ತಲುಪುತ್ತಾಳೆ. ಆಕೆಗೆ ಪ್ರತಿ ತಿಂಗಳು ಆಗ್ತಿದ್ದ ಪಿರಿಯಡ್ಸ್ ಒಂದು ವಯಸ್ಸಿನಲ್ಲಿ ನಿಲ್ಲುತ್ತದೆ. ಈ ನಿಲ್ಲುವ ಸಮಯದಲ್ಲಿ ಮಹಿಳೆ ಸಾಕಷ್ಟು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಕೆಲವರಿಗೆ ಋತುಬಂಧ ಬೇಗ ಆದ್ರೆ ಮತ್ತೆ ಕೆಲವರಿಗೆ ತಡವಾಗಿ ಸಂಭವಿಸುತ್ತದೆ. ಋತುಬಂಧ ತಡವಾಗಿ ಆಗಲು ಸೆಕ್ಸ್ ಒಂದು ಕಾರಣ ಎನ್ನುತ್ತಾರೆ ತಜ್ಞರು. ನಿಯಮಿತ ಸೆಕ್ಸ್, ಮಹಿಳೆಯರ ಋತುಬಂಧವನ್ನು ವಿಳಂಬಗೊಳಿಸುತ್ತದೆ.

ಈ ಋತುಬಂಧವನ್ನು ಮೆನೋಪಾಸ್ (Menopause) ಎಂದು ಕರೆಯುತ್ತಾರೆ. ಮಹಿಳೆಯರು ಸುಮಾರು ಒಂದು ವರ್ಷಗಳ ಕಾಲ ಮೆನೋಪಾಸ್ ಕಿರಿಕಿರಿಗೆ ಒಳಗಾಗ್ತಾರೆ. ಈ ಅವಧಿಯಲ್ಲಿ ಅವರಲ್ಲಿ ಕೆಲ ಲಕ್ಷಣ ಕಾಣಿಸುತ್ತದೆ. ಮೂಡ್ ಸ್ವಿಂಗ್ (Mood Swings), ಮುಖದ ಮೇಲೆ ಮೊಡವೆ, ಕೋಪ, ಅನಿಯಮಿತ ಪಿರಿಯಡ್ಸ್ ಸೇರಿದೆ. ಅಮೆರಿಕಾದಲ್ಲಿ ಋತುಬಂಧದ ಸರಾಸರಿ ವಯಸ್ಸು 51 ಆಗಿದೆ. ಭಾರತ (India) ದ ಮಹಿಳೆಯರಲ್ಲಿ ಋತುಬಂಧದ ಸರಾಸರಿ ವಯಸ್ಸು 46 ರಿಂದ 51 ವರ್ಷಗಳು.  ಋತುಬಂಧ ವಿಳಂಬವಾಗಬೇಕು ಎಂದಲ್ಲಿ ನಲವತ್ತು ವರ್ಷದಿಂದ ಐವತ್ತು ವರ್ಷದ ಅವಧಿಯಲ್ಲಿ ಶಾರೀರಿಕ ಸಂಬಂಧ ಬೆಳೆಸುವುದು ಮುಖ್ಯವಾಗುತ್ತದೆ. ಅತಿ ಬೇಗ ಋತುಬಂಧಕ್ಕೆ ಒಳಗಾಗಲು ಸೆಕ್ಸ್ ಒಂದೇ ಕಾರಣವಲ್ಲ. ಆದ್ರೆ ಇದೂ ಒಂದು ಅಂಶವಾಗಿದ್ದು, ಇದರ ಬಗ್ಗೆಯೂ ಗಮನ ಹರಿಸಬೇಕು ಎನ್ನುತ್ತಾರೆ ತಜ್ಞರು. 

Health Tips: ಈ ರೋಗ ಶುರುವಾದ್ರೆ ಹುಡುಗಿಯರ ಮುಖದ ಮೇಲೆ ಬೆಳೆಯುತ್ತೆ ಕೂದಲು

ಸಂಶೋಧನೆಯ ಪ್ರಕಾರ, ಅವಿವಾಹಿತ ಮಹಿಳೆಯರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರು ಋತುಬಂಧದ ಹಂತವನ್ನು ತಡವಾಗಿ ತಲುಪುತ್ತಾರೆ. ಲೈಂಗಿಕ ಚಟುವಟಿಕೆಗಳು ಮತ್ತು ಲೈಂಗಿಕ ಒಳಗೊಳ್ಳುವಿಕೆ ಇದರಲ್ಲಿ ದೊಡ್ಡ ಪಾತ್ರವನ್ನು ಹೊಂದಿದೆ. ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯರಲ್ಲಿ ಗರ್ಭಿಣಿಯಾಗುವ ಸಾಧ್ಯತೆಗಳಿವೆ.ಆದರೆ ಲೈಂಗಿಕವಾಗಿ ಸಕ್ರಿಯವಾಗಿಲ್ಲದ ಮಹಿಳೆಯರಲ್ಲಿ  ಅಂಡೋತ್ಪತ್ತಿ ಯಾವುದೇ ಅಂಶವಿಲ್ಲದ ಕಾರಣ  ಆರಂಭಿಕ ಋತುಬಂಧ ಸಂಭವಿಸಬಹುದು.

ಆರೋಗ್ಯಕರ ಲೈಂಗಿಕ ಜೀವನ ನಡೆಸುತ್ತಿರುವವರಲ್ಲೂ ಅನೇಕ ಬಾರಿ ಆರಂಭಿಕ ಋತುಬಂಧವಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣ ಧೂಮಪಾನ ಹಾಗೂ ಹಾರ್ಮೋನ್ ಗಳಲ್ಲಿನ ಬದಲಾವಣೆ. ಧೂಮಪಾನ ಮಾಡ್ತಿದ್ದು, ಆರೋಗ್ಯಕರ ಸೆಕ್ಸ್ ಜೀವನ ನಡೆಸುತ್ತಿದ್ದರೆ ಆರಂಭಿಕ ಋತುಬಂಧಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ತಜ್ಞರ ಪ್ರಕಾರ, ಧೂಮಪಾನ ಇದ್ರಲ್ಲಿ ಬಹುದೊಡ್ಡ ಪಾತ್ರವಹಿಸುತ್ತದೆ. ಋತುಬಂಧ ವಿಳಂಬವಾಗಬೇಕು ಎನ್ನುವವರು ಧೂಮಪಾನವನ್ನು ತ್ಯಜಿಸಬೇಕು. ಅಲ್ಲದೆ ಜೀವನ ಶೈಲಿಯಲ್ಲಿ ಸುಧಾರಣೆ ಕೂಡ ಮುಖ್ಯವಾಗುತ್ತದೆ. 

ಫಸ್ಟ್​ ಲವರ್ ಜತೆಗಿನ ರೊಮ್ಯಾಂಟಿಕ್ ಟೈಮ್‌ ಮರೆಯೊಲ್ವಂತೆ ಈ ರಾಶಿಯವರು

ಮಹಿಳೆಯರ ಋತುಬಂಧದ ಜೊತೆ ಮಾನಸಿಕ ಸ್ಥಿತಿ ಕೂಡ ಸಂಬಂಧ ಹೊಂದಿದೆ. ಆಸ್ಟಿಯೊಪೊರೋಸಿಸ್, ಹೃದ್ರೋಗ, ಖಿನ್ನತೆ ಮತ್ತು ಬುದ್ಧಿಮಾಂದ್ಯತೆಯಂತಹ ಮಾನಸಿಕ ಆರೋಗ್ಯ ಹಾಗೂ  ಕೆಲವು ಆರೋಗ್ಯ ಪರಿಸ್ಥಿತಿಗಳು ಆರಂಭಿಕ ಋತುಬಂಧಕ್ಕೆ ಕಾರಣವಾಗಬಹುದು. ಋತುಬಂಧ ವಿಳಂಬವಾಗಬೇಕು ಎನ್ನುವವರು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಹಾಗೆಯೇ ತೂಕ ನಿಯಂತ್ರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಅನವಶ್ಯಕ ಒತ್ತಡ ನಿಮ್ಮ ಆರಂಭಿಕ ಋತುಬಂಧಕ್ಕೆ ಕಾರಣವಾಗಬಹುದು. ಹಾಗಾಗಿ ನೀವು ಮಾನಸಿಕ ಸ್ಥಿತಿಯನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಮುಖ್ಯ. ಧ್ಯಾನ, ಯೋಗ ಮಾಡುವ ಜೊತೆಗೆ ನೀವು ಸ್ನೇಹಿತರ ಜೊತೆ ಸುತ್ತಾಟ, ಸಂಗಾತಿ (Companion) ಜೊತೆ ಒಳ್ಳೆಯ ಸಂಬಂಧ ಕಾಯ್ದುಕೊಳ್ಳಬೇಕು. ನಿಮ್ಮ ದೇಹದಲ್ಲಿ ಒತ್ತಡ ಹೆಚ್ಚಾದ್ರೆ ಅದು ನಿಮ್ಮ ಇಡೀ ಆರೋಗ್ಯ ಸ್ಥಿತಿಯನ್ನು ಹಾಳು ಮಾಡುತ್ತದೆ. ಒತ್ತಡದಿಂದಾಗಿ ನಾನಾ ಖಾಯಿಲೆಗಳು ಕಾಡುತ್ತವೆ. ಒತ್ತಡ ಹಾರ್ಮೋನ್ ಏರುಪೇರು ಮಾಡುವುದರಿಂದ ನಿಮ್ಮ ಋತುಬಂಧದ ಬೇಗ ಆಗುವ ಸಾಧ್ಯತೆ ಇರುತ್ತದೆ. ಜೊತೆಗೆ ಋತುಬಂಧದ ಸಮಯದಲ್ಲಿ ಕೆಲ ಸಮಸ್ಯೆ ವಿಪರೀತವಾಗುತ್ತದೆ. 

Latest Videos
Follow Us:
Download App:
  • android
  • ios