ಅಡುಗೆ ಮನೆ ಕ್ಲೀನಾಗಿ ಇರ್ಬೇಕು ಅಂದ್ರೆ ಕಿಚನ್‌ನಲ್ಲಿರೋ ಎಲ್ಲಾ ಉಪಕರಣಗಳು ಸ್ವಚ್ಛವಾಗಿರಬೇಕು. ನಿಮ್ಮ ಚಾಪಿಂಗ್ ಬೋರ್ಡ್ ಅನ್ನು ತಾಜಾ ಮತ್ತು ರೋಗಾಣು ಮುಕ್ತವಾಗಿಡಲು ನೀವು ಬಯಸಿದರೆ, ಮರದ ಮತ್ತು ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್‌ಗಳನ್ನು ಸ್ವಚ್ಛಗೊಳಿಸುವ ಕೆಲವು ಸುಲಭ ವಿಧಾನಗಳನ್ನು ನಾವಿಲ್ಲಿ ಹೇಳ್ತೇವೆ.

ಕಿಚನ್‌ ಆಹಾರವನ್ನು ತಯಾರಿಸುವ ಜಾಗ. ಹೀಗಾಗಿ ಅಡುಗೆ ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳಬೇಕಾದುದು ಅತೀ ಮುಖ್ಯವಾಗಿದೆ. ಇಲ್ಲದಿದ್ದರೆ ರೋಗ-ರುಜಿನಗಳು ಹರಡುವ ಸಾಧ್ಯತೆಯೇ ಹೆಚ್ಚು. ಅಡುಗೆಮನೆಯಲ್ಲಿ ದಿನಕ್ಕೆ ಹಲವು ಬಾರಿ ಬಳಸುವ ಕೆಲವು ವಸ್ತುಗಳು ಇವೆ. ಉದಾಹರಣೆಗೆ ಚಾಕುಗಳು, ಪೀಲರ್ಸ್‌, ಕತ್ತರಿಸುವ ಹಲಗೆಗಳು ಮೊದಲಾದವು. ಇವುಗಳನ್ನು ನಾವು ಆಗಿಂದಾಗೆ ಬಳಸುತ್ತಲೇ ಇರುವ ಕಾರಣ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಸುಮ್ಮನೆ ನೀರಿನ ಕೆಳಗೆ ಹಿಡಿದು ಹಾಗೆಯೇ ತೆಗೆದಿಟ್ಟು ಬಿಡುತ್ತೇವೆ. ಆದರೆ ಇವುಗಳನ್ನು ಕ್ಲೀನಾಗಿ ತೊಳೆದು ಬಳಸಬೇಲು. ಇಲ್ಲದಿದ್ದರೆ ಈ ಉಪಕರಣಗಳ ಮಧ್ಯೆ ಉಳಿದುಕೊಂಡಿರೋ ಆಹಾರದ ತುಣುಕು, ಕೊಳೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಇದರಲ್ಲಿ ಮುಖ್ಯವಾದುದು ನಾವು ತರಕಾರಿ (Vegetables), ಹಣ್ಣುಗಳನ್ನು (Frruits) ಕತ್ತರಿಸಲು ಬಳಸೋ ಚಾಪಿಂಗ್ ಬೋರ್ಡ್‌. ಚಾಪಿಂಗ್‌ ಬೋರ್ಡ್‌ ಸ್ವಚ್ಛತೆಯ (Clean) ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಬಹಳ ಮುಖ್ಯ. ನಾವು ದೈನಂದಿನ ಬಳಕೆಯ ನಂತರ ಅವುಗಳನ್ನು ಸ್ವಚ್ಛಗೊಳಿಸಬೇಕು. ಚಾಪಿಂಗ್ ಬೋರ್ಡ್ ಮೇಲೆ ನಾವು ವಿವಿಧ ರೀತಿಯ ತರಕಾರಿಗಳನ್ನು ಕತ್ತರಿಸುತ್ತೇವೆ. ಹಲವಾರು ಬಾರಿ ಸ್ವಚ್ಛಗೊಳಿಸಿದ ನಂತರವೂ, ಸೂಕ್ಷ್ಮಜೀವಿಗಳು ಅದರ ಮೇಲೆ ಉಳಿಯುತ್ತವೆ. ಚಾಪಿಂಗ್ ಬೋರ್ಡ್‌ಗಳು ಹಲವು ವಿಧದಲ್ಲಿವೆ. ಮರ ಮತ್ತು ಪ್ಲಾಸ್ಟಿಕ್‌ನಿಂದ ತಯಾರಿಸಿದ ಚಾಪಿಂಗ್ ಬೋರ್ಡ್ ಲಭ್ಯವಿರುತ್ತದೆ. ಆದ್ದರಿಂದ ಅವುಗಳನ್ನು ವಿವಿಧ ರೀತಿಯಲ್ಲಿ ಸ್ವಚ್ಛಗೊಳಿಸಬಹುದು. ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

Kitchen Tips : ಫ್ರಿಜ್‌ನಿಂದ ಗಬ್ಬು ವಾಸನೆ ಬರ್ತಿದ್ದರೆ ಈ ಟ್ರಿಕ್ಸ್ ಬಳಸಿ

ಮರದ ಚಾಪಿಂಗ್ ಬೋರ್ಡ್‌ ಸ್ವಚ್ಛಗೊಳಿಸುವುದು ಹೇಗೆ ?

ಅಡುಗೆ ಸೋಡಾ ಮತ್ತು ನಿಂಬೆ
ಮರದ ಚಾಪಿಂಗ್ ಬೋರ್ಡ್‌ಗಳನ್ನು ಸ್ವಚ್ಛಗೊಳಿಸಲು ನೀವು ಅಡುಗೆ ಸೋಡಾ ಮತ್ತು ನಿಂಬೆ (Lemon) ಬಳಸಬಹುದು. ಇದು ನಿಮ್ಮ ಚಾಪಿಂಗ್ ಬೋರ್ಡ್ ಅನ್ನು ಸ್ವಚ್ಛವಾಗಿಸುತ್ತದೆ. ಕೊಳೆಯನ್ನು ಹೋಗಲಾಡಿಸಿ ಹೊಳೆಯುವಂತೆ ಮಾಡುತ್ತದೆ. ಅಲ್ಲದೆ, ಇದು ಸೂಕ್ಷ್ಮಜೀವಿಗಳನ್ನು ಸಹ ಕೊಲ್ಲುತ್ತದೆ. ಅಡಿಗೆ ಸೋಡಾ ಮತ್ತು ನಿಂಬೆ ಬಳಸಿ ಚಾಪಿಂಗ್ ಬೋರ್ಡ್ ಕ್ಲೀನ್ ಮಾಡುವ ವಿಧಾನವೆಂದರೆ, ಮೊದಲು ಚಾಪಿಂಗ್ ಬೋರ್ಡ್ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ.

ನಂತರ ಅದರ ಮೇಲೆ ಅರ್ಧ ನಿಂಬೆ ಹಿಸುಕಿ ಮತ್ತು ಅರ್ಧ ಹೋಳಾದ ನಿಂಬೆಯೊಂದಿಗೆ ಬೋರ್ಡ್‌ನ್ನು ಚೆನ್ನಾಗಿ ಉಜ್ಜಿಕೊಳ್ಳಿ. ಈಗ ಬೋರ್ಡ್ ಅನ್ನು ಕನಿಷ್ಠ 20 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಚಾಪಿಂಗ್ ಬೋರ್ಡ್ ಅನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಂತರ ಅದನ್ನು ಬಟ್ಟೆಯಿಂದ ಒರೆಸಿ ಮತ್ತು ಬೋರ್ಡ್ ಮೇಲೆ ಎಣ್ಣೆಯನ್ನು ಅನ್ವಯಿಸಿ. ಅಂತಿಮವಾಗಿ, ಚಾಪಿಂಗ್ ಬೋರ್ಡ್ ಅನ್ನು ಕ್ಲೀನ್ ಬಟ್ಟೆಯಿಂದ ಸ್ವಚ್ಛಗೊಳಿಸಿ.

Kitchen Tips : ಸಿಂಪಲ್ ಟ್ರಿಕ್ಸ್ ಮೂಲಕ ಈರುಳ್ಳಿ, ಬೆಳ್ಳುಳ್ಳಿ , ಶುಂಠಿ ಸಿಪ್ಪೆ ಸುಲಿಯಿರಿ

ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್‌ ಸ್ವಚ್ಛಗೊಳಿಸುವುದು ಹೇಗೆ ?

ಉಪ್ಪು ಮತ್ತು ಅಡುಗೆ ಸೋಡಾ
ನೀವು ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್ ಹೊಂದಿದ್ದರೆ, ಅದನ್ನು ಉಪ್ಪು (Salt), ಅಡಿಗೆ ಸೋಡಾ ಮತ್ತು ವಿನೆಗರ್ ಸಹಾಯದಿಂದ ಬಹಳ ಕಡಿಮೆ ಸಮಯದಲ್ಲಿ ಸ್ವಚ್ಛಗೊಳಿಸಬಹುದು. ಮೊದಲನೆಯದಾಗಿ, ಪ್ಲಾಸ್ಟಿಕ್ ಚಾಪಿಂಗ್ ಬೋರ್ಡ್‌ನಲ್ಲಿ ಉಪ್ಪು ಮತ್ತು ಅಡಿಗೆ ಸೋಡಾವನ್ನು ಅನ್ವಯಿಸಿ ಮತ್ತು ಸುಮಾರು 10 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ಸ್ಪಾಂಜ್ ಸಹಾಯದಿಂದ ಸ್ವಚ್ಛಗೊಳಿಸಿ. ಈಗ ನಿಂಬೆ ಸಿಪ್ಪೆಯಿಂದ ಚೆನ್ನಾಗಿ ಉಜ್ಜಿಕೊಳ್ಳಿ. ಈಗ ಬಿಳಿ ವಿನೇಗರ್ ಅನ್ನು ನೀರಿಗೆ ಹಾಕಿ ಮತ್ತು ಚಾಪಿಂಗ್‌ ಬೋರ್ಡ್ ಮೇಲೆ ಹಾಕಿ ಮತ್ತು ಸ್ವಲ್ಪ ಸಮಯದವರೆಗೆ ಹಾಗೆ ಬಿಡಿ. ನಂತರ ಚಾಪಿಂಗ್ ಬೋರ್ಡ್ ಅನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಒಣಗಿಸಿ.