Asianet Suvarna News Asianet Suvarna News

Kitchen Tips : ಡಿಶ್ ವಾಶ್ ಖಾಲಿಯಾಗಿದ್ರೆ ಟೆನ್ಷನ್ ಬೇಡ, ಮನೆಯಲ್ಲಿರೋ ಈ ವಸ್ತು ಬಳಸ್ಕೊಳ್ಳಿ

ಮನೆ ಅಂದ್ಮೇಲೆ ಪಾತ್ರೆ ಇದ್ದೇ ಇರುತ್ತೆ. ಪಾತ್ರೆ ತೊಳೆಯೋಕೆ ಸೋಪ್, ಜೆಲ್ ಬೇಕೇಬೇಕು. ಅನೇಕ ಬಾರಿ ಡಿಶ್ ವಾಶ್ ಖಾಲಿಯಾಗಿದ್ದು ನೆನಪಿನಲ್ಲಿರೋದಿಲ್ಲ. ಪಾತ್ರೆ ತೊಳೆಯೋದು ಹೇಗಪ್ಪ ಎನ್ನುವ ಚಿಂತೆ ಕಾಡುತ್ತೆ. ಆಗ ಅಡುಗೆ ಮನೆಯಲ್ಲಿರುವ ಕೆಲ ವಸ್ತು ಪ್ರಯೋಜನಕ್ಕೆ ಬರುತ್ತೆ. 
 

Kitchen Tips And Hacks To Wash Utensils Without Dishwashing Liquid
Author
First Published Feb 16, 2023, 5:25 PM IST

ಅಡುಗೆ ಮನೆಯಲ್ಲಿನ ಎಣ್ಣೆ ಪದಾರ್ಥಗಳ ಜಿಡ್ಡನ್ನು ತೆಗೆಯುವುದು ಸುಲಭದ ಕೆಲಸವಲ್ಲ. ಪಾತ್ರೆಗಳು ಚೊಕ್ಕವಾಗಿದ್ದರೆ ಅಡುಗೆ ಮಾಡಲು ಕೂಡ ಹುಮ್ಮಸ್ಸು ಇರುತ್ತದೆ. ಪಾತ್ರೆಗಳಲ್ಲಿ ಜಿಡ್ಡು, ಕೊಳಕು ಹಾಗೆಯೇ ಉಳಿದುಕೊಂಡರೆ ಅದು ನಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲ. ಪಾತ್ರೆಗಳು ಕ್ಲೀನ್ ಆಗಿರಬೇಕೆಂದರೆ ಅದಕ್ಕೆ ಬಳಸುವ ಪೌಡರ್ ಅಥವಾ ಜೆಲ್ ಗಳು ಕೂಡ ಅಷ್ಟೇ ಗುಣಮಟ್ಟಹೊಂದಿರಬೇಕು. ಈಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಡಿಶ್ ವಾಶ್ ಪೌಡರ್ ಮತ್ತು ಜೆಲ್ ಗಳು ಲಭ್ಯವಿದೆ. ಆದರೆ ಕೆಲವೊಮ್ಮೆ ಮನೆಯಲ್ಲಿ ಪಾತ್ರೆ ತೊಳೆಯುವ ಪೌಡರ್ ಗಳು ಖಾಲಿಯಾಗಿರುತ್ತವೆ. ಅಥವಾ ಮನೆಯಲ್ಲಿರುವ ಪೌಡರ್ ಗಳಿಂದ ಪಾತ್ರೆಯ ಕಲೆಗಳನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿಕೊಂಡು ನಾವು ಪಾತ್ರೆ ತೊಳೆಯಬಹುದು.

ಈಗ ಮಾರುಕಟ್ಟೆ (Market) ಯಲ್ಲಿ ಪಾತ್ರೆ (Utensils) ತೊಳಯಲು ಬಹುವಿಧದ ಜೆಲ್ ಗಳು ಸಾಬೂನು (Soap) ಗಳು ಸಿಗುತ್ತವೆ. ಆದರೆ ಹಿಂದಿನ ಕಾಲದಲ್ಲಿ ಹಾಗಿರಲಿಲ್ಲ. ಹಿಂದಿನವರು ಭತ್ತದ ಹೊಟ್ಟು, ಬೂದಿ, ಸೀಗೇಕಾಯಿ ಮುಂತಾದವುಗಳನ್ನೇ ಪಾತ್ರೆತೊಳೆಯಲು ಬಳಸುತ್ತಿದ್ದರು. ಇಂದಿಗೂ ಕೂಡ ಹಳ್ಳಿಗಳಲ್ಲಿ ಅನೇಕರು ಅವುಗಳನ್ನೇ ಬಳಸುತ್ತಾರೆ. ಇವುಗಳಲ್ಲಿ ಯಾವುದೇ ರೀತಿಯ ರಾಸಾಯನಿಕಗಳು ಕೂಡ ಇರುವುದಿಲ್ಲ. ನಮ್ಮ ಮನೆಯಲ್ಲೇ ನಾವೇ ತಯಾರಿಸಿಕೊಳ್ಳಬಹುದಾದ ಅಂತಹುದೇ ಕೆಲವು ಡಿಶ್ ವಾಶಿಂಗ್ ಪೌಡರ್ ಗಳು ಇಲ್ಲಿವೆ.

ವಿನೆಗರ್ ಬಳಸಿ ಪಾತ್ರೆಯ ಹೊಳಪನ್ನು ಹೆಚ್ಚಿಸಿ : ನಿಮ್ಮ ಮನೆಯಲ್ಲಿ ವಿನೆಗರ್ ಇದ್ದರೆ ಅದರಿಂದ ನೀವು ಪಾತ್ರೆಗಳು ಹೊಳೆಯುವಂತೆ ಮಾಡಬಹುದು. ಪಾತ್ರೆಯಿಂದ ಬರುವ ಆಹಾರ ಪದಾರ್ಥಗಳ ವಾಸನೆಯನ್ನು ಕೂಡ ವಿನೆಗರ್ ತೊಡೆದುಹಾಕುತ್ತದೆ.

Womens Day : ಎಲ್ಲಿಂದ ಶುರುವಾಯ್ತು ಮಹಿಳಾ ದಿನಾಚರಣೆ?

ಹೀಗೆ ತಯಾರಿಸಿ : ಒಂದು ಲೋಟ ನೀರಿಗೆ 4-5 ಚಮಚ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಪಾತ್ರೆಗೆ ಹಚ್ಚಿ ಸ್ವಲ್ಪ ಸಮಯ ಹಾಗೇ ಬಿಡಿ. ಸ್ವಲ್ಪ ಸಮಯದ ನಂತರ ಪಾತ್ರೆಯನ್ನು ಉಜ್ಜಿ ತೊಳೆದರೆ ಪಾತ್ರೆ ಚೆನ್ನಾಗಿ ಕ್ಲೀನ್ ಆಗುತ್ತೆ.

ಅಕ್ಕಿ ತೊಳೆದ ನೀರಿನಿಂದಲೂ ಪಾತ್ರೆ ತೊಳೆಯಬಹುದು : ಅಡುಗೆ ಮಾಡುವ ಎಲ್ಲ ಮನೆಗಳಲ್ಲಿಯೂ ಪ್ರತಿನಿತ್ಯ ಅಕ್ಕಿಯನ್ನು ತೊಳೆಯುತ್ತಾರೆ. ಅಕ್ಕಿ ತೊಳೆದ ನೀರನ್ನು ಸುಮ್ಮನೆ ಚೆಲ್ಲುತ್ತಾರೆ. ಆದ್ರೆ ಈ ನೀರು  ಉತ್ತಮ ಡಿಶ್ ವಾಶರ್ ಎಂಬುದು ಬಹಳ ಜನರಿಗೆ ತಿಳಿದಿಲ್ಲ. ಅಕ್ಕಿ ತೊಳೆದ ನೀರಿನಲ್ಲಿ ಸ್ಟಾರ್ಚ್ ಮತ್ತು ಎಸಿಡ್ ಇರುತ್ತದೆ. ಇದಕ್ಕೆ ಗ್ರೀಸ್ ಮತ್ತು ಕೊಳೆಯನ್ನು ಹೋಗಲಾಡಿಸುವ ಶಕ್ತಿಯಿದೆ. ಹಾಗಾಗಿ ಇದನ್ನು ಪಾತ್ರೆ ತೊಳೆಯಲು ಉಪಯೋಗಿಸಬಹುದು. ವಿಪರೀತ ಕೊಳೆಯಾದ ಪಾತ್ರೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಮುಳುಗಿಸಿ ಇಡಿ. ಅರ್ಧ ಗಂಟೆಯ ಬಳಿಕ ಆ ಪಾತ್ರೆಯನ್ನು ತೊಳೆದರೆ ಕೊಳೆ ಮಾಯವಾಗಿರುತ್ತದೆ.

ಬೂದಿಯನ್ನೂ ಕೂಡ ಬಳಸಬಹುದು : ಕಟ್ಟಿಗೆಯಿಂದ ಬರುವ ಬೂದಿಯಿಂದ ಪಾತ್ರೆ ತೊಳೆಯುವುದು ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಬೂದಿಯಿಂದ ಪಾತ್ರೆಯನ್ನು ತೊಳೆದರೆ ಪಾತ್ರೆಗಳು ಶುಭ್ರವಾಗಿ ಹೊಳೆಯುತ್ತೆ ಮತ್ತು ಬೂದಿಯನ್ನು ಬಳಸುವುದರಿಂದ ಪಾತ್ರೆಗಳ ವಾಸನೆ ಇರೋದಿಲ್ಲ. 

ಸೋಡಾ ಮತ್ತು ನಿಂಬುವಿನಿಂದ ಜೆಲ್ ತಯಾರಿಸಿ : ಸೋಡಾ ಮತ್ತು ನಿಂಬು ಎರಡಕ್ಕೂ ಕೊಳೆಯನ್ನು ನಿವಾರಿಸುವ ಗುಣವಿದೆ. ಹಾಗಾಗಿ ಇವೆರಡನ್ನೂ ಉಪಯೋಗಿಸಿ ಮನೆಯಲ್ಲಿಯೇ ಸುಲಭವಾಗಿ ಜೆಲ್ ತಯಾರಿಸಬಹುದು. 3 ಚಮಚ ಬೇಕಿಂಗ್ ಸೋಡಾವನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ನಂತರ ಅದಕ್ಕೆ ನಿಂಬೆಯ ರಸವನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಮಿಶ್ರಣದಿಂದ ಪಾತ್ರೆಯನ್ನು ತೊಳೆದರೆ ಪಾತ್ರೆ ಚೆನ್ನಾಗಿ ಕ್ಲೀನ್ ಆಗುತ್ತೆ. ನಿಂಬೆ ಹಣ್ಣಿನ ರಸ ಪಾತ್ರೆಗೆ ಒಳ್ಳೆಯ ಸುವಾಸನೆಯನ್ನು ಕೂಡ ಕೊಡುತ್ತೆ.

Health Tips : ತಲೆಯ ಅಲ್ಲಲ್ಲಿ ಕೂದಲು ಮಾಯವಾಗಿದ್ರೆ ಹೀಗ್ ಮಾಡಿ

ಬೇಕಿಂಗ್ ಸೋಡಾ (Baking Soda) : ಬೇಕಿಂಗ್ ಸೋಡಾದಲ್ಲಿ ಕ್ಷಾರೀಯ ಅಂಶ ಹೆಚ್ಚಿಗೆ ಇರುತ್ತದೆ. ಇದು ಪಾತ್ರೆಯಲ್ಲಿ ಇರುವ ಕೊಳೆಯನ್ನು ಸುಲಭವಾಗಿ ತೆಗೆಯುತ್ತದೆ. ಕೊಳೆಯಾದ ಪಾತ್ರೆಯನ್ನು ಒಮ್ಮೆ ಬಿಸಿನೀರಿನಿಂದ ತೊಳೆದು ಅದಕ್ಕೆ ಸೋಡಾ ಹಚ್ಚಿ. ಸ್ವಲ್ಪ ಸಮಯದ ನಂತರ ಪಾತ್ರೆಯನ್ನು ತೊಳೆದರೆ ಕೊಳೆಯನ್ನು ಸುಲಭವಾಗಿ ತೆಗೆಯಬಹುದು.  
 

Follow Us:
Download App:
  • android
  • ios