Cooking Tips : ಮಣ್ಣಿನ ಪಾತ್ರೆ ಆರೋಗ್ಯಕ್ಕೆ ಒಳ್ಳೇಯದು ಹೌದು, ಆದರೆ ಇರಲಿ ಈ ಕಡೆ ಗಮನ
ಬೇಸಿಗೆ ಬಿಸಿಯಲ್ಲಿ ಮಣ್ಣಿನ ಮಡಿಕೆಯಲ್ಲಿಟ್ಟ ನೀರಿನ ಸೇವನೆ ತಂಪಿನ ಅನುಭವ ನೀಡುತ್ತದೆ. ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರ ವಿಶೇಷ ರುಚಿ ಹೊಂದಿರುತ್ತದೆ. ಆದ್ರೆ ಅಡುಗೆ ಮಾಡುವ ಮೊದಲು ಅದ್ರ ಬಗ್ಗೆ ಸರಿಯಾಗಿ ತಿಳಿದಿರಬೇಕಾಗುತ್ತದೆ.
ಭಾರತದಲ್ಲಿನ ಮಣ್ಣಿನ ಮಡಕೆಯ ಬಳಕೆ ಇಂದು ನಿನ್ನೆಯದಲ್ಲ. ರಾಜ ಮಹಾರಾಜರ ಕಾಲದಲ್ಲಿ ಕೂಡ ಮಣ್ಣಿನ ಪಾತ್ರೆಗಳ ಬಳಕೆಯಲ್ಲಿತ್ತು. ಕುಂಬಾರನ ಶ್ರಮದ ಫಲದಿಂದ ನಿಶ್ವಿತ ಆಕಾರವನ್ನು ಹೊಂದುವ ಮಣ್ಣಿನ ಪಾತ್ರೆಗಳು ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇಂದು ಮಣ್ಣಿನ ಪಾತ್ರೆಯ ಜಾಗವನ್ನು ಸ್ಟೇನ್ ಲೆಸ್ ಸ್ಟೀಲ್, ಅಲ್ಯೂಮಿನಿಯಂ ಮತ್ತು ನಾನ್ ಸ್ಟಿಕ್ ಪಾತ್ರೆಗಳು ತೆಗೆದುಕೊಂಡಿವೆ.
ಮಣ್ಣಿ (Soil ) ನ ಮಡಿಕೆ ಈಗ ಕೇವಲ ನೀರನ್ನು ಶೇಖರಿಸಿ ಇಡುವಲ್ಲಿ ಮಾತ್ರ ಬಳಕೆಯಾಗುತ್ತಿದೆ. ಇದರಲ್ಲಿ ಮಾಡುವ ಅಡುಗೆ ಸ್ವಾದಿಷ್ಟವಾಗಿಯೂ ಇರುತ್ತೆ ಮತ್ತು ಆರೋಗ್ಯ (Health) ಕರವಾಗಿಯೂ ಇರುತ್ತೆ. ಇದರ ತಯಾರಿಕೆಯಲ್ಲಿ ಯಾವುದೇ ರೀತಿಯ ಕೆಮಿಕಲ್ (Chemical ) ಉಪಯೋಗವಾಗುವುದಿಲ್ಲ. ಹಾಗಾಗಿ ಇದರಿಂದ ಯಾವುದೇ ರೀತಿಯ ಸೈಡ್ ಇಫೆಕ್ಟ್ ಗಳ ಭಯವಿಲ್ಲ. ಮಣ್ಣಿನ ಪಾತ್ರೆಗಳಲ್ಲಿ ಕಡಿಮೆ ಎಣ್ಣೆ ಬಳಸಿ ಅಡುಗೆ ಮಾಡಬಹುದು. ಜೊತೆಗೆ ಆಹಾರ ಪದಾರ್ಥಗಳಲ್ಲಿರುವ ಎಲ್ಲ ಪೋಷಕಾಂಶಗಳು ಕೂಡ ಅದರಲ್ಲೇ ಉಳಿಯುತ್ತವೆ. ಮಣ್ಣಿನ ಪಾತ್ರೆಯಲ್ಲಿ ಅಡಿಗೆ ಮಾಡೋದ್ರಿಂದ ಮಣ್ಣಿನಲ್ಲಿರುವ ಮ್ಯಾಗ್ನೀಶಿಯಂ, ಕ್ಯಾಲ್ಸಿಯಂ, ಫಾಸ್ಪರಸ್ ಮುಂತಾದ ಖನಿಜಗಳು ಸ್ವಲ್ಪ ಪ್ರಮಾಣದಲ್ಲಿ ಆಹಾರದೊಂದಿಗೆ ಸೇರಿಕೊಳ್ಳುತ್ತೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಅಡುಗೆ ತಯಾರಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
Kitchen Tips : ಅರ್ಜೆಂಟ್ ಇದೆ ಅಂತಾ ಹಾಲನ್ನು ಬೇಗ ಬೇಗ ಕುದಿಸ್ಬೇಡಿ
ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುವ ಮೊದಲು ಈ ವಿಷಯವನ್ನು ಗಮನದಲ್ಲಿಡಿ :
• ಮಣ್ಣಿನ ಪಾತ್ರೆಯಲ್ಲಿ ಅಡುಗೆ ತಯಾರಿಸುವ ಮೊದಲು ಪಾತ್ರೆಯನ್ನು ಸ್ವಲ್ಪ ಸಮಯದ ತನಕ ನೀರಿನಲ್ಲಿ ನೆನೆಸಿಡಿ. ಮಣ್ಣಿನ ಪಾತ್ರೆಗಳು ಅನೇಕ ಚಿಕ್ಕ ಚಿಕ್ಕ ರಂದ್ರಗಳನ್ನು ಹೊಂದಿರುತ್ತದೆ. ಸ್ವಲ್ಪ ಸಮಯ ನೀರಿನಲ್ಲಿ ನೆನಸಿಡುವುದರಿಂದ ಮಣ್ಣಿನ ಪಾತ್ರೆ ತೇವಾಂಶದಿಂದ ಕೂಡಿರುತ್ತದೆ. ಅಡುಗೆ ಮಾಡುವಾಗ ಪಾತ್ರೆಯನ್ನು ನೀರಿನಿಂದ ಹೊರತೆಗೆದು ಬಟ್ಟೆಯಿಂದ ಒರೆಸಿ ನಂತರ ಉಪಯೋಗಿಸಿ. ನಂತರ ಸ್ವಲ್ಪ ನೀರನ್ನು ಹಾಕಿ ಮಂದ ಉರಿಯಲ್ಲಿ ಗ್ಯಾಸ್ ಮೇಲಿಡಿ. 2 ನಿಮಿಷದ ನಂತರ ಆ ನೀರನ್ನು ಚೆಲ್ಲಿ ನೀವು ಅದರಲ್ಲಿ ಅಡುಗೆ ಸಿದ್ಧಪಡಿಸಬಹುದು.
Kitchen Tips : ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರಬಾರದೆಂದರೆ ಏನ್ಮಾಡ್ಬೇಕು?
• ಸ್ಟೀಲ್ ಮತ್ತು ಅಲ್ಯೂಮಿನಿಯಂ ಪಾತ್ರೆಯಲ್ಲಿ ದೊಡ್ಡ ಉರಿಯಲ್ಲಿ ಅಡುಗೆ ತಯಾರಿಸಲಾಗುತ್ತದೆ. ಆದರೆ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಹಾಗೆ ಮಾಡಲೇಬಾರದು. ಮಣ್ಣಿನ ಪಾತ್ರೆಯಲ್ಲಿ ಮಂದ ಉರಿಯಲ್ಲೇ ಬೇಯಿಸಬೇಕು. ಇದರಿಂದ ಆಹಾರ ಚೆನ್ನಾಗಿ ಬೇಯುತ್ತದೆ ಮತ್ತು ಸ್ವಾದಿಷ್ಟವೂ ಆಗುತ್ತದೆ.
• ಮಣ್ಣಿನ ಪಾತ್ರೆಯಲ್ಲಿ ಅಡುಗೆ ಸಿದ್ಧಪಡಿಸುವಾಗ ಮರದ ಅಥವಾ ಸಿಲಿಕಾನ್ ಸೌಟುಗಳನ್ನೇ ಬಳಸಬೇಕು. ಸ್ಟೀಲ್ ಅಥವಾ ಅಲ್ಯೂಮಿನಿಯಂ ಸೌಟುಗಳನ್ನು ಮಣ್ಣಿನ ಮಡಕೆಗೆ ಬಳಸುವುದರಿಂದ ಮಡಿಕೆ ಬೇಗ ಹಾಳಾಗುತ್ತದೆ. ಬಹಳ ದಿನಗಳ ತನಕ ಬಾಳಿಕೆಗೆ ಬರುವುದಿಲ್ಲ.
• ಮಣ್ಣಿನ ಮಡಕೆಗಳನ್ನು ತೊಳೆಯುವಾಗಲೂ ಬಹಳ ಜಾಗರೂಕರಾಗಿರಬೇಕು. ಸ್ಟೀಲ್ ಪಾತ್ರೆಗಳನ್ನು ಸ್ಕ್ರಬರ್ ನಿಂದ ಉಜ್ಜಿ ತೊಳೆದಂತೆ ಇದನ್ನು ತೊಳೆಯುವ ಹಾಗಿಲ್ಲ. ಮಣ್ಣಿನ ಪಾತ್ರೆಗಳನ್ನು ಬಹಳ ನಾಜೂಕಾಗಿ ತಿಕ್ಕಬೇಕು. ಏಕೆಂದರೆ ಇದರ ಮೇಲೆ ಹೆಚ್ಚಿನ ಒತ್ತಡ ಹಾಕುವುದರಿಂದ ಅವು ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
• ಮಾರುಕಟ್ಟೆಯಲ್ಲಿ ಸಿಗುವ ಮಣ್ಣಿನ ಪಾತ್ರೆಗಳನ್ನು ಆಯ್ಕೆ ಮಾಡುವಾಗಲೂ ಅದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು. ಏಕೆಂದರೆ ಸಿರಾಮಿಕ್ ಕೋಟಿಂಗ್ ಇರುವ ಮಣ್ಣಿನ ಪಾತ್ರೆಗಳು ಅಡುಗೆಗೆ ಸೂಕ್ತವಲ್ಲ.
ಇಂದಿನ ಆಹಾರ ಶೈಲಿಯಲ್ಲಿ ಎಲ್ಲರೂ ಸಾಮಾನ್ಯವಾಗಿ ಒಂದಲ್ಲ ಒಂದು ರೀತಿಯ ಪೌಷ್ಠಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಖನಿಜಾಂಶಗಳನ್ನು ಹೊಂದಿದ ಮಣ್ಣಿನ ಪಾತ್ರೆ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಇದು ಬ್ರಾಂಕೈಟಿಸ್, ಅಸ್ತಮಾ ಮತ್ತು ಕ್ಯಾನ್ಸರ್ ನಂತಹ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೇಡಿಮಣ್ಣಿನಿಂದ ಮಾಡಿದ ಮಣ್ಣಿನ ಪಾತ್ರೆಗಳು ನಮ್ಮ ಶರೀರಕ್ಕೆ ಹಾನಿಮಾಡುವ ಅನೇಕ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ.