ನೀವು ಸಿಂಗಲ್‌ ಮ್ಯಾರೀಡ್‌ ವುಮನ್ನಾ? ಯಾರಿದು ಒಂಟಿ ವಿವಾಹಿತ ಮಹಿಳೆ ಅಂದ್ರೆ?

ಸಿಂಗಲ್‌ ವುಮನ್‌ ಗೊತ್ತು, ಮ್ಯಾರೀಡ್‌ ವುಮನ್ನೂ ಗೊತ್ತು. ಆದರೆ ಏನಿದು ಸಿಂಗಲ್‌ ಮ್ಯಾರೀಡ್‌ ವುಮನ್‌ ಅಥವಾ ಒಂಟಿ ವಿವಾಹಿತ ಮಹಿಳೆ? ಬನ್ನಿ ತಿಳಿಯೋಣ. 
 

Who is Single married woman what is her life characteristics bni

ನಮ್ಮ ಸಮಾಜದಲ್ಲಿ ʼಒಂಟಿ ವಿವಾಹಿತ ಮಹಿಳೆʼಯರ ಸಂಖ್ಯೆ ಹೆಚ್ಚುತ್ತಿದೆ ಎಂದು ಒಂದು ಅಧ್ಯಯನ ಹೇಳಿದೆ. ಯಾರಿವರು? 'ಸಿಂಗಲ್‌ ಮ್ಯಾರೀಡ್‌ ವುಮನ್‌ʼ ಎಂಬ  ಪದವೇ ಎಲ್ಲವನ್ನೂ ಹೇಳುತ್ತದೆ. ಇದು ವಾಸ್ತವವಾಗಿ ವಿವಾಹಿತ ಮಹಿಳೆಯ ಒಂದು ಸ್ಥಿತಿ. ದಾಂಪತ್ಯದಲ್ಲಿ ಜವಾಬ್ದಾರಿಗಳನ್ನು ಹೊತ್ತಿದ್ದರೂ, ತನ್ನ ಜೀವನ ಸಂಗಾತಿಯಿಂದ ತನ್ನ ನಿರೀಕ್ಷೆಗಳು ಯಾವುದೇ ರೀತಿಯಲ್ಲಿ ಪೂರೈಕೆಯಾಗುತ್ತಿಲ್ಲ ಎಂದು ತಿಳಿದ ಹೆಣ್ಣು. ಈಕೆ ವೈವಾಹಿಕ ಜೀವನ ನಡೆಸುತ್ತಿರುವ ಒಂಟಿ ಮಹಿಳೆ. ಇಲ್ಲಿ ಅವಳು ಮತ್ತು ಅವಳ ಸಂಗಾತಿ ಇಬ್ಬರೂ ಪರಸ್ಪರರ ಜೀವನದಲ್ಲಿ ಯಾವುದೇ ಪ್ರಮುಖ ಪಾತ್ರವನ್ನು ವಹಿಸುವುದಿಲ್ಲ.

ಸಿಂಗಲ್‌ ಮ್ಯಾರೀಡ್‌ ಸ್ತ್ರೀಯರ ಗುಣಲಕ್ಷಣಗಳು ಹೀಗಿರುತ್ತವೆ:
 
ಏಕಪಕ್ಷೀಯ ಪ್ರಯತ್ನಗಳು: ಹೆಂಡತಿಯಾಗಿ, ನಿಮ್ಮ ದಾಂಪತ್ಯವನ್ನು ಉಳಿಸಲು ನೀವು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿರುತ್ತೀರಿ. ಆದರೆ ನಿಮ್ಮ ಪತಿ ಯಾವುದೇ ಅಂಥ ಪ್ರಯತ್ನ ಮಾಡುತ್ತಿರುವುದಿಲ್ಲ. ಅದು ದೀರ್ಘಾವಧಿಯಲ್ಲಿ ನಿಮ್ಮನ್ನು ಖಾಲಿ ಮಾಡುತ್ತದೆ ಮತ್ತು ಬ್ರೇಕ್‌ ಮಾಡುತ್ತದೆ. 

ಸಂವಹನದ ಕೊರತೆ: ನಿಮ್ಮ ಪತಿ/ಸಂಗಾತಿ ನಿಮ್ಮೊಂದಿಗೆ ಸಂವಹನ ನಡೆಸಲು ಆಸಕ್ತಿ ತೋರಿಸುತ್ತಿಲ್ಲ. ದಾಂಪತ್ಯ ಏಕಾಂಗಿಯಾಗಿ ನಡೆಯುತ್ತಿದೆ. ಆತ ಯಾವುದೇ ರೀತಿಯ ಗಂಭೀರ ಚರ್ಚೆಗಳಿಗೆ ಅಥವಾ ಗುಣಮಟ್ಟದ ಸಮಯ ನೀಡಲು ಸಿದ್ಧವಾಗಿಲ್ಲ. ಇಂಥ ಸಂದರ್ಭದಲ್ಲಿ ಏಕಾಂಗಿ ವೈವಾಹಿಕ ಜೀವನಕ್ಕೆ ಕಾರಣವಾಗುತ್ತದೆ. 

ಒಂದೇ ಪದದ ಉತ್ತರಗಳು: ಗಂಡನಲ್ಲಿ ಸಂವಹನವಿದೆ, ಆದರೆ ಬಹುತೇಕ ಒಂದೇ ಪದದ ಉತ್ತರಗಳು. ಸರಿ, ಓಕೆ, ಇತ್ಯಾದಿ. ಹೀಗಿದ್ದರೆ ನೀವು ಪರಸ್ಪರ ಸಂಬಂಧವನ್ನು ಹೊಂದಿಲ್ಲ ಎಂದರ್ಥ. ಇದು ಸಂತೋಷದ ಪರಿಸ್ಥಿತಿಯಲ್ಲ.

ಒಂದೇ ಕಡೆಯ ಬಾಧ್ಯತೆ: ಒಬ್ಬ ಹೆಂಡತಿಯಾಗಿ ನೀವು ಸಮಾಜದ, ನಿಮ್ಮ ಪತಿಯ ಅಥವಾ ಅವರ ಕುಟುಂಬದ ಪ್ರತಿಯೊಬ್ಬರ ನಿರೀಕ್ಷೆಗಳನ್ನು ಪೂರೈಸಲು ಅರ್ಹರಾಗಿದ್ದೀರಿ. ಆದರೆ ನಿಮ್ಮ ಗಂಡನ ಕಡೆಯಿಂದ ಅಂತ ಬದ್ಧತೆ ಕಾಣಿಸುತ್ತಿಲ್ಲ.  

ಶೂನ್ಯ ಹೊಂದಾಣಿಕೆ: ನೀವು ಯಾವುದೇ ಭಾವನಾತ್ಮಕ ಸಂಪರ್ಕವನ್ನು ಹೊಂದಿಲ್ಲದಿರುವಾಗ ಸಾಮಾನ್ಯ ಆಸಕ್ತಿಗಳು ಅಥವಾ ದೃಷ್ಟಿಕೋನದ ಕೊರತೆ ಕಾಣಬಹುದು. ಪರಸ್ಪರರ ಸಹವಾಸವನ್ನು ಸಹ ಆನಂದಿಸಲು ಸಾಧ್ಯವಾಗದಿದ್ದಾಗ ಹೊಂದಾಣಿಕೆಯ ಮಟ್ಟದಲ್ಲಿ ಕೊರತೆಯಿದೆ ಎಂದರ್ಥ.

ಕಡಿಮೆ ಕಂಪನಿ ಕೊಡುತ್ತಾರೆ: ಪತಿ ನಿಮಗೆ ಕಂಪನಿ ನೀಡುವ ಸಮಯ ಕಡಿಮೆ ಮಾಡುತ್ತಿದ್ದಾರೆ. ನಿಮ್ಮೊಡನೆ ಮಾತುಕತೆ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತಿದ್ದಾರೆ. ಆದರೆ ಆತನ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಅವರು ಸುತ್ತಲೂ ಇರುವಾಗ ಸಾಕಷ್ಟು ನಗುತ್ತಾರೆ. ನಿಮ್ಮೊಂದಿಗೆ ಅಲ್ಪ ಸಮಯ ಕಳೆಯುತ್ತಾರೆ ಹಾಗೂ ತಕ್ಷಣ ಗಂಭೀರವಾಗಿರುತ್ತಾರೆ. ಇದು ಗಂಡ ನಿಮ್ಮ ಕಂಪನಿಯಲ್ಲಿ ಸಾಕಷ್ಟು ನಿರಾಸಕ್ತಿ ಹೊಂದಿದ್ದಾರೆಂದು ತೋರಿಸುತ್ತದೆ.

ಹೆಚ್ಚು ಲೈಂಗಿಕ ಕ್ರಿಯೆ ನಡೆಸಿದರೆ ದೀರ್ಘಾಯುಷ್ಯ? ಈ ಸ್ಟಡಿಯ ಫಲಿತಾಂಶವೇ ರೋಚಕ!

ಹಾಗಾದರೆ ಪರಿಹಾರವೇನು? 

ನಿಮಗೆ ನೀವು ಯಾವಾಗಲೂ ಮೊದಲ ಆದ್ಯತೆ ನೀಡುವುದು ಯಾವಾಗಲೂ ಉತ್ತಮ. ನೀವು ನಿಮ್ಮ ಬದುಕಿನ ನಿಯಂತ್ರಣವನ್ನು ಹಿಡಿಯಬೇಕು. ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಂವಹನ ನಡೆಸುವ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಅವನು ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಂತೆ ಮಾಡಬೇಕು. ಈ ಒಂಟಿ ವಿವಾಹಿತ ಸಂಬಂಧವನ್ನು ವಿವಾಹಿತ ಸಂಬಂಧವಾಗಿ ಪರಿವರ್ತಿಸಬೇಕು. 

ಏಕೆಂದರೆ ಯಾವುದೇ ಒಡನಾಟವಿಲ್ಲದ, ಸಂತೋಷವನ್ನು ನೀಡದ, ಕೇವಲ ಖಾಲಿತನವನ್ನು ಉಂಟುಮಾಡುವ ವೈವಾಹಿಕ ಜೀವನವನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಹಿ ಸತ್ಯವೆಂದರೆ ಅದು ನಿಮ್ಮಿಬ್ಬರಿಗೂ ಒಳ್ಳೆಯದನ್ನು ಮಾಡುವುದಿಲ್ಲ. ಕೌನ್ಸೆಲಿಂಗ್‌ ನಿಮ್ಮ ಸಂಬಂಧ ಸುಧಾರಿಸಲು ಸಹಾಯ ಮಾಡಬಹುದು. ಆಗ ಒಂಟಿ ವಿವಾಹಿತ ಬದುಕು, ಸಾಮರಸ್ಯದ ಯುಗಳ ಗೀತೆಯಾಗಿ ಪರಿವರ್ತಿಸಬಹುದು!

ಉಫ್​! ಎಂತೆಂಥ ಲವ್​ ಸಂಬಂಧಗಳು ಇವೆಯಪ್ಪಾ? ಇದು ಪಾಕೆಟಿಂಗ್​ ರಿಲೇಷನ್​ಷಿಪ್​ ಅಂತೆ! ಹಾಗಂದ್ರೆ ಏನ್​ ಗೊತ್ತಾ?
 

Latest Videos
Follow Us:
Download App:
  • android
  • ios