Asianet Suvarna News Asianet Suvarna News

Intimate health Tips: ಯೋನಿ ಆರೋಗ್ಯಕ್ಕೆ ವಜೈನಲ್ ಶಾಂಪೂ ಎಷ್ಟು ಸೇಫ್?

ಯೋನಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಹೋದ್ರೆ ಅನೇಕ ಸಮಸ್ಯೆ ಮಹಿಳೆಯನ್ನು ಕಾಡುತ್ತದೆ. ಅದ್ರ ನೈರ್ಮಲ್ಯ ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ಈಗ ನಾನಾ ಉತ್ಪನ್ನ ಬಂದಿದ್ದು, ಅದ್ರ ಬಳಕೆಗೆ ಮುನ್ನ ಅದು ಎಷ್ಟು ಒಳ್ಳೆಯದು ಎಂಬುದನ್ನು ತಿಳಿಯೋದು ಮುಖ್ಯ. 
 

Is It Ok To Use Vaginal Shampoo health tips for women  roo
Author
First Published Nov 22, 2023, 7:00 AM IST

ಯೋನಿ ನೈರ್ಮಲ್ಯ ಬಹಳ ಮುಖ್ಯ. ಅಲ್ಲಿ ಯಾವುದೇ ಸೋಂಕು ಬರದಂತೆ ನೋಡಿಕೊಳ್ಳಲು ಮಹಿಳೆಯರು ಯೋನಿ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಮಾರುಕಟ್ಟೆಯಲ್ಲೂ ಯೋನಿ ನೈರ್ಮಲ್ಯದ ಹೆಸರಿನಲ್ಲಿ ಅನೇಕ ಉತ್ಪನ್ನಗಳಿವೆ. ಅವುಗಳನ್ನು ವೆಜಿನಲ್ ಶಾಂಪೂ ಎಂದೂ ಕರೆಯುತ್ತಾರೆ. ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಮೂಲಕ ಸೋಂಕಿನಿಂದ ಯೋನಿಯನ್ನು ರಕ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ರೆ ಯೋನಿ ಸ್ವಚ್ಛತೆಗೆ ಯೋನಿ ಶಾಂಪೂ ಬಳಸೋದು ಎಷ್ಟು ಸರಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯೋನಿ (Vagina) ಶಾಂಪೂ (Shampoo) ಕೆಲಸವೇನು? : ಯೋನಿ ಪ್ರದೇಶದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು, ಸೋಂಕನ್ನು ತಡೆಗಟ್ಟಲು ಮತ್ತು ಕೆಟ್ಟ ವಾಸನೆಯನ್ನು ಕಡಿಮೆ ಮಾಡಲು ಮಹಿಳೆಯರು ಇದನ್ನು ಬಳಸ್ತಾರೆ. ಸ್ವಲ್ಪ ಆಮ್ಲೀಯವಾಗಿರುವ ಯೋನಿಯ ನೈಸರ್ಗಿಕ ಪಿಎಚ್ ಸಮತೋಲನವನ್ನು ಕಾಪಾಡಿಕೊಳ್ಳಲು ಯೋನಿ ಶಾಂಪೂ ಬಳಕೆ ಮಾಡಲಾಗುತ್ತದೆ. ಯೋನಿ ಮೇಲ್ಭಾಗವನ್ನು ಇದ್ರಿಂದ ವಾಶ್ ಮಾಡ್ಬೇಕೇ ಹೊರತು ಒಳ ಭಾಗವನ್ನಲ್ಲ. ಯೋನಿಯೊಳಗೆ ಉತ್ತಮ ಬ್ಯಾಕ್ಟೀರಿಯಾಗಳಿದ್ದು ಈ ಶಾಂಪೂ ಅದನ್ನು ಹಾನಿಗೊಳಿಸುವ ಸಾಧ್ಯತೆ ಇರುತ್ತದೆ. 

ಗೋಲ್ಡನ್ ಕಲರ್ ರೇಶ್ಮೆ ಸೀರೆ, ಒಳ್ಳೇ ಫ್ಯಾಷನ್ ಸೆನ್ಸ್, ಭಾಷಾ ಪ್ರೌಢಿಮೆ ಆ್ಯಂಕರ್ ಅಂದ್ರೆ ಹೀಗೇ ಇರ್ಬೇಕು ಅಂತಾರೆ ನೆಟ್ಟಿಗರು!

ಯೋನಿ ಶಾಂಪೂ ಅಗತ್ಯವಿದೆಯೇ? : ತಜ್ಞರ ಪ್ರಕಾರ, ಯೋನಿ ಸ್ವಚ್ಛತೆಗೆ ಇಂಟಿಮೇಟ್ ವಾಶ್, ಫೆಮಿನೈನ್ ವಾಶ್, ವೆಜಿನಲ್ ಶಾಂಪೂ ಅಗತ್ಯವಿಲ್ಲ. ಯೋನಿ ಸ್ವಯಂ ಶುಚಿಗೊಳಿಸುವ ಅಂಗವಾಗಿದೆ. ನೀವು ಶಾಂಪೂ ಬಳಕೆ ಮಾಡಿದಾಗ ಒಳ್ಳೆಯ ಬ್ಯಾಕ್ಟೀರಿಯಾ ಮೇಲೆ ಇದು ಪರಿಣಾಮ ಬೀರುತ್ತದೆ. ನಿರಂತರವಾಗಿ ಈ ಶಾಂಪೂ ಬಳಕೆ ಮಾಡೋದ್ರಿಂದ ಯೋನಿಗೆ ಹಾನಿಯುಂಟಾಗುತ್ತದೆ. ಯೋನಿ ಶುಷ್ಕವಾಗುವುದು, ಸೋಂಕು, ಉರಿ, ದುದ್ದು ಸೇರಿದಂತೆ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಇದ್ರಲ್ಲಿ ವಿವಿಧ ರಾಸಾಯನಿಕ (chemical) ಬಳಕೆ ಮಾಡೋದ್ರಿಂದ ಇದು ಅನೇಕರಿಗೆ ಅಲರ್ಜಿ ಸಮಸ್ಯೆಯನ್ನುಂಟು ಮಾಡುತ್ತದೆ. ಯೋನಿಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಯೋನಿ ಲೋಳೆಪೊರೆಯನ್ನು ನಿರ್ವಹಿಸುತ್ತದೆ ಮತ್ತು ಸೋಂಕಿನಿಂದ ರಕ್ಷಿಸುತ್ತದೆ. ಅದೇ ನೀವು ಶಾಂಪೂ ಬಳಕೆ ಮಾಡಿದಾಗ ಕೆಟ್ಟ ಬ್ಯಾಕ್ಟೀರಿಯಾ ಜೊತೆ ಒಳ್ಳೆ ಬ್ಯಾಕ್ಟೀರಿಯಾ ಸಾಯುವ ಅಪಾಯವಿರುತ್ತದೆ.

ಯೋನಿ ನೈರ್ಮಲ್ಯ ಹೀಗೆ ಕಾಪಾಡಿಕೊಳ್ಳಿ : 

ಸೋಫ್ ಬಳಕೆ : ನೀವು ಯೋನಿ ಸ್ವಚ್ಛತೆಗೆ ಸಾಮಾನ್ಯ ಸೋಫ್ ಬಳಕೆ ಮಾಡಬಹುದು. ಆದ್ರೆ ನೇರವಾಗಿ ಸೋಪನ್ನು ಅನ್ವಯಿಸಬಾರದು. ಯೋನಿ ಹೊರಭಾಗಕ್ಕೆ  ಸೋಪನ್ನು ನೀರಿನಲ್ಲಿ ಬೆರೆಸಿ, ಸೋಪ್ ನೀರು ಮಾಡಿಕೊಂಡು ಬಳಸಬೇಕು. ಸೋಫ್ ನೀರನ್ನು ಬಳಸಿದ ನಂತ್ರ ಶುದ್ಧ ನೀರಿನಿಂದ ಯೋನಿ ಸ್ವಚ್ಛಗೊಳಿಸಿದ್ರೆ ಸಾಕು.

ಸೆಕ್ಸ್ – ಮುಟ್ಟಿನ ಸಮಯದಲ್ಲಿ ಸ್ವಚ್ಛತೆ : ನೀವು ಸೆಕ್ಸ್ ಸಮಯದಲ್ಲಿ ಹಾಗೂ ಮುಟ್ಟಿನ ಸಂದರ್ಭದಲ್ಲಿ ಯೋನಿಯನ್ನು ಸ್ವಚ್ಛವಾಗಿಟ್ಟುಕೊಂಡರೆ ನಿಮ್ಮ ಅರ್ಧದಷ್ಟು ಸಮಸ್ಯೆ ಕಡಿಮೆ ಆದಂತೆ. ಸೆಕ್ಸ್ ಮೊದಲು ಹಾಗೂ ನಂತ್ರ ನೀವು ಯೋನಿ ಸ್ವಚ್ಛಗೊಳಿಸಬೇಕು. ಹಾಗೆಯೇ ಮುಟ್ಟಿನ ಸಮಯದಲ್ಲೂ ಯೋನಿ ಸ್ವಚ್ಛತೆ ಮತ್ತು ಪ್ಯಾಡ್ ಬದಲಿಸುವ ಬಗ್ಗೆ ಗಮನ ಹರಿಸಬೇಕು. ಒಂದೇ ಪ್ಯಾಡ್ ಹೆಚ್ಚು ಹೊತ್ತು ಬಳಸಿದ್ರೆ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳುತ್ತದೆ. 

Health Tips: ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡೋ ಹುಡುಗಿಯರನ್ನು ಕಾಡುತ್ತೆ ಈ ಸಮಸ್ಯೆ….

ಉತ್ತಮ ಆಹಾರ (Good Food) : ಯೋನಿ ಸ್ವಚ್ಛತೆಗೆ ಆಹಾರ ಕೂಡ ಮುಖ್ಯವಾಗುತ್ತದೆ. ನೀವು ಪ್ರೋಬಯಾಟಿಕ್‌ ಯುಕ್ತ ಆಹಾರ ಸೇವನೆ ಮಾಡೋದು ಒಳ್ಳೆಯದು. ಇದು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಯೋನಿ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. 

ಬಟ್ಟೆ (Cloths) : ನೀವು ಧರಿಸುವ ಬಟ್ಟೆ ನಿಮ್ಮ ಯೋನಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಒಳ ಉಡುಪು ಆದಷ್ಟು ಸಡಿಲವಾಗಿರುವಂತೆ ನೀವು ನೋಡಿಕೊಳ್ಳಬೇಕು. ಗಾಳಿಯಾಡುವ, ಹಗುರ ಬಟ್ಟೆ ಧರಿಸಬೇಕು. ಒಳ ಉಡುಪಿನ ಸ್ವಚ್ಛತೆ ಬಹಳ ಮುಖ್ಯ. 
 

Follow Us:
Download App:
  • android
  • ios