ಇಶಾ ಪಂಥ್‌ ಬೆಂಗಳೂರಿನ ಆಗ್ನೇಯ ವಲಯದ ಡಿಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಬ್ಬ ಪೊಲೀಸ್‌ ಆಫೀಸರ್‌ ಆಗಿ ಅವರು ಮಹಿಳೆಯರಿಗಾಗಿ ಮಾಡಿದ ಕಾರ್ಯಗಳು ಹಲವು. 2011ನೇ ಬ್ಯಾಚ್‌ನಲ್ಲಿ ಇಲಾಖೆ ಪ್ರವೇಶಿಸಿದ ಇವರು ಮಧ್ಯಪ್ರದೇಶದಲ್ಲಿದ್ದಾಗ ಡಕಾಯಿತಿ, ಹೆಣ್ಮಕ್ಕಳ ಮೇಲಿನ ದೌರ್ಜನ್ಯವನ್ನು ಮಟ್ಟಹಾಕಿದ ದಿಟ್ಟೆ. ಡ್ರಗ್‌ ದಂಧೆಗೆ ಬ್ರೇಕ್‌ ಹಾಕಿ ಧೀರೆ. ಬೆಂಗಳೂರಿನಲ್ಲೀಗ ಕಾರ್ಯಾಚರಿಸುತ್ತಿರುವ ದಿಟ್ಟಮಹಿಳಾ ಪೊಲೀಸ್‌ ಟೀಮ್‌ ‘ಶೌರ್ಯವಾಹಿನಿ’ ಇವರದೇ ಪರಿಕಲ್ಪನೆ. ಬೆಂಗಳೂರಿನ ನಗರದ ಹೃದಯ ಭಾಗದಲ್ಲಿ ಹೆಣ್ಣುಮಕ್ಕಳನ್ನು ಛೇಡಿಸುವ ಕಿಡಿಗೇಡಿಗಳು, ಕುಡುಕ ಗಂಡಸರ ಕುಕೃತ್ಯವನ್ನು ಯಶಸ್ವಿಯಾಗಿ ಮಟ್ಟಹಾಕಿದ ಕೀರ್ತಿ ಈ ಟೀಂನದ್ದು.

ಒಂದೇ ದಿನದಲ್ಲಿ ಇಶಾ ಪಂತ್ 2 ಬಾರಿ ವರ್ಗಾವಣೆ: ಇದೇನು ಆಡೋ ಹುಡುಗ್ರ ಆಟ ಆಯ್ತಾ..?

ಅಂದುಕೊಂಡಂತೆ ಬದುಕುವ ಸ್ವಾತಂತ್ರ್ಯ

‘ನನ್ನ ಪ್ರಕಾರ ಮಹಿಳಾ ಸಬಲೀಕರಣ ಅಂದರೆ ಎಲ್ಲ ಕ್ಷೇತ್ರಗಳಲ್ಲಿ ತಾರತಮ್ಯವಿಲ್ಲದ ಸಮಾನ ಅವಕಾಶ. ಹಗಲೇ ಇರಬಹುದು, ಮಧ್ಯರಾತ್ರಿಯೇ ಇರಬಹುದು ಆಕೆ ನಿರ್ಭೀತಿಯಿಂದ ಓಡಾಡುವಂಥಾ ವಾತಾವರಣ. ಇನ್ನೊಬ್ಬರು ಏನು ತಿಳಿಯುತ್ತಾರೋ ಅಂತ ಅಂಜದೇ ತನಗಿಷ್ಟಬಂದ ಹಾಗೆ, ತನ್ನ ಆಯ್ಕೆಯಂತೆ ಬದುಕುವ ಸ್ವಾತಂತ್ರ್ಯ.’- ಇಶಾಪಂತ್‌