International Women's Day: ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ಗೆ ಸನ್ಮಾನ
ಕಾಂತಾರ ಖ್ಯಾತಿಯ ಚಲನಚಿತ್ರ ನಟಿ, ಪ್ರಸಿದ್ಧ ಭರತನಾಟ್ಯ ಕಲಾವಿದೆ ಮತ್ತು ಗಾಯಕಿ ಮಾನಸಿ ಸುಧೀರ್ ಅವರನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ನಲ್ಲಿ ಸನ್ಮಾನಿಸಲಾಯಿತು.
ಉಡುಪಿ (ಮಾ.10) : ಕಾಂತಾರ ಖ್ಯಾತಿಯ ಚಲನಚಿತ್ರ ನಟಿ, ಪ್ರಸಿದ್ಧ ಭರತನಾಟ್ಯ ಕಲಾವಿದೆ ಮತ್ತು ಗಾಯಕಿ ಮಾನಸಿ ಸುಧೀರ್ ಅವರನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (GCPAS) ನಲ್ಲಿ ಸನ್ಮಾನಿಸಲಾಯಿತು.
14 ಚಲನಚಿತ್ರಗಳಲ್ಲಿ ನಟಿಸಿರುವ ಮಾನಸಿ ಸುಧೀರ್(Manasi Sudhir) ಅವರ ವಿಶಿಷ್ಟ ಪಾತ್ರ ನಿರ್ವಹಣೆ ‘ಕಾಂತಾರ’(Kantara)ದಲ್ಲಿ ಜನಮೆಚ್ಚುಗೆ ಗಳಿಸಿದೆ. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಕಲಾವಿದೆ,ನಾವು ಮಾಡುವ ಕೆಲಸವನ್ನು ಆನಂದಿಸಬೇಕು, ಯಶಸ್ಸಿಗಾಗಿ ಕಷ್ಟಪಡಬೇಕು ಎಂದರು
.Udupi: ಸಂಜೀವಿನಿ ಸಂತೆ ಮತ್ತು ಸಾಂಸ್ಕೃತಿಕ ಕಲರವ, ನಟಿ ಮಾನಸಿ ಸುಧೀರ್ ಭಾಗಿ
ಜಿಸಿಪಿಎಎಸ್ ಮುಖ್ಯಸ್ಥ ವರದೇಶ್ ಹಿರೇಗಂಗೆ ಮಾತನಾಡಿ, ಕಲಾವಿದೆ ಮಾನಸಿ ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲು ಹತ್ತಿದವರು. ಮಹಿಳಾ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಾವು ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಿದ್ದೇವೆ ಆದರೆ ಇನ್ನೂ ಕ್ರಮಿಸುವ ದೂರ ಬಹಳವಿದೆ ಎಂದರು.
ಪ್ರೊ.ಫಣಿರಾಜ್ ಮಾತನಾಡಿ ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಉತ್ತಮ ಪಾತ್ರಗಳು ಸಿಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಜೆಂಡರ್ ಕ್ಲಬ್-ಲಾ ಸ್ಪೆಕ್ಟರ್(Gender Club-Law Specter) ಅನ್ನು ಮಾನಸಿ ಸುಧೀರ್ ಉದ್ಘಾಟಿಸಿದರು. ಹಾಗೆಯೇ ಶಿಕ್ಷಕೇತರ ಮಹಿಳಾ ನೌಕರರನ್ನು ಸನ್ಮಾನಿಸಲಾಯಿತು. ಶ್ರಾವ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು. ಎಸ್ಥೆಟಿಕ್ಸ್, ಇಕೋಸಫಿ, ಪೀಸ್ ಮತ್ತು ಆರ್ಟ್ ಜರ್ನಲಿಸಂ(Aesthetics, Ecosophy, Peace and Art Journalism) ನ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆಯೋಜಿಸಿದರು.
Kantara; ಈ ರೀತಿ ಸಕ್ಸಸ್ ಸಿಗುತ್ತೆ ಎಂದು ದೇವರಾಣೆ ಯೋಚಿಸಿರಲಿಲ್ಲ- ಮಾನಸಿ ಸುಧೀರ್