International Legging Day: ಸ್ಕಿನ್ ಟೈಟ್ ಡ್ರೆಸ್ ಹಾಕ್ತೀರಾ ? ಹಾಗಿದ್ರೆ ತೊಂದ್ರೆ ಬಗ್ಗೆನೂ ತಿಳ್ಕೋಬೇಕಲ್ಲ
ದಿರಿಸಿನ ವಿಚಾರಕ್ಕೆ ಬಂದಾಗ ಹೆಣ್ಣುಮಕ್ಕಳಿಗಿರುವಷ್ಟ ಆಯ್ಕೆ ಗಂಡು ಮಕ್ಕಳಿಗಿಲ್ಲ ಅನ್ನೋದು ನಿಜ. ಹುಡುಗೀರಾದ್ರೆ ಜೀನ್ಸ್, ಸ್ಕರ್ಟ್, ಸೀರೆ, ಕುರ್ತಿ ಏನು ಬೇಕಾದರೂ ಧರಿಸಬಹುದು. ಆದ್ರೆ ನ್ಯೂ ಟ್ರೆಂಡ್ ಅಂತ ಎಲ್ಲವನ್ನೂ ಧರಿಸೋದೇನೂ ಸರಿ. ಆದ್ರೆ ಸ್ಕಿನ್ ಟೈಟ್ ಬಟ್ಟೆ ಧರಿಸ್ತೀರಾ ? ಹಾಗಿದ್ರೆ ನೀವೀ ಲೇಖನ ಓದ್ಲೇಬೇಕು.
ಫ್ಯಾಶನ್ ಬಟ್ಟೆಗಳನ್ನು ಧರಿಸುವುದು ಕೆಟ್ಟ ವಿಷಯವಲ್ಲ, ಆದರೆ ಯಾವುದೇ ಪ್ರವೃತ್ತಿಯನ್ನು ಅನುಸರಿಸುವ ಮೊದಲು, ಅದರ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳುವುದು ಪ್ರಯೋಜನಕಾರಿಯಾಗಿದೆ. ಇತ್ತೀಚಿಗೆ ಟೈಟ್ ಫಿಟ್ ಡ್ರೆಸ್‌ಗಳನ್ನು ಧರಿಸುವ ಟ್ರೆಂಡ್ ಹೆಚ್ಚಾಗ್ತಿದೆ. ಟೈಟ್ ಟಾಪ್, ಲೆಗ್ಗಿಂಗ್ಸ್, ಪ್ಯಾಂಟ್, ಬ್ಲೌಸ್‌ಗಳನ್ನು ಧರಿಸುತ್ತಾರೆ. ನೀವೂ ಸಹ ಚರ್ಮಕ್ಕೆ ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಿದ್ದರೆ, ಅದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿರಿ. ಏಕೆಂದರೆ ತುಂಬಾ ಬಿಗಿಯಾದ ಬಟ್ಟೆಗಳು ನಿಮ್ಮ ಚರ್ಮ ಮತ್ತು ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತವೆ.
ಬಿಗಿಯಾದ ಬಟ್ಟೆಗಳನ್ನು (Tight dress) ಧರಿಸುವುದು ಯಾವಾಗಲೂ ಒಂದು ಟ್ರೆಂಡ್ ಆಗಿದೆ. ಮಹಿಳೆಯರಲ್ಲಿ (Woman) ಇದರ ಕ್ರೇಜ್ ಹೆಚ್ಚು. ಈ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದರ ಹಿಂದಿರುವ ಕಾರಣವೆಂದರೆ ಬೊಜ್ಜು. ಬಿಗಿಯಾದ ಬಟ್ಟೆಗಳನ್ನು ಧರಿಸಿದ ನಂತರ, ಮಹಿಳೆಯರು ತಮ್ಮ ನೋಟದ ಬಗ್ಗೆ ತುಂಬಾ ವಿಶ್ವಾಸ ಹೊಂದುತ್ತಾರೆ. ಅಂತರರಾಷ್ಟ್ರೀಯ ಲೆಗ್ಗಿಂಗ್ ದಿನ 2022 (International Legging Day) ಅನ್ನು ಪ್ರತಿ ವರ್ಷ ಅಕ್ಟೋಬರ್ 18 ರಂದು ಆಚರಿಸಲಾಗುತ್ತದೆ. ಇದು ಲೆಗ್ಗಿಂಗ್ ಧರಿಸುವ ಮಹಿಳೆಯರ ಬಗ್ಗೆ ಹೇಳುತ್ತದೆ. ಇದನ್ನು ಕೆಲಸದ ಸ್ಥಳದಿಂದ ಹಿಡಿದು ಜಿಮ್‌ಗೆ ತೆರಳುವವರೂ ಧರಿಸಬಹುದು. ಹೀಗಾಗಿಯೇ ಲೆಗ್ಗಿಂಗ್ಸ್ ಹಲವರ ಮೊದಲ ಆಯ್ಕೆಯಾಗಿದೆ.
ಸ್ಕಿನ್ನಿ ಜೀನ್ಸ್ ಹಾಕ್ತೀರಾ ? ಪ್ಯಾರಾಲಿಸಿಸ್‌ಗೂ ಕಾರಣವಾಗ್ಬೋದು ಜೋಕೆ !
ಸ್ಕಿನ್ ಫಿಟ್ ಬಟ್ಟೆ ಧರಿಸೋದ್ರಿಂದ ಆರೋಗ್ಯ ಸಮಸ್ಯೆ
ಮಹಿಳೆಯರು ಲೆಗ್ಗಿಂಗ್ಸ್ ಸೇರಿದಂತೆ ಸ್ಕಿನ್ ಟೈಟ್ ಬಟ್ಟೆಗಳಲ್ಲಿ ಧರಿಸುವುದರಿಂದ ಆರೋಗ್ಯಕ್ಕೆ (Health) ಅನೇಕ ರೀತಿಯಲ್ಲಿ ಹಾನಿಯಾಗುತ್ತದೆ. ಆದ್ದರಿಂದ ಯಾವಾಗಲೂ ಆರಾಮದಾಯಕವಾದ ಬಟ್ಟೆಗಳನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಹಾಗಿದ್ರೆ ಬಿಗಿಯಾದ ಬಟ್ಟೆ ಧರಿಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳೇನು ತಿಳಿಯೋಣ.
ಬೆನ್ನು ನೋವು: ಕಳಪೆ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಬೆನ್ನುನೋವಿಗೆ (Back pain) ಕಾರಣವಾಗಬಹುದು. ಬಿಗಿಯಾದ ಬಟ್ಟೆಯು ನಿಮ್ಮ ಸ್ನಾಯುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಇದು ಬೆನ್ನು, ಸೊಂಟ ಅಥವಾ ಕಿಬ್ಬೊಟ್ಟೆಯ ನೋವನ್ನು ಉಂಟುಮಾಡುತ್ತದೆ.
ಚರ್ಮದ ಸಮಸ್ಯೆಗಳು: ನೀವು ಬಿಗಿಯಾದ ಬಟ್ಟೆಗಳನ್ನು ಧರಿಸಿದಾಗ, ಅವು ನಿಮ್ಮ ದೇಹಕ್ಕೆ ಅಂಟಿಕೊಳ್ಳುತ್ತವೆ. ಕೆಲವೊಮ್ಮೆ ಇದು ಅನೇಕ ಚರ್ಮದ ಸಮಸ್ಯೆಗಳಿಗೆ (Skin problem) ಕಾರಣವಾಗುತ್ತದೆ. ಇದು ನಿಮ್ಮ ಚರ್ಮದಲ್ಲಿ ದದ್ದು ಮತ್ತು ತುರಿಕೆಗೆ ಕಾರಣವಾಗಬಹುದು. ಏಕೆಂದರೆ ಬಿಗಿಯಾದ ಬಟ್ಟೆಯಿಂದ ನಿಮ್ಮ ಚರ್ಮವು ಉಸಿರಾಡಲು ಕಷ್ಟವಾಗುತ್ತದೆ.
ಹಳೆ jeansಗೆ ಹೊಸ ಲುಕ್ ನೀಡಿ ಎಲ್ಲರ ಮುಂದೆ ಶೈನ್ ಆಗಿ
ವಿಪರೀತ ಬೆವರುವುದು: ಬೆವರುವುದು ದೇಹದ (Body) ಸಾಮಾನ್ಯ ಪ್ರಕ್ರಿಯೆಯಾಗಿದೆ, ಆದರೆ ಅತಿಯಾದ ಬೆವರುವಿಕೆಯು ನಿಮ್ಮ ದೇಹದ ನೀರನ್ನು ಕಸಿದುಕೊಳ್ಳಬಹುದು. ಬಾಡಿಯನ್ನು ಡಿಹೈಡ್ರೇಟ್ ಮಾಡಬಹುದು. ಹೀಗಾಗಿ, ಬಿಗಿಯಾದ ಬಟ್ಟೆಗಳನ್ನು ಧರಿಸದಿರುವುದು ಒಳ್ಳೆಯದು. ಏಕೆಂದರೆ ಅದು ಹೆಚ್ಚು ಬೆವರುವಿಕೆಗೆ (Sweat) ಕಾರಣವಾಗುತ್ತದೆ. ಕ್ರಮೇಣ ಇದು ಸೋಂಕನ್ನು ಉಂಟುಮಾಡುತ್ತದೆ.
ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ: ಬಿಗಿಯಾದ ಬಟ್ಟೆಯು ಚರ್ಮವನ್ನು ಕುಗ್ಗಿಸುತ್ತದೆ. ಇದರಿಂದಾಗಿ ರಕ್ತನಾಳಗಳಲ್ಲಿ ಹರಿಯುವ ರಕ್ತದ ಹರಿವು (Blood circulation) ಕ್ಷೀಣಿಸಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಹವು ಹೆಚ್ಚು ಆಯಾಸವನ್ನು ಅನುಭವಿಸಲು ಪ್ರಾರಂಭಿಸುತ್ತದೆ. ಇದು ಕ್ರಮೇಣ ಆರೋಗ್ಯ ಹದಗೆಡಲು ಕಾರಣವಾಗಬಹುದು.
ಉಬ್ಬಿರುವ ರಕ್ತನಾಳಗಳು: ಚರ್ಮದ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ದೇಹದ ರಕ್ತ ಪರಿಚಲನೆ ಹದಗೆಡುತ್ತದೆ. ಈ ಕಾರಣದಿಂದಾಗಿ ಚರ್ಮದ ಮೇಲೆ ನೀಲಿ ರಕ್ತನಾಳಗಳು ಕಾಣಿಸಿಕೊಳ್ಳುತ್ತವೆ, ಇದನ್ನು ವೈದ್ಯಕೀಯ ಭಾಷೆಯಲ್ಲಿ ಉಬ್ಬಿರುವ ರಕ್ತನಾಳಗಳು ಎಂದು ಕರೆಯಲಾಗುತ್ತದೆ.