ಉಕ್ರೇನ್(ಮಾ.04): ಉಕ್ರೇನಿನ ಮಾಡೆಲ್ ಒಬ್ಬಳು ವಿಶ್ವದಲ್ಲೇ ಅತೀ ದೊಡ್ಡ ಕೆನ್ನೆ ಹೊಂದಿರುವುದಾಗಿ ವಾದಿಸಿದ್ದಾಳೆ. ಇತ್ತೀಚೆಗಷ್ಟೇ ಆಕೆ ತನ್ನ ಹಳೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾಳೆ. ಇದರಲ್ಲಿ ಈ ಮಾಡೆಲ್ ಕಾಸ್ಮೆಟಿಕ್ ಸರ್ಜರಿಗಿಂತ ಮೊದಲು ಹೇಗಿದ್ದಳೆಂಬುವುದನ್ನು ನೋಡಬಹುದಾಗಿದೆ. 

ಅನಾಸ್ತಾಸಿಯಾ ಪೊಕ್ರೇಶಚುಕ್(Anastasia Pokreshchuk) ಇಂದು ತನ್ನ ಉಬ್ಬಿದ ಕೆನ್ನೆ ಹಾಗೂ ದೊಡ್ಡ ದೊಡ್ಡ ತುಟಿಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ. ದ ಸನ್ ವರದಿಯನ್ವಯ ಹಲವಾರು ಕಾಸ್ಮೆಟಿಕ್ ಸರ್ಜರಿಯಯಿಂದಾಗಿ ಹೀಗಾಗಿದೆ ಎನ್ನಲಾಗಿದೆ. 

32 ವರ್ಷದ ಅನಾಸ್ತಾಸಿಯಾ ಪೊಕ್ರೇಶಚುಕ್ ತನ್ನ ಲುಕ್ ಬದಲಾಯಿಸಲು 6 ವರ್ಷ ತಗುಲಿದೆ. ಈಕೆ ತನ್ನ ಮುಖ ಬದಲಾಯಿಸಲು 2,100 ಡಾಲರ್ ಅಂದರೆ ಸರಿ ಸುಮಾರು 1.5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ತನ್ನ ಈ ಫೋಟೋಗಳಿಂದಾಗಿಯೇ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

ತನ್ನ ಹೆಚ್ಚಿನ ಫೋಟೋಗಳಲ್ಲಿ ಅವರ ಗುಲಾಬಿ ಬಣ್ಣದ ಕೂದಲು, ಕಾಸ್ಮೆಟಿಕ್ ಲೆನ್ಸ್ ಹಾಗೂ ಮೇಕಪ್ ಕೂಡಾ ಇದೆ. ಆದರೀಗ ಈ ಮಾಡೆಲ್ ತಮ್ಮ ಹಳೇ ಫೋಟೋಗಳನ್ನೂ ಶೇರ್ ಮಾಡಿಕೊಳ್ಳಲಾರಂಭಿಸಿದ್ದಾರೆ. ಇದರಲ್ಲಿ ಅವರು ಸಂಪೂರ್ಣವಾಗಿ ಭಿನ್ನವಾಗಿ ಕಾಣಿಸುತ್ತಿದ್ದಾರೆ.