ಸಾವಿನ ವಿಷ್ಯದಲ್ಲಿ ಪುರುಷರೇ ಮುಂದು… ಮಹಿಳೆಯರ ಜೀವ ಗಟ್ಟಿ, ಆಯಸ್ಸು ಹೆಚ್ಚು
ಈಗಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಿದೆ. ಆದ್ರೆ ಈಗಾಗಲೇ 60 ವರ್ಷ ದಾಟಿದವರು ಗಟ್ಟಿಮುಟ್ಟಾಗಿದ್ದಾರೆ. ಅದ್ರಲ್ಲೂ ಮಹಿಳೆಯರು ಎಲ್ಲರಿಗಿಂತ ಸ್ಟ್ರಾಂಗ್. 60 ದಾಟಿದ ಮಹಿಳೆಯರು ನಿಶ್ಚಿಂತೆಯಿಂದ ಇನ್ನೊಂದಿಷ್ಟು ದಿನ ಬದುಕ್ಬಹುದು ಎನ್ನುತ್ತದೆ ಸ್ಟಡಿ.
ಮಹಿಳೆಯರೇ ಸ್ಟ್ರಾಂಗ್. ಅನೇಕ ಅಧ್ಯಯನ, ಸಮೀಕ್ಷೆಯಲ್ಲೂ ಇದು ಸಾಭೀತಾಗಿದೆ. ಕೆಲ ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿಂದ ಮಹಿಳೆಯರು ಬಳಲ್ತಾ ಇದ್ರೂ ಅವರು ಪುರುಷರಿಗಿಂತ ಗಟ್ಟಿ. ಪತ್ನಿ ಸಾವನ್ನಪ್ಪಿದಾಗ ಪತಿ ಅರ್ಧ ಸಾವನ್ನಪಿರುತ್ತಾನೆ. ಅದೇ ಪತಿ ಸಾವನ್ನಪ್ಪಿದ ಮೇಲೆ ಎಲ್ಲ ಕಷ್ಟವನ್ನು ನುಂಗಿ ಜೀವನ ನಡೆಸುವ ಶಕ್ತಿ ಪತ್ನಿಯಾದವಳಿಗಿದೆ. ಮಾನಸಿಕವಾಗಿ ಬಲಹೊಂದಿರುವ ಮಹಿಳೆಯರು, ಪುರುಷರಿಗೆ ಹೋಲಿಕೆ ಮಾಡಿದ್ರೆ ಹೆಚ್ಚು ವರ್ಷ ಬದುಕುತ್ತಾರೆ. ಇದು ಮತ್ತೊಮ್ಮೆ ಸಾಭೀತಾಗಿದೆ.
ಭಾರತ (India) ದ ಅನೇಕ ರಾಜ್ಯಗಳಲ್ಲಿ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಹೆಚ್ಚು ವರ್ಷ ಬದುಕುತ್ತಾರೆ ಎಂದು ವರದಿಯೊಂದು ಹೇಳಿದೆ. ರಾಜಸ್ಥಾನ, ಹರಿಯಾಣ, ಗುಜರಾತ್, ಉತ್ತರಾಖಂಡ, ಕೇರಳ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ 60 ವರ್ಷ ವಯಸ್ಸಿನ ಮಹಿಳೆಯರ ಜೀವಿತಾವಧಿ (Lifetime) 20 ವರ್ಷಗಳಿಗಿಂತ ಹೆಚ್ಚು ಎಂದು ಯುನೈಟೆಡ್ ನೇಷನ್ಸ್ ಇಂಡಿಯಾ ಏಜಿಂಗ್ ರಿಪೋರ್ಟ್ 2023ರಲ್ಲಿ ಹೇಳಿದೆ. ಸರಳ ಭಾಷೆಯಲ್ಲಿ ಹೇಳ್ಬೇಕೆಂದ್ರೆ 60 ವರ್ಷ ಮೇಲ್ಪಟ್ಟ ಮಹಿಳೆಯರು 19 ವರ್ಷ ಹೆಚ್ಚಿಗೆ ಬದುಕ್ತಾರಂತೆ.
ಯೋನಿ ಆರೋಗ್ಯಕ್ಕೆ ಗಮ್ಮಿ ಬಳಸೋದು ಎಷ್ಟು ಸೂಕ್ತ?
ವರದಿಯಲ್ಲಿ 60 ವರ್ಷ ವಯಸ್ಸು ದಾಟಿದ ಜನಸಂಖ್ಯೆ (Population) ಮತ್ತು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯ ಮೇಲೆ ಬೆಳಕು ಚೆಲ್ಲಲ್ಲಾಗಿದೆ. ಭಾರತದಲ್ಲಿ 60 ವರ್ಷ ಮೇಲ್ಪಟ್ಟ ಜನರು ಸರಾಸರಿ 18.3 ವರ್ಷ ಬದುಕುವ ನಿರೀಕ್ಷೆ ಮಾಡ್ಬಹುದು. ಅದೇ 60 ವರ್ಷ ದಾಟಿದ ಮಹಿಳೆಯರು 19 ವರ್ಷ ಹೆಚ್ಚಿಗೆ ಬದುಕ್ತಾರೆ. ಅದೇ ಪುರುಷರ ಜೀವಿತಾವದಿ 17.5 ವರ್ಷ ಹೆಚ್ಚಿರುತ್ತದೆ. ಅಂದ್ರೆ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಒಂದುವರೆ ವರ್ಷ ಹೆಚ್ಚಿಗೆ ಬದುಕಿರ್ತಾರೆ ಎಂದಾಯ್ತು.
2050ರ ಸುಮಾರಿಗೆ ವೃದ್ಧರ ಸಂಖ್ಯೆ ಈಗಿನ ಸಂಖ್ಯೆಗಿಂತ ಡಬಲ್ ಆಗುವ ಸಾಧ್ಯತೆಯಿದೆ. ಅಂದ್ರೆ ವೃದ್ಧರ ಸಂಖ್ಯೆ ಶೇಕಡಾ 20ಕ್ಕೆ ಬಂದು ತಲುಪಲಿದೆ. ಸದ್ಯ 60 ವರ್ಷ ಮೇಲ್ಪಟ್ಟ ವೃದ್ಧರ ಸಂಖ್ಯೆ ವಿಶ್ವದ ಇಡೀ ಜನಸಂಖ್ಯೆಯ ಶೇಕಡಾ 13.9ರಷ್ಟಿದೆ. ಇದು 2050ರ ಸುಮಾರಿಗೆ ಜನಸಂಖ್ಯೆಯ ಶೇಕಡಾ 22ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಭಾರತಕ್ಕೆ ಬಂದ್ರೆ 2022ರ ಮಾಹಿತಿ ಪ್ರಕಾರ, ಭಾರತದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 14.9 ಕೋಟಿ ಇದೆ. ಇದು ದೇಶದ ಜನಸಂಖ್ಯೆಯ ಶೇಕಡಾ 10.5ರಷ್ಟಾಗುತ್ತದೆ.
ಯಾವ ರಾಜ್ಯದ ಮಹಿಳೆಯರು ಹೆಚ್ಚು ಬದುಕ್ತಾರೆ? : ಈ ಹಿಂದೆ ಇದ್ರ ಬಗ್ಗೆಯೂ ಅಧ್ಯಯನ ನಡೆದಿದೆ. ಅಧ್ಯಯನದ ಪ್ರಕಾರ, ಮಧ್ಯಪ್ರದೇಶದ ಮಹಿಳೆಯರ ಜೀವಿತಾವಧಿ ಹೆಚ್ಚು ಎಂಬುದು ಗೊತ್ತಾಗಿದೆ. ಮಧ್ಯಪ್ರದೇಶದ ಜನರ ಅದ್ರಲ್ಲೂ ವಿಶೇಷವಾಗಿ ಮಹಿಳೆಯರ ಜೀವಿತಾವಧಿಯಲ್ಲಿ ಏರಿಕೆ ಕಂಡು ಬಂದಿದೆ. ಅವರ ಜೀವಿತಾವಧಿ 61 ವರ್ಷದಿಂದ 67 ವರ್ಷಕ್ಕೆ ಬಂದಿದೆ. 25 ವರ್ಷಗಳ ಹಿಂದೆ ಇಲ್ಲಿನ ಮಹಿಳೆಯರಿಗಿಂತ ಪುರುಷರು ಹೆಚ್ಚು ಕಾಲ ಬದುಕುತ್ತಿದ್ದರು. ಆದ್ರೀಗ ಇದು ಉಲ್ಟಾ ಆಗಿದೆ. ಮಧ್ಯಪ್ರದೇಶ ಮಹಿಳೆಯರು ಹೆಚ್ಚು ಒತ್ತಡ ತೆಗೆದುಕೊಳ್ಳೋದಿಲ್ಲ. ಅದೇ ಅವರ ಜೀವಿತಾವಧಿ ಹೆಚ್ಚಿಸಲು ಕಾರಣವೆಂದೂ ವರದಿಯಲ್ಲಿ ಹೇಳಲಾಗಿದೆ.
ಅಲರ್ಜಿ ಇರೋ ಈ ನಾರಿಗೆ ನೀರಲ್ಲಿ ಸ್ನಾನ ಮಾಡಿದ್ರೆ ರಕ್ತವೇ ಹರಿಯುತ್ತಂತೆ!
ಭಾರತೀಯರ ಸರಾಸರಿ ಜೀವಿತಾವಧಿ ಎಷ್ಟು? : ಭಾರತೀಯರ ಸರಾಸರಿ ಜೀವಿತಾವಧಿ 70 ವರ್ಷ. ಈ ಹಿಂದೆ ಅದು ತುಂಬಾ ಕಡಿಮೆಯಿತ್ತು. ಅದಕ್ಕೆ ಬಡತನ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮುಖ್ಯ ಕಾರಣ ಎನ್ನಲಾಗಿತ್ತು. ಆದ್ರೆ ಈಗ ಭಾರತೀಯರ ಜೀವಿತಾವಧಿಯಲ್ಲಿ ಏರಿಕೆಯಾಗಿದೆ. ಇನ್ನೊಂದು ಅಚ್ಚರಿ ವಿಷ್ಯವೆಂದ್ರೆ ಹಳ್ಳಿಯಲ್ಲಿ ಜೀವನ ನಡೆಸುವವರಿಗಿಂತ ಪಟ್ಟಣದಲ್ಲಿ ವಾಸಿಸುವರ ವಯಸ್ಸು ಹೆಚ್ಚು. ಒಳ್ಳೆ ವಾತಾವರಣ ಹಾಗೂ ನೆಮ್ಮದಿ ಜೀವನದ ಕಾರಣ ಹಳ್ಳಿಗರು ಹೆಚ್ಚು ವರ್ಷ ಬದುಕ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ರೆ ವರದಿ ಬೇರೆಯದನ್ನೇ ಹೇಳುತ್ತದೆ. ನಗರ ಪ್ರದೇಶದ ಮಹಿಳೆಯರ ಸರಾಸರಿ ವಯಸ್ಸು 73.2 ವರ್ಷಗಳು, ಗ್ರಾಮೀಣ ಮಹಿಳೆಯರ ವಯಸ್ಸು 68.4 ವರ್ಷಗಳು ಎಂದು ವರದಿ ಹೇಳಿದೆ.