ಅಲರ್ಜಿ ಇರೋ ಈ ನಾರಿಗೆ ನೀರಲ್ಲಿ ಸ್ನಾನ ಮಾಡಿದ್ರೆ ರಕ್ತವೇ ಹರಿಯುತ್ತಂತೆ!
ಭೂಮಿಯ ಮೇಲಿನ ಜನರು ಕೆಲವೊಂದು ಅಲರ್ಜಿಗಳಿಂದ ಬಳಲುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆಗೆ ನೀರಿನ ಅಲರ್ಜಿ ಇದೆ. ಆಕೆ ಸ್ನಾನ ಮಾಡಿದ್ರೆ ತಲೆಯಿಂದ ರಕ್ತ ಹರಿಯಲು ಪ್ರಾರಂಭಿಸುತ್ತದೆ; ಒಂದು ಗುಟುಕು ನೀರು ಕೂಡ ದೇಹ ಸೇರಿದ್ರೆ ವಿಷವಾಗುತ್ತೆ. ಏನಿದು ವಿಚಿತ್ರ ಕಾಯಿಲೆ ನೋಡೋಣಾ.
ಈ ಕಾಯಿಲೆ ಬಗ್ಗೆ ಕೇಳಿದ್ರೆ ನಿಮಗೆ ವಿಚಿತ್ರ ಅನಿಸಬಹುದು. ಆದರೆ ಇದು ನಿಜ. ಇದು ನೀರಿನ ಅಲರ್ಜಿಯಿಂದ (water allergy) ಬಳಲುತ್ತಿರುವ ಮಹಿಳೆಯ ಬಗ್ಗೆ ಮಾಹಿತಿ. ಕ್ಯಾಲಿಫೋರ್ನಿಯಾದ ಟೆಸ್ಸಾ ಹ್ಯಾನ್ಸೆನ್-ಸ್ಮಿತ್ನ 25 ವರ್ಷದ ಮಹಿಳೆಗೆ ನೀರಿನ ಅಲರ್ಜಿ ಇದೆ. ಕೇವಲ ನೀರು ಮಾತ್ರವಲ್ಲದೆ ದೇಹದ ಮೇಲೆ ಕಣ್ಣೀರು ಸಹ ಬೀಳುವ ಹಾಗಿಲ್ಲ ಅಥವಾ ಬೆವರು ಬಂದ್ರೂನು ದೇಹದ ಮೇಲೆ ಗಾಯಗಳಾಗೋ ವಿಚಿತ್ರ ಕಾಯಿಲೆ ಇದಾಗಿದೆ.
ನಮ್ಮಲ್ಲಿ ಅನೇಕರು ವಿಭಿನ್ನ ವಿಷಯಗಳಿಗೆ ಅಲರ್ಜಿ ಹೊಂದಿರುತ್ತಾರೆ. ಕೆಲವು ಜನರಿಗೆ ಧೂಳು, ಕಡಲೆಕಾಯಿ, ಹಸುವಿನ ಹಾಲು, ಬಟ್ಟೆಗಳು ಅಲರ್ಜಿ ಮತ್ತು ಕೆಲವು ಜನರು ಔಷಧಿಗೆ ಅಲರ್ಜಿ ಹೊಂದಿರುತ್ತಾರೆ. ಆದರೆ ನೀರಿನ ಅಲರ್ಜಿಯ ಬಗ್ಗೆ ನೀವು ಕೇಳಿದ್ದೀರಾ? ಯಾರಾದರೂ ನಿಜವಾಗಿಯೂ ನೀರಿಗೆ ಅಲರ್ಜಿ ಹೊಂದಬಹುದೇ? ಇದು ಯಾರೂ ಊಹಿಸದ ಅಪರೂಪದ ಸ್ಥಿತಿ.
Image: Getty Images
ನೀರು ನಮ್ಮ ಜೀವನದ ಮುಖ್ಯ ಭಾಗ. ನೀರಿಲ್ಲದೆ ಬದುಕುವ ಬಗ್ಗೆ ನಾವು ಯೋಚಿಸಲು ಸಹ ಸಾಧ್ಯವಿಲ್ಲ. ಆದರೆ ಕ್ಯಾಲಿಫೋರ್ನಿಯಾದ ಫ್ರೆಸ್ನೊದಲ್ಲಿ ವಾಸಿಸುವ 25 ವರ್ಷದ ಟೆಸ್ಸಾ ಹ್ಯಾನ್ಸೆನ್-ಸ್ಮಿತ್ ಗೆ ನೀರನ್ನು ಮುಟ್ಟಲು ಸಹ ಸಾಧ್ಯವಿಲ್ಲ. ಏಕೆಂದರೆ ಅವರಿಗೆ ನೀರಿನ ಅಲರ್ಜಿ ಸಮಸ್ಯೆ ಇದೆ. ಅವರು ನೀರಿನ ಸಂಪರ್ಕಕ್ಕೆ ಬಂದ ತಕ್ಷಣ, ಅವರ ಚರ್ಮದ ಮೇಲೆ ಕಲೆಗಳು, ಗಾಯಗಳು ಉಂಟಾಗುತ್ತೆ. ಟೆಸ್ಸಾಳ ಸಮಸ್ಯೆಯೆಂದರೆ ಅವಳು ನೀರನ್ನು ಬಳಸೋದಕ್ಕೆ ಸಾಧ್ಯಾನೆ ಇಲ್ಲ, ಅಷ್ಟೇ ಅಲ್ಲ ದೇಹದಿಂದ ಹೊರಬರುವ ಬೆವರು ಮತ್ತು ಕಣ್ಣೀರು ಸಹ ಆಕೆಗೆ ಸಮಸ್ಯೆಯನ್ನುಂಟು ಮಾಡುತ್ತೆ. ದೇಹದ ಮೇಲೆ ಬೆವರು ಬಿದ್ದಲ್ಲಿ, ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ. ಯಾಕೀ ಸಮಸ್ಯೆ, ಈ ಅಪಾಯಕಾರಿ ರೋಗದ ಬಗ್ಗೆ ತಿಳಿಯೋಣ.
ಸ್ನಾನ ಮಾಡಿದ್ರೆ ಗಾಯಗಳಾಗುತ್ತೆ
ನೀರು ನಮಗೆ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ತಿಳಿದಿದೆ. ಮಾನವ ದೇಹದ ಸುಮಾರು 60 ಪ್ರತಿಶತ ನೀರಿನಿಂದ ಮಾಡಲ್ಪಟ್ಟಿದೆ. ಆದರೆ ನೀರು ಒಬ್ಬ ವ್ಯಕ್ತಿಯ ಜೀವನದ ಶತ್ರುವಾದರೆ. ಟೆಸ್ಸಾಗೆ ಅಕ್ವಾಜೆನಿಕ್ ಉರ್ಟಿಕೇರಿಯಾ ಎಂದು ಕರೆಯಲ್ಪಡುವ ಗಂಭೀರ ಕಾಯಿಲೆ ಇದೆ. ಆಕೆ ನೀರಲ್ಲಿ ಸ್ನಾನ ಮಾಡಿ ಬಂದ್ರೆ, ಆಕೆಯ ದೇಹದ ಮೇಲೆ ದೊಡ್ಡ ಮತ್ತು ಆಳವಾದ ಗಾಯಗಳು (deep wounds) ಕಾಣಿಸಿಕೊಳ್ಳುತ್ತಂತೆ. ತಲೆಗೆ ಸ್ನಾನ ಮಾಡಿದ್ರೆ ನೆತ್ತಿಯಿಂದ ರಕ್ತಾನೆ ಸುರಿಯುತ್ತಂತೆ.
ಅಕ್ವಾಜೆನಿಕ್ ಉರ್ಟಿಕೇರಿಯಾ ಎಂದರೇನು?
ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಅಕ್ವಾಜೆನಿಕ್ ಉರ್ಟಿಕೇರಿಯಾ (aquagenic urticaria) ಅಪರೂಪದ ಸ್ಥಿತಿಯಾಗಿದ್ದು, ಚರ್ಮವು ನೀರಿನ ಸಂಪರ್ಕಕ್ಕೆ ಬಂದ ನಂತರ, ಉರ್ಟಿಕೇರಿಯಾದ ಸಮಸ್ಯೆ ಪ್ರಾರಂಭವಾಗುತ್ತದೆ. ಇಂತಹ ಅಲರ್ಜಿಗಳು ನೀರಿನೊಂದಿಗೆ ಏಕೆ ಸಂಭವಿಸುತ್ತವೆ ಎಂದು ಹೇಳಲು ಸಾಧ್ಯವಾಗಿಲ್ಲ. ಈ ರೋಗ ಹೆಚ್ಚಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಎಬಿಸಿ ವರದಿಯ ಪ್ರಕಾರ, ವಿಶ್ವಾದ್ಯಂತ ಅಂದಾಜು 250 ಜನರು ಅಕ್ವಾಜೆನಿಕ್ ಉರ್ಟಿಕೇರಿಯಾ ಸಮಸ್ಯೆ ಹೊಂದಿದ್ದಾರೆ. ಈ ಕಾರಣದಿಂದಾಗಿ, ಟೆಸ್ಸಾ ನೀರನ್ನು ಮುಟ್ಟಿದಾಗಲೆಲ್ಲಾ, ಅವಳು ಮೈಗ್ರೇನ್ ಶುರವಾಗುತ್ತೆ. ನೀರಿನ ಸಂಪರ್ಕಕ್ಕೆ ಬಂದ ಕೆಲವೇ ನಿಮಿಷಗಳಲ್ಲಿ, ಅವರಿಗೆ ಜ್ವರ ಕೂಡ ಬರುತ್ತಂತೆ.
ನೀರಿನ ಬದಲು ಹಾಲು ಕುಡಿಯುತ್ತಾರೆ.
8ನೇ ವಯಸ್ಸಿನಿಂದ, ಟೆಸ್ಸಾಗೆ ಈ ಅಲರ್ಜಿ ಇರುವುದು ಪತ್ತೆಯಾಯಿತು, ಇದು ಪ್ರೌಢಾವಸ್ಥೆಯವರೆಗೆ ಹೆಚ್ಚಾಗುತ್ತಾ ಬಂದಿದೆ ಎಂದು ಪೀಪಲ್ ನಿಯತಕಾಲಿಕ ವರದಿ ಮಾಡಿದೆ. ಈ ಅಲರ್ಜಿಯಿಂದಾಗಿ, ಅವಳು ನೀರು ಕುಡಿಯಲು ಸಹ ಸಾಧ್ಯವಾಗಲಿಲ್ಲ. ಒಂದು ಗುಟುಕು ನೀರು ಕೂಡ ಅವರಿಗೆ ವಿಷವಾಗಿ ಪರಿಣಮಿಸಿತ್ತು. ಹೆಚ್ಚು ನೀರಿನ ಅಂಶ ಇರುವ ಹಣ್ಣು ತರಕಾರಿ ತಿಂದ್ರೂ ದೇಹದಲ್ಲಿ ಕಿರಿ ಕಿರಿ ಉಂಟಾಗುತ್ತೆ. ಇದಲ್ಲದೆ, ಸ್ನಾಯುಗಳಲ್ಲಿ ಆಯಾಸ ಮತ್ತು ವಾಂತಿ ಮೊದಲಾದ ಸಮಸ್ಯೆ ಸಹ ಉಂಟಾಗುತ್ತೆ. ಅದಕ್ಕಾಗಿಯೇ ಇವರು ನೀರಿನ ಬದಲು ಹಾಲು ಕುಡಿಯುತ್ತಾರಂತೆ.
ಹೇಗೆ ಸ್ನಾನ ಮಾಡ್ತಾರೆ?
ಟೆಸ್ಸಾ ಅವರು 5 ನಿಮಿಷಗಳಿಗಿಂತ ಹೆಚ್ಚು ಕಾಲ ಶವರ್ ಅಡಿಯಲ್ಲಿ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಪರಿಸ್ಥಿತಿ ಹೀಗಿರೋವಾಗ ಸ್ನಾನ ಮಾಡೋದು ದೂರದ ಮಾತು. ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಈಗ ನಾನು ನನ್ನ ದೇಹವನ್ನು ಒದ್ದೆ ವೈಪ್‌ಗಳಿಂದ (wet wipes) ಸ್ವಚ್ಛಗೊಳಿಸುತ್ತೇನೆ ಎಂದು ಹೇಳಿದರು. ಆದಾಗ್ಯೂ, ಹಾಗೆ ಮಾಡಿದ ನಂತರವೂ, ಅವರು ಸಾಕಷ್ಟು ನೋವನ್ನು ಅನುಭವಿಸುತ್ತಾರಂತೆ..
ಹೆವಿ ವ್ಯಾಯಾಮ ಸಾಧ್ಯವಿಲ್ಲ
ಈ ಕಾಯಿಲೆ ಇರುವ, ಟೆಸ್ಸಾಗೆ ಜಿಮ್ಮಿಂಗ್ ಅಥವಾ ಯಾವುದೇ ಭಾರವಾದ ವ್ಯಾಯಾಮ ಮಾಡಲು ಸಾಧ್ಯವಿಲ್ಲ.ಹಾಗಾಗಿ ಇವರು ಸಾಧ್ಯವಾದಷ್ಟು ಹೆವಿ ವರ್ಕೌಟ್ ಮಾಡೋದನ್ನೂ ತಪ್ಪಿಸುತ್ತಾರಂತೆ. ಯಾಕಂದ್ರೆ ಹೆವಿ ವರ್ಕೌಟ್‌ನಿಂದಾಗಿ ದೇಹ ಬೆವರುತ್ತದೆ. ದೇಹ ಬೆವರಿದರೆ ಮತ್ತೆ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಆಕೆ ದೇಹದ ಬೆವರಿನ ವಾಸನೆ ನಿವಾರಿಸಲು ಡಿಯೋಡ್ರಂಟ್ ಬಳಕೆ ಮಾಡ್ತಾರಂತೆ.
ಡೀಹೈಡ್ರೇಶನ್ ನಿಂದ ಮತ್ತಷ್ಟು ಅನಾರೋಗ್ಯ
ಸಮಯ ಕಳೆದಂತೆ ಈ ರೋಗ ತುಂಬಾ ಅಪಾಯಕಾರಿಯಾಗುತ್ತಾ ಬರುತ್ತೆ.ಕೊರೋನಾ ನಂತರ ಟೆಸ್ಸಾ ಹೆಚ್ಚಾಗಿ ಮನೆಯಲ್ಲಿಯೇ ಉಳಿಯುತ್ತಾರಂತೆ. ಆದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣ ಉಂಟಾಗುತ್ತೆ. ಇದರಿಂದಾಗಿ ಅವರಿಗೆ ಇಸ್ಕೆಮಿಕ್ ಕೊಲೈಟಿಸ್ ಕಾಯಿಲೆಯೂ ಆವರಿಸಿತು. ಮಾಯೋ ಕ್ಲಿನಿಕ್ ಪ್ರಕಾರ, ಈ ಸ್ಥಿತಿಯಲ್ಲಿ, ದೊಡ್ಡ ಕರುಳಿನ ಭಾಗದಲ್ಲಿ ರಕ್ತಸ್ರಾವವು ತಾತ್ಕಾಲಿಕವಾಗಿ ಹೆಪ್ಪು ಗಟ್ಟಲು ಪ್ರಾರಂಭಿಸಿತು. ಇದಕ್ಕಾಗಿ ಅವರು ಆಸ್ಪತ್ರೆಗೂ ದಾಖಲಾಗಿದ್ದರು. ಇದು ರೋಗಿಯ ಜೀವನವನ್ನು ಎಂದಿಗೂ ಗುಣಪಡಿಸದ ಮತ್ತು ಬದಲಾಯಿಸದ ರೋಗ. ಇದು ದಿನದಿಂದ ದಿನಕ್ಕೆ ವ್ಯಕ್ತಿಯ ಆರೋಗ್ಯವನ್ನು ಕುಗ್ಗಿಸುತ್ತಾ ಸಾಗುತ್ತೆ.