World Menstrual hygiene day : ಈ ದಿನದ ಮಹತ್ವ ಹಾಗೂ ಪ್ರಾಮುಖ್ಯತೆ ಏನು ಗೊತ್ತಾ?
ಮೇ 28ರಂದು ಜಗತ್ತಿನಾದ್ಯಂತ ಮುಟ್ಟಿನ ನೈರ್ಮಲ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದರೆ, ಈ ದಿನದ ಮಹತ್ವವೇನು ಹಾಗೂ ಈ ದಿನದ ಇತಿಹಾಸ ಏನು ಎಂಬ ಕುತೂಹಲ ಇರಬೇಕಲ್ಲವೇ..
ಮುಟ್ಟಿನ ನೈರ್ಮಲ್ಯ ದಿನದ ಕುರಿತಾಗಿ ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..
1. ಮೇ 28 ಏಕೆ?
ಜರ್ಮನ್ ಲಾಭರಹಿತ ಸಂಸ್ಥೆ (Non profit Organization) ಮತ್ತು ಮುಟ್ಟಿನ ನೈರ್ಮಲ್ಯ ದಿನದ ಸಂಸ್ಥಾಪಕ ವಾಶ್ ಯುನೈಟೆಡ್ ಪ್ರಕಾರ, ಸಾಮಾನ್ಯವಾಗಿ ಹೆಣ್ಣುಮಕ್ಕಳಲ್ಲಿ ಋತುಚಕ್ರವು (Peropds) ಸರಾಸರಿ 28 ದಿನಗಳ ಅಂತರದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಸರಾಸರಿಯಾಗಿ, ಮಹಿಳೆಯರು ಮತ್ತು ಹುಡುಗಿಯರು ತಿಂಗಳಿಗೆ 5 ದಿನಗಳವರೆಗೆ ಮುಟ್ಟಾಗಿರುತ್ತರೆ. ಆದ್ದರಿಂದ, ಈ ದಿನವನ್ನು ಗುರುತಿಸಲು 28-5 ಅಥವಾ ಮೇ 28 ಅನ್ನು ಆಯ್ಕೆ ಮಾಡಲಾಗಿದೆ.
2. ಈ ದಿನದ ಇತಿಹಾಸ (History)
ವಾಶ್ ಯುನೈಟೆಡ್ (WASH United) ಮೇ 2013 ರಲ್ಲಿ ಋತುಚಕ್ರದ ನೈರ್ಮಲ್ಯ (Hygiene) ನಿರ್ವಹಣೆಗಾಗಿ ಜಾಗತಿಕ ದಿನದ ಕ್ರಿಯೆಯ ಕಲ್ಪನೆಯೊಂದಿಗೆ ಬಂದಿತು. ಸಂಸ್ಥೆಯು ನೀರನ್ನು ಪರೀಕ್ಷಿಸಲು ಸಾಮಾಜಿಕ ಮಾಧ್ಯಮದಲ್ಲಿ 28-ದಿನಗಳ ಅಭಿಯಾನವನ್ನು ನಡೆಸಿತು. ಹಾಗೂ ಇದರ ಕುರಿತಾಗಿ ಇತರ ಸಂಸ್ಥೆಗಳು ಆಸಕ್ತಿ ಹೊಂದಿದೆಯೇ ಎಂದು ನೋಡಿದರು. ಪ್ರಪಂಚದಾದ್ಯಂತದ ಹಲವಾರು ಸಂಸ್ಥೆಗಳಿಂದ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆಯು ಜಾಗತಿಕ (Global) ದಿನವನ್ನು ರಚಿಸುವ ಇವರ ಆಲೋಚನೆಯನ್ನು ಪ್ರೇರೇಪಿಸಿತು (Support). ಅದು ಪ್ರಪಂಚದಾದ್ಯಂತ ಮುಟ್ಟಿನ ನೈರ್ಮಲ್ಯ ನಿರ್ವಹಣೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ತಮ್ಮ ಧ್ವನಿಯನ್ನು ಒಟ್ಟುಗೂಡಿಸಲು ಅನುವು ಮಾಡಿಕೊಡುವ ದಿನವಾಗಿ ಹೊರಹೊಮ್ಮಿತು.
ಭಾರತದಲ್ಲಿ ಇನ್ನೂ ಮುಟ್ಟಿನ ಬಗ್ಗೆ ಮಿಥ್, ತೊಲಗುತ್ತೆ ಯಾವಾಗ?
3. ಮುಟ್ಟಿನ ನೈರ್ಮಲ್ಯ ದಿನದ ಪ್ರಾಮುಖ್ಯತೆ
ಮುಟ್ಟಿನ ನೈರ್ಮಲ್ಯದ ಕುರಿತಾಗಿ ಜನರಲ್ಲಿ ಸರಿಯಾದ ಶಿಕ್ಷಣ (Education) ಇಲ್ಲದಿರುವ ಕಾರಣದಿಂದಾಗಿ ಮಹಿಳೆಯರು ನಿರಂತರ ನಿಷೇಧಗಳು ಮತ್ತು ಕಳಂಕ, ಸೀಮಿತ ಪ್ರವೇಶ ಮತ್ತು ಕಳಪೆ ನೈರ್ಮಲ್ಯ ಮೂಲಸೌಕರ್ಯಗಳು ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯಗಳು ಎದುರಿಸಬೇಕಾಗಿತ್ತು. ಇದು ಹೆಣ್ಣುಮಕ್ಕಳ ಶೈಕ್ಷಣಿಕ ಅವಕಾಶಗಳು, ಆರೋಗ್ಯ (Health) ಮತ್ತು ಒಟ್ಟಾರೆ ಸಾಮಾಜಿಕ ಸ್ಥಾನಮಾನವನ್ನು (Social status) ದುರ್ಬಲಗೊಳಿಸುತ್ತದೆ. ಹಾಗಾಗಿ ಹೆಣ್ಣುಮಕ್ಕಳು ನೈರ್ಮಲ್ಯದ ಕುರಿತು ತಿಳುವಳಿಕೆ ಹೊಂದಿರುವ ಅವಶ್ಯಕತೆ ಇದೆ ಎಂಬುದಾಗಿ ವಾಶ್ ಯುನೈಟೆಡ್ ಹೇಳುತ್ತದೆ.
ಈಗಿರುವ ಪರಿಸ್ಥಿತಿಯಲ್ಲಿ ಇಂತಹ ಒಂದು ದಿನವನ್ನು ಆಚರಿಸುವ ಮೂಲಕ ಮಹಿಳೆಯರು ಮತ್ತು ಹುಡುಗಿಯರು ಎದುರಿಸುವ ಸಮಸ್ಯೆಗಳನ್ನು ಬೆಳಕಿಗೆ ತರುವ ಮೂಲಕ ಅವರಿಗೆ ಧೈರ್ಯ ನೀಡಬೇಕು. ಹಾಗೂ ಹೆಣ್ಣುಮಕ್ಕಳು ಅವರ ಸಮಸ್ಯೆಗಳ ಕುರಿತು ಮೌನ (Silence) ಮುರಿಯಬೇಕು. ಈ ಎಲ್ಲಾ ಸವಾಲುಗಳ (Challenges) ಸಾಧನೆಗಾಗಿ ಇಂತಹ ಒಂದು ದಿನದ ಅಗತ್ಯತೆ ಇದೆ ಎಂದು ಈ ದಿನದ ಪ್ರಾಮುಖ್ಯತೆಯನ್ನು ಹೇಳಲಾಗುತ್ತದೆ.
Women Health: ನಾರಿಗೆ ಹೆಚ್ಚಾಗ್ತಿದೆ ಒತ್ತಡ – ಹತ್ತಿರವಾಗ್ತಿದೆ ಸಾವು
4. ಈ ದಿನದ ಮಹತ್ವ
ಮುಟ್ಟಿನ ನೈರ್ಮಲ್ಯ ದಿನದೊಂದಿಗೆ, ವಾಶ್ ಯುನೈಟೆಡ್ ಮಾತ್ರವಲ್ಲದೆ, ಹಲವಾರು ಸಂಸ್ಥೆಗಳು (Organisation) ಮತ್ತು ಕಾರ್ಯಕರ್ತರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, 2030 ರ ವೇಳೆಗೆ ಯಾವುದೇ ಮಹಿಳೆ ಅಥವಾ ಹುಡುಗಿ ಋತುಚಕ್ರದ ಕಾರಣದಿಂದ ತಡೆಹಿಡಿಯಲ್ಪಡದೆ ಇರುವ ಜಗತ್ತನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದಾರೆ. ಪ್ರತಿ ಮಹಿಳೆ (Wmen) ಮತ್ತು ಹೆಣ್ಣು ತನ್ನ ಮುಟ್ಟನ್ನು ಸುರಕ್ಷಿತವಾಗಿ (Safe), ನೈರ್ಮಲ್ಯವಾಗಿ, ಆತ್ಮವಿಶ್ವಾಸದಿಂದ ಮತ್ತು ನಾಚಿಕೆ (Shame) ಇಲ್ಲದೆ ನಿರ್ವಹಿಸಲು ಸಬಲರಾಗಬೇಕು ಎಂಬುದು ಈ ಸಂಸ್ಥೆಗಳ ಗುರಿಯಾಗಿದೆ.
ಪ್ರತಿಯೊಂದು ಸಣ್ಣ ಪುಟ್ಟ ವಿಚಾರಗಳಲ್ಲಿಯೂ ನೈರ್ಮಲ್ಯ ಉಳಿಸಿಕೊಳ್ಳುವುದು ಬಹಳ ಮುಖ್ಯ ಅದರಲ್ಲಿಯೂ ಮುಟ್ಟಿನ ವಿಚಾರದಲ್ಲಿ ನೈರ್ಮಲ್ಯದ ಕಡೆಗೆ ಹೆಚ್ಚಿನ ಕಾಳಜಿಯ ಅಗತ್ಯ ಇದೆ. ಇದರ ಪ್ರಾಮುಖ್ಯತೆ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿ ಉಳಿಯದೆ ಇರಲಿ.