30 ವರ್ಷವಾದ್ರೂ ಮದ್ವೆಯಾಗದಿದ್ರೆ ಮಾಸಿಕ ಒಂದೂವರೆ ಲಕ್ಷ ರೂ. ಹಣ: ಪ್ರತ್ಯೇಕ ಮೆಟ್ರೊ, ಕ್ಲಬ್, ಬೀಚ್!
30 ವರ್ಷವಾದ್ರೂ ಮದ್ವೆಯಾಗದಿದ್ರೆ ಮಾಸಿಕ ಒಂದೂವರೆ ಲಕ್ಷ ರೂ. ಹಣ: ಪ್ರತ್ಯೇಕ ಮೆಟ್ರೊ, ಕ್ಲಬ್, ಬೀಚ್! ಮಹಿಳೆಯರಿಗಾಗಿ ಇಷ್ಟೊಂದು ಸೌಲಭ್ಯ ಎಲ್ಲಿ ಅಂತೀರಾ? ಇಲ್ಲಿದೆ ನೋಡಿ ಡಿಟೇಲ್ಸ್
30 ವರ್ಷವಾದ್ರೂ ಮದ್ವೆಯಾಗಿಲ್ವಾ? ಹಾಗಿದ್ರೆ ಹೆಣ್ಣುಮಕ್ಕಳಿಗೆ ಸಿಗಲಿದೆ ಪ್ರತಿ ತಿಂಗಳೂ ಒಂದೂವರೆ ಸಾವಿರ ಡಾಲರ್ ಹಣ, ಅಂದ್ರೆ ಸುಮಾರು ಒಂದೂವರೆ ಲಕ್ಷ ರೂಪಾಯಿ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಮೆಟ್ರೊ, ಕ್ಲಬ್, ಬೀಚ್.... ಇನ್ನು ಏನೇನೋ... ಇಷ್ಟೆಲ್ಲಾ ಸೌಲಭ್ಯ ಇರೋದು ಎಲ್ಲಿ ಅಂತೀರಾ? ಅದು ದುಬೈನಲ್ಲಂತೆ! ಹೌದು. ದುಬೈನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಇಷ್ಟೊಂದು ಸೌಲಭ್ಯ ಇದೆ ಎನ್ನುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮುಸ್ಲಿಂ ರಾಷ್ಟ್ರವಾಗಿರುವ ದುಬೈನ ಕಾನೂನಿನ ಬಗ್ಗೆ ಎಲ್ಲರಿಗೂ ತಿಳಿದದ್ದೇ ಬಿಡಿ. ಇಲ್ಲಿ ಅಪರಾಧ ಮಾಡಲು ಭಯಪಡುವಂಥ ಕಠಿಣ ಕಾನೂನುಗಳು ಚಾಲ್ತಿಯಲ್ಲಿವೆ. ಆದರೆ ಇದೇ ವೇಳೆ ಹೆಣ್ಣು ಮಕ್ಕಳ ರಕ್ಷಣೆಗೆ ದುಬೈನಲ್ಲಿ ಏನೆಲ್ಲಾ ಸೌಲಭ್ಯಗಳು ಇವೆ ಎಂದು ಈ ವಿಡಿಯೋದಲ್ಲಿ ತೋರಿಸಲಾಗಿದೆ.
30 ವರ್ಷ ವಯಸ್ಸಾಗಿದ್ರೂ ಮದುವೆಯಾಗದಿದ್ದರೆ ಮಾಸಿಕ ಹಣ, ಬೀಚ್, ಕ್ಲಬ್ ಮಾತ್ರವಲ್ಲದೇ ಹೆಣ್ಣು ಮಕ್ಕಳಿಗಾಗಿಯೇ ಫ್ಯಾಷನ್ ಷೋಗಳೂ ಇವೆ. ಇಲ್ಲಿ ಎಲ್ಲಿಯೂ ಗಂಡಸರಿಗೆ ಅವಕಾಶ ಇಲ್ಲ. ಗಂಡಸರಿಗೆ ನೋ ಎಂಟ್ರಿ. ಇದು ಹೆಣ್ಣು ಮಕ್ಕಳಿಗೆ ದುಬೈನಲ್ಲಿ ಕೊಟ್ಟಿರುವ ಸ್ವಾತಂತ್ರ್ಯ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಹೆಣ್ಣು ಮಕ್ಕಳು ಖುಷಿ ಪಡುತ್ತಿದ್ದಾರೆ ಎಂದುಕೊಂಡರೆ ಅದು ತಪ್ಪು. ಕಮೆಂಟ್ ಬಾಕ್ಸ್ ತುಂಬೆಲ್ಲಾ ನೆಗೆಟಿವ್ ಕಮೆಂಟ್ಗಳೇ ತುಂಬಿ ಹೋಗಿವೆ. ಇದು ಸ್ವಾತಂತ್ರ್ಯ ಅಲ್ಲ, ಹೆಣ್ಣು ಮಕ್ಕಳಿಗೆ ಬಂಗಾರದ ಪಂಜರ ಎಂದೇ ಬಹುತೇಕ ಮಂದಿ ಹೇಳುತ್ತಿದ್ದಾರೆ. ಇಸ್ಲಾಂ ರಾಷ್ಟ್ರವಾಗಿರುವ ದುಬೈನಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಿಗಲು ಸಾಧ್ಯವೇ ಇಲ್ಲ ಎನ್ನುವುದು ನೆಟ್ಟಿಗರ ಅಭಿಮತ.
ಕಣ್ಣೆದುರೇ ಅಣ್ಣನನ್ನು ಗುಂಡಿಕ್ಕಿ ಕೊಂದರು... 5 ಸಾವಿರ ಅನಾಥ ಶವಗಳಿಗೆ ಮುಕ್ತಿ ತೋರಿದ ಯುವತಿಯ ಕಥೆ ಕೇಳಿ...
ದುಬೈನಲ್ಲಿ ವಾಸಿಸುತ್ತಿರುವ ಕೆಲವು ಮಹಿಳೆಯರು ಕೂಡ ಈ ವಿಡಿಯೋದಲ್ಲಿಕಮೆಂಟ್ ಮಾಡಿದ್ದು, ಇದು ಸಂಪೂರ್ಣ ಸುಳ್ಳು ಎಂದಿದ್ದಾರೆ. ಗಂಡನಿಂದ ಕಿರುಕುಳ ಅನುಭವಿಸುತ್ತಿದ್ದರೂ ಹೊರಗೆ ಬರಲಾರದಂಥ ಘನಘೋರ ಬದುಕನ್ನು ನಡೆಸುತ್ತಿರುವ ಮಹಿಳೆಯರು ಇದ್ದಾರೆ. ಈ ವಿಡಿಯೋದಲ್ಲಿ ತೋರಿಸುತ್ತಿರುವುದು ಬೂಟಾಟಿಕೆ. ಇಂಥ ಸೌಲಭ್ಯಗಳು ಇದ್ದರೂ ಅದು ಶ್ರೀಮಂತರಿಗೆ ಇದ್ದರಿಬಹುದು. ಆದರೆ ಬಹುತೇಕ ಮಹಿಳೆಯರ ಬದುಕು ಇಲ್ಲಿ ನರಕ ಎಂದು ಬರೆದುಕೊಂಡಿದ್ದಾರೆ. ಜಗತ್ತಿಗೆ ತಮ್ಮ ರಾಷ್ಟ್ರದ ಬಗ್ಗೆ ತೋರಿಸಿಕೊಳ್ಳಲು, ಉತ್ಪ್ರೇಕ್ಷೆಯಾಗಿ ಈ ವಿಡಿಯೋ ಮಾಡಲಾಗಿದೆ ಎಂದು ಹೇಳಲಾಗಿದೆ.
ಆದರೆ ಈ ವಿಡಿಯೋ ನೋಡಿದ ಭಾರತದ ಕೆಲವು ಮಹಿಳೆಯರು ಮಾತ್ರ, ತಾವು ಭಾರತ ಬಿಟ್ಟು ದುಬೈಗೆ ಹೋಗಿ ನೆಲೆಸುವುದಾಗಿ ಹೇಳಿದ್ದಾರೆ. ಭಾರತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆಗಳ ಸುರಿಮಳೆಯೇ ಆಗುತ್ತಿದ್ದು, ಒಮ್ಮೆ ಭಾರತ ಬಿಟ್ಟು ಹೋಗಿ ನೋಡಿ, ಆಮೇಲೆ ಗೊತ್ತಾಗತ್ತೆ ನಿಮ್ಮ ಅವಸ್ಥೆ ಎಂದಿದ್ದಾರೆ. ಭಾರತದಂಥ ಸುರಕ್ಷಿತ ದೇಶ ಯಾವುದೇ ಧರ್ಮದವರಿಗೂ ಬೇರೆಡೆ ಇಲ್ಲ. ಇಂಥ ವಿಡಿಯೋಗಳನ್ನು ನೋಡಿ ಆಸೆ ಪಟ್ಟರೆ ಅಷ್ಟೇ ಕಥೆ ಎನ್ನುತ್ತಿದ್ದಾರೆ. ಬಂಗಾರದ ಪಂಜರ ಬೇಕು ಎನ್ನುವವರು ಭಾರತ ಬಿಟ್ಟು ಹೋಗಿ ನೋಡಿ ಎಂದೆಲ್ಲಾ ಕಮೆಂಟ್ ಸೆಕ್ಷನ್ಗಳಲ್ಲಿ ಕಮೆಂಟುಗಳ ಸುರಿಮಳೆಯಾಗುತ್ತಿದೆ.
ಗುದದ್ವಾರದಿಂದ ಹೀಗೆ ಉಸಿರಾಡ್ಬೋದಂತೆ ನೋಡಿ! ನೊಬೆಲ್ ಪ್ರಶಸ್ತಿ ಗೆದ್ದ ವಿಜ್ಞಾನಿಗಳ ವಿಡಿಯೋ ವೈರಲ್