Asianet Suvarna News Asianet Suvarna News

Recycling Ideas: ತುಂಡು ತುಂಡಾದ ಕ್ರಯಾನ್ಸ್ ಹೀಗೂ ಬಳಸ್ಬಹುದು

ಮನೆಯಲ್ಲಿ ಮಕ್ಕಳಿದ್ರೆ ಒಂದಿಷ್ಟು ಬಣ್ಣ ಗೋಡೆ ಆವರಿಸಿದ್ರೆ ಮತ್ತೊಂದಿಷ್ಟು ನೆಲದ ಮೇಲೆ ಬಿದ್ದಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಬಣ್ಣಗಳು ಮನೆಯಲ್ಲಿರಬೇಕು ಎನ್ನುತ್ತಾರೆ ಮಕ್ಕಳು. ಆದ್ರೆ ಬಳಸಿದ ಕೆಲವೇ ದಿನಕ್ಕೆ ಬೇಸರ ಬರುತ್ತೆ. ಅದ್ರಲ್ಲಿ ಕ್ರಯಾನ್ಸ್ ಕೂಡ ಒಂದು. ಪೀಸ್ ಆಗುವ ಈ ಕ್ರಯಾನ್ಸ್ ಮರುಬಳಕೆ ಮಾಡೋದು ಸುಲಭ.
 

How To Use Broken Crayons
Author
First Published Nov 24, 2022, 3:46 PM IST

ಮಕ್ಕಳಿಗೆ ಬಣ್ಣವೆಂದ್ರೆ ಬಹಳ ಇಷ್ಟ. ಚಿಕ್ಕ ಮಕ್ಕಳನ್ನು ಬಣ್ಣ ಬಣ್ಣದ ಪೆನ್ಸಿಲ್ ಆಕರ್ಷಿಸುತ್ತದೆ. ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ಬಣ್ಣಗಳು ಲಭ್ಯವಿದೆ. ಬಣ್ಣದ ಚಾಕ್ ಪೀಸ್ ನಿಂದ ಹಿಡಿದು ಬಣ್ಣದ ಕ್ರಯಾನ್ಸ್, ಬಣ್ಣದ ಪೆನ್ಸಿಲ್ಸ್, ಸ್ಕೆಚ್ ಪೆನ್ಸ್ ಹೀಗೆ ಅನೇಕ ರೀತಿಯ ಬಣ್ಣಗಳನ್ನು ಮಕ್ಕಳು ಬಳಸ್ತಾರೆ. ಬಣ್ಣದ ಪೆನ್ಸಿಲ್ ಹಾಗೆ ಬಣ್ಣದ ಕ್ರಯಾನ್ಸ್ ಆರಂಭದಲ್ಲಿ ಚೆನ್ನಾಗಿರುತ್ತೆ. ದಿನ ಕಳೆದಂತೆ ಅದು ಚಿಕ್ಕದಾಗುತ್ತದೆ. ಹಾಗಾಗಿ ಮಕ್ಕಳು ಅದನ್ನು ಬದಿಗೆ ಹಾಕ್ತಾರೆ. ಸಣ್ಣ ಸಣ್ಣ, ಮುರಿದ ಕ್ರಯಾನ್ಸ್ ಹಾಗೂ ಪೆನ್ಸಿಲ್ಸ್ ಮನೆಯಲ್ಲಿ ರಾಶಿ ಬಿದ್ದಿರುತ್ತದೆ. ಅದನ್ನು ಏನು ಮಾಡೋದು ಎಂಬ ಚಿಂತೆ ಅಮ್ಮಂದಿರನ್ನು ಕಾಡುತ್ತದೆ. ನಿಮ್ಮ ಮನೆಯಲ್ಲೂ ತುಂಡಾದ ಕ್ರಯಾನ್ಸ್ ಇದ್ದರೆ ಅದನ್ನು ಕಸಕ್ಕೆ ಹಾಕ್ಬೇಡಿ. ಅದನ್ನು ನೀವು ಮರುಬಳಕೆ ಮಾಡಬಹುದು. ನಾವಿಂದು ಅದನ್ನು ಹೇಗೆ ಮರುಬಳಕೆ ಮಾಡೋದು ಅಂತಾ ಹೇಳ್ತೆವೆ.

ಮುರಿದ ಕ್ರಯಾನ್ಸ್ (Crayons) ಹೀಗೆ ಮರುಬಳಕೆ (Recycling) ಮಾಡಿ :
ಹೊಸ ಬಣ್ಣ (Color)ದ ಕ್ರಯಾನ್ಸ್ ತಯಾರಿಸಿ :
ಕ್ರಯಾನ್ಸ್ ತುಂಡಾಗಿ ಬಳಕೆಗೆ ಬರ್ತಿಲ್ಲ ಎಂದಾದ್ರೆ ಅದನ್ನು ನೀವು ಮೊದಲು ಕರಗಿಸಬೇಕು. ಅದಕ್ಕೆ ನೀವು ಒಲೆಯನ್ನು ಬಳಸಬಹುದು. ನಿಮ್ಮ ಮನೆಯಲ್ಲಿ ಓವನ್ ಇದ್ದರೆ ನೀವು ಅದ್ರ ಸಹಾಯದಿಂದ ಬಣ್ಣದ ಕ್ರಯಾನ್ಸ್ ಕರಗಿಸಬೇಕು. ಕರಗಿದ ನಂತ್ರ ಆ ದ್ರಾವಣವನ್ನು ಒಂದು ಬಟ್ಟಲಿಗೆ ಹಾಕಿ. ಅದು ಒಣಗಿದ ನಂತ್ರ ಮತ್ತೆ ಬಳಕೆ ಮಾಡಿ. ನಿಮ್ಮ ಬಳಿ ಮೋಡ್ ಇದ್ದಲ್ಲಿ ನೀವು ಅದಕ್ಕೆ ದ್ರವ ಹಾಕಿ ಒಣಗಲು ಬಿಡಬಹುದು. ಬೇರೆ ಬೇರೆ ಡಿಸೈನ್ (Design) ಮೋಡ್ ನಲ್ಲಿ ದ್ರವವನ್ನು ಹಾಕಿ ಗಟ್ಟಿ ಮಾಡಿದಾಗ  ಮಕ್ಕಳು ಆಕರ್ಷಿತರಾಗ್ತಾರೆ.

ಹೋಲ್ (Hole) ಮುಚ್ಚಲು ಬಳಸಿ : ಮನೆಯಲ್ಲಿ ಸಣ್ಣಪುಟ್ಟ ರಂಧ್ರಗಳಿರುತ್ತವೆ. ಅದ್ರಿಂದ ಕೀಟಾಣುಗಳು ಮನೆಗೆ ಬರ್ತಿರುತ್ತವೆ. ಸಣ್ಣ ರಂಧ್ರಗಳನ್ನು ಮುಚ್ಚಲು, ನೀವು ಬಣ್ಣದ ತುಂಡನ್ನು ಬಳಸಬಹುದು. ಆ ರಂಧ್ರದೊಳಗೆ ಈ ಬಣ್ಣದ ಪೆನ್ಸಿಲ್ ಹಾಕಿದ್ರೆ ಸಾಕು. ಅನೇಕ ಬಾರಿ ಕರೆಂಟ್ ಪಾಸ್ ಆಗಿರುವ ಅಥವಾ ಸ್ವಿಚ್ ಬೋರ್ಡ್ ಬಳಿ ಇರುವ ರಂಧ್ರಗಳು ಅಪಾಯಕಾರಿ. ಅದ್ರಲ್ಲಿ ಮಕ್ಕಳು ಕೈ ಹಾಕ್ತಿರುತ್ತಾರೆ. ನೀವು ಬಣ್ಣದ ಪೆನ್ಸಿಲ್ ಹಾಕಿಟ್ಟರೆ ಮಕ್ಕಳನ್ನು ಅಪಾಯದಿಂದ ರಕ್ಷಿಸಬಹುದು.

ಪಿರಿಯಡ್ಸ್ ಕಿರಿಕಿರಿ ಅನ್ಬೇಡಿ, ಸರಿಯಾದ ಪ್ಯಾಡ್ ಬಳಸಿದ್ರೆ ಆರಾಮವಾಗಿರ್ಬೋದು

ಮೇಣದ ಬತ್ತಿಗೆ ಬಳಕೆ ಮಾಡಿ : ಮಾರ್ಬಲ್ ಮೇಣದ ಬತ್ತಿಗಳಿಗಿಂತ  ಬಣ್ಣಬಣ್ಣದ ಮೇಣದಬತ್ತಿಗಳು ದುಬಾರಿ. ನಾನಾ ಬಣ್ಣದ ಮೇಣ ಬತ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನೀವು ಸಾಮಾನ್ಯ  ಮೇಣದಬತ್ತಿಯನ್ನು ಖರೀದಿಸಿ,ಅದನ್ನು ಮನೆಯಲ್ಲಿ ವರ್ಣರಂಜಿತಗೊಳಿಸಬಹುದು. ಅದಕ್ಕೆ ನೀವು ಬಣ್ಣದ ಕ್ರಯಾನ್ಸ್ ಬಳಕೆ ಮಾಡಬೇಕು. ನೀವು ಮೇಣದ ಬತ್ತಿ ತಯಾರಿಸುವ ಗಾಜಿನ ಪಾತ್ರೆ ತೆಗೆದುಕೊಳ್ಳಿ. ಅದಕ್ಕೆ ಕ್ರಯಾನ್ಸ್ ಬಿಸಿ ಮಾಡಿ, ದ್ರವವಾಗಿರುವ ಬಣ್ಣವನ್ನು ಹಾಕಿ. ನಂತ್ರ ಅದಕ್ಕೆ ಮೇಣದ ಬತ್ತಿಯನ್ನು ದ್ರವಗೊಳಿಸಿ ಅದನ್ನು ಹಾಕಿ. ಮಧ್ಯೆ ಬತ್ತಿಯನ್ನು ಹಾಕಿ. ಆಗ ಸಾಮಾನ್ಯ ಮೇಣದಬತ್ತಿ ಬಣ್ಣದ ಮೇಣವಾಗಿ ಬದಲಾಗುತ್ತದೆ.  ಈಗಾಗಲೇ ನೀವು ಗ್ಲಾಸಿನ ಮೇಣದ ಬತ್ತಿ ತಂದಿದ್ದು, ಅದನ್ನು ಬಣ್ಣದಿಂದ ಸುಂದರಗೊಳಿಸಬೇಕು ಎಂದಾದ್ರೆ ಕ್ರಯಾನ್ಸ್ ಕರಗಿಸಿ ಆ ದ್ರವವನ್ನು ನೀವು ಮೇಣದ ಬತ್ತಿ ಮೇಲೆ ಹಾಕಿದ್ರೆ ಸಾಕು. 

Recycling Ideas : ತರಕಾರಿ ತಂದ ಪೇಪರ್ ಬ್ಯಾಗ್ ಎಸೆಯಬೇಡಿ

ಲಿಕ್ವಿಡ್ ಕಲರ್ (Liquid Color) ತಯಾರಿಸಿ : ಮಾರುಕಟ್ಟೆಯಲ್ಲಿ ಬಗೆ ಬಗೆಯ ಲಿಕ್ವಿಡ್ ಬಣ್ಣ ಲಭ್ಯವಿದೆ. ಮನೆಯಲ್ಲಿಯೇ ಕ್ರಯಾನ್ಸ್ ಮರು ಬಳಕೆ ಮಾಡ್ತೆನೆ ಎನ್ನುವವರು ಕ್ರಯಾನ್ಸನ್ನು ಲಿಕ್ವಿಡ್ ಬಣ್ಣವಾಗಿರೂ ಬಳಕೆ ಮಾಡಬಹುದು. ನೀವು ಅದನ್ನು ಕರಗಿಸಿದ ನಂತ್ರ ಈ ದ್ರವವನ್ನು ಹಾಗೆಯೇ ಬಳಸಬಹುದು. 
 

Follow Us:
Download App:
  • android
  • ios