Asianet Suvarna News Asianet Suvarna News

ಗರ್ಭಿಣಿಗೆ ಕೋವಿಡ್ ಬಂದರೆ... ಇಲ್ಲಿದೆ ಅನುಮಾನಗಳಿಗೆ ಪರಿಹಾರ

ನೀವು ಗರ್ಭಿಣಿಯಾಗಿದ್ದಾಗ ಕೋವಿಡ್ ಪಾಸಿಟಿವ್ ಬಂದರೆ? ಮಗುವನ್ನು ನೋಡಿಕೊಳ್ಳುವುದು, ಸ್ತನ್ಯಪಾನ ಹೇಗೆ? ಮಗುವಿಗೆ ಕೋವಿಡ್‌ ಬರಲಾರದೇ? ಈ ಮುಂತಾಧ ಅನುಮಾನಗಳಿಗೆ ಉತ್ತರ ಇಲ್ಲಿದೆ.

How to handle pregnancy during Covid19 pandemic
Author
Bengaluru, First Published Apr 24, 2021, 4:06 PM IST

ಕೋವಿಡ್ ಸಾಂಕ್ರಾಮಿಕವು ಎಲ್ಲರಿಗೂ ಆತಂಕ ಮತ್ತು ಭಯವನ್ನುಂಟುಮಾಡಿದೆ. ಹಾಗೇ ನೀವು ಗರ್ಭಿಣಿಯಾಗಿದ್ದರೆ ಇನ್ನಷ್ಟು ಆತಂಕ ಕಾಡಬಹುದು. ಕೊರೋನಾ ವೈರಸ್ ನಿಮಗೆ ಮತ್ತು ನಿಮ್ಮ ಮಗುವಿಗೆ ಅಪಾಯವನ್ನುಂಟುಮಾಡುತ್ತದೆಯೇ ಎಂಬ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಪ್ರಶ್ನೆಗಳಿರಬಹುದು. ಅದನ್ನು ಇಲ್ಲಿ ಪರಿಹರಿಸಲು ಯತ್ನಿಸಲಾಗಿದೆ. ಕೋವಿಡ್ ರೋಗ ಈಗಷ್ಟೇ ವಿಕಾಸ ಹೊಂದಿರುವುದರಿಂದಾಗಿ ಈ ಬಗ್ಗೆ ಸ್ಪಷ್ಟ ಉತ್ತರ ದೊರೆತಿಲ್ಲ; ಆದರೆ, ಇದೇ ರೀತಿಯ ಇನ್‌ಫ್ಲುಯೆಂಜಾ ಹಾಗೂ ಉಸಿರಾಟದ ಸಮಸ್ಯೆಯ ಕಾಯಿಲೆಗಳಿಂದ ಪಡೆದ ಜ್ಞಾನವು ಈ ದಿಸೆಯಲ್ಲಿ ನೆರವಾಗುತ್ತದೆ. 

ಕೊರೋನಾ ವೈರಸ್ ಗರ್ಭಿಣಿಯರ ಮೇಲೆ ಯಾವ ಪರಿಣಾಮ ಬೀರುತ್ತದೆ? 
- ಸಾಮಾನ್ಯವಾಗಿ, ಗರ್ಭಿಣಿಯರು ಆರೋಗ್ಯವಂತ ವಯಸ್ಕರಿಗಿಂತ ಹೆಚ್ಚು ಅಪಾಯಕಾರಿ ಎಂದೇನೂ ಕಂಡುಬಂದಿಲ್ಲ. ಬೇರೆ ಹೆಚ್ಚು ಗಂಭೀರವಾದ ಕಾಯಿಲೆ ಇದ್ದಲ್ಲಿ ಕೊರೋನಾದಿಂದ ತೊಂದರೆಗಳು ಕಂಡುಬಂದಿವೆ. ಹೆಚ್ಚಾಗಿ, ಗರ್ಭಿಣಿಯರು ಫ್ಲೂ ತರಹದ ರೋಗಲಕ್ಷಣಗಳನ್ನು ಮಾತ್ರ ಅನುಭವಿಸುತ್ತಾರೆ. 
- ನೀವು ಗರ್ಭಿಣಿಯಾಗಿದ್ದರೆ ಮತ್ತು ನಿಮ್ಮಲ್ಲಿ ಜ್ವರದ ತರಹದ ಲಕ್ಷಣಗಳು ಉಲ್ಬಣಗೊಳ್ಳುತ್ತಿದ್ದರೆ, ನಿಮ್ಮ ಎದೆ ಹಿಡಿದಂತೆ ಆಗುತ್ತಿದ್ದರೆ, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುತ್ತದೆ. ಹೆಚ್ಚು ತೀವ್ರವಾದ ರೋಗಲಕ್ಷಣಗಳಿ ಕಂಡರೆ, ಚೇತರಿಕೆ ವಿಳಂಬವಾಗುತ್ತಿದ್ದರೆ, ತಕ್ಷಣ ನಿಮ್ಮ ಹತ್ತಿರವಿರುವ ಆಸ್ಪತ್ರೆಯನ್ನು ಸಂಪರ್ಕಿಸಿ. 

How to handle pregnancy during Covid19 pandemic

ನಾನು ಕೊರೋನ್ ಪಾಸಿಟಿವ್, ಮಗುವಿಗೆ ಏನು ಪರಿಣಾಮ?
- ಇದು ತುಂಬಾ ಹೊಸ ವೈರಸ್ ಆಗಿರುವುದರಿಂದ, ಎಲ್ಲಾ ಮಾಹಿತಿ ಮತ್ತು ಪುರಾವೆಗಳು ಇನ್ನೂ ನಮಗೆ ಲಭ್ಯವಿಲ್ಲ. 
- ಕೋವಿಡ್ ಪಾಸಿಟಿವ್ ಬಂದವರಲ್ಲಿ ಗರ್ಭಪಾತದ ಆತಂಕವಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. 
- ಗರ್ಭಾವಸ್ಥೆಯಲ್ಲಿ ನಿಮ್ಮ ಹುಟ್ಟಲಿರುವ ಮಗುವಿಗೆ ವೈರಸ್ ಬಾಧಿಸುತ್ತದೆ ಎಂಬುದಕ್ಕೂ ಯಾವುದೇ ಪುರಾವೆಗಳಿಲ್ಲ. 
- ಚೀನಾದಲ್ಲಿ ಇದನ್ನು ಪರೀಕ್ಷಿಸಲಾಯಿತು. ಒಂಬತ್ತು ಗರ್ಭಿಣಿಯರ ಮೇಲೆ ನಡೆಸಿದ ಅಧ್ಯಯನದಲ್ಲಿ, ಎಲ್ಲಾ ಒಂಬತ್ತು ಶಿಶುಗಳು ಕೋವಿಡ್ ನೆಗೆಟಿವ್ ಆಗಿದ್ದವು. ಮಕ್ಕಳು ಆರೋಗ್ಯಕರವಾಗಿದ್ದವು. 
- ಲಂಡನ್‌ನಲ್ಲಿ ಒಬ್ಬ ಗರ್ಭಿಣಿಗೆ ಕೋವಿಡ್ ಪಾಸಿಟಿವ್ ಬಂತು. ಆಕೆಯ ನವಜಾತ ಶಿಶುವಿಗೂ ಪಾಸಿಟಿವ್ ಬಂತು. ಮಗುವಿಗೆ ಗರ್ಭಾಶಯದಲ್ಲಿ ವೈರಲ್ ಸೋಂಕು ತಗುಲಿದೆಯೆ ಅಥವಾ ಜನನದ ನಂತರವೇ ಎಂಬುದು ಸ್ಪಷ್ಟವಾಗಲಿಲ್ಲ. ಗರ್ಭಾವಸ್ಥೆಯಲ್ಲಿ ಮಗು ಪಡೆದಿರುವ ಸಾಧ್ಯತೆಯಿಲ್ಲ, ಇದರ ಪರಿಣಾಮವಾಗಿ ಮಗುವಿನ ಬೆಳವಣಿಗೆಯಲ್ಲೂ ಯಾವುದೇ ದೋಷಗಳು ಕಂಡುಬಂದಿಲ್ಲ ಎಂಬುದು ತಜ್ಞರ ಅಭಿಪ್ರಾಯ. 

ಹೆರಿಗೆ ವೇಳೆ ಕೊರೋನಾ ಪರಿಣಾಮ
- ಲ್ಯಾನ್ಸೆಟ್ ವೈದ್ಯ ಪತ್ರಿಕೆ ಒಂದು ಅಧ್ಯಯನ ನಡೆಸಿತು. ಅದರ ಭಾಗವಾಗಿದ್ದ ಎಲ್ಲ ಗರ್ಭಿಣಿಯರು ತಮ್ಮ ಎರಡನೆಯ ಅಥವಾ ಮೂರನೇ ತ್ರೈಮಾಸಿಕದಲ್ಲಿದ್ದರು. ಮೊದಲ ತ್ರೈಮಾಸಿಕದಲ್ಲಿ ಕೋವಿಡ್ ಪಾಸಿಟಿವ್ ತೋರಿಸಿದ ಮಹಿಳೆಯರಲ್ಲಿ ಹೆಚ್ಚಿನ ಯಾವುದೇ ಅಡ್ಡಪರಿಣಾಮಗಳು ಕಾಣಲಿಲ್ಲ. ಹೆಚ್ಚಿನ ಜ್ವರದಂತಹ ರೋಗಲಕ್ಷಣಗಳಿರುವ ಗರ್ಭಿಣಿಯರು, ಹೆರಿಗೆಯ ಸಂದರ್ಭದಲ್ಲಿ ಹೆಚ್ಚಿನ ಬಳಲಿಕೆ ತೋರಿಸಿದರು. ಇಂಥ ಸನ್ನಿವೇಶದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸದಿದ್ದರೆ ಗರ್ಭಿಣಿಗೂ ಶಿಶುವಿಗೂ ಅಪಾಯವಾಗುವ ಸಂದರ್ಭವಿದೆ. ಆದರೆ ಅಂಥ ಘಟನೆಗಳು ನಡೆದಿಲ್ಲ. 

ಗರ್ಭಿಣಿಯರು ಕೊರೋನಾಗೆ ಸುಲಭದ ತುತ್ತೇ? 
- ಗರ್ಭಿಣಿಯರು ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚೇ ಎಂಬುದಕ್ಕೂ ಸಾಕ್ಷಿಗಳು ಇಲ್ಲ. ಇದರ ಹೊರತಾಗಿಯೂ, ಗರ್ಭಿಣಿಯರಿಗೆ ಸಾಮಾಜಿಕ ಸಂಪರ್ಕವನ್ನು ಕಡಿಮೆ ಮಾಡಬೇಕು.  
- ಮಹಿಳೆಯರಲ್ಲಿ, ಗರ್ಭಧಾರಣೆಯ ಸಂದರ್ಭ ದೇಹವು ಹಲವು ವೈರಲ್ ಸೋಂಕುಗಳೊಂದಿಗೆ ಹೋರಾಡುತ್ತದೆ. ಹೀಗಾಗಿ ಎಂದಿನಂತೆ ಹೆಚ್ಚಿಗೆ ಜಾಗರೂಕರಾಗಿರಬೇಕು. 

ಮೊದಲ ಬಾರಿ ಗರ್ಭಿಣಿಯಾಗ್ತಾ ಇದೀರಾ? ಇವನ್ನು ನೆನಪಿಟ್ಟುಕೊಳ್ಳಿ... ...

ಮಗುವಿಗೆ ಹಾಲುಣಿಸುವುದು ಹೇಗೆ? 
- ನೀವು ಪಾಸಿಟಿವ್ ಆಗಿದ್ದರೆ, ಹಸುಳೆಗೆ ಹಾಲುಣಿಸುವ ಸಂದರ್ಭ ಕೋವಿಡ್ ಹರಡುವಿಕೆಗೆ ಕಾರಣ ಆಗಬಹುದು. 
- ಎದೆಹಾಲಿನ ಮೂಲಕ ಕೊರೋನಾ ಹರಡುವ ಅಪಾಯ ಕಂಡುಬಂದಿಲ್ಲ. ಆದರೆ ಸ್ತನ್ಯಪಾನದ ಮುಖ್ಯ ಅಪಾಯವೆಂದರೆ ನಿಮ್ಮ ಮತ್ತು ನಿಮ್ಮ ಮಗುವಿನ ನಡುವಿನ ನಿಕಟ ಸಂಪರ್ಕ. ಇದು ಸೋಂಕಿನ ಅಪಾಯವನ್ನುಂಟುಮಾಡುತ್ತದೆ. ನಿಮ್ಮ ಉಸಿರಾಟದಿಂದ ಮಗುವಿಗೆ ಹರಡಬಹುದು. 
- ಎದೆಹಾಲನ್ನು ತೆಗೆದು ಮಗುವಿಗೆ ನಿಪ್ಪಲ್ ಮೂಲಕ ಕೊಡುವುದು ಸುರಕ್ಷಿತ. ಕೋವಿಡ್ ನೆಗೆಟಿವ್ ಬಳಿಕ ಎದೆಹಾಲು ನೇರವಾಗಿ ಉಣಿಸಬಹುದು. 
- ಮಗುವನ್ನು ಸ್ಪರ್ಶಿಸುವ ಮೊದಲು ನಿಮ್ಮ ಕೈಗಳನ್ನು ತೊಳೆಯಿರಿ. ನೀವು ಹಾಲುಣಿಸುವಾಗ ಕೆಮ್ಮು ಅಥವಾ ಸೀನುವುದನ್ನು ತಪ್ಪಿಸಿ. ಲಭ್ಯವಿದ್ದರೆ ಫೇಸ್ ಮಾಸ್ಕ್ ಧರಿಸಿ.
- ನೀವು ಸ್ತನ ಪಂಪ್ ಬಳಸುತ್ತಿದ್ದರೆ, ಸರಿಯಾಗಿ ಕ್ಲೀನಿಂಗ್ ಮತ್ತು ಸ್ಯಾನಿಟೈಸಿಂಗ್ ಸೂಚನೆಗಳನ್ನು ಅನುಸರಿಸಿ. 

ಕನ್ಯತ್ವ ಪರೀಕ್ಷೆ ಕ್ರೂರ ಪರೀಕ್ಷೆಯಿಂದ ನಲುಗಿದ ಸೋದರಿಯರ ಹೋರಾಟದ ಹಾದಿ ...

ಗರ್ಭಾವಸ್ಥೆಯಲ್ಲಿ ರೋಗ ಬರದಂತೆ ತಡೆಯಲು ಕ್ರಮಗಳು
- ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ. ಕೈ ನೈರ್ಮಲ್ಯನಿಮ್ಮನ್ನು ನಿಜವಾಗಿಯೂ ರಕ್ಷಿಸುತ್ತದೆ. 
- ಸಾಮಾಜಿಕ ದೂರವನ್ನು ಅಭ್ಯಾಸ ಮಾಡಿ. ನೀವು ಸಾರ್ವಜನಿಕ ಸ್ಥಳದಲ್ಲಿದ್ದಾಗ ಯಾವಾಗಲೂ ಇತರರಿಂದ ಕನಿಷ್ಠ 2 ಮೀಟರ್ ಅಥವಾ 6 ಅಡಿ ದೂರವನ್ನು ಕಾಪಾಡಿಕೊಳ್ಳಿ. ಸಾಧ್ಯವಾದಷ್ಟು ಇತರರೊಂದಿಗೆ ಸಂಪರ್ಕವನ್ನು ತಪ್ಪಿಸಿ. 
- ಸಮಯಕ್ಕೆ ನಿಮ್ಮ ಜ್ವರದ ಲಸಿಕೆ ಪಡೆಯಿರಿ. ಫ್ಲೂ ಲಸಿಕೆಯು ಕೊರೋನಾಗೆ ಒಡ್ಡಿಕೊಳ್ಳುವುದರಿಂದ ನಿಮ್ಮನ್ನು ರಕ್ಷಿಸುವುದಿಲ್ಲವಾದರೂ, ಇದು ನಿಮ್ಮನ್ನು ಇನ್‌ಫ್ಲುಯೆಂಜಾಕ್ಕೆ ತುತ್ತಾಗದಂತೆ ಮಾಡುತ್ತದೆ.
- ಕೆಮ್ಮುವಾಗ ಅಥವಾ ಸೀನುವಾಗ ಅಡ್ಡವಾಗಿ ಟಿಶ್ಯೂ ಬಳಸಿ. ಕೈಗಳನ್ನು ತಕ್ಷಣ ತೊಳೆಯಿರಿ. 
- ಯಾವುದೇ ಉಸಿರಾಟದ ತೊಂದರೆ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ಕೆಮ್ಮು ಅಥವಾ ಯಾವುದೇ ಉಸಿರಾಟದ ತೊಂದರೆಯನ್ನು ಬೆಳೆಸಿಕೊಂಡರೆ, ನಿಮ್ಮ ವೈದ್ಯರನ್ನು ಕರೆಯಲು ಹಿಂಜರಿಯಬೇಡಿ. 
- ಸಾಧ್ಯವಾದಷ್ಟು, ನಿಮ್ಮ ಗೈನಕಾಲಜಿಸ್ಟ್ ಬಳಿಗೆ ಪ್ರಸವಪೂರ್ವ ಭೇಟಿಗಳ ಬದಲು ವರ್ಚುವಲ್ ಸಮಾಲೋಚನೆಗಳನ್ನು ಪರಿಗಣಿಸಿ. ವೈದ್ಯರಿಗೆ ಕಾಯುವ ಕೋಣೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಸಮಯ ಕಳೆಯುವುದನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತಪ್ಪಿಸಲು ಪ್ರಯತ್ನಿಸಿ. 
- ಆದಾಗ್ಯೂ, ಅಲ್ಟ್ರಾಸೌಂಡ್, ರಕ್ತ ಪರೀಕ್ಷೆಗಳು ಮತ್ತು ಭ್ರೂಣದ ಪರೀಕ್ಷೆಯಂತಹ ಪರೀಕ್ಷೆಗಳಿಗೆ ವೈಯಕ್ತಿಕವಾಗಿ ಇರಬೇಕಾಗುತ್ತದೆ. 
- ಸಾಧ್ಯವಾದಾಗಲೆಲ್ಲಾ ಮನೆಯಿಂದಲೇ ಕೆಲಸ ಮಾಡಿ. ಸುರಕ್ಷಿತವಾಗಿರಿ. 
- ನಿರಂತರ ಕೆಮ್ಮಿನೊಂದಿಗೆ ಅಥವಾ ಜ್ವರದಂತಹ ರೋಗಲಕ್ಷಣಗಳನ್ನು ತೋರಿಸುವ ಯಾರೊಂದಿಗೂ ನಿಕಟ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ.
- ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇಮೇಲ್‌ಗಳು, ಸಂದೇಶಗಳು ಅಥವಾ ವೀಡಿಯೊ ಚಾಟ್‌ಗಳ ಮೂಲಕ ಸಂಪರ್ಕದಲ್ಲಿರಿ. 
- ಹೊಸ ಹವ್ಯಾಸವನ್ನು ಬೆಳೆಸಿಕೊಳ್ಳಿ ಅಥವಾ ಹೊಸ ಕೌಶಲ್ಯವನ್ನು ಕಲಿಯಿರಿ. ನಿಮಗೆ ಸಂತೋಷವನ್ನುಂಟುಮಾಡುವ ಕೆಲಸಗಳನ್ನು ಮಾಡಿ. ಧ್ಯಾನ ಮಾಡುವುದು ಅಥವಾ ಪುಸ್ತಕವನ್ನು ಓದುವುದು ಮುಂತಾದ ಹವ್ಯಾಸಗಳಿಂದ ಮನಸ್ಸನ್ನು ಶಾಂತವಾಗಿಡಿ. 
- ವೈದ್ಯರ ಸಲಹೆಯಂತೆ ವ್ಯಾಯಾಮ ಮಾಡಿ. ನಿಯಮಿತವಾಗಿ ನಿಮ್ಮ ಕೆಗೆಲ್ಸ್ ಮತ್ತು ಸ್ಕ್ವಾಟ್‌ಗಳನ್ನು ಮಾಡಿ. 
- ನಿಮ್ಮ ಡೆಲಿವರಿ ಡೇಟ್ ಹತ್ತಿರದಲ್ಲಿದ್ದರೆ ಚಿಂತೆ ಮಾಡಬೇಡಿ; ಏಕೆಂದರೆ ಆಸ್ಪತ್ರೆಗಳು ಸುರಕ್ಷಿತ ಹೆರಿಗೆಗಾಗಿ ವ್ಯವಸ್ಥೆಯನ್ನು ಹೊಂದಿರುತ್ತವೆ. 

ಮುಟ್ಟಾಗಿದ್ದಾಗ ವ್ಯಾಕ್ಸೀನ್ ತಗೊಳ್ಬೋದಾ ? ...

 

Follow Us:
Download App:
  • android
  • ios