- Home
- Entertainment
- Sandalwood
- ಗುಂಡು ಗುಂಡಾಗಿದ್ದ Shubha Poonja ಬಳುಕುವ ಬಳ್ಳಿಯಂತಾದ್ರು! ಆಯುರ್ವೇದಿಕ್ Weight Loss ಟಿಪ್ಸ್ ಕೊಟ್ರು!
ಗುಂಡು ಗುಂಡಾಗಿದ್ದ Shubha Poonja ಬಳುಕುವ ಬಳ್ಳಿಯಂತಾದ್ರು! ಆಯುರ್ವೇದಿಕ್ Weight Loss ಟಿಪ್ಸ್ ಕೊಟ್ರು!
ನಟಿ ಶುಭಾ ಪೂಂಜ ಅವರು ಅನೇಕ ವರ್ಷಗಳ ಕಾಲದಿಂದ ಗುಂಡು ಗುಂಡಾಗಿದ್ದರು. ಇದನ್ನು ಅವರೇ ಹೇಳಿಕೊಳ್ಳುತ್ತಾರೆ. ಆದರೆ ಕೆಲ ತಿಂಗಳುಗಳಿಂದ ಅವರು ಸಣ್ಣಗಾಗಿದ್ದಾರೆ. ಇದಕ್ಕೆ ಕಾರಣ ಏನು? ಏನು ಮಾಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ. ಆ ಟಿಪ್ಸ್ ಏನು ಎಂದು ನೋಡಿ

ಗುಂಡು ಗುಂಡಾಗಿದ್ದೆ
“ನಾನು ನಟಿ ಆಗಿದ್ದರೂ ಕೂಡ ನನ್ನ ಕರಿಯರ್ ಪೀಕ್ ಸಮಯದಲ್ಲಿಯೂ ನಾನು ಗುಂಡುಗುಂಡಕ್ಕೆ ಇದ್ದೆ. ನಾನು ತುಂಬ ಜಾಲಿಯಾಗಿ ಇರ್ತಾ ಇದ್ದೆ, ಚೆನ್ನಾಗಿ ತಿಂತಾ ಇದ್ದೆ ಕುರುಕುಲು ತಿಂಡಿಗಳಂತೂ ನಾನು ಬಿಡ್ತಾನೆ ಇರ್ಲಿಲ್ಲ. ಒಂದು ನಟಿಯಾಗಿ ಕೂಡ ಫಿಟ್ ಆಗೋದು ತುಂಬಾ ಇಂಪಾರ್ಟೆಂಟ್ ಎನ್ನೋದು ಅರ್ಥ ಆಯ್ತು. ಮನುಷ್ಯರಿಗೂ ಕೂಡ ಫಿಟ್‌ನೆಸ್ ತುಂಬ ಮುಖ್ಯ” ಎಂದು ಶುಭ ಪೂಂಜ ಹೇಳಿದ್ದಾರೆ.
ವ್ಯಾಯಾಮ ಮಾಡಿದ್ರೂ ವೇಸ್ಟ್
“ಈ ವರ್ಷ ಇದ್ದಷ್ಟು ಸ್ಟ್ರಿಕ್ಟ್ ನಾನು ಯಾವತ್ತೂ ಇರ್ಲಿಲ್ಲ. ಒಂದು ವಾರ ಏನಾದ್ರೂ ಚೆನ್ನಾಗಿ ಡಯಟ್ ಮಾಡಿದ್ರೆ, ಒಂದು ದಿನದಲ್ಲಿ ಎಲ್ಲ ಸ್ವೀಟ್ಸ್ ತಿನ್ನುತ್ತಿದ್ದೆ, ನನ್ನ ಡಯೆಟ್ ವೇಸ್ಟ್ ಆಗುತ್ತಿತ್ತು. ನಿಪ್ಪಟ್ಟು ಚಕ್ಕಲಿ, ಕೋಡುಬಳೆ ನನಗೆ ತುಂಬ ಇಷ್ಟ” ಎಂದು ಶುಭ ಪೂಂಜ ಹೇಳಿದ್ದಾರೆ.
ಸುಸ್ತಾಗ್ತಿತ್ತು
“ಚಿತ್ರರಂಗದಲ್ಲಿ ಇರಲು ಫಿಟ್ ಆಗಿರಬೇಕು, ಆದರೆ ನನಗೆ ಸುಸ್ತಾಗಕ್ಕೆ ಶುರು ಆಯ್ತು. ದಿನದಲ್ಲಿ ನನಗೆ ಯಾವುದಾದರೂ ಒಂದು ಇವೆಂಟ್ ಇದೆ ಅಥವಾ ನನಗೊಂದು ಯಾವದೋ ಇಂಟರ್ವ್ಯೂ ಇದೆ ಅಥವಾ ಒಂದು ಮೀಟಿಂಗ್ ಇದೆ ಅಂದರೆ ಅದನ್ನೊಂದೆ ಮಾಡೋಕೆ ಆಗುತ್ತಲಿತ್ತು. ಆಮೇಲೆ ಸುಸ್ತಾಗುತ್ತಿತ್ತು” ಎಂದು ಶುಭ ಪೂಂಜ ಹೇಳಿದ್ದಾರೆ.
ಏನೇನು ವ್ಯಾಯಾಮ ಮಾಡ್ತಾರೆ?
ನಾನು ಒಂದು ಗಂಟೆ ವರ್ಕೌಟ್ ಮಾಡಿ ಸುಮ್ಮನಾಗೋದಿಲ್ಲ, ಎಷ್ಟು ಸಮಯ ಸಾಧ್ಯವೋ ಅಷ್ಟು ನಡೆಯುತ್ತೇನೆ. ನನ್ನ ಇಡೀ ದಿನವನ್ನು ನಾನು ಆಕ್ಟಿವ್ ಆಗಿ ಇಟ್ಟುಕೊಳ್ತೀನಿ, ಜಿಮ್ ಮಾಡ್ತೀನಿ, ಯೋಗ ಮಾಡ್ತೀನಿ ಎಂದು ಶುಭಾ ಪೂಂಜ ಹೇಳಿದ್ದಾರೆ.
ಯಾವ ರೀತಿ ಊಟ ಮಾಡ್ತಾರೆ?
“ಜಂಕ್ ತಿನ್ನೋದಿಲ್ಲ, ಹೈ ಪ್ರೋಟಿನ್ ತಿನ್ನೋದಿಲ್ಲ, ಸ್ಮೂದಿ, ಪಂಪ್‌ಕಿನ್ ಡಯೆಟ್ ಮಾಡೋದಿಲ್ಲ, ಆಯುರ್ವೇದಿಕ್ ಡಯೆಟ್ ತಿನ್ನುವೆ. ಅಕ್ಕಿ, ಇಡ್ಲಿ, ಸಾಂಬಾರ್ ತಿನ್ನುತ್ತೇವೆ, ತರಕಾರಿ, ಕಾಳುಗಳನ್ನು ತಿನ್ನುವೆ. ವಾರದಲ್ಲಿ ಒಂದು ಅಥವಾ ಎರಡು ದಿನ ನಾನ್‌ವೆಜ್ ತಿನ್ನುವೆ, ಆದರೆ ದಿನವೂ ಮೊಟ್ಟೆ ತಿನ್ನುತ್ತೇನೆ" ಎಂದಿದ್ದಾರೆ.
ಸಂಜೆ ಆರು ಗಂಟೆ ಮೇಲೆ ಊಟ ಮಾಡಲ್ಲ
"ನಾನು ಅನ್ನವನ್ನು ತಿಂದೆ ಸಣ್ಣಗಾಗಿದ್ದೇನೆ, ಆದರೆ ಎಷ್ಟು ತಿನ್ನಬೇಕು ಎನ್ನೋದು ಗೊತ್ತಿರಬೇಕು. ಸಂಜೆ ಆರು ಗಂಟೆ ಮೇಲೆ ಊಟ ಮಾಡೋದಿಲ್ಲ. ಏನೇ ಇದ್ದರೂ ಕೂಡ ನಾನು ಊಟ ಮಾಡೋದಿಲ್ಲ. ಒಮ್ಮೊಮ್ಮೆ ಜ್ಯೂಸ್ ಅಥವಾ ಟೀ ಕುಡಿಯಬಹುದು” ಎಂದು ಶುಭ ಪೂಂಜ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

