Kitchen Tips: ಕಪ್ಪಗಾಗಿರೋ ಎಣ್ಣೆ ಜಾಲರಿಗೆ ಹೊಳಿಬೇಕಾ?

ಎಣ್ಣೆ ಜಿಡ್ಡು ತೆಗೆಯೋದು ಸುಲಭವಲ್ಲ. ಪದೇ ಪದೇ ಪಾತ್ರೆ ಎಣ್ಣೆಯಲ್ಲಿ ಬಿಸಿಯಾಗ್ತಿದ್ದರೆ ಅದರ ಬಣ್ಣ ಬದಲಾಗುತ್ತದೆ. ಜಾಲರಿ ಕೂಡ ಬಣ್ಣ ಕಳೆದುಕೊಂಡು ತುಕ್ಕು ಹಿಡಿದಂತಾಗುತ್ತದೆ. ಸದಾ ಅಡುಗೆಗೆ ಬಳಕೆಯಾಗುವ ಜಾಲರಿ ಫಳ ಫಳ ಹೊಳಿಬೇಕೆಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿ.
 

How To Clean Papad Roaster Jali to make it shine

ಅಡುಗೆ ಮನೆಯಲ್ಲಿ ಬಳಸುವ ಪಾತ್ರೆಗಳು ಸ್ವಚ್ಛವಾಗಿರಬೇಕು. ಆದ್ರೆ ದೀರ್ಘ ಸಮಯದಿಂದ ಬಳಸುವ ಕೆಲ ಪಾತ್ರೆಗಳು ಜಿಡ್ಡಾಗಿರುತ್ತವೆ. ಅದರಲ್ಲೂ ಎಣ್ಣೆ ಬಿಸಿ ಮಾಡುವ ಬಾಣಲೆ ಬಣ್ಣ ಬದಲಾಗಿರುತ್ತದೆ. ಹಾಗೆಯೇ ಎಣ್ಣೆಯಲ್ಲಿ ಕರಿದ ವಸ್ತುಗಳನ್ನು ಹೊರ ತೆಗೆಯಲು ನಾವು ಬಳಸುವ ಸ್ಟೀಲ್ ಮೆಶ್ ಅಂದ್ರೆ ಜಾಲರಿ ಬಣ್ಣ ಕೂಡ ಬದಲಾಗಿರುತ್ತದೆ. ಬಹುತೇಕ ಜನರು ಬದನೆ ಕಾಯಿ, ಟೊಮೆಟೊವನ್ನು ಎಣ್ಣೆಯಲ್ಲಿ ಬೇಯಿಸಿದ ನಂತ್ರ ಸ್ಟೀಲ್ ಮೆಶ್ ಸಹಾಯದಿಂದ ಅದನ್ನು ಹೊರಗೆ ತೆಗೆಯುತ್ತಾರೆ. ಹಪ್ಪಳ ಸೇರಿ ಬಜ್ಜಿಯನ್ನು ತೆಗೆಯಲು ಸ್ಟೀಲ್ ಮೆಶ್ ಒಳ್ಳೆಯದು. ಆದ್ರೆ ಎಣ್ಣೆಯಲ್ಲೇ ಇದು ಬಿಸಿಯಾಗುವ ಕಾರಣ ಮೆಶ್ ಸುಟ್ಟು ಹೋಗುತ್ತದೆ . ಅದು ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಅದನ್ನು ಎಷ್ಟು ಉಜ್ಜಿದ್ರೂ ಹೋಗೋದಿಲ್ಲ. ಅಂಥ ಸಂದರ್ಭದಲ್ಲಿ ಕೆಲ ಸುಲಭ ಉಪಾಯಗಳನ್ನು ಮಾಡಿ ನೀವು ಕಪ್ಪು ಬಣ್ಣವನ್ನು ತೆಗೆದು ಮತ್ತೆ ಮೆಶನ್ನು ಫ್ರೆಶ್ ಮಾಡಬಹುದು. 

ಟೊಮಟೊ (Tomato) ಸಾಸ್ ಮತ್ತು ಉಪ್ಪು (Salt) : ಎಣ್ಣೆಯಲ್ಲಿ ಅದ್ದಿ ತೆಗೆಯುವ ಜಾಲರಿಯನ್ನು ಸ್ವಚ್ಛಗೊಳಿಸಲು ನೀವು ಟೊಮೆಟೊ ಸಾಸ್ ಮತ್ತು ಉಪ್ಪನ್ನು ಬಳಸಬಹುದು. ಸಾಸ್‌ನಲ್ಲಿರುವ ವಿನೆಗರ್ ಲ್ಯಾಟಿಸ್‌ ಸೌಮ್ಯವಾದ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ.  ಜಾಲರಿಯ ಕೊಳೆಯನ್ನು ತೆಗೆದುಹಾಕುವಲ್ಲಿ ಉಪ್ಪು ಬೆಸ್ಟ್. ಮೊದಲು ಒಂದು  ಚಮಚ ಟೊಮೆಟೊ ಸಾಸ್‌ಗೆ ಅರ್ಧ ಚಮಚ ಉಪ್ಪನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ಟೂತ್ ಬ್ರಶ್ ಸಹಾಯದಿಂದ ಜಾಲರಿಯ ಮೇಲೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಬಿಡಿ. ನಂತ್ರ ಬಿಸಿ ನೀರಿಗೆ ಡಿಶ್ ವಾಶ್ ಮಿಶ್ರಣ ಹಾಕಿ, ಅದರಲ್ಲಿ ಜಾಲರಿಯನ್ನು ನೆನೆಸಿಡಿ. ಐದು ನಿಮಿಷಗಳ ನಂತರ  ಅದನ್ನು ಹಲ್ಲುಜ್ಜುವ ಬ್ರೆಶ್‌ನಿಂದ ಉಜ್ಜಬೇಕು. 

ಜಾಲರಿ ಕೊಳಕು ಹೋಗಲಾಡಿಸಲು ಅಡಿಗೆ ಸೋಡಾ: ಜಾಲರಿಯ ಕಪ್ಪು ಮತ್ತು ಕೊಳೆಯನ್ನು ಸ್ವಚ್ಛಗೊಳಿಸಲು ನೀವು ಅಡಿಗೆ ಸೋಡಾವನ್ನು ಸಹ ಬಳಸಬಹುದು. ನೀವು  2 ಚಮಚ ಅಡಿಗೆ ಸೋಡಾ, 1 ಚಮಚ ಡಿಶ್ ವಾಶ್ ಮತ್ತು 1 ಚಮಚ ನೀರನ್ನು ಬೆರೆಸಿ ಪೋಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟ್ ಅನ್ನು ಮೆಶ್ ಮೇಲೆ ಹಚ್ಚಿ ಸ್ವಲ್ಪ ಸಮಯದ ನಂತರ ಡಿಶ್ ವಾಶ್ ಸಹಾಯದಿಂದ ಮೆಶ್ ಅನ್ನು ಸ್ಕ್ರಬ್ ಮಾಡಿ. ನಿಮ್ಮ ಬಳಿ  ಸ್ಕ್ರಬ್ಬರ್  ಇಲ್ಲವೆಂದಾದ್ರೆ ನೀವು ಪಾತ್ರೆ ತೊಳೆಯುವ ಬ್ರೆಶ್ ಸಹಾಯದಿಂದಲೇ ಜಾಲರಿಯನ್ನು ರಬ್ ಮಾಡಬಹುದು. ತೆಂಗಿನ ನಾರನ್ನು ಕೂಡ ನೀವು ಸ್ಕ್ರಬ್ ಆಗಿ ಬಳಸಬಹುದು. ಅಡುಗೆ ಸೋಡಾ  ನಿಮ್ಮ ಜಾಲರಿಗೆ ಮೊದಲಿನಂತ ಹೊಳಪು ನೀಡುತ್ತದೆ.  

ಮುಟ್ಟಾದ್ರೆ ಪ್ರಾಣಿಗಳ ದೊಡ್ಡಿಯಲ್ಲಿ ಮಲಗಬೇಕಂತೆ ಇಲ್ಲಿನ ಮಹಿಳೆಯರು!

ಬಿಳಿ ವಿನೆಗರ್ ನಲ್ಲಿದೆ ಜಾದು: ಕೊಳಕು ಮತ್ತು ರೋಸ್ಟರ್ ಲ್ಯಾಟಿಸ್ ಅನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ಬಳಕೆಯು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಇದಕ್ಕಾಗಿ ಅರ್ಧ ಕಪ್ ಬಿಳಿ ವಿನೆಗರ್‌ಗೆ 1 ಚಮಚ ಉಪ್ಪನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಗೆ ಸ್ವಲ್ಪ ನೀರು ಹಾಕಿ ನೀವು ಅದ್ರಲ್ಲಿ ಜಾಲರಿಯನ್ನು ನೆನೆಸಿಡಿ.  20 ನಿಮಿಷಗಳ ನಂತರ ಡಿಶ್ ವಾಶ್ ಬಳಸಿ ನೀವು ಜಾಲರಿಯನ್ನು ಸ್ವಚ್ಛಗೊಳಿಸಬೇಕು. ಸ್ಕ್ರಬ್ ಸಹಾಯದಿಂದ ಜಾಲರಿಯನ್ನು ಉಜ್ಜಬೇಕು. 

ವಾಕರಿಕೆ ಬರುವ ಬಾತ್ ರೂಮ್ ಫಳ ಫಳ ಹೊಳೀಬೇಕಾ? ಇಲ್ಲಿವೆ ಕ್ಲೀನಿಂಗ್ ಟಿಪ್ಸ್

ಆಲಿವ್ ಎಣ್ಣೆ (Olive Oil) : ಜಾಲರಿಗೆ ಹೊಳಪು ಬೇಕೆನ್ನುವವರು ಸಂಪೂರ್ಣ ಸ್ವಚ್ಛವಾದ ಜಾಲರಿಗೆ ಆಲಿವ್ ಎಣ್ಣೆ ಬಳಸಬಹುದು. ಮೈಕ್ರೋಫೈಬರ್ ಬಟ್ಟೆಯ ಮೇಲೆ 1 ಹನಿ ಆಲಿವ್ ಎಣ್ಣೆಯನ್ನು ಹಾಕಬೇಕು. ನಂತ್ರ ಅದನ್ನು ಜಾಲರಿಯ ಮೇಲೆ ಅನ್ವಯಿಸಬೇಕು. ಇದ್ರಿಂದ ನಿಮ್ಮ ಜಾಲರಿ ಹೊಳೆಯುತ್ತದೆ. 
 

Latest Videos
Follow Us:
Download App:
  • android
  • ios