Chanakya Niti: ಬೆಳೆದ ಮಗನ ಮುಂದೆ ಪೋಷಕರ ಸರಸ ಹೇಗಿರಬೇಕು?

ಪ್ರಾಯಕ್ಕೆ ಬಂದ ಮಗನನ್ನು ಅಮ್ಮ ಪಕ್ಕದಲ್ಲಿ ಮಲಗಿಸಿಕೊಳ್ಳಬಾರದಂತೆ. ಇದು ಚಾಣಕ್ಯ ಹೇಳಿದ ಮಾತು. ಇನ್ನೂ ಏನೇನು ಹೇಳಿದ್ದಾನೆ ಚಾಣಕ್ಯ? 

How mother should behave with son while his adolescent bni

ಚಾಣಕ್ಯ ರಾಜನೀತಿಗಿಂತಲೂ ಹೆಚ್ಚಾಗಿ ಸಾಮಾಜಿಕ ಸಂಗತಿಗಳ ಬಗ್ಗೆ ಹಲವು ಉತ್ತಮ ಸೂತ್ರಗಳ್ನು ನೀಡಿದ್ದಾನೆ. ನಂತರ ಆತನ ನೀತಿಗಳು ʼಅರ್ಥಶಾಸ್ತ್ರʼ ಎಂಬ ಹೆಸರಿನಿಂದ ಪ್ರಚಲಿತವಾದವು. ಇಂದು ಆ ಹೆಸರಿಗಿಂತಲೂ ಚಾಣಕ್ಯ ನೀತಿ ಎಂಬ ಹೆಸರಿನಿಂದಲೇ ಅವು ಖ್ಯಾತವಾಗಿರುವುದು ಕಂಡುಬರುತ್ತದೆ. ಈ ನೀತಿಯಲ್ಲಿ ಆತ ದಾಂಪತ್ಯದಿಂದ ಹಿಡಿದು ರಾಜನ ಆಡಳಿತದವರೆಗೆ, ಶತ್ರುರಾಜರನ್ನು ಹೇಗೆ ಗೆಲ್ಲಬೇಕು ಎಂಬಲ್ಲಿಂದ ಹಿಡಿದು ತರುಣಿಯನ್ನು ಹೇಗೆ ಒಲಿಸಿಕೊಳ್ಳಬೇಕು ಎಂಬಲ್ಲಿಯವರೆಗಿನ ಅನೇಕ ವಿಷಯಗಳನ್ನು ತಿಳಿಹೇಳುತ್ತಾನೆ. ಚಾಣಕ್ಯ ಕುಟುಂಬಕ್ಕೆ ಸಂಬಂಧಿಸಿ ಹೇಳುವ ಮಾತುಗಳಲ್ಲಿ, ಪ್ರಾಯಕ್ಕೆ ಬಂದ ಮಗನ ಜೊತೆಗೆ ಅಮ್ಮ ಹೇಗಿರಬೇಕು ಎಂದು ಹೇಳುವ ಮಾತುಗಳೂ ಮುಖ್ಯವಾಗಿವೆ. ಇದು ಆಧುನಿಕ ತಾಯಿಯರಿಗೆ ಒಳ್ಳೆಯ ಕೌನ್ಸೆಲಿಂಗ್‌ನಂತಿವೆ. ಅವು ಹೀಗಿವೆ: 

1) ಹದಿಹರೆಯದ ಮಗನನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಅಂದರೆ ಆತನಿಗೆ ಗದರಿಸಿ ಮಾತನಾಡಬಾರದು, ಹೊಡೆಯಬಾರದು. ಮಗನ ಬಳಿ ಹೋಗುವಾಗ ಪಾನಮತ್ತಳಾಗಿರಬಾರದು. ಆಗ ವಿವೇಚನೆ ಕಳೆದುಹೋಗುತ್ತದೆ. ಈ ಕುಟುಂಬದಲ್ಲಿ ತನಗೂ ಪ್ರಮುಖ ಸ್ಥಾನವಿದೆ ಎಂಬ ಭಾವನೆ ಮಗನಲ್ಲಿ ಇರಬೇಕು.

2) ಮುದ್ದು ಅತಿಯೂ ಆಗಬಾರದು. ಪ್ರೀತಿಸಬೇಕು, ಆದರೆ ಪ್ರೀತಿಯನ್ನು ವಿವೇಚನೆಯಿಂದ ಬಳಸಬೇಕು. ಮಗ ಕೇಳಿದ್ದನ್ನೆಲ್ಲಾ ಅಂಗಡಿಯಿಂದ ಕೊಡಿಸಬಾರದು. ನಿಮ್ಮ ಬಳಿ ಇರುವ ಭಂಡಾರವನ್ನೆಲ್ಲಾ ಚೆಲ್ಲಿ ಮಕ್ಕಳಿಗೆ ಸುವಸ್ತುಗಳನ್ನು ಕೊಡಿಸಿದರೂ ಅದೇನೂ ಅವರಿಗೆ ಅರ್ಥವಾಗುವುದಿಲ್ಲ. ಬದಲಾಗಿ, ಯಾವ ಸಮಯದಲ್ಲಿ ಯಾವುದು ಅಗತ್ಯವಾದ್ದೋ, ಅದನ್ನು ಕೊಡಿಸಿದರೆ ಸಾಕು. 

3) ಎದೆಯುದ್ದಕ್ಕೆ ಬೆಳೆದ ಮಗನನ್ನು ಪಕ್ಕದಲ್ಲಿ ಮಲಗಿಸಿಕೊಳ್ಳಬಾರದು. ಈ ಬಗ್ಗೆ ಎಚ್ಚರ ಅಗತ್ಯ. ಇದರ ಬಗ್ಗೆ ವಿವರಣೆ ಅನಗತ್ಯ. 

4) ಎದೆಯುದ್ದಕ್ಕೆ ಬೆಳೆದ, ಪ್ರಾಯಕ್ಕೆ ಬಂದ ಮಗನಿಗೆ ಅತಿ ಸಲಿಗೆ ಕೊಡಬಾರದು. ಆತನನ್ನು ಮೊದಲಿನಂತೆ ಅಪ್ಪಿಕೊಳ್ಳಬಾರದು. ಆತನ ಸ್ನೇಹಿತ/ತೆಯರು ಯಾರು, ಅವರ ನಡತೆ ಹೇಗೆ ಎಂಬುದನ್ನು ಆಗಾಗ ಪರೀಕ್ಷಿಸುತ್ತಿರಬೇಕು. ಅವರನ್ನು ಮನೆಗೆ ಕರೆದು ಪರಿಚಯ ಮಾಡಿಕೊಳ್ಳಬಹುದು. 

5) ಮಗನ ಕಲಿಕೆಗೆ ಎಂದೂ ತಡೆ ಒಡ್ಡಬಾರದು. ಆತ ಏನನ್ನು ಎಷ್ಟು ಕಾಲ ಕಲಿಯಲು ಬಯಸುತ್ತಾನೋ ಅದಕ್ಕೆ ಆಸ್ಪದ ಮಾಡಿಕೊಡಬೇಕು. ಒಳ್ಳೆಯ ಗುರುಗಳಲ್ಲಿ ಶಿಕ್ಷಣ ಕೊಡಿಸಬೇಕು. ಲಲಿತಕಲೆಗಳಲ್ಲಿ ಆಸಕ್ತಿ ತೋರಿಸಿದರೆ ಅವಕಾಶ ಮಾಡಿಕೊಡಬೇಕು.

6) ಮಗನಿಗೆ ನಿಮಗಿಂತ ಅತಿ ಶ್ರೀಮಂತರು ಅಥವಾ ನಿಮಗಿಂತ ಅತಿ ಬಡವರ ಮನೆಯಿಂದ ಮದುವೆ ಮಾಡಿಸಿ ಸೊಸೆಯನ್ನು ಕರೆತರಬಾರದು. ಅತಿ ಶ್ರೀಮಂತ ಮಾವನ ಮನೆಯಲ್ಲಿ ಆತ ಸೇವೆಯ ಆಳು ಆಗುವ, ಮನೆಯಳಿಯ ಆಗುವ ಸಾಧ್ಯತೆ ಇದೆ. ಬಡವರ ಮನೆಯವಳಾದರೆ ಆಕೆಯ ಮನೆಯವರನ್ನು ನೀವೇ ನೋಡಿಕೊಳ್ಳುವ, ನಿಮ್ಮ ಮನೆಯಿಂದಲೇ ಹಣಕಾಸು ಒಯ್ಯಬೇಕಾದ ಪರಿಸ್ಥಿತಿ ಬರಬಹುದು. ನಿಮಗೆ ಸಮನಾದ ಸ್ಥಿತಿಗತಿಯ ಮನೆತನ ಸೂಕ್ತ. ಆದರೆ ವಧುವನ್ನು ಆರಿಸುವಾಗ ಮಗನ ಅಭಿಪ್ರಾಯವೇ ಮುಖ್ಯ. 

ಮಲಗುವ ನಿಮ್ಮ ಮಕ್ಕಳಿಗೆ ನೀವು ಕೇಳಲೇಬೇಕಾದ ಐದು ಪ್ರಮುಖ ಪ್ರಶ್ನೆಗಳು!
 

7) ಬೆಳೆಯುತ್ತಿರುವ ಮಗನ ಮುಂದೆ ಗಂಡ- ಹೆಂಡತಿ ಸರಸ ಆಡಬಾರದು. ಅದು ಆತನ ಮನಸ್ಸನ್ನು ಚಂಚಲಗೊಳಿಸಬಹುದು. ಮನಸ್ಸಿನಲ್ಲೇ ಮಂಡಿಗೆ ತಿನ್ನುವಂತಾಗಬಹುದು. ತಾನೂ ಹೀಗೆ ಮಾಡಿದರೆ ತಪ್ಪೇನು ಎಂಬ ಭಾವನೆ ಆತನಲ್ಲಿ ಮೂಡಬಹುದು. ಮಗು ಸಣ್ಣವನಾಗಿದ್ದಾಗ ಕೂಡ, ಆತನ ಮುಂದೆ ಲೈಂಗಿಕ ಕ್ರಿಯೆ ನಡೆಸಬಾರದು. ಇದು ಆತನ ಮನದಲ್ಲಿ ಅಪಕಲ್ಪನೆಗಳನ್ನು, ಮಾನಸಿಕ ವಿಕಲ್ಪಗಳನ್ನು ಬಿತ್ತಬಹುದು.

8) ಮಗನ ಮುಂದೆ ಅಪ್ಪ ಅಮ್ಮ ಜಗಳ ಕೂಡ ಆಡಬಾರದು. ಒಬ್ಬರನ್ನೊಬ್ಬರು ಬೈದಾಡಬಾರದು. ಇದು ಕೂಡ ದಾಂಪತ್ಯದ ಬಗ್ಗೆ ಆತನಲ್ಲಿ ಕಹಿ ಭಾವನೆ ಮೂಡಿಸುತ್ತದೆ. ಮಾತ್ರವಲ್ಲ ನಿಮ್ಮ ಬಗ್ಗೆಯೂ ದ್ವೇಷ ಭಾವನೆ ಮೂಡಿಸುತ್ತದೆ.  

ಚಾಣಕ್ಯ ನೀತಿ: ಹಣಕ್ಕಿಂತಲೂ ಮುಖ್ಯವಾದ ಈ ಮೂರು ವಿಚಾರಗಳು ತಿಳಿದಿರಲೇಬೇಕು
 

Latest Videos
Follow Us:
Download App:
  • android
  • ios