ಹುಡುಗಿಯರು (Girls) ಹೆಚ್ಚು ಖರ್ಚು ಮಾಡ್ತಾರೆ ಅನ್ನೋದು ಸಾಮಾನ್ಯವಾಗಿ ಎಲ್ಲರ ದೂರು. ಹೀಗಾಗಿಯೇ ಹುಡುಗಿಯರನ್ನು ಶಾಪಿಂಗ್ (Shopping) ಕರೆದುಕೊಂಡು ಹೋಗಲು ಹುಡುಗರು ಹಿಂಜರಿಯುತ್ತಾರೆ. ಹಾಗಿದ್ರೆ ಹುಡುಗೀರು ಸಿಕ್ಕಾಪಟ್ಟೆ ಖರ್ಚು (Expense) ಮಾಡೋದು ಯಾವುದಕ್ಕೆ ಅನ್ನೋದನ್ನು ತಿಳಿಯೋಣ.
ಹುಡುಗಿಯರು (Girls) ಸಾಮಾನ್ಯವಾಗಿ ಶಾಪಿಂಗ್ (Shopping) ಪ್ರಿಯರು. ತಮ್ಮಲ್ಲಿ ಎಷ್ಟಿದ್ದರೂ ಮತ್ತಷ್ಟು ಮತ್ತಷ್ಟು ಖರೀದಿಸುವ ಚಾಳಿ ಅವರಿಗಿದೆ. ಇದಲ್ಲದೆ ಹುಡುಗಿಯರು ಯಾವಾಗಲೂ ಆಕರ್ಷಕ ವ್ಯಕ್ತಿತ್ವ (Personality) ತಮ್ಮದಾಗಬೇಕೆಂದು ಬಯಸುತ್ತಾರೆ. ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಲು ಹುಡುಗರಿಗಿಂತ ಹೆಚ್ಚು ಆಸಕ್ತಿ ವಹಿಸುತ್ತಾರೆ. ಹೀಗಾಗಿ ಎಷ್ಟು ಖರ್ಚಾದರೂ ಪರವಾಗಿಲ್ಲ ಎಂದು ಮಾರುಕಟ್ಟೆಗೆ ಬರುವ ಹೊಸ ಉತ್ಪನ್ನಗಳನ್ನು ಸಹ ಪ್ರಯತ್ನಿಸುತ್ತಾರೆ. ತಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಕಾಣಿಸಿಕೊಳ್ಳುವುದು ಅವರಿಗಿಷ್ಟ. ಹೀಗಾಗಿಯೇ ಬಟ್ಟೆ, ಆಭರಣ ಮತ್ತು ಚಪ್ಪಲಿಗಳು ಇಷ್ಟವಾದರೆ ಬೆಲೆ ಎಷ್ಟು ಎಂದು ನೋಡದೆ ಖರೀದಿಸಿ ಬಿಡುತ್ತಾರೆ.
ಹುಡುಗಿಯರು ಶಾಪಿಂಗ್ ಪ್ರಿಯರು
ಹುಡುಗರು ಶಾಪಿಂಗ್ ಮಾಲ್‌ಗೆ ಹೋದರೆ ನಾಲ್ಕು ಡ್ರೆಸ್‌ಗಳನ್ನು ನೋಡಿ ಅದರಲ್ಲಿ ಒಂದನ್ನು ಆರಿಸಿ ಖರೀದಿಸಿ ಬಂದು ಬಿಡುತ್ತಾರೆ. ಆದರೆ ಹುಡುಗಿಯರು ಹಾಗಲ್ಲ, ನೋಡಿರುವುದು ನಾಲ್ಕು ಬಟ್ಟೆಯಾದರೂ ಇನ್ಯಾವುದನ್ನೋ ಆರಿಸಿ ಐದು ಬಟ್ಟೆ ಖರೀದಿ ಮಾಡುತ್ತಾರೆ. ಹುಡುಗರಂತೆ ಹುಡುಗಿಯರು ತಮಗೆ ಬೆಲೆ ಹೆಚ್ಚೆಂದು, ಡಿಸೈನ್ ಚೆನ್ನಾಗಿಲ್ಲವೆಂದು ಇಷ್ಟವಿಲ್ಲದದ್ದನ್ನು ಖರೀದಿಸಿಕೊಂಡು ಸುಮ್ಮನಿರುವುದಿಲ್ಲ. ವಿಶೇಷವಾಗಿ ಬಟ್ಟೆಗೆ ಬಂದಾಗ. ಇಷ್ಟವಿದ್ದರೆ ಎಷ್ಟೇ ಖರ್ಚಾದರೂ ಖರೀದಿಸಲು ಮುಂದಾಗುತ್ತಾರೆ. ಹಾಗಿದ್ರೆ ಹುಡುಗಿಯರು ಅತಿ ಹೆಚ್ಚು ಖರ್ಚು ಮಾಡುವುದು ಯಾವುದಕ್ಕೆಲ್ಲಾ, ಅವರ ಪರ್ಸ್ ಖಾಲಿಯಾಗುವುದು ಯಾವ ಕಾರಣಕ್ಕೆ ತಿಳಿಯೋಣ.
Girls Secret:ಬಾಯ್ ಫ್ರೆಂಡ್ ನೆನಪು ಬರ್ತಿದ್ದಂತೆ ಹುಡುಗಿಯರು ಮಾಡೋದು ಇದನ್ನೇ !
ಹುಡುಗಿಯರು ಈ ಆರಕ್ಕೆ ಹೆಚ್ಚು ಖರ್ಚು ಮಾಡುತ್ತಾರೆ.
1.ಮೇಕಪ್ ಉತ್ಪನ್ನಗಳು
2. ಲೇಡೀಸ್ ಬ್ಯಾಗ್‌ಗಳು
3. ದುಬಾರಿ ಆಭರಣ
4. ಹೊರಗೆ ಆಹಾರ ತಿನ್ನುವುದು
5. ಬಟ್ಟೆ
6. ಪಾದರಕ್ಷೆಗಳು
ಇವುಗಳಿಗೇಕೆ ಹೆಚ್ಚು ಖರ್ಚು ಎಂದು ಅಂದುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಬಹುತೇಕ ಯುವಕರು ಸಾಮಾಜಿಕ ಜಾಲತಾಣಗಳಿಗೆ ಒಗ್ಗಿಕೊಂಡಿದ್ದಾರೆ. ಅದರಲ್ಲಿ ಹುಡುಗಿಯರು ಸ್ಟೈಲ್ ಆಗಿ ಸಾಮಾಜಿಕ ಜಾಲತಾಣಗಳಾದ ಶೇರ್ ಚಾಟ್, ಫೇಸ್ ಬುಕ್, ಇನ್ ಸ್ಟಾಗ್ರಾಂಗಳಲ್ಲಿ ಫೋಟೋ, ವಿಡಿಯೋ ಹಾಕುತ್ತಿದ್ದಾರೆ. ಎಲ್ಲರೂ ತಾವು ಸ್ಟೈಲಿಶ್ ಎಂದು ತೋರಿಸಿಕೊಳ್ಳಲು ಇಷ್ಟಪಡುತ್ತಾರೆ. ಹೀಗಾಗಿ ತಮ್ಮ ಫ್ಯಾಶನೆಬಲ್ ಡ್ರೆಸ್, ಶೂ ತೋರಿಸಿಕೊಳ್ಳುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಇದು ಅವರ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈಗ ಒಳ್ಳೆಯ ರೆಸ್ಟೋರೆಂಟ್‌ಗಳಲ್ಲಿ ತಿನ್ನುವುದು ಸಹ ಅದರ ಭಾಗವಾಗಿದೆ.
ಆಹಾರದ ವಿಷಯಕ್ಕೆ ಬಂದಾಗ ಬಹುತೇಕ ಹುಡುಗಿಯರು ಫುಡ್ಡೀಗಳು. ವೆರೈಟಿ ವೆರೈಟಿ ಫುಡ್‌ನ್ನು ಎಷ್ಟು ಬೇಕಾದರೂ ಸವಿಯುತ್ತಾರೆ. ಚಾಟ್ಸ್, ಡೆಸರ್ಟ್, ಪಿಜ್ಜಾ ಎಂದು ಇಂಥಾ ಆಹಾರಗಳಿಗೆ ಬೇಕಾಬಿಟ್ಟಿ ದುಡ್ಡು ವ್ಯಯಿಸುತ್ತಾರೆ. ಫುಡ್ ಬ್ಲಾಗಿಂಗ್ ಸಹ ಈಗ ಟ್ರೆಂಡ್ ಆಗಿರುವ ಕಾರಣ ಫೋಟೋ ತೆಗೆದು ಪೋಸ್ಟ್ ಮಾಡಲೆಂದೇ ರೆಸ್ಟೋರೆಂಟ್‌ಗಳಿಗೆ ಹೋಗುವವರಿದ್ದಾರೆ.
Life Story: 1966ರಲ್ಲಿ ಸುಂದರ ಹುಡುಗನ ಹುಡುಕಾಟಕ್ಕೆ ಹುಡುಗಿಯರು ಮಾಡಿದ್ದ ಆ ಕೆಲಸವೇನು ಗೊತ್ತಾ?
ಹುಡುಗಿಯರು ಖರ್ಚು ಕಡಿಮೆ ಮಾಡಿಕೊಳ್ಳುವುದು ಹೇಗೆ ?
-ಹಣವನ್ನು ಖರ್ಚು ಮಾಡಲು ಸ್ಮಾರ್ಟ್ ಮಾರ್ಗಗಳು .. ನಗರಗಳಲ್ಲಿ ಸಾಕಷ್ಟು ಶಾಪಿಂಗ್ ಮಾಲ್‌ಗಳು ಮತ್ತು ಅಂಗಡಿಗಳಿವೆ, ಅಲ್ಲಿ ದುಬಾರಿ ಬಟ್ಟೆಗಳು ಅಥವಾ ಶೂಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಆದ್ದರಿಂದ ಅನಗತ್ಯವಾಗಿ ಹೆಚ್ಚು ಹಣವನ್ನು ಖರ್ಚು ಮಾಡದೆ ಉಳಿಸಿ.
-ನೀವು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗಳಲ್ಲಿ ತಿನ್ನಲು ಬಯಸದಿದ್ದಾಗ ಬಿಲ್ ಅನ್ನು ಕೇವಲ ಒಂದಕ್ಕಿಂತ ಹೆಚ್ಚಾಗಿ ನಿಮ್ಮ ನಡುವೆ ವಿಭಜಿಸುವುದು ಒಳ್ಳೆಯದು. ಹಾಗೆ ಮಾಡುವುದರಿಂದ ಯಾವುದೇ ವ್ಯಕ್ತಿಗೆ ಹೊರೆಯಾಗುವುದಿಲ್ಲ
-ಮೇಕಪ್‌ಗೆ ಹೆಚ್ಚು ಹಣ ವ್ಯಯಿಸುವ ಬದಲು, ಭಾರವಾದ ಮೇಕ್‌ಅಪ್‌ನೊಂದಿಗೆ ಮಾತ್ರವಲ್ಲದೆ ನಿಮ್ಮ ಅತ್ಯುತ್ತಮವಾಗಿ ಹೇಗೆ ಕಾಣಬೇಕು ಎಂಬುದನ್ನು ತೋರಿಸುವ ಮೇಕಪ್ ಕಿಟ್‌ಗಳನ್ನು ಖರೀದಿಸಿ. ಇವುಗಳು ನಿಮ್ಮನ್ನು ನೈಸರ್ಗಿಕವಾಗಿ ಹಾಗೂ ಸುಂದರವಾಗಿ ಕಾಣುವಂತೆ ಮಾಡುತ್ತದೆ.
-ಪ್ರತಿ ಹಬ್ಬಕ್ಕೂ ಆನ್‌ಲೈನ್ ಶಾಪಿಂಗ್‌ನಲ್ಲಿ ಹಲವು ಆಫರ್‌ಗಳಿವೆ. ನಿಮ್ಮ ಸ್ನೇಹಿತರೊಂದಿಗೆ ನೀವು ಹೊಂದಿರುವ ನೆಚ್ಚಿನ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ ನೀವು ಉತ್ತಮ ರಿಯಾಯಿತಿಯನ್ನು ಪಡೆಯಬಹುದು.
