Kitchen Hacks : ಹೀಗೆ ಮಾಡಿದ್ರೆ ಫಳ ಫಳ ಹೊಳೆಯುತ್ತೆ ಕೊಳಕಾದ ವಾಶ್ ಬೇಸಿನ್
Kitchen cleaning hacks: ಅನೇಕರು ವಾಶ್ ಬೇಸಿನ್ ಕ್ಲೀನ್ ಮಾಡೋದನ್ನೇ ಮರೆತಿರುತ್ತಾರೆ. ಕೆಲವೊಮ್ಮೆ ಅದ್ರಿಂದ ಗಬ್ಬು ವಾಸನೆ ಬರುತ್ತೆ. ಇನ್ನೊಂದು ಕಡೆ ಬೇಸಿನ್ ಮೇಲೆ ಕಲೆಗಳಾಗಿರ್ತವೆ. ಅದನ್ನು ಸ್ವಚ್ಛಗೊಳಿಸೋದು ಕಷ್ಟವೇನಲ್ಲ. ಸುಲಭ ವಿಧಾನ ಇಲ್ಲಿದೆ.
ಮನೆ (Home) ಯ ಸ್ವಚ್ಛತೆ (Clean) ಅಂದಾಗ ಮನೆಯ ಮೂಲೆ ಮೂಲೆಗಳು ಬರ್ತವೆ. ಬಾತ್ ರೂಮ್ (Bathroom), ಟಾಯ್ಲೆಟ್ (Toilet) ಕ್ಲೀನ್ ಮಾಡಿದ್ರೆ ಸಾಲುವುದಿಲ್ಲ. ವಾಶ್ ಬೇಸಿನ್ (Wash Basin)ಕೂಡ ಸ್ವಚ್ಛವಾಗಿರಬೇಕು. ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಜಾಗಗಳಲ್ಲಿ ವಾಶ್ ಬೇಸಿನ್ ಕೂಡ ಒಂದು. ಕೈ ತೊಳೆಯುವುದ್ರಿಂದ ಹಿಡಿದು ಉಗುಳುವವರೆಗೆ ಎಲ್ಲ ಕೊಳಕು ಸೇರುವುದು ವಾಶ್ ಬೇಸಿನನ್ನು. ಬೆಳಿಗ್ಗೆ ಎದ್ದ ತಕ್ಷಣ ಜನರು ವಾಶ್ ಬೇಸಿನ್ ಮುಂದೆ ನಿಂತು ಹಲ್ಲುಜ್ಜುತ್ತಾರೆ. ವಾಶ್ ಬೇಸಿನ್ ಮೇಲೆ ಸೋಪ್ ಕಲೆಗಳಿರುತ್ತವೆ. ಬೆಳ್ಳಗಿರುವ ಬೇಸಿನ್ ಬಣ್ಣ ಕೆಂಪಾಗಿರುತ್ತದೆ. ದೀರ್ಘಕಾಲದವರೆಗೆ ಅದನ್ನು ಸ್ವಚ್ಛಗೊಳಿಸದೆ ಹೋದ್ರೆ ಬೇಸಿನ್ ಮೇಲ್ಭಾಗದಲ್ಲಿ ಮಾತ್ರವಲ್ಲ ಪೈಪ್ ನಲ್ಲಿ ಕೂಡ ಕೊಳಕು ಸಂಗ್ರಹವಾಗಿರುತ್ತದೆ. ಇದ್ರಿಂದ ಬೇಸಿನ್ ನೀರು ಕ್ಲೀನ್ ಆಗಿ ಹೊರಗೆ ಹೋಗುವುದಿಲ್ಲ. ಗಡಸು ನೀರು ಬರುವ ಮನೆಗಳಲ್ಲೂ ಸಿಂಕ್ ನಲ್ಲಿ ಕಲೆಗಳು ಸುಲಭವಾಗಿ ಕಂಡು ಬರುತ್ತವೆ. ಹಾಗಾದರೆ ವಾಶ್ ಬೇಸಿನ್‌ನಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ನೀವು ಸುಲಭವಾಗಿ ಹೇಗೆ ಸ್ವಚ್ಛಗೊಳಿಸಬಹುದು ಎಂಬುದನ್ನು ನಾವು ಇಂದು ಹೇಳ್ತೇವೆ.
ಮನೆಯ ವಾಶ್ ಬೇಸಿನ್ ಹೀಗೆ ಕ್ಲೀನ್ ಮಾಡಿ :
ಅಡಿಗೆ ಸೋಡಾ ಮತ್ತು ವಿನೆಗರ್ : ಸ್ವಚ್ಛಗೊಳಿಸುವ ವಿಷ್ಯದಲ್ಲಿ ಅಡಿಗೆ ಸೋಡಾ ಮೊದಲ ಸ್ಥಾನದಲ್ಲಿದೆ. ಅಡುಗೆ ಸೋಡಾ ಸಹಾಯದಿಂದ ನೀವು ಸುಲಭವಾಗಿ ಸಿಂಕ್ ಸ್ವಚ್ಛಗೊಳಿಸಬಹುದು. ವಾಶ್ ಬೇಸಿನ್ ಅನ್ನು ಸ್ವಚ್ಛಗೊಳಿಸಲು, ಒಂದು ಬಟ್ಟಲಿನಲ್ಲಿ ಅಡಿಗೆ ಸೋಡಾ ಮತ್ತು ವಿನೆಗರ್ ಅನ್ನು ಪೇಸ್ಟ್ ಮಾಡಿ ಮತ್ತು ಅದನ್ನು ಸ್ಪಾಂಜ್ ಸಹಾಯದಿಂದ ವಾಶ್ ಬೇಸಿನ್ ಮೇಲೆ ಅನ್ವಯಿಸಿ. ಸುಮಾರು 15 ನಿಮಿಷಗಳ ನಂತರ, ವಾಶ್ ಬೇಸಿನ್ ಅನ್ನು ಸ್ಕ್ರ್ಯಾಚ್ ಆಗದ ಸ್ಪಾಂಜ್‌ನಿಂದ ಉಜ್ಜುವ ಮೂಲಕ ಸ್ವಚ್ಛಗೊಳಿಸಿ. ನಂತ್ರ ವಾಶ್ ಬೇಸಿನನ್ನು ನೀರಿನಿಂದ ಕ್ಲೀನ್ ಮಾಡಿ.
KITCHEN HACKS: ಕಲೆಯ ಟೆನ್ಷನ್ ಬಿಟ್ಬಿಡಿ.. ನಿಂಬೆಯಲ್ಲಿದೆ ಮ್ಯಾಜಿಕ್ ಗುಣ
ವಿನೆಗರ್ ಮತ್ತು ಡಿಶ್ ಡಿಟರ್ಜೆಂಟ್ : ಡಿಶ್ ಡಿಟರ್ಜೆಂಟ್ ಕೂಡ ನಿಮ್ಮ ಬೇಸಿನ್ ಸ್ವಚ್ಛಗೊಳಿಸಲು ಸಹಾಯವಾಗುತ್ತದೆ. ಒಂದು ಪಾತ್ರೆಯಲ್ಲಿ ವಿನೆಗರ್ ಮತ್ತು ಡಿಶ್ ಡಿಟರ್ಜೆಂಟ್ ತೆಗೆದುಕೊಳ್ಳಿ. ನಂತ್ರ ವಿನೆಗರ್, ನೀರು ಮತ್ತು ಡಿಶ್ ಡಿಟರ್ಜೆಂಟ್ ಅನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಮಿಕ್ಸ್ ಮಾಡಿ. ಈಗ ಅದನ್ನು ವಾಶ್ ಬೇಸಿನ್ ಮೇಲೆ ಚೆನ್ನಾಗಿ ಚಿಮುಕಿಸಿ. ಸುಮಾರು 15 ನಿಮಿಷಗಳ ನಂತರ, ಮೃದುವಾದ ಬ್ರೆಷ್ ನಿಂದ ವಾಶ್ ಬೇಸಿನ್ ಅನ್ನು ಸ್ವಚ್ಛಗೊಳಿಸಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ನಿಂಬೆ ಮತ್ತು ಅಡಿಗೆ ಸೋಡಾ : ನಿಂಬೆ ಹಣ್ಣಿನ ರಸ ಮತ್ತು ಅಡಿಗೆ ಸೋಡಾದ ಸಹಾಯದಿಂದ ವಾಶ್ ಬೇಸಿನ್ ಅನ್ನು ಕ್ಲೀನ್ ಮಾಡಬಹುದು. ಕಲೆಯನ್ನು ಸುಲಭವಾಗಿ ತೆಗೆಯಬಹುದು. ವಾಶ್ ಬೇಸಿನ್‌ಗೆ ಅಡುಗೆ ಸೋಡಾವನ್ನು ಸಿಂಪಡಿಸಿ. ಇದರ ನಂತರ, ನಿಂಬೆ ರಸವನ್ನು ವಾಶ್ ಬೇಸಿನ್ ಗೆ ಹಾಕಿ. ನಂತ್ರ ವಾಶ್ ಬೇಸಿನನ್ನು ಸುಮಾರು 5-7 ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿಕೊಳ್ಳಿ. ಇದರ ನಂತರ ವಾಶ್ ಬೇಸಿನ್ ಅನ್ನು ನೀರಿನಿಂದ ಸ್ವಚ್ಛಗೊಳಿಸಿ.
Peeing Mistakes: ಮಹಿಳೆಯರು ಮಾಡೋ ಈ ತಪ್ಪು ತರುತ್ತೆ ಮೂತ್ರನಾಳದ ಸೋಂಕು!
ಪ್ರತಿದಿನ ಕ್ಲೀನಿಂಗ್ : ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ವಾಶ್ ಬೇಸಿನ್ ಸ್ವಚ್ಛಗೊಳಿಸಿದ್ರೆ ಕ್ಲೀನ್ ಆಗೋದು ಕಷ್ಟ. ಅದೇ ಪ್ರತಿ ದಿನ ನೀವು ಕ್ಲೀನ್ ಮಾಡ್ತಿದ್ದರೆ ಕಲೆ ಅಂಟಿಕೊಳ್ಳುವುದನ್ನು ತಡೆಯಬಹುದು. ಆದ್ದರಿಂದ ಪ್ರತಿದಿನ ಕೆಲವು ನಿಮಿಷಗಳನ್ನು ಸ್ವಚ್ಛತೆಗೆ ಮೀಸಲಿಡಿ. ಮನೆಯ ಉಳಿದ ಸ್ಥಳಗಳನ್ನು ಸ್ವಚ್ಛಗೊಳಿಸಿದಂತೆ ಬೇಸಿನ್ ಕೂಡ ಪ್ರತಿ ದಿನ ಕ್ಲೀನ್ ಮಾಡಿ. ಆಗ ಬೇಸಿನ್ ಹೊಳೆಯುತ್ತಿರುತ್ತದೆ. ಯಾವುದೇ ಬ್ಯಾಕ್ಟೀರಿಯಾ ಅದ್ರಲ್ಲಿ ಮನೆ ಮಾಡುವುದಿಲ್ಲ.