ಮೊಬೈಲ್ ಬಳಕೆಯಿಂದ ಹ್ಯಾಕರ್ಸ್ ಹಾವಳಿ ಹೆಚ್ಚಾಗಿದ್ದು, ಯುವತಿಯರ ಖಾಸಗಿ ವಿಡಿಯೋಗಳನ್ನು ತಯಾರಿಸಿ ವೈರಲ್ ಮಾಡಲಾಗುತ್ತಿದೆ. ಬ್ರೌಸರ್ ಅಥವಾ ಆ್ಯಪ್ ಡೌನ್‌ಲೋಡ್ ಮಾಡುವಾಗ ಕ್ಯಾಮೆರಾ ಅನುಮತಿ ನೀಡುವ ಮೂಲಕ ಹ್ಯಾಕರ್‌ಗಳಿಗೆ ಅವಕಾಶ ನೀಡಿದಂತಾಗುತ್ತದೆ. ಸ್ನಾನ ಮಾಡುವಾಗ ಅಥವಾ ಬಟ್ಟೆ ಬದಲಾಯಿಸುವಾಗ ಮೊಬೈಲ್ ಬಳಸುವುದನ್ನು ತಪ್ಪಿಸಿ. ಕ್ಯಾಮೆರಾ ಆನ್ ಮಾಡದಿದ್ದರೂ ಹಸಿರು ಲೈಟ್ ಬಂದರೆ, ಕ್ಯಾಮೆರಾ ಅನುಮತಿಯನ್ನು ರದ್ದುಗೊಳಿಸಿ ಎಚ್ಚರಿಕೆ ವಹಿಸಿ.
ಜನರ ನಿತ್ಯ ಜೀವನಕ್ಕೆ ಅತ್ಯಗತ್ಯವಾಗಿರುವ ಮೊಬೈಲ್ (Mobile) ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡ್ತಿದೆ. ಹ್ಯಾಕರ್ಸ್ (Hackers) ಹಾವಳಿ ಹೆಚ್ಚಾಗಿದೆ. ಸದ್ದಿಲ್ಲದೆ ಖಾತೆಯಿಂದ ಹಣ ದೋಚುವ ಹ್ಯಾಕರ್ಸ್, ಹುಡುಗಿಯರ ಅಶ್ಲೀಲ ವಿಡಿಯೋ ತಯಾರಿಸಿ ಅದನ್ನು ವೈರಲ್ ಮಾಡ್ತಿದ್ದಾರೆ, ಹುಡುಗಿಯರು ಸ್ನಾನ ಮಾಡುವಾಗ ಅಥವಾ ಬಟ್ಟೆ ಬದಲಿಸುವಾಗಿನ ವಿಡಿಯೋ ವಯಸ್ಕರ ಸೈಟ್ (adult site) ನಲ್ಲಿ ಅಪ್ಲೋಡ್ ಆದ ಸುದ್ದಿಗಳು ಆಗಾಗ ಕೇಳಿ ಬರ್ತಿರುತ್ತವೆ. ಇದು ಹುಡುಗಿಯರ ಬಾಳಲ್ಲಿ ದೊಡ್ಡ ಸಮಸ್ಯೆಯನ್ನು ತಂದೊಡ್ಡುತ್ತದೆ. ಕೆಲ ಯುವತಿಯರು ಅವಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಿದೆ. ಸ್ನಾನ ಮಾಡುವಾಗ ಅಥವಾ ಬಟ್ಟೆ ಬದಲಿಸುವಾಗ ಯುವತಿಯರು ಮೊಬೈಲ್ ನಲ್ಲಿ ವಿಡಿಯೋ ಮಾಡಿರೋದಿಲ್ಲ. ಅಲ್ಲಿ ಎಲ್ಲೂ ಹಿಡನ್ ಕ್ಯಾಮರಾ ಕೂಡ ಇರೋದಿಲ್ಲ. ಇಂಥ ಪರಿಸ್ಥಿತಿಯಲ್ಲಿ ವಿಡಿಯೋ ತಯಾರಾಗಿದ್ದು ಹೇಗೆ, ವೈರಲ್ ಆಗಿದ್ದು ಹೇಗೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಲಾಗಿದೆ. ಅದ್ರಲ್ಲಿ ಮೊಬೈಲ್ ಗೆ ಅಂಟಿಕೊಳ್ಳುವ ಹುಡುಗಿಯರು ಹೇಗೆ ಮೋಸಕ್ಕೆ ಒಳಗಾಗ್ತಾರೆ ಎಂಬುದನ್ನು ಹೇಳಲಾಗಿದೆ. ಪ್ರತಿಯೊಬ್ಬ ಹುಡುಗಿಯರು, ವಿಡಿಯೋ ವೈರಲ್ ಗೆ ಸಂಬಂಧಿಸಿದ ಮಾಹಿತಿ ತಿಳಿಸಿದ್ರೆ ದುರ್ಘಟನೆಯಿಂದ ಬಚಾವ್ ಆಗೋದು ಸುಲಭ.
ಒನ್ ನೈಟ್ ಸ್ಟ್ಯಾಂಡ್ ನಂತ್ರ ಪ್ರೆಗ್ನೆಂಟ್, ಗರ್ಭಪಾತದ ನಿರ್ಧಾರ ನಂದು, ಒಂಟಿಯಾಗಿ
ಮೊದಲನೇಯದಾಗಿ ಹುಡುಗಿಯರು ಸದಾ ಮೊಬೈಲ್ ಕೈನಲ್ಲಿ ಹಿಡಿದು ಓಡಾಡ್ಬಾರದು. ಅನೇಕ ಹುಡುಗಿಯರು ಬಾತ್ ರೂಮಿಗೆ ಮೊಬೈಲ್ ತೆಗೆದುಕೊಂಡು ಹೋಗ್ತಾರೆ. ಬಟ್ಟೆ ಬದಲಿಸುವಾಗ್ಲೂ ಮೊಬೈಲ್ ಅವ್ರ ಜೊತೆಯಲ್ಲಿರುತ್ತದೆ. ಬೆಡ್ ರೂಮಿನಲ್ಲಿ ಎಲ್ಲೆಂದರಲ್ಲಿ ಮೊಬೈಲ್ ಎಸೆಯುವ ಹುಡುಗಿಯರಿದ್ದಾರೆ. ಮೊಬೈಲ್ ಆಫ್ ಆಗಿದೆ, ಕ್ಯಾಮರಾ ಆನ್ ಆಗಿಲ್ಲ ಅಂತ ಹುಡುಗಿಯರು ಭಾವಿಸ್ತಾರೆ. ಆದ್ರೆ ಹ್ಯಾಕರ್ಸ್ ಬಹಳ ಬುದ್ಧಿವಂತರು. ಹುಡುಗಿಯರು ಸ್ನಾನ ಮಾಡುವಾಗ ಇಲ್ಲವೆ ಬಟ್ಟೆ ಬದಲಿಸುವ ವಿಡಿಯೋ ತಯಾರಿಸಿ, ವಯಸ್ಕರ ಸೈಟ್ ಗೆ ಅಪ್ಲೋಡ್ ಮಾಡ್ತಾರೆ.
ಕ್ಯಾಮರಾ ಆಫ್ ಇದ್ರೂ ವಿಡಿಯೋ ಸಿದ್ಧವಾಗೋದು ಹೇಗೆ? : ನಮಗೆ ತಿಳಿಯದೆ ನಾವು ಮಾಡಿರುವ ತಪ್ಪುಗಳೇ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ನಾವು ಬ್ರೌಸರ್ ಓಪನ್ ಮಾಡಿದಾಗ ಇಲ್ಲವೆ ಯಾವುದಾದ್ರೂ ಅಪ್ಲಿಕೇಷನ್ ಡೌನ್ಲೋಡ್ ಮಾಡುವ ಸಮಯದಲ್ಲಿ ಪಾಪ್ ಅಪ್ ಸಂದೇಶ ಬರುತ್ತದೆ. ಅದ್ರಲ್ಲಿ ಫೋನ್ ಕ್ಯಾಮರಾ ಅನುಮತಿ ಕೇಳಲಾಗುತ್ತದೆ. ನಮ್ಮ ಅರಿವಿಲ್ಲದೆ ಅದಕ್ಕೆ ಓಕೆ ಒತ್ತಿರುತ್ತೇವೆ. ಹ್ಯಾಕರ್ಸ್ ಇದನ್ನಿಟ್ಟುಕೊಂಡೇ ವಿಡಿಯೋ ತಯಾರಿಸ್ತಾರೆ. ನಿಮಗೆ ತಿಳಿಯದೆ ನಿಮ್ಮ ಕ್ಯಾಮರಾ ಆನ್ ಆಗಿ, ವಿಡಿಯೋ ಸಿದ್ಧವಾಗುತ್ತದೆ.
ವಿದೇಶದಿಂದ ಬರ್ತಾರೆ, 'ಶುದ್ಧ ಆರ್ಯ'ರಿಂದ ಗರ್ಭ ಧರಿಸಿ ಹೋಗ್ತಾರೆ... ಗರ್ಭಧಾರಣೆ
ಹ್ಯಾಕರ್ಸ್ ನಿಂದ ರಕ್ಷಣೆ ಹೇಗೆ? : ಹ್ಯಾಕರ್ಸ್ ಆಟಕ್ಕೆ ನೀವು ಬಲಿಯಾಗಬಾರದು ಅಂದ್ರೆ ನೀವು ಕಂಡ ಕಂಡಲ್ಲಿ ಮೊಬೈಲ್ ತೆಗೆದುಕೊಂಡು ಹೋಗ್ಬೇಡಿ. ಎರಡನೇಯದು ಸ್ನಾನ ಮಾಡುವಾಗ ಇಲ್ಲವೆ ಬಟ್ಟೆ ಬದಲಿಸುವಾಗ ನೀವು ಆನ್ ಮಾಡದೆ ನಿಮ್ಮ ಮೊಬೈಲ್ ಬ್ಯಾಟರಿ ಹತ್ರ ಹಸಿರು ಲೈಟ್ ಬರ್ತಿದ್ಯಾ ಗಮನಿಸಿ. ಒಂದ್ವೇಳೆ ನೀವು ಕ್ಯಾಮರಾ ತೆರೆಯದೇ ಹಸಿರು ಲೈಟ್ ಬರ್ತಾ ಇದೆ ಎಂದಾದ್ರೆ ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದರ್ಥ. ತಕ್ಷಣ ನೀವು ಎಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು. ನಿಮ್ಮ ಮೊಬೈಲ್‌ನ ಸೆಟ್ಟಿಂಗ್‌ಗಳಿಗೆ ಹೋಗಿ, ಅಪ್ಲಿಕೇಷನ್ ಗೆ ನೀಡಿರುವ ಕ್ಯಾಮೆರಾದ ಅನುಮತಿಯನ್ನು ರದ್ದುಗೊಳಿಸಿ. ಪ್ರತಿ ಬಾರಿ ಬ್ರೌಸರ್ ಬಳಕೆ ಮಾಡುವಾಗ ಇಲ್ಲವೆ ಅಪ್ಲಿಕೇಷನ್ ಡೌನ್ಲೋಡ್ ಮಾಡುವಾಗ, ನೀವು ಯಾವುದಕ್ಕೆಲ್ಲ ಒಪ್ಪಿಗೆ ನೀಡುತ್ತಿದ್ದೀರಿ ಎಂಬುದನ್ನು ಗಮನಿಸಿ. ನಿಮಗೆ ತಿಳಿಯದ ಯಾವುದೇ ಅಪ್ಲಿಕೇಷನ್ ಗೆ ಕ್ಯಾಮರಾ ತೆರೆಯುವ ಪರ್ಮಿಷನ್ ನೀಡ್ಬೇಡಿ.
