Asianet Suvarna News Asianet Suvarna News

ವೆಬ್‌ ಸೀರೀಸ್‌ನಲ್ಲಿ ನಟಿಸಿದ್ದೇನೆ, ಸದ್ಯ ಸಿನಿಮಾದಲ್ಲಿ ನಟಿಸಲ್ಲ: ಸಿನಿ ಶೆಟ್ಟಿ

ಈಗಾಗಲೇ ವೆಬ್‌ ಸೀರಿಸ್‌ಗಳಲ್ಲಿ ನಟಿಸಿದ್ದೇನೆ. ಮುಂದೆ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ತಯಾರಿ ನಡೆಸುತ್ತಿರುವುದರಿಂದ, ತಕ್ಷಣಕ್ಕೆ ಸಿನಿಮಾದಲ್ಲಿ ನಟಿಸುವ ಬಗ್ಗೆ ಯೋಚಿಸಿಲ್ಲ ಎಂದು ‘ಮಿಸ್‌ ಇಂಡಿಯಾ’ ಉಡುಪಿ ಮೂಲದ ಸಿನಿ ಶೆಟ್ಟಿ ತಿಳಿಸಿದ್ದಾರೆ. 

Grand Wel Come To Femina Miss India Sini Shetty In Udupi gvd
Author
Bangalore, First Published Jul 20, 2022, 7:57 AM IST | Last Updated Jul 20, 2022, 7:57 AM IST

ಉಡುಪಿ (ಜು.20): ಈಗಾಗಲೇ ವೆಬ್‌ ಸೀರಿಸ್‌ಗಳಲ್ಲಿ ನಟಿಸಿದ್ದೇನೆ. ಮುಂದೆ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ತಯಾರಿ ನಡೆಸುತ್ತಿರುವುದರಿಂದ, ತಕ್ಷಣಕ್ಕೆ ಸಿನಿಮಾದಲ್ಲಿ ನಟಿಸುವ ಬಗ್ಗೆ ಯೋಚಿಸಿಲ್ಲ ಎಂದು ‘ಮಿಸ್‌ ಇಂಡಿಯಾ’ ಉಡುಪಿ ಮೂಲದ ಸಿನಿ ಶೆಟ್ಟಿ ತಿಳಿಸಿದ್ದಾರೆ. 

ಮಿಸ್‌ ಇಂಡಿಯಾ ಆಗಿ ಆಯ್ಕೆಯಾದ ನಂತರ ಸೋಮವಾರ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಅವರನ್ನು ಬಂಟರ ಸಂಘದ ವತಿಯಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಚೆಂಡೆ, ಕೊಂಬು ವಾದ್ಯಘೋಷಗಳೊಂದಿಗೆ ಮೆರವಣಿಗೆ ನಡೆಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ವೆಬ್‌ ಸೀರಿಸ್‌ಗಳಲ್ಲಿ ನಟಿಸಿರುವುದರಿಂದ ನನಗೆ ನಟನೆಯ ಅನುಭವ ಇದೆ. ತುಳು ನನ್ನ ತಾಯಿ ಭಾಷೆ, ಅದರಲ್ಲಿ ಒಳ್ಳೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದರೇ ನಟಿಸಲಿಕ್ಕೆ ಸಿದ್ಧ ಎಂದರು. ನನಗೆ ಬಾಲ್ಯದಿಂದಲೂ ಅಜ್ಜಿ ಎಲ್ಲ ರೀತಿಯಲ್ಲಿ ಬೆಂಬಲವಾಗಿದ್ದರು. 

ಅಜ್ಜೀ ಅಜ್ಜಿ ಮೋಕೆದ ಅಜ್ಜಿ- ಅಜ್ಜಿಯನ್ನು ಬಾಚಿತಬ್ಬಿ ಭಾವುಕರಾದ ಮಿಸ್ ಇಂಡಿಯಾ ಸಿನಿ ಶೆಟ್ಟಿ

ನಾನು ಎಲ್ಲಿಗೆ ಹೋದರೂ ಯಾವುದೇ ಉಡುಗೆ ತೊಟ್ಟರೂ ಅಜ್ಜಿ ನನ್ನನ್ನು ಪ್ರೋತ್ಸಾಹಿಸುತಿದ್ದರು. ಅವರ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಮನೆಗೆ ಹೋಗಿ ಅಜ್ಜಿಯ ಜೊತೆ ಕುಳಿತು ತುಂಬಾ ಮಾತನಾಡಬೇಕು ಎಂದರು. ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ, ಎಲ್ಲರಿಗೂ ಧನ್ಯವಾದಗಳು. ಈಗಾಗಲೇ ನಾನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮುಂದೆಯೂ ಅನೇಕ ಸಾಮಾಜಿಕ ಕಾರ್ಯ ಮಾಡುವ ಆಸೆ ಇದೆ. ಅದನ್ನೆಲ್ಲಾ ಮುಂದೆ ನನ್ನ ಮಿಸ್‌ ಇಂಡಿಯಾ ಸಾಮಾಜಿಕ ಜಾಲತಾಣಗಳನ್ನು ಅಧಿಕೃತವಾಗಿ ಹೇಳುತ್ತೇನೆ ಎಂದರು.

ಬಂಟರ ಸಂಘದಿಂದ ಅಭಿನಂದನೆ: ಮಿಸ್‌ ಇಂಡಿಯಾ ಪ್ರಶಸ್ತಿಯನ್ನು ಗೆದ್ದು, ಮಿಸ್‌ ವಲ್‌ರ್‍್ಡ ಸ್ಪರ್ಧೆಗೆ ತಯಾರಿ ನಡೆಸುತ್ತಿರುವ, ಮೂಲತಃ ಇಲ್ಲಿನ ಬೆಳ್ಳಂಪಳ್ಳಿಯವರಾದ, ಮುಂಬೈಯ ಸಿನಿ ಶೆಟ್ಟಿಅವರನ್ನು ಮಂಗಳವಾರ ಬಂಟರ ಯಾನೆ ನಾಡವರ ಸಂಘದಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿನಿ ಶೆಟ್ಟಿ, ತಾನು ಭರತನಾಟ್ಯ ಕಲಾವಿದೆಯಾಗಿದ್ದು, ಇದು ತನ್ನಲ್ಲಿ ಸಭಾಕಂಪನವನ್ನು ದೂರ ಮಾಡಿ, ಆತ್ಮವಿಶ್ವಾಸವನ್ನು ಬೆಳೆಸಿದ್ದು ಮಿಸ್‌ ಇಂಡಿಯಾ ಗೆಲ್ಲುವಲ್ಲಿ ಸಹಕಾರಿಯಾಯಿತು ಎಂದರು.

ಆಸಕ್ತಿಯ ಕ್ಷೇತ್ರದಲ್ಲಿ ಛಲಬಿಡದೆ ಮುಂದುವರಿದಾಗ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದ ಅವರು, ತಾವು ಪ್ರಸ್ತುತ ಮಿಸ್‌ ವರ್ಲ್ಡ್‌ ಸ್ಪರ್ಧೆ ಕಡೆಗೆ ಗಮನಹರಿಸಿದ್ದು, ಸ್ಪರ್ಧೆಯಲ್ಲಿ ಗೆದ್ದ ಬಳಿ ಪುನಃ ಉಡುಪಿಗೆ ಬರುತ್ತೇನೆ ಎಂದು ಪೂರ್ಣ ಭರವಸೆ ವ್ಯಕ್ತಪಡಿಸಿದರು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ಅಭಿನಂದನಾ ಭಾಷಣ ಮಾಡಿ, ಸಿನಿ ಶೆಟ್ಟಿಅವರು ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಮಾತೃಭಾಷೆ ಮೇಲೆ ಅಪಾರ ಪ್ರೀತಿ ಹೊಂದಿರುವ ಸಿನಿ ಅವರು ಯುವತಿಯರಿಗೆ ಮಾದರಿಯಾಗಿದ್ದಾರೆ ಎಂದರು.

‘ಮಿಸ್‌ ವರ್ಲ್ಡ್‌’ ನನ್ನ ಗುರಿ: ಮಿಸ್‌ ಇಂಡಿಯಾ ಸಿನಿ ಶೆಟ್ಟಿ

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಅಧ್ಯಕ್ಷತೆ ವಹಿಸಿದ್ದರು. 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಸಂಘದಿಂದ ಬಂಟರ ವಿಶ್ವಕೋಶ ತಯಾರಿಸಲಾಗುತ್ತಿದ್ದು, ಸಿನಿ ಶೆಟ್ಟಿಇದಕ್ಕೆ ಬ್ರಾಂಡ್‌ ಅಂಬಾಸಿಡರ್‌ ಆಗಬೇಕು ಎಂದು ಆಶಿಸಿದರು. ಉದ್ಯಮಿ ಗುರ್ಮೆ ಸುರೇಶ್‌ ಶೆಟ್ಟಿ, ಸಿನಿ ಶೆಟ್ಟಿತಂದೆ ಸದಾನಂದ ಶೆಟ್ಟಿ, ತಾಯಿ ಹೇಮಾ ಶೆಟ್ಟಿ, ಅಭಿನಂದನಾ ಸಮಿತಿ ಸಂಚಾಲಕ ಜಯರಾಜ್‌ ಹೆಗ್ಡೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios