ನಾವು ಕಾರ್ನಾಟಕದ ಹೆಣ್ಣುಮಕ್ಕಳು, ಯಾರಿಗೂ ಯಾವುದರಲ್ಲಿಯೂ  ಕಡಿಮೆ ಇಲ್ಲ ಎಂದು ತೊಡೆ ತಟ್ಟಿ ಹೇಳುತ್ತಾರೆ. ಇದಕ್ಕೆ ಸಾಕ್ಷಿಯೇ ಇತ್ತೀಚಿಗೆ ಗೋವಾದಲ್ಲಿ ನಡೆದ ಮಿಸೆಸ್ ಇಂಡಿಯಾ ಐ ಆಮ್ ಪವರ್‌ಫುಲ್ ಸ್ಪರ್ಧೆ.

ಹೌದು! ಗೋವಾದ ಫರ್ನ್ ಕದಂಬ ಹೋಟೆಲ್‍ನಲ್ಲಿ ಹಮ್ಮಿಕೊಂಡಿದ್ದ ಮಿಸೆಸ್ ಇಂಡಿಯಾ ಐ ಆಮ್ ಪವರ್‌ಫುಲ್‌ ಸ್ಪರ್ಧೆಯಲ್ಲಿ  ಕರ್ನಾಟಕದ ನಾಲ್ವರು ಪ್ರಶಸ್ತಿ ಪಡೆದಿದ್ದಾರೆ. 

ಎಮಿ ಅವಾರ್ಡ್‌ಗೆ ಆಯ್ಕೆಯಾದ ದೆಹಲಿ ಕ್ರೈಂನ ಖಡಕ್ ಪೊಲೀಸ್ ಇವ್ರೇ ನೋಡಿ 

ಗೋವಾದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು ನಾಲ್ಕು ವಿಭಾಗಗಳಿದ್ದು, ಅದಕ್ಕೆ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಸುಮಾರು 25 ಸ್ಪರ್ಧಿಗಳು ಭಾಗವಹಿಸಿದ್ದರು. ನಾಲ್ಕು ವಿಭಾಗದಲ್ಲಿ ಕರ್ನಾಟಕದ ಸ್ಪರ್ಧಿಗಳು ಗೆದ್ದು ಕರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಐವರು ಸ್ಪರ್ಧಿಗಳು ರಾಷ್ಟ್ರಮಟ್ಟದ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದರು. ದಿವ್ಯಾ ನವೀನ್ 'ಮಿಸೆಸ್ ಇಂಡಿಯಾ ಗ್ಲೋಬಲ್ ಯೂನಿವರ್ಸ್ ', ಶ್ರೇದೇವಿ ಅಪ್ಪಾಚ 'ಮಿಸೆಸ್ ಇಂಡಿಯಾ ಕರ್ವಿ ವರ್ಲ್ಡ್‌', ಕಾರ್ತಿಕಾ ಶ್ಯಾಮ್ 'ಮಿಸೆಸ್ ಇಂಡಿಯಾ ಕರ್ವಿ ಯೂನಿವರ್ಸ್‌', ವಾಣಿ ರೆಡ್ಡಿ 'ಮಿಸೆಸ್ ಇಂಡಿಯಾ ವರ್ಲ್ಡ್‌ ವೈಡ್‌' ಬಿರುದು ಗೆದ್ದಿದ್ದಾರೆ.

ಆಸ್ಕರ್‌ಗೆ ಮಲೆಯಾಳಂನ ಜಲ್ಲಿಕಟ್ಟು ಆಯ್ಕೆ... ರೇಸ್‌ನಲ್ಲಿ ಗೆದ್ದಿದ್ದು ಹೇಗೆ? 

ವಿಜೇತರಾದ ಶ್ರೀದೇವಿ ಅಪ್ಪಾಚ, ಕಾರ್ತಿಕಾ ಶ್ಯಾಮ್, ದಿವ್ಯಾ ನವೀನ್ ಹಾಗೂ  ವಾಣಿ ರೆಡ್ಡಿ ಅವರೊಂದಿಗೆ ಆಯೋಜಕಿ ನಂದಿನಿ ನಾಗರಾಜ್ ಇರುವ ಫೋಟೋಗಳಿವು.