Asianet Suvarna News Asianet Suvarna News

ಇವಳಿಗೆ ಏನೇ ತಿಂದ್ರೂ ಅಲರ್ಜಿ. ಸಾವಿನ ಕತ್ತಿ ಮೇಲೆ ಸಾಗಿಸ್ತಾಳೆ ಲೈಫು!

ವಿಶ್ವದಲ್ಲಿ ರೋಗಕ್ಕೆ ಬರವಿಲ್ಲ. ಒಂದು ತಿಂದ್ರೆ ಕಡಿಮೆ ಎರಡು ತಿಂದ್ರೆ ಹೆಚ್ಚು ಎನ್ನುವವರೇ ಹೆಚ್ಚು. ಆದ್ರೆ ಈ ಹುಡುಗಿಗೆ ಎರಡಲ್ಲ ೩೭ ಆಹಾರ ತಿಂದ್ರೂ ಆಪತ್ತು ನಿಶ್ಚಿತ. ಆಕೆ ಸ್ಥಿತಿ ಕೇಳಿದ್ರೆ ನೀವೂ ದಂಗಾಗ್ತೀರಿ. 
 

Girl Is Allergic To Almost Everything Says She Has Thirty Seven Ways To Die roo
Author
First Published Nov 24, 2023, 3:50 PM IST

ಜಗತ್ತಿನಲ್ಲಿ ನಾನಾ ರೀತಿಯ ಅಲರ್ಜಿ ಇದೆ. ಒಬ್ಬೊಬ್ಬರಿಗೆ ಒಂದೊಂದು ಔಸ್ತು, ಆಹಾರ ಅಲರ್ಜಿಯನ್ನುಂಟು ಮಾಡುತ್ತದೆ. ಕೆಲವರಿಗೆ ಧೂಳು, ಕೆಲವರಿಗೆ ಬದನೆಕಾಯಿ ಮತ್ತೆ ಕೆಲವರಿಗೆ ಮಶ್ರೂಮ್ ಅಲರ್ಜಿ ಉಂಟು ಮಾಡುತ್ತದೆ. ಈ ಅಲರ್ಜಿಯೇ ಕೆಲವರ ಪ್ರಾಣ ತೆಗೆದ ಉದಾಹರಣೆ ಇದೆ. ನಮ್ಮ ದೇಹಕ್ಕೆ ಈ ಆಹಾರ ಆಗಲ್ಲ ಎಂಬುದು ಗೊತ್ತಾದಾಗ ಜನರು ಅದರಿಂದ ದೂರ ಇರ್ತಾರೆ. ಒಂದೋ ಎರಡೋ ಆಹಾರದಿಂದ ಅಲರ್ಜಿ ಉಂಟಾದ್ರೆ ಅದನ್ನು ತ್ಯಜಿಸೋದು ಸುಲಭ. ಆದ್ರೆ 37 ಕ್ಕಿಂತ ಹೆಚ್ಚು ಆಹಾರ ಪದಾರ್ಥಗಳು ಒಂದೇ ವ್ಯಕ್ತಿಗೆ ಅಲರ್ಜಿ ಉಂಟು ಮಾಡಿದ್ರೆ? 

ಅಂಥ ಜನರೂ ನಮ್ಮಲ್ಲಿದ್ದಾರೆ. ಸಿಯೋಲ್‌ (Seoul) ನಲ್ಲಿ 21 ವರ್ಷದ ಯುವತಿಯೊಬ್ಬಳು ಇದೇ ರೀತಿಯ ಅಲರ್ಜಿ (Allergy) ಸಮಸ್ಯೆಯನ್ನು ಹೊಂದಿದ್ದಾಳೆ. ಈ ಹುಡುಗಿ ತನ್ನ ಅಲರ್ಜಿ ಸಮಸ್ಯೆಯನ್ನು ವಿಡಿಯೋ ಮಾಡಿದ್ದು, ಅದನ್ನು ಟಿಕ್‌ಟಾಕ್ (TikTok) ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಪೋಸ್ಟ್ ಮಾಡಿದ ಹುಡುಗಿ ಸಾಯಲು ನನ್ನ ಬಳಿ 37  ವಿಧಾನಗಳಿವೆ ಎಂದು ತಮಾಷೆಯ ಶೀರ್ಷಿಕೆ ಹಾಕಿದ್ದಾಳೆ. ಸಿಯೋಲ್‌ ನ ಈ ಅಲರ್ಜಿ ಹುಡುಗಿ ಹೆಸರು ಜೋನ್ ಫ್ಯಾನ್. ಆಕೆ ಕಂಟೆಂಟ್ ರೈಟರ್. ಜೋನ್ ತನ್ನ ಎಸ್ಜಿಮಾವನ್ನು ಪ್ರಚೋದಿಸುವ  ಆಹಾರಗಳನ್ನು ಪಟ್ಟಿಮಾಡಿದ್ದಾಳೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ವೀಡಿಯೊದಲ್ಲಿ ಅವಳು, ಅಲರ್ಜಿಯನ್ನು ಉಂಟುಮಾಡುವ ವಸ್ತುಗಳಲ್ಲಿ ಡ್ರೈ ಫ್ರೂಟ್ಸ್ ಮತ್ತು ಸಮುದ್ರಾಹಾರಗಳು ಸೇರಿವೆ ಎಂದು ಹೇಳಿದ್ದಾಳೆ. ತನ್ನ ಅಲರ್ಜಿ ಬಗ್ಗೆ ಮಾತನಾಡಿದ ಜೋನ್ ಫ್ಯಾನ್, ನನಗೆ 37 ಅಲರ್ಜಿಗಳಿವೆ ಎಂದು ಹೇಳುತ್ತೇನೆ. ಯಾಕೆಂದ್ರೆ ಇದು ನನ್ನ ನೆಚ್ಚಿನ ಸಂಖ್ಯೆ. ಆದರೆ ನನಗೆ ಅಲರ್ಜಿಯುಂಟು ಮಾಡುವ ಆಹಾರ ಬರೀ ಇಷ್ಟೇ ಅಲ್ಲ. ವಾಸ್ತವದಲ್ಲಿ ಇನ್ನೂ ಹೆಚ್ಚಿದೆ ಎಂದು ಆಕೆ ಹೇಳಿದ್ದಾಳೆ. 

ಹೋಗಿದ್ದು ಕ್ಯಾನ್ಸರ್ ಪರೀಕ್ಷೆಗೆ, ಹೊಟ್ಟೇಲಿದ್ದ ಜೀವಂತ ಕೀಟ ನೋಡಿ ಡಾಕ್ಟರ್ಸ್ ಶಾಕ್!

ತನ್ನ ವೀಡಿಯೊದಲ್ಲಿ, ಜೋನ್ ತನಗೆ ಅಲರ್ಜಿಯನ್ನು ಹೊಂದಿರುವ ಆಹಾರ ಪದಾರ್ಥಗಳ ಸಂಪೂರ್ಣ ಪಟ್ಟಿಯನ್ನು ನೀಡಿದ್ದಾಳೆ. ಜೋನ್ ಫ್ಯಾನ್ ಅಲರ್ಜಿ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬೇಕು ಎಂದೇನಿಲ್ಲ. ಬರೀ ರುಚಿ ನೋಡೋಕೆ ತಿಂದ್ರೂ ಸಾಕು. ಹತ್ತೇ ನಿಮಿಷದಲ್ಲಿ ಸಮಸ್ಯೆ ಶುರುವಾಗುತ್ತದೆ. ದೇಹದಲ್ಲಿ ತುರಿಕೆ ಆರಂಭವಾಗುತ್ತದೆ. ಇತ್ತೀಚಿಗೆ ಜೋನ್ ಫ್ಯಾನ್  ಪ್ಯಾಚ್ ಟೆಸ್ಟ್ ಮಾಡಿಸಿಕೊಂಡಿದ್ದಾಳೆ. ಇದು ಅವಳಿಗೆ ಇತರ ಹಲವು ರೀತಿಯ ಆಹಾರಗಳಿಂದಲೂ ಅಲರ್ಜಿ ಕಾಡುತ್ತದೆ ಎಂಬ ಸಂಗತಿ ತಿಳಿಯಲು ನೆರವಾಗಿದೆ. ಜೋನ್ ಗೆ ದ್ರಾಕ್ಷಿ ತಿಂದ್ರೂ ಅಲರ್ಜಿ ಕಾಡುತ್ತದೆ.   ದ್ರಾಕ್ಷಿ ತಿಂದ್ರೆ ಅಲರ್ಜಿಯಾಗುತ್ತೆ ಎಂಬ ಮಾತನ್ನು ನೀವು ನಂಬೋದಿಲ್ಲ ಎಂದು ಜೋನ್ ಹೇಳಿದ್ದಾಳೆ. 

ಗರ್ಭಿಣಿಯೂ ಅಲ್ಲ, ಮಗುವೂ ಆಗಿಲ್ಲ, ಆದ್ರೂ ಸ್ತನಗಳಿಂದ ಡಿಸ್ಚಾರ್ಜ್ ಆಗ್ತಿದ್ಯಾ?

ಜೋನ್ ಫ್ಯಾನ್ ಅಲರ್ಜಿ ಪರೀಕ್ಷಾ ಪೋಸ್ಟ್ ಇದುವರೆಗೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವರ್ಷದ ಬಹುಭಾಗವನ್ನು ನಾನು ಅಲರ್ಜಿಯಲ್ಲಿ ಕಳೆದಿದ್ದೇನೆ ಎಂದು ಜೋನ್ ವಿಡಿಯೋದಲ್ಲಿ ಹೇಳಿದ್ದಾಳೆ. ಹಾಗೆ ಇದು ನನ್ನ ಆತ್ಮವಿಶ್ವಾಸದ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ ಎಂದೂ ಜೋನ್ ಬೇಸರ ವ್ಯಕ್ತಪಡಿಸಿದ್ದಾಳೆ.  ಇಷ್ಟೆಲ್ಲ ಸಮಸ್ಯೆ ಇದ್ರೂ ಜೋನ್ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲವಂತೆ. ಯಾವುದಕ್ಕೂ ಒತ್ತಡ ತೆಗೆದುಕೊಳ್ಳುವುದಿಲ್ಲ ಎನ್ನುವ ಜೋನ್, ಆಹಾರ ಪದಾರ್ಥಗಳ ಟೇಸ್ಟ್ ನೋಡಿದ ನಂತ್ರ ಮಾತ್ರೆ ಸೇವನೆ ಮಾಡ್ತಾಳೆ. ಅತಿಯಾಗಿ ಸಮಸ್ಯೆ ನೀಡುವ ಆಹಾರದಿಂದ ಸದಾ ದೂರವಿರ್ತೇನೆ ಎನ್ನುತ್ತಾಳೆ. 

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 8 ರಷ್ಟು ಮಕ್ಕಳಲ್ಲಿ ಅಲರ್ಜಿ ಕಾಡಿದ್ರೆ, ಶೇಕಡಾ 4ರಷ್ಟು ಮಕ್ಕಳಲ್ಲಿ ಅಲರ್ಜಿ ಕಾಣಿಸಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲೂ ಅಲರ್ಜಿ ಸಮಸ್ಯೆ ಹೆಚ್ಚು. 
 

Follow Us:
Download App:
  • android
  • ios