Asianet Suvarna News Asianet Suvarna News

ದೇಶದ ನಾರಿಶಕ್ತಿಗೆ ಮತ್ತೂಂದು ಗರಿ, ಜಪಾನ್ ವಾಯು ಪಡೆ ಸಮರಾಭ್ಯಾಸಕ್ಕೆ ಭಾರತೀಯ ಮಹಿಳಾ ಪೈಲಟ್​

ನಾರಿ ಶಕ್ತಿ, ಸ್ತ್ರೀ ಶಕ್ತಿ ಎಂದರೆ ಸುಮ್ಮನೆ ಏನಲ್ಲ. ಹೆಣ್ಣು ಮಕ್ಕಳು ಸಹ ಎಲ್ಲಾ ಕ್ಷೇತ್ರದಲ್ಲಿ ಪುರುಷರೂ ಸೈ ಅನ್ನುವಂತೆ ಕೆಲಸ ಮಾಡಬಲ್ಲರು ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಿರುವಾಗ ದೇಶದ ನಾರಿಶಕ್ತಿಯ ಮುಡಿಗೆ ಮತ್ತೂಂದು ಕಿರೀಟ ತೊಡಿಸುವ ಕಾಲ ಹತ್ತಿರ ಬಂದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

For the first time, Indian woman fighter pilot to lead air exercise with japan Vin
Author
First Published Jan 8, 2023, 10:09 PM IST

ಹೆಣ್ಣೆಂದರೆ ಪ್ರೀತಿ, ಸಹನೆ, ಧೈರ್ಯ,ಶಕ್ತಿ, ಸಾಧನೆ ಎಲ್ಲವೂ ಹೌದು. ಹೆಣ್ಣೆಂದರೆ ಅಬಲೆ ಎಂಬ ಕಾಲ ಯಾವತ್ತಿಗೋ ಹೋಯಿತು. ಆಕೆ ಸಬಲೆ. ಎಲ್ಲವನ್ನೂ ಎದುರಿಸಬಲ್ಲ ಧೈರ್ಯವಂತೆ. ಹೀಗಾಗಿಯೇ ಇವತ್ತಿನ ಕಾಲದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಮಹಿಳೆ (Woman)ಯನ್ನು ನೋಡಬಹುದು. ರಾಜಕೀಯ, ಶಿಕ್ಷಣ, ಸಾಮಾಜಿಕ, ರಕ್ಷಣಾ, ಔದ್ಯೋಗಿಕ ಎಲ್ಲಾ ಸ್ಥರಗಳಲ್ಲೂ ಆಕೆಯಿದ್ದಾಳೆ. ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾಳೆ. ಅಷ್ಟೇ ಯಾಕೆ ದೇಶವನ್ನು ಮುನ್ನಡೆಸುವ ಸಚಿವ ಸಂಪುಟದಲ್ಲೂ ಮಹಿಳೆಯರಿದ್ದಾರೆ. ಹೀಗಿರುವಾಗ ದೇಶದ ನಾರೀಶಕ್ತಿಯ ಸಾಧನೆ ಇನ್ನತ್ತು ಉತ್ತುಂಗಕ್ಕೇರುತ್ತಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ (Foriegn) ನಡೆಯುವ ಸಮರಾಭ್ಯಾಸದಲ್ಲಿ (Air exercise) ಭಾರತದ ಮಹಿಳಾ ಫೈಟರ್‌ ಭಾಗಿಯಾಗಲಿದ್ದಾರೆ.

ವಿದೇಶದ ಸಮರಾಭ್ಯಾಸದಲ್ಲಿ ಮೊದಲ ಬಾರಿಗೆ ಭಾರತದ ಮಹಿಳಾ ಫೈಟರ್‌
ಹೌದು, ಅಚ್ಚರಿಯೆನಿಸಿದರೂ ಇದು ನಿಜ. ದೇಶದ ನಾರಿಶಕ್ತಿಯ ಮುಡಿಗೆ ಮತ್ತೂಂದು ಕಿರೀಟ ತೊಡಿಸುವ ಕಾಲ ಸಮೀಪಿಸಿದೆ. ವಿದೇಶದಲ್ಲಿ ನಡೆಯುವ ಸಮರಾಭ್ಯಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಹಿಳಾ ಫೈಟರ್‌ (Indian woman fighter) ಭಾಗವಹಿಸಲಿದ್ದಾರೆ. ಆ ಮೂಲಕ ದೇಶದ ಮಹಿಳಾಶಕ್ತಿಯ ಪ್ರದರ್ಶನ ವಿದೇಶೀ ನೆಲದಲ್ಲಿ ಕಾಣಿಸಿಕೊಳ್ಳಲಿದೆ. ದೇಶದ ಮೊದಲ ಯುದ್ಧ ವಿಮಾನ ಫೈಟರ್‌ ಫೈಲಟ್‌ ಎಂಬ ಖ್ಯಾತಿಯ ಅವನಿ ಚತುರ್ವೇದಿ ಜಪಾನ್‌ ನಲ್ಲಿ ನಡೆಯಲಿರುವ “ವೀರ್‌ ಗಾರ್ಡಿಯನ್‌ 2023′ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಸಿದ್ಧರಾಗಿದ್ದಾರೆ. ಜ. 16ರಿಂದ 26ರ ವರೆಗೆ ಈ ಏರಿಯಲ್‌ ವಾರ್‌ಗೇಮ್‌ ನಡೆಯಲಿದೆ. ಸ್ಕ್ವಾಡ್ರನ್‌ ಲೀಡರ್‌ ಆಗಿರುವ ಅವನಿ ಸುಖೋಯ್‌ 30ಎಂಕೆಐನ ಪೈಲಟ್‌ ಸಹ ಆಗಿದ್ದಾರೆ.

ಇನ್ಮುಂದೆ ಬ್ರಿಟಿಷ್‌ ಏರ್‌ವೇಸ್‌ ಗಗನಸಖಿಯರಿಗೆ ಸಮವಸ್ತ್ರವಾಗಿ ಹಿಜಾಬ್‌ ಬಳಕೆ..!

ಜಪಾನ್‌ನಲ್ಲಿ ಜನವರಿ 16ರಿಂದ 26ರ ವರೆಗೆ ನಡೆಯಲಿರುವ ಸಮರಾಭ್ಯಾಸ
ಈ ಸಮರಾಭ್ಯಾಸವು ಜಪಾನ್‌ನ ಒಮಿತಾಮಾ ಮತ್ತು ಸಯೇಮಾ ಏರ್‌ಬೇಸ್‌ನ ಸುತ್ತಮುತ್ತ ಜನವರಿ 16ರಿಂದ 26ರ ವರೆಗೆ ನಡೆಯಲಿದೆ. ಇದರಲ್ಲಿ ಅವನಿ ಅವರು ಸುಖೊಯ್‌ ಯುದ್ಧ ವಿಮಾನ ಚಲಾಯಿಸುತ್ತ ಆಗಸದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ . ಭಾರತದ ಸುಖೋಯ್‌ 30 ಎಂಕೆಐ, ಎರಡು ಸಿ-17 ಗ್ಲೋಬ್‌ಮಾಸ್ಟರ್‌ ಮತ್ತು ಒಂದು ಐಎಲ್‌-78 ಟ್ಯಾಂಕರ್‌ ಯುದ್ದ ವಿಮಾನಗಳು ಈ ಏರಿಯಲ್ ವಾರ್ ಗೇಮ್‌ನಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿದುಬಂದಿದೆ.

2022ರ ಸೆ. 8ರಂದು ಜಪಾನ್‌ನ ಟೋಕಿಯೋದಲ್ಲಿ ಉಭಯ ದೇಶಗಳ ವಿದೇಶಾಂಗ-ರಕ್ಷಣ ಸಚಿವರ ನಡುವಿನ ಮಾತುಕತೆಯಲ್ಲಿ ರಕ್ಷಣಾತ್ಮಕ ಸಹಭಾಗಿತ್ವದ ಬಗ್ಗೆ ಒಪ್ಪಂದ (Agreement) ಮಾಡಲಾಗಿತ್ತು. ಎರಡು ದೇಶಗಳು ಪರಸ್ಪರ ಶಸ್ತ್ರಾಭ್ಯಾಸ ನಡೆಸುವ ಬಗ್ಗೆಯೂ ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಮರಾಭ್ಯಾಸ ನಡೆಯುತ್ತಿದೆ.

ಮಲ ಹೊರುತ್ತಿದ್ದ ಮಹಿಳೆ ಈಗ ಉಪಮೇಯರ್‌

ಅವನಿ ಚತುರ್ವೇದಿ ಯಾರು ?
ಅವನಿ ಚತುರ್ವೇದಿ ಮೂಲತಃ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. 29 ವರ್ಷದ ಅವನಿ ಟೇಬಲ್ ಟೆನ್ನಿಸ್ ಮತ್ತು ಚೆಸ್ ಆಟಗಾರ್ತಿಯಾಗಿದ್ದಾರೆ. ಬಿಇ ಮುಗಿಸಿದ ಬಳಿಕ ಹೈದರಾಬಾದ್‌ನ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ತರಬೇತಿ (Training) ಪಡೆದು 2016ರಲ್ಲಿ ವಾಯುಪಡೆಗೆ ನೇಮಕಗೊಂಡರು. 2016ರಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಸೇರಿದ ಮೂವರು ಮಹಿಳೆಯರ ಪೈಕಿ ಒಬ್ಬರು. ಇವರ ಸಹೋದರ ಕೂಡ ಸೇನೆಯಲ್ಲೇ ಇದ್ದಾರೆ.

2018ರಲ್ಲಿ ಭಾರತೀಯ ವಾಯು ಸೇನೆಗೆ ಆಯ್ಕೆಯಾಗಿದ್ದ ಮೂವರು ಮಹಿಳಾ ಪೈಲೆಟ್ ಗಳ ಪೈಕಿ ಅವನಿ ಚತುರ್ವೇದಿ ಒಬ್ಬರು. ಇವರು ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿದ್ದರು. ಈ ಮೂಲಕ ಇಂಥ ಸಾಧನೆ ಮಾಡಿದ ದೇಶದ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಅವನಿ ಗುಜರಾತ್‌ನ ಜಾಮ್‌ನಗರ ವಾಯು ನೆಲೆಯಿಂದ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಪೈಲಟ್ ಗಳಾದ ಅವನಿ, ಭಾವನಾ ಕಾಂತ್, ಮೋಹನಾ ಸಿಂಗ್ ಅವರು ಜೊತೆಯಲ್ಲೇ ಸೇನೆಗೆ ಆಯ್ಕೆಯಾಗಿದ್ದರು.

Follow Us:
Download App:
  • android
  • ios