ಮಣಿಪಾಲದ ಡಾ. ಎಲ್ಸಾಗೆ ರಾ. Florence Nightingale ಪ್ರಶಸ್ತಿ
ಇಲ್ಲಿನ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಇದರ ಪ್ರಾಧ್ಯಾಪಕಿ ಡಾ. ಎಲ್ಸಾ ಸನತೋಂಬಿ ದೇವಿ ಅವರಿಗೆ 2021ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.
ಮಣಿಪಾಲ (ನ.26) : ಇಲ್ಲಿನ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ ಇದರ ಪ್ರಾಧ್ಯಾಪಕಿ ಡಾ. ಎಲ್ಸಾ ಸನತೋಂಬಿ ದೇವಿ ಅವರಿಗೆ 2021ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು.
ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯನ್ನು ದೇಶದ ಅತ್ಯುತ್ತಮ ಶುಶ್ರೂಷಾ ಸಿಬ್ಬಂದಿಗೆ ನೀಡಲಾಗುತ್ತದೆ. ಈ ಬಾರಿ ಡಾ. ಎಲ್ಸಾ ಅವರು ಖಾಸಗಿ ಸಂಸ್ಥೆಯಿಂದ ಈ ಪ್ರಶಸ್ತಿ ಪಡೆದ ಏಕೈಕ ಸಾಧಕಿಯಾಗಿದ್ದಾರೆ.
ಡಾ.ಎಲ್ಸಾ ಅವರು ಕೇಂದ್ರ ಸರ್ಕಾರದ ಸ್ಟೆಪ್ ಒನ್, ಐಸಿಎಂಆರ್ ಯೋಜನೆ, ಕೋವಿಡ್ - 19ರ ಸಂದರ್ಭದಲ್ಲಿ ಅತ್ಯುತ್ತಮ ಆಪ್ತಸಲಹೆ ಸೇರಿದಂತೆ ಹಲವಾರು ಶೈಕ್ಷಣಿಕ, ಸಾಮಾಜಿಕ ಕೊಡುಗೆಗಳನ್ನು ನೀಡಿದ್ದಾರೆ. ಅವರು ಅಮೆರಿಕದ ಫಿಲಡೆಲ್ಫಿಯಾದ ಎಫ್‌ಎಐಎಂಇಐಆರ್ ಸಂಸ್ಥೆಯಿಂದ ಫೆಲೋಶಿಪ್ ಪಡೆದ ಮೊದಲ ದಾದಿಯಾಗಿದ್ದಾರೆ. ನರ್ಸಿಂಗ್ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಗಾಯಗಳ ನಿರ್ವಹಣೆ ತರಬೇತಿಗಾಗಿ ಮಣಿಪಾಲ್ ಕೊಲೊಪ್ಲ್ಯಾಸ್ವ್ ಹೀಲ್ ಅಕಾಡೆಮಿಯನ್ನು ಪ್ರಾರಂಭಿಸಿದ್ದಾರೆ. ಮುಂದೆ ಉಡುಪಿಯಲ್ಲಿ ಬುದ್ಧಿಮಾಂದ್ಯ ಮಕ್ಕಳ ಆರೈಕೆದಾರರಿಗೆ ತರಬೇತಿ ನೀಡುವ ಕನಸಿನ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಡಾ. ಎಲ್ಸಾ ಅವರನ್ನು ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಉಪಕುಲಪತಿ ಲೆ.ಜ. (ಡಾ) ಎಂ.ಡಿ.ವೆಂಕಟೇಶ್ ಅವರು ಅಭಿನಂದಿಸಿದ್ದಾರೆ.
ಅಬ್ಬಬ್ಬಾ..ಫುಡ್ ಡೆಲಿವರಿ ಮಾಡೋಕೆ 30 ಸಾವಿರ ಕಿಮೀ. ದೂರ ಪ್ರಯಾಣಿಸಿದ ಮಹಿಳೆ