Asianet Suvarna News Asianet Suvarna News

Dowry Deaths: ವರದಕ್ಷಿಣೆ ಕಾಟಕ್ಕೆ ಪ್ರತಿ ದಿನ ಸಾಯ್ತಿದ್ದಾರೆ ಇಷ್ಟೊಂದು ಮಹಿಳೆಯರು!

ಭಾರತ ಅದೆಷ್ಟೇ ಮುಂದುವರೆಯಲಿ ಕೆಲ ಅನಿಷ್ಟ ಪದ್ಧತಿಗಳು ನಮ್ಮನ್ನು ತೊಲಗಲು ಸಾಧ್ಯವೇ ಇಲ್ಲ. ಇದ್ರಲ್ಲಿ ವರದಕ್ಷಿಣೆ ಮೊದಲ ಸ್ಥಾನದಲ್ಲಿದೆ. ಈಗ್ಲೂ ಕೊಡುವವರು- ತೆಗೆದುಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಇದ್ರ ಪರಿಣಾಮ ಮಾತ್ರ ಮಹಿಳೆಯರ ಮೇಲಾಗ್ತಿದೆ.
 

Every Day 20 Women Are Being Murdered In The Country
Author
First Published Dec 16, 2022, 12:49 PM IST

ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ಸದ್ಯ ಸುದ್ದಿಯಲ್ಲಿದ್ದಾರೆ. ವರದಕ್ಷಿಣೆ ಕಾಟಕ್ಕೆ ಭಾರತದಲ್ಲಿ ಪ್ರತಿ ದಿನ ಒಬ್ಬ ಮಹಿಳೆಯಾದ್ರೂ ಸಾಯ್ತಿದ್ದಾಳೆ. ಭಾರತದಲ್ಲಿ ಹೆಣ್ಣನ್ನು ದೇವತೆಗೆ ಹೋಲಿಸಲಾಗುತ್ತದೆ. ಆದ್ರೆ ಇದು ಬಾಯಿ ಮಾತಿಗೆ ಮಾತ್ರ ಎಂಬುದು ಪದೇ ಪದೇ ಸಾಭೀತಾಗ್ತಿದೆ. ಭಾರತ ಎಷ್ಟೇ ಮುಂದುವರೆದ್ರೂ ಹೆಣ್ಣಿನ ಶೋಷಣೆಗೆ ಮಾತ್ರ ಫುಲ್ ಸ್ಟಾಪ್ ಬಿದ್ದಿಲ್ಲ. ಹೆಣ್ಣಿನ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ, ಗಂಡು-ಹೆಣ್ಣು ಮಕ್ಕಳ ನಡುವೆ ತಾರತಮ್ಯ, ಕೌಟುಂಬಿಕ ದೌರ್ಜನ್ಯ ಇದಕ್ಕೆ ದೊಡ್ಡ ಉದಾಹರಣೆ. ವರದಕ್ಷಿಣೆಗೆ ಇನ್ನೆಷ್ಟು ಮಹಿಳೆಯರು ಬಲಿಯಾಗ್ಬೇಕೋ ತಿಳಿಯದು.

ಭಾರತ (India) ದಲ್ಲಿ ವರದಕ್ಷಿಣೆ (Dowry) ಪಿಡುಗು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಹೆಣ್ಣು ಹೆತ್ತವರಿಗೆ ಇದು ಶಾಪ ಎಂದೇ ಬಿಂಬಿತವಾಗ್ತಿದೆ. ಹಿಂದಿನ ಕಾಲದಲ್ಲಿ ವರದಕ್ಷಿಣೆ ಉದ್ದೇಶ ಬೇರೆಯಿತ್ತು. ಆದ್ರೆ ಬರ್ತಾ ಬರ್ತಾ ಇದ್ರ ವ್ಯಾಖ್ಯಾನ ಬದಲಾಯ್ತು. 

ಚಳಿಗಾಲದಲ್ಲಿ ಯೋನಿ ಸಮಸ್ಯೆಗೇನು ಸುಲಭದ ಪರಿಹಾರ!

ಮಗನನ್ನು ಬೆಳೆಸಿ, ವಿದ್ಯಾಭ್ಯಾಸ (Education) ಕಲಿಸಿದ ಖರ್ಚಿನಿಂದ ಹಿಡಿದು ಮುಂದೆ ಸಂಸಾರ ಮಾಡಲು ಅಗತ್ಯವಿರುವ ಎಲ್ಲ ವಸ್ತುಗಳಿಗೆ ಗಂಡಿನ ಕಡೆಯವರು ಬೇಡಿಕೆಯಿಡ್ತಾರೆ. ಮದುವೆಯಾದ್ಮೇಲೂ ಇದು ಮುಂದುವರೆಯುತ್ತದೆ. ಬರೀ ಗಂಡ ಮಾತ್ರವಲ್ಲ ಅತ್ತೆ, ಮಾವ, ನಾದಿನಿ , ಮೈದುನ ಹೀಗೆ ಮನೆಯಲ್ಲಿರುವವರ ಕಾಟ ತಾಳಲಾರದೆ, ಅಪ್ಪನ ಬಳಿ ಹಣ ಕೇಳಲಾಗದೆ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಷ್ಟೋ ಪ್ರಕರಣದಲ್ಲಿ ಗಂಡನ ಮನೆಯವರೇ ಹತ್ಯೆ ಮಾಡಿ, ಆತ್ಮಹತ್ಯೆ ಎಂದ ಉದಾಹರಣೆಯಿದೆ.  ವರದಕ್ಷಿಣೆ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ ನಿಜ. ಆದ್ರೆ ಅದ್ರಿಂದ ಈ ಅನಿಷ್ಟ ಪದ್ಧತಿಯನ್ನು ಹೊಡೆದೋಡಿಸಲು ಸಾಧ್ಯವಾಗಲಿಲ್ಲ. ಇತ್ತೀಚಿಗೆ ವರದಕ್ಷಿಣೆ ಪ್ರಕರಣದ ಬಗ್ಗೆ ಹೊರಬಿದ್ದ ವರದಿಯೊಂದು ಎಲ್ಲರನ್ನು ದಂಗಾಗಿಸಿದೆ.

ಪ್ರತಿ ದಿನ ದಾಖಲಾಗುತ್ತೆ ಇಷ್ಟು ವರದಕ್ಷಿಣೆ ಪ್ರಕರಣ : 2017 ಮತ್ತು 2021 ರ ನಡುವೆ ದೇಶದಲ್ಲಿ ಪ್ರತಿದಿನ ಸುಮಾರು 20 ವರದಕ್ಷಿಣೆ ಸಾವುಗಳು ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ ಪ್ರತಿದಿನ ಗರಿಷ್ಠ ಆರು ವರದಕ್ಷಿಣೆ ಸಾವುಗಳು ವರದಿಯಾಗಿವೆ. 2017 ರಿಂದ 2021 ರ ನಡುವೆ ದೇಶದಲ್ಲಿ ಒಟ್ಟೂ 35,493 ವರದಕ್ಷಿಣೆ ಸಾವಿನ ಪ್ರಕರಣಗಳು ಪತ್ತೆಯಾಗಿವೆ. ಇದು ಕೇವಲ ದಾಖಲೆಗೆ ಸಿಕ್ಕ ಮಾಹಿತಿ ಮಾತ್ರ. ಎಷ್ಟೋ ಪ್ರಕರಣಗಳು ಸದ್ದಿಲ್ಲದೆ ಮುಚ್ಚಿ ಹೋಗುತ್ತವೆ ಎಂಬುದು ಇಲ್ಲಿ ಗಮನಾರ್ಹ.

ಯಾವ ರಾಜ್ಯದಲ್ಲಿ ಎಷ್ಟು ವರದಕ್ಷಿಣೆ ಸಾವು : 2017 ರಲ್ಲಿ ದೇಶದಲ್ಲಿ 7,466 ವರದಕ್ಷಿಣೆ ಸಾವು ಸಂಭವಿಸಿದೆ. 2018 ರಲ್ಲಿ 7,167 ಸಾವಿನ ಪ್ರಕರಣ ದಾಖಲಾಗಿದೆ.  2019 ರಲ್ಲಿ 7,141 ಪ್ರಕರಣಗಳು ದಾಖಲಾಗಿವ. 2020 ರಲ್ಲಿ ವರದಕ್ಷಿಣೆ ಕಿರುಕುಳಕ್ಕೆ 6,966 ಮಂದಿ ಸಾವನ್ನಪ್ಪಿದ್ದಾರೆ. 2021 ರಲ್ಲಿ 6,753 ಪ್ರಕರಣಗಳು ವರದಿಯಾಗಿವೆ. ಈ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ವರದಕ್ಷಿಣೆಯ ಕಾರಣದಿಂದ ಪ್ರತಿದಿನ ಗರಿಷ್ಠ ಆರು ಸಾವು ಸಂಭವಿಸಿದೆ. 2017 ರಿಂದ 2021 ರ ಅವಧಿಯಲ್ಲಿ ಬಿಹಾರದಲ್ಲಿ 5,354 ವರದಕ್ಷಿಣೆ ಸಾವು ವರದಿಯಾಗಿದೆ.  ಮಧ್ಯಪ್ರದೇಶದಲ್ಲಿ 2,859 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 2,389 ಪ್ರಕರಣಗಳು ಮತ್ತು ರಾಜಸ್ಥಾನದಲ್ಲಿ 2,244 ಪ್ರಕರಣಗಳು ವರದಿಯಾಗಿವೆ. 

ಈ ಮಹಿಳೆಯರಿಗೆ ಪ್ರೀತಿಗಿಂತಲೂ, ಶ್ರೀಮಂತಿಕೆಯೇ ಮುಖ್ಯವಂತೆ!

ಭಾರತದ ಪರಿಸ್ಥಿತಿ ಸುಧಾರಣೆ ಬಹಳ ಕಷ್ಟವೆಂದು ತಜ್ಞರು ಹೇಳ್ತಾರೆ. ಉನ್ನತ ವ್ಯಾಸಂಗ ಮಾಡಿದವರೆ ವರಕ್ಷಿಣೆಗೆ ಬೇಡಿಕೆಯಿಡ್ತಿದ್ದಾರೆ. 1970 ರ ದಶಕದಿಂದ ಕೇರಳದಲ್ಲಿ ವರದಕ್ಷಿಣೆ ವೇಗವಾಗಿ ಹೆಚ್ಚುತ್ತಿದೆ.  ಹರಿಯಾಣ, ಗುಜರಾತ್ ಮತ್ತು ಪಂಜಾಬ್‌ನಲ್ಲಿ ವರದಕ್ಷಿಣೆ ದರವು ಗಮನಾರ್ಹವಾಗಿ ಹೆಚ್ಚಾಗಿದೆ. ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿ ವರದಕ್ಷಿಣೆ ವ್ಯವಸ್ಥೆ ಗಣನೀಯವಾಗಿ ಕಡಿಮೆಯಾಗಿದ್ದು ಇದು ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿದೆ. 
 

Follow Us:
Download App:
  • android
  • ios