ಸಾಯೋ ಮುನ್ನ ತನ್ನೆಲ್ಲ 23 ಕೋಟಿ ರೂ. ಆಸ್ತಿ ಕೊಟ್ಟಿದ್ದು ಇವಳು ಮಕ್ಕಳಿಗಲ್ಲ, ಮೊಮ್ಮಕ್ಕಳಿಗಿಲ್ಲ! ಮತ್ತೆ?
ಜೀವನ ಪರ್ಯಂತ ಮಾಡಿದ ಆಸ್ತಿಯನ್ನು ಸಾಯುವ ಮುನ್ನ ಬಿಟ್ಟು ಹೋಗ್ಲೇಬೇಕು. ಆ ಆಸ್ತಿ ಮುಂದೆ ಯಾರಿಗೆ ಸೇರ್ಬೇಕು ಎನ್ನುವ ನಿರ್ಧಾರ ಅವರದ್ದೇ ಆಗಿರುತ್ತೆ. ಕೆಲವರು ಮಕ್ಕಳಿಗೆ ಬರೆದ್ರೆ ಮತ್ತೆ ಕೆಲವರು ಶಾಕಿಂಗ್ ನಿರ್ಧಾರ ಕೈಗೊಳ್ಳುತ್ತಾರೆ.
ನಾವು ಅಂದುಕೊಂಡಿದ್ದು ಎಲ್ಲ ಸಮಯದಲ್ಲಿ ಆಗೋದಿಲ್ಲ. ನಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ತಾರೆ ಎನ್ನುವ ಭಾವನೆ ಎಲ್ಲ ಪಾಲಕರಲ್ಲೂ ಇರುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಇಡೀ ಜೀವನವನ್ನು ಮೀಸಲಿಡುವ ಪಾಲಕರು ತಮ್ಮ ಮುಪ್ಪಿನ ದಿನಗಳಲ್ಲಿ ಮಕ್ಕಳು ನಮಗೆ ಆಸರೆಯಾಗ್ತಾರೆ ಎಂದುಕೊಳ್ತಾರೆ. ಮಕ್ಕಳು ನಮ್ಮ ಜೊತೆ ವಾಸ ಮಾಡೋದಿಲ್ಲ ಎಂಬುದು ಬಹುತೇಕ ಎಲ್ಲ ಪಾಲಕರಿಗೂ ಈಗ ತಿಳಿದಿದೆ. ಆದ್ರೆ ಮಕ್ಕಳು ಸಂಪರ್ಕದಲ್ಲಿರಬೇಕು, ಆಗಾಗ ಬಂದು ಹೋಗ್ಬೇಕು, ತಮ್ಮ ಆರೋಗ್ಯವನ್ನು ವಿಚಾರಿಸಿಕೊಳ್ಳಬೇಕು, ಪ್ರತಿ ದಿನ ಕರೆ ಮಾಡಿ ಮಾತನಾಡ್ಬೇಕು ಎಂದು ಬಯಸ್ತಾರೆ. ಆದ್ರೆ ಅನೇಕ ಮಕ್ಕಳು, ಜವಾಬ್ದಾರಿ ಹೆಚ್ಚಾದಂತೆ, ತಮ್ಮ ಸಂಸಾರ ಕಟ್ಟಿಕೊಂಡ ಮೇಲೆ ಪಾಲಕರನ್ನು ಮರೆಯುತ್ತಾರೆ. ಅವರ ಜೊತೆ ಸಂಪೂರ್ಣ ಸಂಪರ್ಕ ಕಳೆದುಕೊಳ್ಳುವವರಿದ್ದಾರೆ. ಮಕ್ಕಳ ಈ ವರ್ತನೆ ಪಾಲಕರ ಭಾವನೆಗೆ ಧಕ್ಕೆ ತರುತ್ತದೆ. ನಮ್ಮ ಹಣೆಯಲ್ಲಿ ಇರೋದೇ ಇಷ್ಟು ಎಂದು ಕೆಲ ಪಾಲಕರು ನೋವಿನಲ್ಲಿ ಜೀವನ ನಡೆಸ್ತಾರೆ. ಮತ್ತೆ ಕೆಲವರು ಮಕ್ಕಳ ಈ ಕೆಲಸದ ವಿರುದ್ಧ ಕಠಿಣ ಕ್ರಮಕೈಗೊಳ್ತಾರೆ. ಈ ಮಹಿಳೆ ಕೂಡ ಇದ್ರಲ್ಲಿ ಒಬ್ಬಳು. ಮಕ್ಕಳ ವರ್ತನೆಯಿಂದ ನೋವು ತಿಂದ ಮಹಿಳೆ, ಮಕ್ಕಳ ವಿರುದ್ಧ ಸೇಡು ತೀರಿಸಿಕೊಂಡಿದ್ದಾಳೆ.
ಘಟನೆ ಚೀನಾ (China) ದಲ್ಲಿ ನಡೆದಿದೆ. ಮಹಿಳೆ ಹೆಸರು ಲಿಯು. ಆಕೆ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದಳು. ಆಕೆ ಮಕ್ಕಳು ಆಕೆಯಿಂದ ದೂರವಿದ್ದರು. ಲಿಯು ಅನಾರೋಗ್ಯಕ್ಕೆ ಒಳಗಾದಾಗಲೂ ಮಕ್ಕಳು ಆಕೆಯನ್ನು ನೋಡಲು ಬರಲಿಲ್ಲ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
VIRAL VIDEO: ಅಯ್ಯಪ್ಪ...ಇಂಥಾ ಜಾಗದಲ್ಲೂ ಲೇಡೀಸ್ ಕ್ರಿಕೆಟ್ ಆಡ್ತಾರೆ ನೋಡಿ!
ಮಕ್ಕಳ (Children) ವರ್ತನೆಯಿಂದ ಲಿಯು ಸಂಪೂರ್ಣ ಕುಸಿದಿದ್ದಳು. ಆಕೆ ಮನೆಯಲ್ಲಿ ಸಾಕು ನಾಯಿ (PetDog) ಹಾಗೂ ಬೆಕ್ಕುಗಳಿದ್ದವು. ಲಿಯು ತನ್ನ ಕೊನೆಯ ಗಳಿಗೆಯವರೆಗೂ ಈ ನಾಯಿ ಹಾಗೂ ಬೆಕ್ಕಿನ ಜೊತೆ ವಾಸಮಾಡಿದ್ದಾಳೆ. ತಾಯಿ ಸಾವನ್ನಪ್ಪಿದ ವಿಷ್ಯ ಗೊತ್ತಾದ್ಮೇಲೆ ಆಕೆ ಸಂಪತ್ತನ್ನು ವಶಕ್ಕೆ ಪಡೆಯಲು ಮನೆಗೆ ಬಂದಿದ್ದಾರೆ. ಆದ್ರೆ ಅಮ್ಮ ಬರೆದ ವಿಲ್ ನೋಡಿ ಅವರು ಕಂಗಾಲಾಗಿದ್ದಾರೆ. ಅಮ್ಮ ಯಾಕೆ ಹೀಗೆ ಮಾಡಿದಳು ಎಂಬುದು ಅವರಿಗೆ ಈಗ ಗೊತ್ತಾಗಿದೆ.
ಸಾಕು ಪ್ರಾಣಿಗಳ ಹೆಸರಿಗೆ 23 ಕೋಟಿ ಆಸ್ತಿ ವರ್ಗಾವಣೆ : ಸಾಯುವ ಮೊದಲೇ ಲಿಯು ತನ್ನ ಆಸ್ತಿ ಯಾರಿಗೆ ಹೋಗ್ಬೇಕು ಎಂದು ವಿಲ್ ಬರೆದಿಟ್ಟಿದ್ದಳು. ಆಕೆ ತನ್ನ ಆಸ್ತಿಯ ಒಂದು ಪೈಸೆಯನ್ನೂ ಮಕ್ಕಳಿಗೆ ಬರೆದಿಲ್ಲ. ಎಲ್ಲ ಆಸ್ತಿಯನ್ನು ತನ್ನ ಸಾಕು ಪ್ರಾಣಿಗಳಾದ ನಾಯಿ ಹಾಗೂ ಬೆಕ್ಕಿನ ಹೆಸರಿಗೆ ಬರೆದಿದ್ದಾಳೆ. ಆಕೆ ಬಳಿ 2.8 ಮಿಲಿಯನ್ ಗೂ ಹೆಚ್ಚು ಅಂದರೆ 23 ಕೋಟಿ 27 ಲಕ್ಷ 16 ಸಾವಿರ ರೂಪಾಯಿ ಮೌಲ್ಯದ ಆಸ್ತಿ ಇತ್ತು.
ಈ ಆಸ್ತಿಯನ್ನು ಏನು ಮಾಡ್ತಾರೆ? : ಚೀನಾದಲ್ಲಿ ಪ್ರಾಣಿಗಳ ಹೆಸರಿಗೆ ನೇರವಾಗಿ ಹಣ ವರ್ಗಾವಣೆ ಮಾಡಲು ಬರೋದಿಲ್ಲ. ಹಾಗಾಗಿ ಲಿಯು ಪ್ರಾಣಿ ವೈದ್ಯರನ್ನು ಪ್ರಾಣಿಗಳ ಪಾಲಕರನ್ನಾಗಿ ಮಾಡಿದ್ದಾಳೆ. ಅವರು ಈ ಪ್ರಾಣಿಗಳನ್ನು ನೋಡಿಕೊಳ್ಳುವ ಹಾಗೂ ಹಣವನ್ನು ಸಾಕು ಪ್ರಾಣಿಗಳಿಗಾಗಿ ಬಳಸಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಆದ್ರೆ ಪ್ರಾಣಿ ವೈದ್ಯರು ಈ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪತ್ನಿ ಡಿಯೋರ್ ಬ್ಯಾಗ್ ಗಿಫ್ಟ್ ಸ್ವೀಕರಿಸಿದ್ದಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷರ ಗಾದಿಯೇ ಅಲ್ಲಾಡುತ್ತಿದೆ; ಏನೀ ಬ್ಯಾಗ್ ವಿಶೇಷತೆ?
ಸಾಮಾಜಿಕ ಜಾಲತಾಣದಲ್ಲಿ ಲಿಯು ಸ್ಟೋರಿ ವೈರಲ್ ಆಗಿದೆ. ಅನೇಕರು ಲಿಯು ಸ್ಥಿತಿ ಬಗ್ಗೆ ಕಮೆಂಟ್ ಮಾಡಿದ್ದಾರೆ. ಲಿಯು ಸರಿಯಾದ ಕೆಲಸ ಮಾಡಿದ್ದಾಳೆ ಎಂದು ಕೆಲವರು ಹೇಳಿದ್ದಾರೆ. ಲಿಯು ಎಷ್ಟು ದುಃಖ, ನೋವು ತಿಂದಿದ್ದಳು ಎಂಬುದು ಆಕೆ ಕೆಲಸದಿಂದಲೇ ಸ್ಪಷ್ಟವಾಗುತ್ತದೆ ಎಂದು ಅನೇಕರು ಬರೆದಿದ್ದಾರೆ.