Asianet Suvarna News Asianet Suvarna News

Hair Care: ಕೂದಲ ಆರೈಕೆಗೆ ದಾಸವಾಳದಂಥ ಮದ್ದು ಮತ್ತೊಂದಿಲ್ಲ!

ದಾಸವಾಳ, ಮತ್ತಿ ಸೊಪ್ಪು, ಲೋಳೆಸರದಂಥ ಔಷಧಿಗಳು ಕೂದಲು ಆರೈಕೆಗೆ ಬೆಸ್ಟ್ ಮದ್ದುಗಳು. ನೈಸರ್ಗಿಕ ಶ್ಯಾಂಪೂ ಆಗಿಯೂ ಬಳಸಬಹುದಾದ ಇವುಗಳನ್ನು ಬಳಸಿದರೆ ಯಾವು ಕಂಡೀಷನರ್ ಸಹ ಬೇಡ. ಕೂದಲ ಟೆಕ್ಸ್ಚರ್ ಚೆನ್ನಾಗಿ ಇಡುವುದಲ್ಲದೇ, ದೇಹಕ್ಕೂ ತಂಪು ಮಾಡುವ ಇವುಗಳನ್ನು ಬಳಸುವುದು ಹೇಗೆ? 

Effective benefits of Hibiscus for Hair care and shiny hair
Author
Bangalore, First Published Jun 21, 2022, 3:37 PM IST

ದಾಸವಾಳ(Hibiscus) ಎಂದಾಕ್ಷಣ ಎಲ್ಲರೂ ಕಿವಿಗೆ(Ear) ಹೂವು(Flower) ಮುಡಿಸುವುದು ಎಂದು ತಮಾಷೆ ಮಾಡುವವರು ಇದ್ದಾರೆ. ಅಷ್ಟೇ ಅಲ್ಲ ಮನೆಯ ದೇವರ ಪೂಜೆ ದಾಸವಾಳ ಹೂವು ಬೇಕೆಂದು ಬೆಳೆಸುವವರು ಇದ್ದಾರೆ. ಆದರೆ ದಾಸವಾಳ ಹೂವಿನಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಮ್ಮ ಹಿರಿಯರು(Elder) ಆಗಾಗ್ಗೆ ಅದರ ಗುಣಗಾನ ಮಾಡುವುದನ್ನು ಕೇಳಿದ್ದೇವೆ. 

ಆಯುರ್ವೇದದಲ್ಲಿ(Ayurveda) ದಾಸವಾಳ ಹೂವಿಗೆ ಬಹಳ ಮಹತ್ವ ನೀಡಿದ್ದಾರೆ. ಅದರಲ್ಲೂ ಕೂದಲು ಉದುರುವ ಸಮಸ್ಯೆಗೆ ಇದರ ಹೂವು ಹಾಗೂ ಎಲೆಗಳು(Leaves) ಉತ್ತಮ ಚಿಕಿತ್ಸೆ ನೀಡುತ್ತದೆ. ಒಂದು ಅಧ್ಯಯನದ ಪ್ರಕಾರ ದಾಸವಾಳ ಹೂವಿನಿಂದ ಚಿಗುರು ಕೂದಲು(Growing Hairs) ಬೆಳೆಯುವುದು, ಬೊಕ್ಕು ತಲೆಯಾಗುವುದನ್ನು ತಡೆಗಟ್ಟಬಹುದು ಎಂದು ತಿಳಿದುಬಂದಿದೆ.

ದಾಸವಾಳ ಎಲೆ ಇರಲಿ ಅದರ ಹೂವಿರಲಿ, ಕೆಲವರು ಅದರ ಮಾಸ್ಕ್(Mask) ತಯಾರಿಸಿಕೊಂಡು ತಲೆಗೆ ಹಚ್ಚುತ್ತಾರೆ. ಇದು ಈಗಿನ ಟ್ರೆಂಡ್ ಅಲ್ಲ ನಮ್ಮ ಹಿರಿಯರು ತಮ್ಮ ಕೂದಲ ಆರೈಕೆ ಮಾಡಿಕೊಂಡು ಬಂದ ರೀತಿ. ಅವರೆಲ್ಲಾ ವಾರದಲ್ಲೊಂದು ಬಾರಿ ದಾಸವಾಳದ ಮಾಸ್ಕ್ ಮನೆಯಲ್ಲೇ ಮಾಡಿಕೊಂಡು ಸೀಗೆ ಕಾಯಿ ಅಥವಾ ಅಂಟವಾಳ ಕಾಯಿ ಬಳಸಿ ತಲೆ ಸ್ನಾನ ಮಾಡುತ್ತಿದ್ದರು. ಇದರಿಂದ ಅವರ ಕೂದಲು ದಷ್ಟಪುಷ್ಟವಾಗಿ(Strong) ಹಾವಿನಂತರೆ ಉದ್ದವಾಗಿ(Long Hairs) ಬೆಳೆಯುತ್ತಿತ್ತು. ನೋಡಿದರೆ ಅಬ್ಬಾ ಅನಿಸುತ್ತಿತ್ತು. ದಾಸವಾಳ ಹೂವಿನ ಪ್ರಯೋಜನಗಳ ಬಗ್ಗೆ ಅರಿತೆ ನಮಗೂ ಈ ರೀತಿಯ ಕೂದಲು ಬೇಕೆಂದು ಅನಿಸುವುದು ಸುಳ್ಳಲ್ಲ. ಆಯುರ್ವೇದದಲ್ಲೂ ಇದರ ಮಹತ್ವದ ಬಗ್ಗೆ ತಿಳಿಸಿದ್ದು, ದಾಸವಾಳ ಹೂವಿನಿಂದ ಕೂದಲಿಗೆ ಏನೆಲ್ಲಾ ಉಪಯೋಗವಾಗುತ್ತೇ? ಅದನ್ನು ಹೇಗೆ ಬಳಸಬೇಕು ಎಂಬುದರ ಮಾಹಿತಿ ಇಲ್ಲಿದೆ. 

Hair Care: ಕಣ್ಣೀರು ಬರೆಸುವ ಈರುಳ್ಳಿ ಕೂದಲಿಗೆ ರಾಮಬಾಣ!

ಪ್ರಯೋಜನಗಳು
1 ದಾಸವಾಳ ಹೂವಿನಲ್ಲಿ ಅಮಿನೋ ಆಸಿಡ್(Amino Acid) ಹೇರಳವಾಗಿದೆ. ವಾರದಲ್ಲಿ ಎರಡು ಬಾರಿ ಈ ಹೂವನ್ನು ಮಾಸ್ಕ್ ರೂಪದಲ್ಲಿ ಬಳಸಿದರೆ ದಾಸವಾಳ ಹೂವು ಕೂದಲಿಗೆ ಪ್ರಮುಖವಾಗಿ ಬೇಕಾಗುವ ಅಮಿನೊ ಆಸಿಡ್ ಅನ್ನು ಒದಗಿಸುತ್ತದೆ ಇದರಿಂದ ಕೂದಲಿನ ದಟ್ಟಣೆ(Hair Volume) ಹೆಚ್ಚಿಸಬಹುದು ಹಾಗೂ ಕೂದಲು ಉದುರುವುದನ್ನು(Hair Fall) ತಡೆಯಬಹುದು. ಈ ಅಮಿನೋ ಆಸಿಡ್ ಕೆರಾಟಿನ್(Keratin) ಎಂಬ ವಿಶೇಷ ರೀತಿಯ ರಚನಾಯತ್ಮಕ ಪ್ರೋಟೀನ್(Protein) ಅನ್ನು ಉತ್ಪಾದಿಸುತ್ತದೆ. 

ಕೆರಾಟಿನ್ ಅಂಶವೂ ಕೂದಲನ್ನು ಕಟ್ಟಿಹಾಕುವುದಲ್ಲದೆ, ಒಡೆಯುವ(Devoid) ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಕೂದಲಿನ ದಪ್ಪವನ್ನು ಹೆಚ್ಚಿಸುವಂತೆ ಮಾಡುತ್ತದೆ. ಹಾಗಾಗಿ ಹೊರಗಡೆ ಕೆರಾಟಿನ್ ಟ್ರೀಟ್ಮೆಂಟ್ ತೆಗೆದುಕೊಳ್ಳುವ ಬದಲು ಮನೆಯಲ್ಲೇ ದಾಸವಾಳ ಹೂವಿನ ಮಾಸ್ಕ್ ತಯಾರಿಸಿ ಹಚ್ಚಿಕೊಳ್ಳಬಹುದು.

2. ದೈನಂದಿನ ಜೀವನದಲ್ಲಿ ನಾವು ಬಳಸುವ ಶಾಂಪೂವಿನಲ್ಲಿ(Shampoo) ತಲೆ ಕೂದಲಲ್ಲಿನ ಎಣ್ಣೆ ಅಂಶವನ್ನು ಸಂಪೂರ್ಣವಾಗಿ ಹೋಗಲಾಡಿಸುವ ಕೆಮಿಕಲ್(Chemical) ಇರುತ್ತದೆ. ಇದರಿಂದ ಕೂದಲು ಶುಷ್ಕ ಮತ್ತು ಮಂದವಾಗುತ್ತದೆ. ದಾಸವಾಳ ಹೂವನ್ನು ಬಳಸಿದರೆ ಕೂದಲನ್ನು ಪೋಷಿಸಲು ಮತ್ತು ಅದರ ನೈಸರ್ಗಿಕ ತೇವಾಂಶವನ್ನು(Moisture) ಕಾಯ್ದುಕೊಳ್ಳಬಹುದು. ಏಕೆಂದರೆ ದಾಸವಾಳ ಹೂವು ಹಾಗೂ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮ್ಯುಸಿಲೇಜ್(Musilage) ಅಂಶವಿದೆ ಅಂದರೆ ಲೋಳೆ ಅಂಶ ಹೆಚ್ಚಿದ್ದು, ಕೂದಲಿಗೆ ಕಂಡೀಷನರ್(Conditioner) ಆಗಿ ಕೆಲಸ ಮಾಡುತ್ತದೆ. 

3. ಹಲವು ಅಧ್ಯಾಯನದ ಪ್ರಕಾರ ದಾಸವಾಳ ಎಲೆ ಹಾಗೂ ಹೂವು ಬಳಸುವುದರಿಂದ ಬೊಕ್ಕು ತಲೆಯಾಗುವುದನ್ನು(Baldness) ತಡೆಗಟ್ಟಬಹುದು ಎಂದು ತಿಳಿದುಬಂದಿದೆ. ದಾಸವಾಳವು ಕೂದಲು ಮತ್ತೆ ಚಿಗುರುವಂತೆ ಮಾಡುವ ಗುಣವಿದೆ ಎಂದು ಹೇಳಲಾಗಿದೆ. ಇಂದು ಬೊಕ್ಕು ತಲೆಗೆ ಹಲವು ಚಿಕಿತ್ಸೆಗಳಿದ್ದು, ಅದರಲ್ಲಿ ಡ್ರಗ್ಸ್(Drugs) ಅಂಶ ಹೆಚ್ಚಿರುತ್ತದೆ. ಆದರೆ ನೈಸರ್ಗಿಕವಾಗಿ ಸಿಗುವ ದಾಸವಾಳವನ್ನು ಬಳಸಿದರೆ ಯಾವುದೇ ರೀತಿಯ ಸೈಡ್ ಎಫೆಕ್ಸ್(Side Effects) ಇರುವುದಿಲ್ಲ ಹಾಗೂ ಉತ್ತಮ ಫಲಿತಾಂಶ ಪಡೆಯಬಹುದು.

4. ತೆಲೆ ಹೊಟ್ಟು(Dandruff) ಮತ್ತು ಬುರುಡೆಯಲ್ಲಿ ತುರಿಕೆ ಸಮಸ್ಯೆ, ಎಣ್ಣೆ ಸರುವಿಕೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ದಾಸವಾಳ ಉತ್ತಮ ಪರಿಹಾರ ಎಂದು ಹೇಳಲಾಗುತ್ತದೆ. ಏಕೆಂದರೆ ಗ್ರಂಥಿಗಳಿAದ ತೈಲ ಸ್ರವಿಸುವಿಕೆಯನ್ನು ತಡೆಗಟ್ಟುತ್ತದೆ. ಕೂದಲಿನ ಪಿಎಚ್(ಪೊಟೆಂನ್ಶಿಯಲ್ ಹೈಡ್ರೋಜನ್(Potential Hydrogen) ಲೆವೆಲ್ ಸಮತೋಲನ ಮಾಡುತ್ತದೆ. ಅಲ್ಲದೆ ತಲೆಯನ್ನು ಹಿತ ಮತ್ತು ತಂಪಾಗಿಸುತ್ತದೆ(Cool). 

5. ನೈಸರ್ಗಿಕವಾಗಿ ದಾಸವಾಳವನ್ನು ಮಾಸ್ಕ್(Mask) ರೀತಿಯಲ್ಲಿ ಬಳಸಲಾಗುತ್ತದೆ. ಇದರಿಂದ ಕೂದಲು ಬಿಳಿಯಾಗುವುದನ್ನು(Grey Hair) ತಡೆಯಬಹುದು. ದಾಸವಾಳದಲ್ಲಿ ಆಂಟಿ ಆಕ್ಸಿಡೆಂಟ್(Antioxidant)  ಮತ್ತು ವಿಟಮಿನ್(Vitamin) ಹೆಚ್ಚಿದ್ದು, ಮೆಲನಿನ್(Melanin) ಅನ್ನು ಉತ್ಪಾದಿಸುತ್ತದೆ. ನೈಸರ್ಗಿಕವಾಗಿ ಸಂಭವಿಸುವ ವರ್ಣದ್ರವ್ಯವು ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ. 

ಮಹಿಳೆಯರಲ್ಲಿ ಕಾಡುವ ತಳ್ಳನೆ ಕೂದಲ ಸಮಸ್ಯೆ! ಕಾರಣ ಇಲ್ಲಿದೆ!

ಹೀಗೆ ಉಪಯೋಗಿಸಿ
ದಾಸವಾಳ ಎಲೆ ಹಾಗೂ ಹೂವು ಎರಡನ್ನು ಕೂದಲಿಗೆ ಹಲವು ರೀತಿಯಲ್ಲಿ ಒಳ್ಳೆಯದಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ತಲೆಗೆ ಹಚ್ಚಿದರೆ ಉತ್ತಮ ಫಲಿತಾಂಶ ಪಡೆಯಬಹುದು.

1. ದಾಸವಾಳದ ಎಣ್ಣೆಯನ್ನು(Hibiscus Oil) ತಲೆಗೆ ಹಚ್ಚುವುದರಿಂದ ಕೂದಲು ಬೆಳೆಯಲು ಸಹಕಾರಿಯಾಗಿದೆ. ವಾರದಲ್ಲಿ ಮೂರು(Three times a Week) ಬಾರಿ ದಾಸವಾಳ ಎಣ್ಣೆ ಹಚ್ಚುವುದರಿಂದ ರಕ್ತ ಸಂಚಾರ(Blood Supply) ಸುಗಮಗೊಳ್ಳುತ್ತದೆ ಹಾಗೂ ಆಳವಾದ ಪೋಷಣೆಯನ್ನು ಒದಗಿಸುತ್ತದೆ. ದಾಸವಾಳ ಎಣ್ಣೆ ಮಾಡುವ ವಿಧಾನ.
ಎಂಟು ದಾಸವಾಳ ಹೂವನ್ನು, ಎಂಟು ದಾಸವಾಳದ ಎಲೆಗಳು ತೆಗೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಬೇಕು. ಒಂದು ಕಪ್ ಕೊಬ್ಬರಿ(Coconut) ಎಣ್ಣೆಯನ್ನು ಬಿಸಿ ಮಾಡಿಕೊಂಡು ಕಾದ ನಂತರ ರುಬ್ಬಿದ ಮಿಶ್ರಣ(Grinded paste) ಹಾಕಿ ಕಾಯಿಸಬೇಕು. ಚೆನ್ನಾಗಿ ಬಿಸಿಯಾದ ಮೇಲೆ ಎಣ್ಣೆಯ ಬಣ್ಣ ಬಿಡುತ್ತದೆ. ಅದನ್ನು ಸೋಸಿ ಎಣ್ಣೆ ತಣ್ಣಗಾಗಲು ಬಿಡಬೇಕು. ದಾಸವಾಳ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು 10 ನಿಮಿಷಗಳ ಕಾಲ ಮಸಾಜ್ ಮಾಡಿ 30 ನಿಮಿಷಗಳ ನಂತರ ಸ್ನಾನ ಮಾಡಬೇಕು. 

2. ದಾಸವಾಳದಲ್ಲಿ ಅಮಿನೋ ಆಸಿಡ್(Amino acid) ಇರುವುದರಿಂದ ನೈಸರ್ಗಿಕವಾಗಿ ಕೂದಲಿಗೆ ಕಂಡೀಷನರ್‌ನAತೆ(Conditioner) ಕೆಲಸ ಮಾಡುತ್ತದೆ. ಇದು ಕೂದಲಿನ ಶುಷ್ಕತೆ ಕಾಪಾಡುವುದರ ಜೊತೆಗೆ ಸಾಫ್ಟ್(Soft) ಮಾಡುತ್ತದೆ. 8 ದಾಸವಾಳದ ಹೂವನ್ನು ನೀರಿನಲ್ಲಿ(Water) ಕಿವುಚಿಕೊಳ್ಳಬೇಕು. ಈ ಪೇಸ್ಟ್ ಅನ್ನು ಬುರುಡೆ(Scalp) ಹಾಗೂ ಕೂದಲಿಗೆ ಹಚ್ಚಬೇಕು. ಒಂದು ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ(Warm Water) ಸ್ನಾನ ಮಾಡಬೇಕು. 

3. ನೆಲ್ಲಿ ಕಾಯಿಯಲ್ಲಿ(Amla) ಉತ್ತಮ ಪ್ರೋಟೀನ್ ಇದ್ದು ಕೂದಲಿನ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ದಾಸವಾಳ ಪುಡಿ ಹಾಗು ನೆಲ್ಲಿಕಾಯಿ ಪುಡಿಯ ಮಾಸ್ಟ್ ಅನ್ನು ತಲೆಗೆ ಹಚ್ಚಿದರೆ ಕೂದಲು ಕಪ್ಪಾಗಿ ದಪ್ಪವಾಗಿ(Strong) ಬೆಳೆಯುತ್ತದೆ. 

 

Effective benefits of Hibiscus for Hair care and shiny hair

 

Follow Us:
Download App:
  • android
  • ios