Asianet Suvarna News Asianet Suvarna News

ಮಹಿಳೆಯರಲ್ಲಿ ಕಾಡುವ ತಳ್ಳನೆ ಕೂದಲ ಸಮಸ್ಯೆ! ಕಾರಣ ಇಲ್ಲಿದೆ!

ಕೂದಲು ಉದುರುವುದು(Hair Loss) ಒಂದು ಸಮಸ್ಯೆಯೇ. ಅದನ್ನು ತೀರಾ ನೆಗ್ಲೆಕ್ಟ್(Neglect) ಮಾಡುವ ಹಾಗಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ ಕೂದಲಿದ್ದರೇ ಚೆಂದ. ಆಕೆಯ ಅಂದ ಹೆಚ್ಚಿಸುವ ಕೂದಲು ಇಂದಿನ ಬಹುತೇಕ ಹೆಣ್ಣುಮಕ್ಕಳಿಗೆ ಗಾಳಿಯಲ್ಲಿ ತೇಲಿಬಿಡುವುದು(Free Hair) ಒಂದು ಫ್ಯಾಷನ್(Fashion) ಸಹ ಹೌದು ಹಾಗೂ ಸಮಸ್ಯೆಯೂ ಹೌದು. ಒಂದು ಅಧ್ಯಯನದ ಪ್ರಕಾರ 30ರ ನಂತರ ಬಹುತೇಕ ಹೆಣ್ಣು ಮಕ್ಕಳ ಕೂದಲು ತೆಳ್ಳಗಾಗಿ(Thin) ಉದುರಲು ಕಾರಣವಾಗಿದೆ. ಇದು ಬಹಳ ದೊಡ್ಡ ಸಮಸ್ಯೆಯೂ ಹೌದು ಎಂದು ವರದಿ ಹೇಳುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Tinning Hair Deficiency among Woman aged 30s and above
Author
Bangalore, First Published Jun 18, 2022, 1:04 PM IST

ಕೂದಲು ಉದುರುವುದು(Hair Loss) ಒಂದು ಸಮಸ್ಯೆಯೇ. ಅದನ್ನು ತೀರಾ ನೆಗ್ಲೆಕ್ಟ್(Neglect) ಮಾಡುವ ಹಾಗಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ ಕೂದಲಿದ್ದರೇ ಚೆಂದ. ಆಕೆಯ ಅಂದ ಹೆಚ್ಚಿಸುವ ಕೂದಲು ಇಂದಿನ ಬಹುತೇಕ ಹೆಣ್ಣುಮಕ್ಕಳಿಗೆ ಗಾಳಿಯಲ್ಲಿ ತೇಲಿಬಿಡುವುದು(Free Hair) ಒಂದು ಫ್ಯಾಷನ್(Fashion) ಸಹ ಹೌದು ಹಾಗೂ ಸಮಸ್ಯೆಯೂ ಹೌದು. ಒಂದು ಅಧ್ಯಯನದ ಪ್ರಕಾರ 30ರ ನಂತರ ಬಹುತೇಕ ಹೆಣ್ಣು ಮಕ್ಕಳ ಕೂದಲು ತೆಳ್ಳಗಾಗಿ(Thin) ಉದುರಲು ಕಾರಣವಾಗಿದೆ. ಇದು ಬಹಳ ದೊಡ್ಡ ಸಮಸ್ಯೆಯೂ ಹೌದು ಎಂದು ವರದಿ ಹೇಳುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಕೂದಲು(Hair) ನೋಡಿಕೊಳ್ಳುವುದು ಒಂದು ಕಲೆ(Art). ಎಲ್ಲರಿಗೂ ಉದ್ದ(Lengthy) ಹಾಗೂ ದಪ್ಪನೆಯ(Strong) ಕೂದಲಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಕೂದಲ ಬಗ್ಗೆ ಸರಿಯಾದ ರೀತಿಯಲ್ಲಿ ಆರೈಕೆ(Attention) ಮಾಡುವಲ್ಲಿ ಬಹುತೇಕರು ಸೋತುಬಿಡುತ್ತಾರೆ. ಹೆಣ್ಣಿನ ಅಂದ ಹೆಚ್ಚಿಸುವ ಕೂದಲು ಬಹುತೇಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ತೆಳ್ಳಗಿನ ಕೂದಲನ್ನು(Thin Hair) ಗಾಳಿಗೂ ತೇಲಿಬಿಡಲು ಆಗದೆ, ಅದನ್ನು ಕಟ್ಟಿಕೊಳ್ಳಲೂ ಆಗದೆ ಇರುವ ಸ್ಥಿತಿ ಕೆಲವರಲ್ಲಿದೆ. ದೈನಂದಿನ ನಮ್ಮ ಜೀವನ ಶೈಲಿಯೂ ಅದಕ್ಕೆ ಒಂದು ಕಾರಣ. ನಮ್ಮ ಆರೋಗ್ಯದಲ್ಲಿನ ಏರುಪೇರು(Flexible Of Health), ಡಯೆಟ್(Diet), ಕೂದಲಿನ ಆರೈಕೆ ಎಲ್ಲವೂ ಗಣನೆಗೆ ಬರುತ್ತದೆ. 

ದಟ್ಟ ಕೇಶರಾಶಿ ಒಡತಿ ನೀವಾಗಬೇಕೆ? ವಿಟಮಿನ್ ಬಿ -7 ಆಹಾರ ಸೇವಿಸಿ!

ಪ್ರಸ್ತುತ ದಿನಗಳಲ್ಲಿ ಬ್ಯೂಸಿ ಲೈಫ್ ಸ್ಟೆöÊಲ್‌ನಲ್ಲಿ (Busy Life Style) ಕೂದಲ ಆರೈಕೆ ತಿಂಗಳಿಗೊಮ್ಮೆ(Monthly) ಮಾಡಿದರೆ ಹೆಚ್ಚು. ಹೀಗೆ ಮಾಡುವುದು ತಪ್ಪು. ಇಂದು ಕೂದಲು ತೆಳ್ಳಗಾಗುವುದು ಒಂದು ಸಮಸ್ಯೆಯಾಗಿ ಬದಲಾಗಿದೆ. ಅದರಲ್ಲೂ 30ರ ಮಧ್ಯೆ(Middle) ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯದರಲ್ಲಿ(Woman) ಈ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ಏನೆಲ್ಲಾ ಸಮಸ್ಯೆಗಳು ಎದುರಾಗುತ್ತಿದೆ ಎಂದು ಚರ್ಮರೋಗ(Dermatologist) ವೈದ್ಯೆ ಡಾ. ಜಯಶ್ರೀ ಶಾರದ ಅವರು ತಿಳಿಸಿದ್ದಾರೆ ಈ ಬಗ್ಗೆ ಮಾಹಿತಿ ಇಲ್ಲಿದೆ.

ಕೂದಲು ತೆಳ್ಳಗಾಗಲು ಕಾರಣ
ಕೂದಲು ಉದುರಲು ಕಾರಣಗಳು ಹಲವು ಹಾಗೂ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಅಷ್ಟೇ ಮುಖ್ಯ ಎಂದು ಡಾ. ಜಯಶ್ರೀ ಶಾರದಾ ತಿಳಿಸಿದ್ದಾರೆ. ಅನುವಂಶಿಯತೆ, ನೈಸರ್ಗಿಕ ವಯಸ್ಸಿನ ಪ್ರಕ್ರಿಯೆ, ಪಿಸಿಓಎಸ್(PCOS), ಹೈಪೋಥೈರಾಯ್ಡಿಸಮ್(Hypothyroidism), ಪೆರಿಮೆನೋಪಾಸ್(Perimenopass) ಮುಂತಾದ ಹಾರ್ಮೋನ್‌ಗಳ ಅಸಮತೋಲನ, ಕೆಲವು ಔಷಧಗಳು, ಒತ್ತಡ, ನ್ಯೂಟ್ರೀಷನ್ ಕೊರತೆ, ಅನಾರೋಗ್ಯ, ಕಡಿಮೆ ಹಿಮೋಗ್ಲೋಬಿನ್, ಆಗಾಗ್ಗೆ ಶಾಖ ವಿನ್ಯಾಸ ಚಿಕಿತ್ಸೆ(ಕೂದಲು ಸ್ಟೆçöÊಟ್(Straightening) ಮಾಡುವುದು) ಮತ್ತು ಕೂದಲು ವಿಸ್ತರಣೆ, ಬಿಗಿಯಾಗಿ ಕೂದಲು ಕಟ್ಟುವುದು(Tight Tieing) ಈ ರೀತಿಯ ಸಮಸ್ಯೆಗಳು ಕೂದಲು ತೆಳ್ಳಗಾಗಿ ಉದುರಲು ಕಾರಣವಾಗುತ್ತವೆ.

ಹೇನಿನ ಸಮಸ್ಯೆಯಿಂದ ಹೈರಾಣಾಗಿದ್ದೀರಾ ? ಸಣ್ಣ ಕರ್ಪೂರ ಬಳಸಿ ನೋಡಿ

ಸರಿಯಾದ ಚಿಕಿತ್ಸೆ
ಕೂದಲ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಅದಕ್ಕೆ ಭಯ ಪಡುವ ಅಗತ್ಯವಿಲ್ಲ. ಇದಕ್ಕೆ ಕಾರಣ ಹುಡುಕಿ ಸರಿಯಾದ ಚಿಕಿತ್ಸೆಯನ್ನು ಪಡೆಯಬೇಕು ಎಂದು ಶಾರದಾ ಅವರು ತಿಳಿಸಿದ್ದಾರೆ. ಕೂದಲು ಹಾಳಾಗಲು ಕಾರಣ ಹುಡುಕುವುದು, ರಕ್ತ ಪರೀಕ್ಷೆ ಮಾಡಿಸುವುದು(Blood Checkup), ಹಾರ್ಮೋನ್ ಹಂತವನ್ನು ಪರೀಕ್ಷಿಸುವುದು, ದೇಹದಲ್ಲಿ ನ್ಯೂಟ್ರೀಶಿಯನ್ ಕೊರತೆಯನ್ನು ಪತ್ತೆ ಹಚ್ಚುವುದು, ಅಂದರೆ ಹಿಮೋಗ್ಲೋಬಿನ್, ವಿಟಮಿನ್ ಡಿ3, ಡಿ 12 ಎಷ್ಟಿದೆ ಎಂದು ಪರೀಕ್ಷಿಸುವುದು, ಡಯೆಟ್‌ನಲ್ಲಿ ವಿಟಮಿನ್ A, B, C, D, E, ಮೆಗ್ನೀಶಿಯಂ(Magnesium), ಸೆಲೆನಿಯಂ(Selenium), ಕಬ್ಬಿಣಾಂಶ(Iron), ಕಾಪರ್(Copper), ಜಿಂಕ್(Zinc), ಅಮಿನೋ ಆಸಿಡ್(Amino Acid) ಪ್ರಮಾಣವನ್ನು ಆಹಾರದ ರೂಪದಲ್ಲಿ ಪಡೆಯುವುದು, ಒತ್ತಡದಿಂದ ಹೊರಬರುವಂತೆ ನೋಡಿಕೊಳ್ಳುವುದು, ಕೂದಲು ಹಾನಿಯಾಗುವಂತಹ ಅತಿಯಾದ ಶಾಖಾ ಚಿಕಿತ್ಸೆ ಪಡೆಯುವುದನ್ನು ನಿಯಂತ್ರಿಸುವುದು ಅಂದರೆ ಡೈಲಿ ಹೇರ್ ಸ್ಟೆçöÊಟ್ ಮಾಡುವುದು, ಕೂದಲನ್ನು ಅತಿ ಬಿಗಿಯಾಗಿ ಕಟ್ಟಬಾರದು, ಪ್ರೆಗ್ನೆನ್ಸಿಯ(Pregnancy) ನಂತರ ಆಹಾರ ಸೇವನೆ, ತೂಕದಲ್ಲಿ ಏರಿಳಿತ(Weight), ಹೇರ್ ಡೈ(Hair Dye) ಮಾಡುವದು, ಕೆಮಿಕಲ್ ಯುಕ್ತ ಎಣ್ಣೆ ಹಚ್ಚುವುದರಿಂದ ದೂರವಿರುವುದು ಎಂದು ತಿಳಿಸಿದ್ದಾರೆ. 

 

Tinning Hair Deficiency among Woman aged 30s and above

 

Follow Us:
Download App:
  • android
  • ios