Asianet Suvarna News Asianet Suvarna News

Kitchen Hacks: ಅಡುಗೆ ಮನೆ ಫುಲ್ ಟೈಂ ಕ್ಲೀನಾಗಿ ಇರ್ಬೇಕಾದ್ರೆ ಹೀಗೆ ಮಾಡಿ

ಅಡುಗೆ ಮನೆ (Kitchen) ಹಲವು ಮಹಿಳೆಯರ ಫೇವರಿಟ್ ಪ್ಲೇಸ್. ಆದ್ರೆ ಕಿಚನ್ ಕ್ಲೀನಾಗಿ ಇಟ್ಟುಕೊಳ್ಳುವುದು ಮಾತ್ರ ತಲೆನೋವಿನ ಕೆಲಸ. ಆದ್ರೆ ಈ ಟ್ರಿಕ್ಸ್ (Tricks) ಫಾಲೋ ಮಾಡಿದ್ರೆ ನಿಮ್ ಮನೆಯ ಕಿಚನ್ ಯಾವಾಗ್ಲೂ ಕ್ಲೀನ್ ಆಂಡ್ ನೀಟ್ (Neat) ಆಗಿರೋದ್ರಲ್ಲಿ ಡೌಟೇ ಇಲ್ಲ.
 

Easy Tips To Ensure Zero Waste In The Kitchen
Author
Bengaluru, First Published Dec 14, 2021, 4:46 PM IST
  • Facebook
  • Twitter
  • Whatsapp

ಮನೆ (Home)ಯೊಂದು ಎಷ್ಟು ದೊಡ್ಡದಾಗಿದೆ ಅನ್ನೋದಕ್ಕಿಂತ ಎಷ್ಟು ಸ್ವಚ್ಛವಾಗಿದೆ ಅನ್ನೋದು ಅತೀ ಮುಖ್ಯ. ಮನೆ ಸಂಪೂರ್ಣವಾಗಿ ಸ್ವಚ್ಛವಿದ್ದಾಗಲೇ ಮನೆಯಲ್ಲಿರುವ ಮಂದಿ ಆರೋಗ್ಯವಂತರಾಗಿ ಇರಲು ಸಾಧ್ಯ. ಅದರಲ್ಲೂ ಮನೆಯೊಂದರಲ್ಲಿ ಅಡುಗೆ ಕೋಣೆಯ ಸ್ವಚ್ಛತೆ ಬಹಳ ಮುಖ್ಯ. ಆದರೆ ಕಿಚನ್ (Kitchen) ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರ ಕಷ್ಟದ ಕೆಲಸ. ತರಕಾರಿಯ ತ್ಯಾಜ್ಯ, ಅಳಿದುಳಿದ ಆಹಾರ, ತಿಂಡಿಯ ಪ್ಯಾಕೆಟ್‌ಗಳು ಹೀಗೆ ಎಲ್ಲಾ ರೀತಿಯ ವೇಸ್ಟ್ ಅಡುಗೆ ಕೋಣೆಯಲ್ಲಿರುತ್ತದೆ. ಅಡುಗೆ ಕೋಣೆಯನ್ನು ಕ್ಲೀನ್ ಆಗಿ ಇಟ್ಟುಕೊಳ್ಳೋಣ ಎಂದು ಅದೆಷ್ಟು ಬಾರಿ ಅಂದುಕೊಂಡರೂ ತ್ಯಾಜ್ಯ ಮತ್ತೆ ಮತ್ತೆ ರಾಶಿ ಬೀಳುತ್ತವೆ. ಆದರೆ ಈ ಸಿಂಪಲ್ ಕಿಚನ್ ಟ್ರಿಕ್ಸ್‌ನ್ನು ಉಪಯೋಗಿಸುವ ಮೂಲಕ ನೀವು ನಿಮ್ಮ ಅಡುಗೆಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.

ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ

ಸಾಧ್ಯವಾದಷ್ಟೂ ಸ್ಥಳೀಯ ರೈತರ ಮಾರುಕಟ್ಟೆಯಿಂದಲೇ ತರಕಾರಿಗಳನ್ನು ಖರೀದಿಸಿ. ಸ್ಥಳೀಯರಿಂದ ತರಕಾರಿ (Vegetables) ಖರೀದಿಸುವುದರಿಂದ ಅಡುಗೆ ಕೋಣೆ ಸ್ವಚ್ಛವಾಗಿಡಲು ಹೇಗೆ ಸಾಧ್ಯ ಎಂದು ನೀವು ಅಂದುಕೊಳ್ಳಬಹುದು. ಆದರೆ ಅಸಲಿ ಉಪಯೋಗವಿರುವುದೇ ಇಲ್ಲಿ. ಸ್ಥಳೀಯ ಮಾರುಕಟ್ಟೆಯಲ್ಲಿ ರೈತರು ತಾಜಾ ತರಕಾರಿಗಳನ್ನು ಪ್ಲಾಸ್ಟಿಕ್ (Plastic)ಚೀಲದಲ್ಲಿ ಹಾಕಿ ಕೊಡುವುದಿಲ್ಲ. ಬದಲಾಗಿ ನೇರವಾಗಿ ನಾವು ತೆಗೆದುಕೊಂಡು ಹೋಗಿರುವ ಕೈ ಚೀಲಕ್ಕೇ ಹಾಕುತ್ತಾರೆ. ಹೀಗಾಗಿ ಮನೆಗೆ ಅನಗತ್ಯ ಪ್ಲಾಸ್ಟಿಕ್‌ಗಳು ಬರುವುದು ತಪ್ಪುತ್ತದೆ.

Kitchen Hacks: ಬಾಣಲೆ ತಳ ಫಳಫಳಿಸಬೇಕಾದ್ರೆ ಫಟಾಫಟ್ ಅಡುಗೆ ಮನೆಗೆ ಹೋಗಿ

ಪ್ಲಾಸ್ಲಿಕ್ ಚೀಲ ಬಳಸುವುದನ್ನು ಕಡಿಮೆ ಮಾಡಿ

ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಯಾವ ರೀತಿಯಿಂದಲೂ ಉತ್ತಮವಲ್ಲ. ಹೀಗಾಗಿ ಸಾಧ್ಯವಾದಷ್ಟೂ ತರಕಾರಿ ತೆಗೆದುಕೊಂಡು ಬರಲು ಪ್ಲಾಸ್ಟಿಕ್ ಕವರ್ ಕೊಂಡೊಯ್ಯುವ ಬದಲು ಬಟ್ಟೆಯ ಚೀಲ ಅಥವಾ ಪೇಪರ್ ಬ್ಯಾಗ್ (Paper Bag) ತೆಗೆದುಕೊಂಡು ಹೋಗಿ. ಇದರಿಂದ ಮನೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳು ರಾಶಿ ಬೀಳುವುದು ತಪ್ಪುತ್ತದೆ.

ದೊಡ್ಡ ಪ್ರಮಾಣದಲ್ಲಿ ಶಾಪಿಂಗ್ ಮಾಡಬೇಡಿ

ನೀವು ದಿನಸಿ ಶಾಪಿಂಗ್‌ಗೆ ಹೋಗುವ ಮೊದಲೇ ಕಿಚನ್‌ನಲ್ಲಿ ಖಾಲಿಯಾಗಿರುವ ಪದಾರ್ಥಗಳನ್ನು ಗಮನಿಸಿಕೊಂಡು ಪಟ್ಟಿ ಮಾಡಿ. ಮತ್ತು ಅದಕ್ಕೆ ಅನುಗುಣವಾಗಿ ಅಡುಗೆ ಮನೆಗೆ ಬೇಕಾಗುವ ಅಗತ್ಯದ ವಸ್ತುಗಳನ್ನು ಖರೀದಿಸಿ. ಇದರಿಂದ ಹೆಚ್ಚುವರಿಯಾಗಿ ತರಕಾರಿ, ಧಾನ್ಯಗಳು, ಚಹಾ ಪುಡಿಗಳು ಇತರ ವಸ್ತುಗಳನ್ನು ತಂದು ಉಪಯೋಗಿಸದೇ ಎಸೆಯುವುದು ತಪ್ಪುತ್ತದೆ.

Kitchen Hacks: ಫಾಸ್ಟ್ ಆಗಿ ಅಡುಗೆ ಕೆಲಸ ಮುಗಿಸ್ಬೇಕೆನ್ನುವವರು ಇದನ್ನೋದಿ

ಅಡುಗೆಮನೆಯಲ್ಲಿ ಗಿಡಗಳನ್ನು ಬೆಳೆಸಿಕೊಳ್ಳಿ

ಪುದೀನ, ಕೊತ್ತಂಬರಿ ಮೊದಲಾದ ಸೊಪ್ಪುಗಳು ದಿನನಿತ್ಯದ ಬಳಕೆಯಾಗಿ ಮುಖ್ಯವಾಗಿ ಬೇಕಿರುವ ಕಾರಣ ಅಡುಗೆ ಮನೆಯ ಪಕ್ಕವೇ ಈ ಗಿಡಗಳನ್ನು ಬೆಳೆಸಿಕೊಳ್ಳಿ. ಇದಕ್ಕೆ ಹೆಚ್ಚು ಸ್ಥಳಾವಕಾಶದ ಅಗತ್ಯವೂ ಇಲ್ಲದ ಕಾರಣ ಸಣ್ಣ ಸಣ್ಣ ಮಡಕೆಗಳಲ್ಲಿ ಇದನ್ನು ಬೆಳೆಸಬಹುದು. ಇದು ನಿಮ್ಮ ಅಡುಗೆ ಮನೆಯಲ್ಲಿ ಸೊಪ್ಪು ಆರಿಸುವುದು, ಇದರಿಂದ ಉಂಟಾಗುವ ತ್ಯಾಜ್ಯವನ್ನು ಇಲ್ಲವಾಗಿಸುತ್ತದೆ. ಅಲ್ಲದೆ ಸೊಪ್ಪುಗಳ ಸೊಬಗು ಅಡುಗೆ ಕೋಣೆಗೂ ಹೊಸ ಲುಕ್ ನೀಡುತ್ತದೆ.

ಉಳಿದಿರುವ ಆಹಾರವನ್ನು ಮತ್ತೆ ಬಳಸಿ

ಅಡುಗೆ ಮನೆಗೆ ಬಂದು ಯಾವುದೇ ಹೊಸ ರೆಸಿಪಿ ಮಾಡಲು ಯೋಚಿಸುವಾಗಲೂ ಉಳಿದಿರುವ ಅನ್ನ, ಚಪಾತಿಯನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದಲೇ ಹೊಸ ರೆಸಿಪಿಯನ್ನು ಮಾಡಿ ರುಚಿಕರವಾಗಿ ಆಹಾರ ಸಿದ್ಧಪಡಿಸಿ. ಹೊಸತಾಗಿ ಯಾವುದೋ ಆಹಾರವನ್ನು ತಿನ್ನಬೇಕು ಅನ್ನೋ ಕಾರಣಕ್ಕಾಗಿ ಕೆಡದ ಆಹಾರವನ್ನು ವಿನಾಕಾರಣ ಎಸೆಯಬೇಡಿ. ಇದು ಶೂನ್ಯ-ತ್ಯಾಜ್ಯ ಅಡುಗೆಮನೆಯನ್ನು ಅಳವಡಿಸಿಕೊಳ್ಳುವ ಪ್ರಮುಖ ವಿಧಾನಗಳಲ್ಲಿ ಇದು ಒಂದಾಗಿದೆ.

ಸಣ್ಣ ತಟ್ಟೆಗಳಲ್ಲಿ ತಿನ್ನಿರಿ

ಆಹಾರವನ್ನು ಸೇವಿಸಲು ಕುಳಿತಾಗ, ಸಣ್ಣ ತಟ್ಟೆಯಲ್ಲಿ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಣ್ಣ ಪ್ಲೇಟ್ ನಲ್ಲಿ ಕಡಿಮೆ ಪ್ರಮಾಣದಲ್ಲಿ ಆಹಾರ ತೆಗೆದುಕೊಳ್ಳುವಷ್ಟೇ ಜಾಗವಿರುತ್ತದೆ. ಹೀಗಾಗಿ ನೀವು ಆಹಾರವನ್ನು ವ್ಯರ್ಥ ಮಾಡಲು ಅವಕಾಶವಿರುವುದಿಲ್ಲ. ನೀವು ಹೆಚ್ಚು ತಿನ್ನಲು ಬಯಸಿದರೆ, ಪ್ಲೇಟ್ ಅನ್ನು ಮತ್ತೊಮ್ಮೆ ತುಂಬಿಸಬಹುದು. 

ಜಾಡಿಗಳನ್ನು ಮರುಬಳಕೆ ಮಾಡಿ

ಅಡುಗೆ ಮನೆಯಲ್ಲಿರುವ ಹಳೆಯ ಜಾಡಿಗಳ ಬಗ್ಗೆ ಚಿಂತಿಸಬೇಕಾಗಿಲ್ಲ, ಏಕೆಂದರೆ ಅವುಗಳನ್ನು ಮರುಬಳಕೆ ಮಾಡಬಹುದು. ಹಳೆ ಜಾಡಿಯನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಈ ಜಾಡಿಗಳನ್ನು ತಿಂಡಿಯ ಪ್ಯಾಕೆಟ್ ನ್ನು ತೆಗೆದಿಡಲು ಅಥವಾ ಗಾರ್ಡನ್ ನಲ್ಲಿ ಪ್ಲಾಂಟರ್ ನಂತೆ ಬಳಸಬಹುದು.
 

Follow Us:
Download App:
  • android
  • ios