Home Cleaning : ಮನೆಯಲ್ಲಿರುವ ಧೂಳು ತೆಗೆಯೋಕೆ ಇಲ್ಲಿದೆ ಸುಲಭ ಉಪಾಯ

ಸುಮ್ಮನೆ ಮೇಜಿನ ಮೇಲೆ ಕೈ ಆಡಿಸಿದ್ರೆ ಒಂದಿಷ್ಟು ಧೂಳು ಮೆತ್ತಿಕೊಳ್ಳುತ್ತೆ. ಎಷ್ಟು ದಿನ ಆಯ್ತೋ ಕ್ಲೀನ್ ಮಾಡ್ದೆ ಅನ್ನಿಸುತ್ತೆ. ಆದ್ರೆ ಧೂಳು ತೆಗೆದು ಎರಡು ದಿನ ಆಗಿರೊಲ್ಲ. ಕೆಲವೊಂದು ಮನೆ ವಸ್ತುಗಳ ಮೇಲೆ ಕುಳಿತ ಧೂಳು ತೆಗೆಯೋದು ಸುಲಭವೂ ಅಲ್ಲ.
 

Dust Cleaning Tips

ಮನೆ (Home) ಅಂದ್ಮೇಲೆ ಧೂಳು (Dust) ಇರ್ಲೇಬೇಕು ಏನಂತೀರಾ?. ಒಂದು ಕಡೆ ಸ್ವಚ್ಛ (Clean) ಗೊಳಿಸಿ ಇನ್ನೊಂದು ಕಡೆ ಹೋಗೋಷ್ಟರಲ್ಲಿ ಕ್ಲೀನ್ ಮಾಡಿದ ಜಾಗದಲ್ಲಿ ಧೂಳು ಕೂತಿರುತ್ತದೆ. ಮನೆ ಕ್ಲೀನಿಂಗ್ ದೊಡ್ಡ ಸವಾಲು ಎನ್ನುವವರಿದ್ದಾರೆ. ನೆಲ (Ground) ವನ್ನು ಬೇಗ ಬೇಗ ಸ್ವಚ್ಛಗೊಳಿಸಬಹುದು. ಆದ್ರೆ ಮನೆಯ ಕೆಲ ಮೂಲೆಗಳನ್ನು ಸ್ವಚ್ಛಗೊಳಿಸುವಷ್ಟು ತಲೆಬಿಸಿ ಮತ್ತೊಂದಿಲ್ಲ. ಸೋಫಾ, ಡೈನಿಂಗ್ ಡೇಬಲ್ ಕುರ್ಚಿಯ ಸಂಧಿಯಲ್ಲಿ ಧೂಳು ಸಾಕಷ್ಟಿರುತ್ತದೆ. ಕಿಟಕಿ, ಬಾಗಿಲನ ಮೇಲೆ, ಟಿವಿ ಪರದೆ ಮೇಲೆ, ಟಿವಿ ಸ್ಟ್ಯಾಂಡ್ ಒಳಗೆ ಹೀಗೆ ಮನೆಯ ಮೂಲೆ ಮೂಲೆ ಕ್ಲೀನ್ ಮಾಡೋದು ಪ್ರತಿ ದಿನ ಸಾಧ್ಯವಿಲ್ಲ. ವಾರಕ್ಕೊಮ್ಮೆಯಾದ್ರೂ ಇದನ್ನು ಸ್ವಚ್ಛಗೊಳಿಸದೆ ಹೋದ್ರೆ ಪೀಠೋಪಕರಣಗಳು ಹಾಳಾಗುತ್ತವೆ. ಧೂಳು ಮನೆ ಸೌಂದರ್ಯವನ್ನು ಹಾಳು ಮಾಡುತ್ತದೆ. ಇಷ್ಟೇ ಅಲ್ಲ ಕೆಲವರಿಗೆ ಧೂಳಿನ ಅಲರ್ಜಿಯಿರುತ್ತದೆ. ಧೂಳು ಮನೆಯಲ್ಲಿ ಹೆಚ್ಚಾದಂತೆ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಅನಿವಾರ್ಯ ಕಾರಣಕ್ಕಾದ್ರೂ ಧೂಳು ತೆಗೆಯಲೇಬೇಕು. ಇಂದು ನಾವು ಮನೆಯ ಕೆಲ ವಸ್ತುಗಳ ಧೂಳನ್ನು ಹೇಗೆ ಸುಲಭವಾಗಿ ತೆಗೆಯಬಹುದು ಎಂಬುದನ್ನು ಹೇಳ್ತೇವೆ.

ಮನೆಯಲ್ಲಿ ಹೀಗೆ ಸ್ವಚ್ಛವಾಗಿಡಿ :

ಸೀಲಿಂಗ್ ಫ್ಯಾನ್ : ಸಾಮಾನ್ಯವಾಗಿ ಮನೆಯ ಎಲ್ಲ ಭಾಗ ಕ್ಲೀನ್ ಮಾಡಿರ್ತೇವೆ ಆದ್ರೆ ಸೀಲಿಂಗ್ ಫ್ಯಾನ್ ಮರೆತು ಹೋಗಿರುತ್ತದೆ. ಅದ್ರ ಮೇಲೆಯೇ ಸಾಕಷ್ಟು ಧೂಳಿರುತ್ತದೆ. ಫ್ಯಾನ್ ಹಾಕ್ತಿದ್ದಂತೆ ಧೂಳು ಮನೆಗೆಲ್ಲ ಹರಡುತ್ತದೆ. ಪ್ರತಿ ವಾರ ಫ್ಯಾನ್ ಸ್ವಚ್ಛಗೊಳಿಸಬೇಕು. ಅದಕ್ಕೆ ನಾವು ಸುಲಭ ಉಪಾಯ ಹೇಳ್ತೇವೆ. ಹಳೆಯ ದಿಂಬಿನ ಕವರ್ ತೆಗೆದುಕೊಳ್ಳಿ. ಅದರೊಳಗೆ ಫ್ಯಾನ್ ನ ರೆಕ್ಕೆಯನ್ನು ಹಾಕಿ. ಫ್ಯಾನ್ ಕೆಳಗೆ ಹಾಸಿಗೆಯಿದ್ದರೆ ಅದನ್ನು ಬಟ್ಟೆಯಿಂದ ಮುಚ್ಚಿಡಿ. ಫ್ಯಾನ್ ರೆಕ್ಕೆಗೆ ದಿಂಬಿನ ಕವರ್ ಹಾಕಿದ್ರೆ ಅದ್ರಲ್ಲಿರುವ ಧೂಳು, ಕವರ್ ಒಳಗೆ ಸೇರುತ್ತದೆ.

ಸೋಂಬೇರಿ ಪತಿಯ ನಾಲ್ಕು ಸ್ವಭಾವಗಳು..

ಲ್ಯಾಪ್ಟಾಪ್ ಕೀ ಬೋರ್ಡ್ : ಲ್ಯಾಪ್ ಟಾಪ್ಕೀ ಬೋರ್ಡ್ ನಲ್ಲಿಯೂ ಧೂಳು ಸೇರಿರುತ್ತದೆ. ಅನೇಕ ಬಾರಿ, ತಿನ್ನುತ್ತ ಲ್ಯಾಪ್ಟಾಪ್ ಬಳಸಿದ್ರೆ ಅದು ಕೂಡ ಕೀ ಬೋರ್ಡ್ ನಲ್ಲಿ ಸೇರಿರುತ್ತದೆ. ಅದನ್ನು ಹೇಗೆ ಸ್ವಚ್ಛಗೊಳಿಸುವುದು ಎಂಬುದು ನಮಗೆ ತಿಳಿದಿರುವುದಿಲ್ಲ. ಕೀ ಬೋರ್ಡ್ ಕ್ಲೀನ್ ಮಾಡಲು ನೀವು ಬೇಬಿ ವೈಪ್ ಬಳಸಬಹುದು. ಇಲ್ಲವೆ ಬ್ಲೋ ಬಾಲ್ ಮೂಲಕವೂ ಕ್ಲೀನ್ ಮಾಡಬಹುದು.

ಟಿವಿ ಸ್ಕ್ರೀನ್ : ಮನೆಯಲ್ಲಿ ಅತಿ ಹೆಚ್ಚು ಬಳಸುವ ವಸ್ತುಗಳಲ್ಲಿ ಟಿವಿ ಸ್ಕ್ರೀನ್ ಕೂಡ ಒಂದು. ಟಿವಿ ಸ್ಕ್ರೀನ್ ಮೇಲೆ ಧೂಳು ಕುಳಿತ್ರೆ ಟಿವಿ ನೋಡಲು ಕಿರಿಕಿರಿಯಾಗುತ್ತದೆ. ಟಿವಿ ಸ್ಕ್ರೀನ್ ಸ್ವಚ್ಛಗೊಳಿಸಲು ಬಟ್ಟೆಯ ಬದಲಿಗೆ ಮೈಕ್ರೋ ಫ್ಯಾಬ್ರಿಕ್ ಟವೆಲ್ ಬಳಸಿ.  ಇದ್ರಿಂದ ಟಿವಿ ಪರದೆ ಮೇಲೆ ಗೀರಾಗುವುದಿಲ್ಲ.

ಗಾಜಿನ ಮೇಜುಗಳು, ಬಾಗಿಲುಗಳು, ಕಿಟಕಿಗಳು ಮತ್ತು ಕನ್ನಡಿ : ಒಂದು ಪಾತ್ರೆಗೆ  ಫ್ಯಾಬ್ರಿಕ್ ಕ್ಲೀನರ್ ಹಾಕಿ ಅದಕ್ಕೆ ನೀರನ್ನು ಸೇರಿಸಿ. ಮೃದುವಾದ ಬಟ್ಟೆಯನ್ನು ಈ ನೀರಿನಲ್ಲಿ ಅದ್ದಿ, ಗಾಜು, ಮೇಜು, ಬಾಗಿಲು, ಕಿಟಕಿಯನ್ನು ಒರೆಸಿ. ನಂತ್ರ ಒಣ ಬಟ್ಟೆಯಲ್ಲಿ ಈ ಜಾಗಗಳನ್ನು ಒರೆಸಲು ಮರೆಯದಿರಿ.

Beauty Tips: ಫ್ರಿಡ್ಜ್ ನಲ್ಲಿಟ್ಟಿರುವ ಹಿಟ್ಟು ಹಾಳಾಗಿದ್ರೆ ಹೀಗೆ ಮಾಡಿ ಸೌಂದರ್ಯ ಹೆಚ್ಚಿಸಿ

ಜ್ಯೂಮರ್ ಲ್ಯಾಂಪ್ : ಮನೆಯಲ್ಲಿರುವ ಜ್ಯೂಮರ್ ನಲ್ಲಿ ಸಾಕಷ್ಟು ಧೂಳಿರುತ್ತದೆ. ಈ ಧೂಳನ್ನು ಎಚ್ಚರಿಕೆಯಿಂದ ತೆಗೆಯಬೇಕು. ಮೊದಲು ಅದರ ಪ್ಲಗ್ ತೆಗೆಯಿರಿ. ನಂತ್ರ ಮೈಕ್ರೋಫೈಬರ್ ಟವೆಲ್ ಅನ್ನು ದ್ರಾವಣದಲ್ಲಿ ನೆನೆಸಿ ನಿಧಾನವಾಗಿ ಸ್ವಚ್ಛಗೊಳಿಸಿ. 

ಕಿಟಕಿ ಜಾಲರಿ : ಕಿಟಕಿ ಮತ್ತು ಬಾಗಿಲಿಗೆ ಜಾಲರಿ ಹಾಕಿದ್ದು, ಅದರ ಮೇಲೆ ಧೂಳು ಕುಳಿತಿದ್ದರೆ, ಮಾರುಕಟ್ಟೆಯಲ್ಲಿ ಸಿಗುವ ಸ್ಟೀಲ್ ಬ್ರಷ್  ಖರೀದಿಸಿ. ಅದರ ಸಹಾಯದಿಂದ ಮೆಶ್ ಅನ್ನು ಉಜ್ಜಿ. ಆಗ ಮೆಶ್ ಕ್ಲೀನ್ ಆಗುತ್ತದೆ. ಪೈಪ್ ಮೂಲಕ ನೀರು ಹಾಕಿ, ಸ್ವಚ್ಛಗೊಳಿಸಿ. 

Latest Videos
Follow Us:
Download App:
  • android
  • ios