Viral News: ಗ್ರಾಹಕಿಗೇ ಡೋಮಿನೋಸ್ ಡೆಲಿವರಿ ಬಾಯ್ ಪ್ರಪೋಸ್: ಇದು ತಪ್ಪೆಂದ ಲೇಡಿ!
ಫೋನ್ ಇಲ್ಲದೆ ಕೆಲಸ ಆಗಲ್ಲ. ಫೋನ್ ಇದ್ಮೇಲೆ ನಂಬರ್ ಇರ್ಲೇಬೇಕು. ಆಪ್ತರಿಗೆ ನಂಬರ್ ಕೊಟ್ಟಿರ್ತೇವೆ. ಬೇಡವೆಂದ್ರೂ ಡೆಲಿವರಿ ಬಾಯ್ಸ್ ಗೆ ನಮ್ಮ ನಂಬರ್ ಸಿಕ್ಕಿರುತ್ತೆ. ನೂರರಲ್ಲಿ ಒಬ್ಬರು ಕೆಟ್ಟವರಿದ್ದು, ಅವ್ರ ಕೈಗೆ ನಮ್ಮ ನಂಬರ್ ಸಿಕ್ಕಿದ್ರೆ ಕಥೆ ಮುಗೀತು.
ಈಗ ನಮ್ಮ ನಿಮ್ಮೆಲ್ಲರ ಜೀವನ ಆನ್ಲೈನ್ ನಲ್ಲೇ ಆಗಿದೆ ಅಂದ್ರೆ ತಪ್ಪಾಗೋದಿಲ್ಲ. ಉಪ್ಪಿನಿಂದ ಹಿಡಿದು ಬಂಗಾರದವರೆಗೆ ಎಲ್ಲವನ್ನೂ ಆನ್ಲೈನ್ ನಲ್ಲಿ ಆರ್ಡರ್ ಮಾಡುವ ನಾವು ಇದು ಹಿತವಾಗಿದೆ ಎಂದುಕೊಳ್ತೇವೆ. ನಮ್ಮ ಹುಟ್ಟುಹಬ್ಬ ನಮಗೆ ನೆನಪಿದ್ಯೋ ಇಲ್ವೋ ನಾವು ಬಳಸುವ ಆನ್ಲೈನ್ ಕಂಪನಿಗಳಿಗೆ ನೆನಪಿರುತ್ತೆ. ಬೆಳ್ಳಂಬೆಳಿಗ್ಗೆ ಅವರು ವಿಶ್ ನಮಗೆ ಬಂದಿರುತ್ತೆ. ನಮ್ಮ ಫೋನ್ ನಂಬರ್ ಇಷ್ಟಕ್ಕೆ ಸೀಮಿತವಾಗಿದ್ರೆ ಓಕೆ, ಆದ್ರೆ ಅದು ಹಾಗಾಗ್ತಿಲ್ಲ.
ನಾವು ಒಂದೋ ಎರಡೋ ಕಂಪನಿ (Company) ಪ್ರಾಡೆಕ್ಟ್ ಗಳನ್ನು ಪದೇ ಪದೇ ಖರೀದಿ ಮಾಡ್ತಿದ್ದರೆ ಡೆಲೆವರಿ ಬಾಯ್ (Delivery Boy) ಗೆ ನಮ್ಮ ಮನೆ ಅಡ್ರೆಸ್ ಮಾತ್ರವಲ್ಲ ನಮ್ಮ ಫೋನ್ ನಂಬರ್ ಸಮೇತ ಎಲ್ಲ ತಿಳಿದಿರುತ್ತದೆ. ಇನ್ನು ನಾಲ್ಕೈದು ಕಂಪನಿ ಪ್ರಾಡಕ್ಟ್ ಖರೀದಿ ಮಾಡ್ತಿದ್ದರೆ ಕೇಳೋದೇ ಬೇಡ. ಬಟ್ಟೆ, ಆಹಾರ ಕಂಪನಿ ಬಳಿ ನಮ್ಮ ನಂಬರ್ ಇರುತ್ತೆ. ನಾವು ಉತ್ಪನ್ನ ಖರೀದಿ ನಂತ್ರ ಮನೆ ಅಡ್ರೆಸ್, ಫೋನ್ ನಂಬರ್ ನೀಡ್ಲೇಬೇಕು. ಈ ನಂಬರ್ ಗೆ ಕರೆ ಮಾಡುವ ಡೆಲೆವರಿ ಬಾಯ್ ಗಳು ಡೆಲೆವರಿ ಮಾಡಿದ ನಂತ್ರ ನಂಬರ್ ಮರೆತ್ರೆ ಓಕೆ. ಅದನ್ನು ದುರುಪಯೋಗಪಡಿಸಿಕೊಂಡ್ರೆ ಕಷ್ಟ.
ನೀವು ಬುದ್ಧಿಜೀವಿಗಳಾ? ಹೀಗ್ ಯೋಚಿಸಿದ್ರೆ ಹೌದೇ ಹೌದು!
ಉತ್ತರ ಪ್ರದೇಶದಲ್ಲಿ ಈಗ ಅಂತಹದ್ದೇ ಒಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು ಡೊಮಿನೋಸ್ (Dominos)ನಿಂದ ಪಿಜ್ಜಾ ಆರ್ಡರ್ ಮಾಡಿದ್ದಾಳೆ. ಡೆಲಿವರಿ ಮಾಡಲು ಬಂದ ವ್ಯಕ್ತಿ ಮರುದಿನವೇ ಚಾಟ್‌ನಲ್ಲಿ ಅವಳಿಗೆ ಪ್ರಪೋಸ್ ಮಾಡಿದ್ದಾನೆ. ಇದರಿಂದ ತುಂಬಾ ಗಾಬರಿಗೊಂಡ ಮಹಿಳೆ, ಡೆಲಿವರಿ ಬಾಯ್ ವಿರುದ್ಧ ದೂರು ನೀಡಿದ್ದಾಳೆ.
ಅಲ್ಲಿ ನಡೆದದ್ದು ಏನು ಗೊತ್ತಾ? : ಮಹಿಳೆಯ ಹೆಸರು ಕನಿಷ್ಠಾ. ಪಿಜ್ಜಾ ಆರ್ಡರ್ ಮಾಡಿದ್ದರು. ಪಿಜ್ಜಾವನ್ನು ಡೆಲಿವರು ಮಾಡಿದ ಹುಡುಗ ಯಾವುದೇ ಕಿರಿಕ್ ಮಾಡದೆ ಹೋಗಿದ್ದಾನೆ. ಆದ್ರೆ ಮರುದಿನ, ಡೆಲಿವರಿ ಬಾಯ್‌ನಿಂದ ಸಂದೇಶ ಬಂದಿದೆ. ಕ್ಷಮಿಸಿ, ನನ್ನ ಹೆಸರು ಕಬೀರ್. ನಿನ್ನೆ ಪಿಜ್ಜಾ ಡೆಲಿವರಿ ಮಾಡಲು ನಿಮ್ಮ ಜಾಗಕ್ಕೆ ಬಂದಿದ್ದೆ. ನಾನು ಅಲ್ಲೇ ಇದ್ದೇನೆ. ನಾನು ನಿಮ್ಮನ್ನು ಇಷ್ಟಪಡುತ್ತೇನೆ ಎಂದು ಡೆಲಿವರಿ ಬಾಯ್ ಮೆಸ್ಸೇಜ್ ಮಾಡಿದ್ದಾನೆ. ಇದನ್ನು ನೋಡಿದ ಮಹಿಳೆ ಮುಖದಲ್ಲಿ ಬೆವರು ಕಾಣಿಸಿಕೊಂಡಿದೆ.
ಮಳೆಗಾಲದಲ್ಲಿಕರೆಂಟ್ ಶಾಕ್ ಹೊಡೆದ್ರೆ, ಕೂಡಲೇ ಹೀಗ್ ಮಾಡಿ
ಮಹಿಳೆ ಈ ವಿಷ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಆತ ಮಾಡಿದ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ಗ್ರಾಹಕರ ಸಂಖ್ಯೆ ಮತ್ತು ವಿಳಾಸ ದುರ್ಬಳಕೆಯಾಗ್ತಿದೆ ಎಂದು ಮಹಿಳೆ ಬರೆದಿದ್ದಾಳೆ. ಈ ವ್ಯಕ್ತಿ ನನ್ನನ್ನು ಇಷ್ಟಪಟ್ಟರೂ, ಕಂಪನಿಯ ಮೂಲಕ ಫೋನ್ ನಂಬರ್ ದುರ್ಬಳಕೆ ಮಾಡುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾಳೆ. ಕನಿಷ್ಠಾ, ಡೊಮಿನೋಸ್ ಗೆ ಈ ಬಗ್ಗೆ ದೂರು ನೀಡಿದ್ದಳಂತೆ. ಆದ್ರೆ ಕಂಪನಿ ತನ್ನ ದೂರನ್ನು ನಿರ್ಲಕ್ಷ್ಯ ಮಾಡಿದ ಎಂದ ಕನಿಷ್ಠಾ, ಅದ್ರ ಸ್ಕ್ರೀನ್‌ಶಾಟ್ ಕೂಡ ಹಂಚಿಕೊಂಡಿದ್ದಾಳೆ.
ಚಾಟ್‌ನಲ್ಲಿ ಡೆಲಿವರಿ ಬಾಯ್ ತನ್ನ ಹೆಸರು ಕಬೀರ್ ಎಂದು ಬರೆದಿದ್ದಾನೆ. ಡೊಮಿನೋಸ್ ಸ್ಟೋರ್‌ನಲ್ಲಿ ಆತನ ಹೆಸರು ಮನ್ನು ಎಂದಿದೆ. ಅದೇ ಇಮೇಲ್ ವಿಳಾಸದಲ್ಲಿ ಅವರ ಹೆಸರು ಕಬೀರ್ ಬಬ್ಲು ಎಂದಿದೆ. ಈ ಬಗ್ಗೆ ಕನಿಷ್ಠಾ, ಪೊಲೀಸ್ ಸಹಾಯವಾಣಿಗೆ ದೂರು ನೀಡಿದ್ದಳು. ಅದ್ರ ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದ್ದಾಳೆ. ಚಿಂತಿಸಬೇಡಿ, ತುರ್ತು ಸಹಾಯ ತಕ್ಷಣವೇ ತಲುಪುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಸಹಾಯವಾಣಿ ಸಂಖ್ಯೆ 112 ಭರವಸೆ ನೀಡಿದೆ. ಇದಕ್ಕೆ ಕನಿಷ್ಠಾ, ಧನ್ಯವಾದ ಹೇಳಿದ್ದಾರೆ.
ಆನ್ಲೈನ್ ನಲ್ಲಿ ಯಾವುದೇ ವಸ್ತುಗಳನ್ನು ಖರೀದಿ ಮಾಡುವಾಗ್ಲೂ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಫೋನ್ ನಂಬರ್ ಹಾಗೂ ವಿಳಾಸ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಒಂದ್ವೇಳೆ ಸಣ್ಣ ಅನುಮಾನ ಬಂದ್ರೂ ನೀವು ಪೊಲೀಸ್ ಮೊರೆ ಹೋಗುವುದು ಒಳ್ಳೆಯದು.